ಟಚ್‌ ಮಾಡಿ ಫೋಟೋ/ವಿಡಿಯೋ ಕಳುಹಿಸಿ

By Ashwath
|

ಬ್ಲೂಟೂತ್‌ ಎನ್‌ಎಫ್‌ಸಿ ಮೂಲಕ ಡೇಟಾಗಳನ್ನು ಕಳುಹಿಸುವುದು ಹೇಗೆ ಎನ್ನುವುದು ನಮಗೆಲ್ಲ ಗೊತ್ತು. ಆದರೆ ಮುಂದಿನ ದಿನಗಳಲ್ಲಿ ಈ ತಂತ್ರಜ್ಞಾನ ಹಳೇಯದಾಗಲಿದೆ. ಸಂಶೋಧಕರು ಟಚ್‌ ಮಾಡಿ ಡೇಟಾವನ್ನು ಕಳುಹಿಸಬಹುದಾದ ಹೊಸ ಸಂಶೋಧನೆಯನ್ನು ಕಂಡುಹಿಡಿದಿದ್ದಾರೆ.

ಹೌದು. ಫಿನ್ಲೆಂಡ್‌ನಲ್ಲಿರುವ ವಿಟಿಟಿ ಟೆಕ್ನಿಕಲ್ ರಿಸರ್ಚ್ ಸೆಂಟರ್‌ನ ಸಂಶೋಧಕರು ಈ ಇನ್‌ಟಚ್‌ ಯೂಸರ್‌ ಇಂಟರ್‌ಫೇಸ್‌( InTouch user interfaces )ತಂತ್ರಜ್ಞಾನವನ್ನು ಕಂಡುಹಿಡಿದಿದ್ದು ಸ್ಮಾರ್ಟ್‌ಫೋನಿನಲ್ಲಿರುವ ಕಳುಹಿಸಬೇಕಾದ ಡೇಟಾದ ಮೇಲೆ ಕೈಯನ್ನು ಟಚ್‌ ಮಾಡಿ ಇನ್ನೊಂದು ಸ್ಮಾರ್ಟ್‌ಫೋನ್‌ ಸ್ಕ್ರೀನ್‌ ಮೇಲೆ ಇರಿಸಿದರೆ ಆಯಿತು.ಆ ಡೇಟಾ ಸಂಪೂರ್ಣ‌ವಾಗಿ ಸ್ಮಾರ್ಟ್‌‌ಫೋನ್‌ಗೆ ವರ್ಗಾವಣೆ ಆಗಿರುತ್ತದೆ.

ಸಂಶೋಧಕರು ಇನ್‌ಟಚ್‌‌ ಇಂಟರ್‌ಫೇಸ್‌ಗಾಗಿ‌ ಕೈಯಲ್ಲಿ ಧರಿಸಲು ಮೂರು ಸಾಧನಗಳನ್ನು ಅಭಿವೃದ್ಧಿ ಪಡಿಸಿದ್ದಾರೆ. ಸ್ಟ್ರಕ್ಚರ್ ನೈಲ್, ಉಂಗುರ,ರಿಸ್ಟ್‌ಬ್ಯಾಂಡ್‌‌ನ್ನು ಕಳುಹಿಸುವ ವ್ಯಕ್ತಿ ಹಾಕಬೇಕಾಗುತ್ತದೆ. ಬಳಕೆದಾರರು ಈ ಮೂರು ಸಾಧನಗಳಲ್ಲಿ ಒಂದು ಸಾಧನವನ್ನು ಅವರು ಕೈಯಲ್ಲಿ ಧರಿಸಿರಬೇಕಾಗುತ್ತದೆ.

ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ಈ ಸಂಶೋಧನೆ ಹೇಗೆ ಕೆಲಸ ಮಾಡುತ್ತದೆ ಎನ್ನುವ ಗುಟ್ಟನ್ನು ಸಂಶೋಧಕರು ಇನ್ನೂ ಬಿಟ್ಟುಕೊಟ್ಟಿಲ್ಲ.ಆದರೆ ಈ ಸಂಶೋಧನೆಗೆ ಸಂಬಂಧಿಸಿದಂತೆ ಕಳೆದ ವಾರ ಮೂರು ಫೋಟೋ ಮತ್ತು ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ. ಸಂಶೋಧಕರು ಈಗ ಈ ಹೊಸ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಪೇಟೆಂಟ್‌ಗಾಗಿ ಅರ್ಜಿ‌ ಸಲ್ಲಿಸಿದ್ದಾರೆ.

ಟಚ್‌ ಮಾಡಿ ಡೇಟಾ ಕಳುಹಿಸಿ!

ಟಚ್‌ ಮಾಡಿ ಡೇಟಾ ಕಳುಹಿಸಿ!


ಸ್ಟ್ರಕ್ಚರ್ ನೈಲ್ ಮೂಲಕ ಡೇಟಾ ಕಳುಹಿಸುತ್ತಿರುವುದು

ಟಚ್‌ ಮಾಡಿ ಡೇಟಾ ಕಳುಹಿಸಿ!

ಟಚ್‌ ಮಾಡಿ ಡೇಟಾ ಕಳುಹಿಸಿ!

ಕೈ ಬೆರಳಿಗೆ ಉಂಗುರವನ್ನು ಧರಿಸಿ ಡೇಟಾ ಕಳುಹಿಸುತ್ತಿರುವುದು

ಟಚ್‌ ಮಾಡಿ ಡೇಟಾ ಕಳುಹಿಸಿ!

ಟಚ್‌ ಮಾಡಿ ಡೇಟಾ ಕಳುಹಿಸಿ!


ರಿಸ್ಟ್‌ಬ್ಯಾಂಡ್ ಧರಿಸಿ ಡೇಟಾ ಕಳುಹಿಸುತ್ತಿರುವುದು

ಟಚ್‌ ಮಾಡಿ ಡೇಟಾ ಕಳುಹಿಸಿ!


ಇನ್‌ಟಚ್‌ ಯೂಸರ್‌ ಇಂಟರ್‌ಫೇಸ್‌ ವಿಡಿಯೋ

ಮಾಹಿತಿ:www.vtt.fi

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X