ಇಂಟೆಕ್ಸ್‌ನಿಂದ ಲಾಲಿಪಪ್ 5.0 ಫೋನ್ ಬರೇ 6,990 ಕ್ಕೆ

Written By:

ಡೊಮೆಸ್ಟಿಕ್ ಹ್ಯಾಂಡ್‌ಸೆಟ್ ಬ್ರ್ಯಾಂಡ್ ಆಗಿರುವ ಇಂಟೆಕ್ಸ್ ಹೊಸ ಸ್ಮಾರ್ಟ್‌ಫೋನ್ ಆದ, ಆಕ್ವಾ ಸ್ಟಾರ್ ಎಲ್ ಅನ್ನು ಲಾಂಚ್ ಮಾಡುತ್ತಿದ್ದು ಇದು ಆಂಡ್ರಾಯ್ಡ್ 5.0 ಲಾಲಿಪಪ್ ಅನ್ನು ಒಳಗೊಂಡಿದೆ. ಭಾರತೀಯ ಬ್ರ್ಯಾಂಡ್ ಅನ್ನು ಒಳಗೊಂಡು ಬರುತ್ತಿರುವ ಮೊತ್ತ ಮೊದಲ ಸ್ಮಾರ್ಟ್‌ಫೋನ್ ಇದಾಗಿದ್ದು ಗೂಗಲ್‌ನ ಅತ್ಯಾಧುನಿಕ ಮೊಬೈಲ್ ಓಎಸ್ ಅನ್ನು ಇದು ತರಲಿದೆ. ಬೆಲೆ ರೂ 6,990 ಆಗಿದೆ.

ಇಂಟೆಕ್ಸ್‌ನಿಂದ ಲಾಲಿಪಪ್ 5.0 ಫೋನ್ ಬರೇ 6,990 ಕ್ಕೆ

ಇದು ಕಪ್ಪು ಹಾಗೂ ಬಿಳಿ ಬಣ್ಣಗಳಲ್ಲಿ ಲಭ್ಯವಿದ್ದು, ಸ್ನ್ಯಾಪ್‌ಡೀಲ್‌ನಲ್ಲಿ ರೂ 6,999 ಕ್ಕೆ ದೊರೆಯುತ್ತಿದೆ. ಇದರ ಬಿಡುಗಡೆ ದಿನಾಂಕ ಫೆಬ್ರವರಿ 16 ಆಗಿದೆ.

ಆಕ್ವಾ ಪವರ್ ಎಚ್‌ಡಿ 5 ಇಂಚಿನ FWVGA (480x854p) ಐಪಿಎಸ್ ಡಿಸ್‌ಪ್ಲೇಯನ್ನು ಹೊಂದಿದೆ. ಇದು 1.3GHz MediaTek MT6582M ಕ್ವಾಡ್ ಕೋರ್ ಪ್ರೊಸೆಸರ್ ಅನ್ನು ಒಳಗೊಂಡಿದ್ದು, 1 ಜಿಬಿ RAM ಫೋನ್‌ನಲ್ಲಿದೆ. ಇದು 8 ಜಿಬಿ ಆಂತರಿಕ ಸಂಗ್ರಹವನ್ನು ಪಡೆದುಕೊಂಡಿದ್ದು, ಇದನ್ನು ಎಸ್‌ಡಿ ಕಾರ್ಡ್ ಬಳಸಿ 32 ಜಿಬಿಗೆ ವಿಸ್ತರಿಸಬಹುದಾಗಿದೆ.

ಇಂಟೆಕ್ಸ್‌ನಿಂದ ಲಾಲಿಪಪ್ 5.0 ಫೋನ್ ಬರೇ 6,990 ಕ್ಕೆ

ಆಕ್ವಾ ಸ್ಟಾರ್ ಆಂಡ್ರಾಯ್ಡ್ 5.0 ಲಾಲಿಪಪ್ ಅನ್ನು ಚಾಲನೆ ಮಾಡುತ್ತಿದ್ದು ಆಟೊ ಕಾಲ್ ರೆಕಾರ್ಡ್ ಮತ್ತು ಅಪ್ಲಿಕೇಶನ್‌ಗಳಾದ ಇಂಟೆಕ್ಸ್ ಜೋನ್, ಒಪೇರಾ ಮಿನಿ, ಇಂಟೆಕ್ಸ್ ಪ್ಲೇ, ಓಎಲ್‌ಎಕ್ಸ್, ಸಾವನ್, ರೀಚಾರ್ಜ್ ಇಟ್ ನೌ ಮುಂತಾದವುಗಳೊಂದಿಗೆ ಬಂದಿದೆ. ಫೋನ್ ಮುಂಭಾಗದಲ್ಲಿ 8 ಎಮ್‌ಪಿ ರಿಯರ್ ಕ್ಯಾಮೆರಾವನ್ನು ಹೊಂದಿದ್ದು ಮುಂಭಾಗದಲ್ಲಿ 2 ಎಮ್‌ಪಿ ಕ್ಯಾಮೆರಾವನ್ನು ಒಳಗೊಂಡಿದೆ.

English summary
This article tells about Intex launches Aqua Star L, its first Lollipop phone at Rs 6,990.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot