ಆಪಲ್ 'ಐಒಎಸ್12': ನೀವು ತಿಳಿಯಲೇಬೇಕಾದ ಫೀಚರ್ಸ್, ಲಭ್ಯತೆಯ ಸಂಪೂರ್ಣ ಮಾಹಿತಿ ಇಲ್ಲಿದೆ!!

  ಇದೇ ತಿಂಗಳ ಜೂನ್ 4ರಂದು ಸ್ಯಾನ್ ಜೋಸ್ ನಲ್ಲಿ ಆಯೋಜಿಸಿದ್ದ 2018ನೇ ವಿಶ್ವ ಡೆವಲಪರ್ಸ್ ಸಮ್ಮೇಳನದಲ್ಲಿ ಆಪಲ್‌ನ ಬಹುನಿರೀಕ್ಷಿತ 'ಐಒಎಸ್12' (Apple iOS 12) ಲೋಕಾರ್ಪಣೆಯಾಗಿದೆ. ಈ ಹೊಸ 'ಐಒಎಸ್12' ಅಳವಡಿಕೆಯಿಂದ ಮುಂಬರುವ ಐಫೋನ್ ಹಾಗೂ ಐಪ್ಯಾಡ್‌ಗಳಲ್ಲಿ ಮಹತ್ತರ ಬದಲಾವಣೆ ಕಂಡುಬರಲಿದೆ.

  ಆಪಲ್ 'ಐಒಎಸ್ 11' ಆಪರೇಟಿಂಗ್ ಸಿಸ್ಟಂಗೆ ಹೋಲಿಸಿದಾಗ ಆಪಲ್ ಐಒಎಸ್ 12 ಮೂಲಕ ಬಳಕೆದಾರರಿಗೆ ಉನ್ನತ ಮಟ್ಟದ ಇಂಟರ್‌ಫೇಸ್ ನೀಡಲಿದೆ. ಇದು ಮತ್ತಷ್ಟು ಉತ್ತಮ ಮಟ್ಟದ ನಿರ್ವಹಣೆ ಹಾಗೂ ಅನುಭವವನ್ನು ಖಾತ್ರಿಪಡಿಸಲಿದೆ. ಐಒಎಸ್12 ನಲ್ಲಿ ಮೆಮೊಜಿ, ಫನ್ ಕ್ಯಾಮೆರಾ ಎಫೆಕ್ಟ್, ಗ್ರೂಪ್ ಫೇಸ್‌ಟೈಮ್ ಪ್ರಮುಖ ಆಕರ್ಷಣೆಯಾಗಲಿದೆ.

  ಆಪಲ್ 'ಐಒಎಸ್12': ನೀವು ತಿಳಿಯಲೇಬೇಕಾದ ಫೀಚರ್ಸ್, ಲಭ್ಯತೆಯ ಸಂಪೂರ್ಣ ಮಾಹಿತಿ!!

  ಐಒಎಸ್12 ಡೆವಲಂಪಿಂಗ್ ವರ್ಷನ್ ಈಗ ಲಭ್ಯವಿದ್ದು, ಜೂನ್ ಬಳಿಕ ಮೊದಲ ಬೇಟಾ ವರ್ಷನ್ ಸಿಗಲಿದೆ. ಹಾಗಾದರೆ, ಆಪಲ್ ಐಒಎಸ್ 12 ಆಪರೇಟಿಂಗ್ ಸಿಸ್ಟಮ್ ಯಾವ ಯಾವ ಆಪಲ್ ಐಫೋನ್ ಮತ್ತು ಐಪ್ಯಾಡ್ ಬಳಕೆದಾರರಿಗೆ ಸಿಗಲಿದೆ? 'ಐಒಎಸ್12' ತಂದಿರುವ ಎಲ್ಲಾ ಫೀಚರ್ಸ್ ಯಾವುವು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯೋಣ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಯಾವ ಯಾವ ಆಪಲ್ ಬಳಕೆದಾರರಿಗೆ ಲಭ್ಯ?

  ಐಒಎಸ್12 ಡೆವಲಂಪಿಂಗ್ ವರ್ಷನ್ ಈಗ ಲಭ್ಯವಿದ್ದು, ಜೂನ್ ಬಳಿಕ ಮೊದಲ ಬೇಟಾ ವರ್ಷನ್ ಸಿಗಲಿದೆ.ಐಫೋನ್ 5ಎಸ್ ಅಥವಾ ಅದಕ್ಕಿಂತಲೂ ತಾಜಾ ಐಫೋನ್, ಐಪ್ಯಾಡ್ ಮಿನಿ 2, ಐಪ್ಯಾಡ್ ಏರ್ ಅಥವಾ ಅದಕ್ಕಿಂತಲೂ ನೂತನ ಆಪಲ್ ಸ್ಮಾರ್ಟ್‌ಫೋನ್‌ಗಳಲ್ಲಿ ಆಪಲ್ ಐಒಎಸ್ 12 ಲಭ್ಯವಾಗಲಿದೆ.

  7 ಪ್ರಮುಖ ಹೊಸ ವೈಶಿಷ್ಟ್ಯಗಳು!!

  'ಐಒಎಸ್12' ತಂದಿರುವ ಫೀಚರ್ಸ್‌ಗಳಲ್ಲಿ ಪ್ರಮುಖ ಹೊಸ ವೈಶಿಷ್ಟ್ಯಗಳನ್ನು ಮೊದಲು ಪಟ್ಟಿ ಮಾಡಲಾಗಿದೆ. ಇಷ್ಟು ಮಾತ್ರವಲ್ಲದೇ ಗ್ರಾಹಕರಿಗೆ ಹೊಸ ರೀತಿಯ ಆಯ್ಕೆಗಳು ಸಹ ಲಭ್ಯವಿವೆ. ಹಾಗಾದರೆ, ಹೊಸ iOS 12ನಲ್ಲಿರುವ ಆ 7 ಪ್ರಮುಖ ವಿಶೇಷತೆಗಳೇನು ಮತ್ತು ಇತರೆ ಯಾವೆಲ್ಲಾ ಫೀಚರ್ಸ್ ಬಳಕೆದಾರರಿಗೆ ಸಿಲಿದೆ ಎಂಬುದನ್ನು ಮುಂದೆ ನೊಡಿ.

  1. ಆಗ್ಮೆಂಟೆಡ್ ರಿಯಾಲಿಟಿ ಮತ್ತು ಯುಎಸ್ ಡಿಜೆಡ್

  ಆಪಲ್ ಕಂಪನಿಯು ಟ್ರಾನ್ಸ್ ಫಾರ್ಮೆಷನಲ್ ತಂತ್ರಜ್ಞಾನ AR ಪರಿಚಯಿಸಿದ್ದು, ಪಿಕ್ಸರ್ ಜೊತೆ ಕಾರ್ಯನಿರ್ವಹಿಸಿ USDZ ಪರಿಚಯಿಸಿದೆ. ಇದು ಹೊಸ ಫೈಲ್ ಫಾರ್ಮ್ಯಾಟ್ ಆಗಿದ್ದು, ಎಆರ್ ವಿಷಯದ ಹಂಚಿಕೆ ಮತ್ತು ಸಂಪಾದನೆಯನ್ನು ಸರಳಗೊಳಿಸಿದೆ. USDZ ಗೆ ಅಡೋಬ್ ಸ್ಥಳೀಯ ಕ್ರಿಯೆಟಿವ್ ಕ್ಲೌಡ್ ಬೆಂಬಲ ಪಡೆದು ಕಾರ್ಯನಿರ್ವಹಿಸುತ್ತದೆ. ಅಡೋಬ್ ಕಾರ್ಯನಿರ್ವಾಹಕ ಪಾಧ್ಯಕ್ಷ ಮತ್ತು ಸಿಟಿಒ ಅಭಯ್ ಪರಾನಿಸ್ ಹೇಳುವಂತೆ ಯಾವುದೇ ಆಬ್ಜೇಕ್ಟಿವ್ ನ್ನು ಕ್ರಿಯೆಟಿವ್ ಕ್ಲೌಡ್ ನಿಂದ ಎಆರ್ ಪರಿಸರಕ್ಕೆ ತರಬಹುದು. ಮೊದಲ ಬಾರಿಗೆ ಬಳಕೆದಾರರು ಏನನ್ನು ನೋಡುತ್ತಾರೋ ಅದನ್ನು ಅನುಭವಿಸುತ್ತಾರಂತೆ.

  2. ಸಿರಿ ಶಾರ್ಟ್ ಕಟ್ಸ್

  ಆಪಲ್ ಗ್ರಾಹಕರಿಗೆ ಮತ್ತೊಂದು ಆಯ್ಕೆ ಸಿಕ್ಕಿದ್ದು, ಅದೇ ಸಿರಿ ಶಾರ್ಟ್ ಕಟ್ಸ್. ಅಮೆಜಾನ್ ಅಲೆಕ್ಸಾ ಸ್ಕಿಲ್ಸ್ ಹೋಲುವ ಆಯ್ಕೆ ಇದಾಗಿದ್ದು, ವೇಗವಾಗಿ ಕಾರ್ಯನಿರ್ವಹಿಸುತ್ತದೆ. ದೈನಂದಿನ ಚಟುವಟಿಕೆಗಳು ಮತ್ತು ಕ್ಯಾಲೆಂಡರ್ ವಿಶೇಷಗಳ ಕುರಿತು ಗ್ರಾಹಕರಿಗೆ ಸಲಹೆ ನೀಡುತ್ತದೆ. ಇದಕ್ಕಾಗಿಯೇ ಶಾರ್ಟ್ ಕಟ್ಸ್ ಅಪ್ಲಿಕೇಷನ್ ಇದ್ದು, ನಮ್ಮ ಆಯ್ಕೆಗಳನ್ನು ಎಡಿಟ್ ಮಾಡಬಹುದು ಅಥವಾ ಸೇರಿಸಬಹುದಾಗಿದೆ.

  3. ಡು ನಾಟ್ ಡಿಸ್ಟರ್ಬ್ ಮತ್ತು ಸ್ಕ್ರೀನ್ ಸಮಯ

  iOS 12 ಡು ನಾಟ್ ಡಿಸ್ಟರ್ಬ್ ಆಯ್ಕೆ ನೀಡಿದ್ದು, ಹೋಮ್ ಸ್ಕ್ರೀನ್ ನಲ್ಲಿ ಅಪ್ಲಿಕೇಷನ್ ನೋಟಿಫಿಕೇಷನ್ಸ್ ಬರದಂತೆ ನೋಡಿಕೊಳ್ಳುತ್ತದೆ. ಆದರೆ, ಹೊಸ ಆಯ್ಕೆ ನೀಡಿದ್ದು, ಸ್ಥಳ ಅಥವಾ ನಿಗದಿತ ಸಮಯದಲ್ಲಿ DND ಆಕ್ಟಿವ್ ಮಾಡಿಕೊಳ್ಳಬಹುದು. ಲಿಮಿಟೆಡ್ ನೋಟಿಫಿಕೇಷನ್ ತೋರಿಸುವ ಆಯ್ಕೆಯಿದ್ದು, ಕೆಲವೊಂದು ಅಪ್ಲಿಕೇಷನ್ ಗಳ ನೋಟಿಫಿಕೇಷನ್ ಗಳನ್ನು ಹೋಮ್ ಸ್ಕ್ರಿನ್ ನಲ್ಲಿ ತೋರಿಸದೆ ಪಟ್ಟಿ ಮಾಡಿಕೊಳ್ಳುತ್ತದೆ.

  4.ಆಪಲ್ ನ್ಯೂಸ್, ಸ್ಟಾಕ್ಸ್ ಮತ್ತು ವಾಯ್ಸ್ ಮೆಮೋ

  ಆಪಲ್ ನ್ಯೂಸ್ ಮತ್ತು ಸ್ಟಾಕ್ಸ್ ಅಪ್ಲಿಕೇಷನ್ ಗಳನ್ನು ಅಪ್ ಡೇಟ್ ಮಾಡಿದ್ದು, ಹೆಚ್ಚು ಬಳಕೆದಾರರ ಸ್ನೇಹಿಯಾಗಿ ರೂಪಿಸಿದೆ. ಆಪಲ್ ನ್ಯೂಸ್ ಸೈಡ್ ಬಾರ್ ಹೊಂದಿದ್ದು, ಸರಳವಾಗಿ ನ್ಯಾವಿಗೇಷನ್ ಮಾಡಬಹುದು. ಇನ್ನು ಸ್ಟಾಕ್ಸ್ ಆಫರ್ ಆಧಾರದಲ್ಲಿ ಪ್ರಸ್ತುತವಾದ ಹೆಡ್ ಲೈನ್ ನೀಡುತ್ತದೆ. ವಾಯ್ಸ್ ಮೆಮೋ ಮರು ನಿರ್ಮಿಸಿದ್ದು, ಈಗ ಆಪಲ್ ನ್ಯೂಸ್ ಮತ್ತು ಸ್ಟಾಕ್ಸ್ ಜತೆ ಐಪಾಡ್ ನಲ್ಲಿಯೂ ಲಭ್ಯವಿದೆ.

  5.ಪೋಟೋಸ್ Photos

  ಹೊಸ iOS 12ನಲ್ಲಿ ಪೋಟೋಸ್ ಅಪ್ಲಿಕೇಷನ್ ಸರ್ಚ್ ಸಲಹೆಗಳೊಂದಿಗೆ ಉತ್ತಮವಾಗಿದೆ. ಪೋಟೋದಲ್ಲಿರುವ ಸ್ಥಳ, ಇವೆಂಟ್ ಗಳನ್ನು ಹುಡುಕಬಹುದು. ಹೊಸ ಹುಡುಕುವಿಕೆ ಹಾಗೂ ಮಲ್ಟಿಪಲ್ ಸರ್ಚ್ ಗೆ ಅವಕಾಶ ನೀಡಿದೆ.

  6. ಅನಿಮೋಜಿ ಮತ್ತು ಮೆಮೋಜಿ Animojis and Memoji

  iOS 12ನಲ್ಲಿ ಹೆಚ್ಚು ಅನಿಮೋಜಿಗಳ ಆಯ್ಕೆಯಿದ್ದು, ಅವುಗಳೆಲ್ಲ ಟಂಗ್ ಡಿಟೇಕ್ಷನ್ ಮೂಲಕ ಬಂದಿದ್ದು, ಇವುಗಳನ್ನು ಫೇಸ್ ಟೈಮ್ ಮತ್ತು ಮೇಸೆಜಿಂಗ್ ನಲ್ಲಿ ರಿಪ್ಲೇ ಮಾಡಬೇಕಾದಾಗ ಬಳಸಬಹುದು. ನಿಮ್ಮದೇ ಆದ ಸ್ವಂತ ಅನಿಮೋಜಿ ಮಾಡಿಕೊಳ್ಳಬಹುದು. ಹೊಸ ಮೆಮೋಜಿಗಳ ಆಯ್ಕೆಯನ್ನು ಸಹ iOS 12 ನೀಡಿದೆ.

  7.ಫೇಸ್ ಟೈಮ್ ಗ್ರೂಪ್ ವಿಡೀಯೋ Facetime group video

  ಆಪಲ್ iOS 12ನೊಂದಿಗೆ ಫೇಸ್ ಟೈಮ್ ಗ್ರೂಪ್ ವಿಡೀಯೋ ವ್ಯವಸ್ಥೆ ಪರಿಚಯಿಸಿದೆ. ಇದರಲ್ಲಿ ಏಕಕಾಲದಲ್ಲಿ 32 ಜನರೊಂದಿಗೆ ವಿಡೀಯೋ ಕಾಲ್ ಸಂಪರ್ಕ ಸಾಧಿಸಬಹುದು. ಗುಂಪು ಆಡಿಯೋ ಚಾಟ್ ಮಾಡಬಹುದಾಗಿದೆ.

  ಆಂಡ್ರಾಯ್ಡ್‌ನಲ್ಲಿ Facebook Instagram ವಿಡಿಯೋ ಡೌನ್‌ಲೋಡ್ ಮಾಡುವುದು ಹೇಗೆ..?
  iOS 12ನಲ್ಲಿನ ಇತರೆ ಎಲ್ಲಾ ಫೀಚರ್ಸ್?

  iOS 12ನಲ್ಲಿನ ಇತರೆ ಎಲ್ಲಾ ಫೀಚರ್ಸ್?

  ಆಪ್ ಲಿಮಿಟ್, ಮೆಮೊಜಿ ಪರಿಚಯ, ವೇಗವಾದ ಅನಿಮೇಷನ್, ಮಕ್ಕಳಿಗೆ ಇತಿ ಮಿತಿ, ಸಾಮಾಜಿಕ ಜಾಲತಾಣಗಳ ನಿಯಂತ್ರಣ, ಫೇಸ್‌ಟೈಮ್ , ಖಾಸಗಿ ಭದ್ರತೆ, ಸೆಕ್ಯೂರಿಟಿ, ಆಪಲ್ ಕಾರ್ ಪ್ಲೇ ಸುಧಾರಣೆ, ಐಪ್ಯಾಡ್‌ನಲ್ಲಿ ಗೆಸ್ಟರ್ ಹೀಗೆ 'ಐಒಎಸ್12' ತಂದಿರುವ ಫೀಚರ್ಸ್‌ಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  iOS 12 will fix the most annoying problem plaguing iPhone X users. to know more visit to kannada.gizbot.com
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more