ಐಫೋನ್ಗಳಿಗೆ ಶೀಘ್ರವೇ ಬರಲಿದೆ ಸಂಪೂರ್ಣ 'ಗ್ಲಾಸಿ ಎಫೆಕ್ಟ್' ಇಂಟರ್‌ಫೇಸ್!
ಕಳೆದ ವರ್ಷದಿಂದ ಕೇಳಿಬರುತ್ತಿರುವ ಬಹುನಿರೀಕ್ಷಿತ ಐಫೋನ್ 'ಗ್ಲಾಸಿ ಎಫೆಕ್ಟ್' ವೈಶಿಷ್ಟ್ಯವು ಈ ವರ್ಷ ಖಂಡಿತವಾಗಿಯೂ ಲಭ್ಯವಾಗಬಹುದು ಎಂದು ಹೊಸ ವರದಿಯೊಂದು ತಿಳಿಸಿದೆ. ಮುಂದಿನ ಜೂನ್ 9 ರಂದು ಆರಂಭವಾಗುವ ವರ್ಲ್ಡ್‌ವೈಡ್ ಡೆವಲಪರ್ಸ್ ಕಾನ್ಫರೆನ್ಸ್ (WWDC) 2025 ರಲ್ಲಿ, ಆಪಲ್ ತನ್ನ iOS 18 ನ ಉತ್ತರಾಧಿಕಾರಿಯಾಗಿ iOS 19 ಅನ್ನು ಪರಿಚಯಿಸುತ್ತಿದ್ದು, ಇದು ಐಫೋನ್‌ಗಳಿಗೆ ದೃಶ್ಯ ಪರಿಷ್ಕರಣೆಗಳನ್ನು ತರುತ್ತದೆ. ಈ ಪರಿಷ್ಕರಣೆಗಳಲ್ಲಿ ಆಪಲ್ ಸಾಧನಗಳಿಗೆ ನಿಯಂತ್ರಣಗಳು, ಐಕಾನ್‌ಗಳು ಮತ್ತು ಬಟನ್‌ಗಳಿಗೆ ಹೆಚ್ಚಿನ ಸ್ಥಿರತೆಯನ್ನು ನೀಡಲಾಗುತ್ತದೆ, ಮತ್ತು 'ಗ್ಲಾಸಿ ಎಫೆಕ್ಟ್' ವೈಶಿಷ್ಟ್ಯವು ಇದರಲ್ಲಿ ಸೇರಲಿದೆ ಎಂದು ಬ್ಲೂಮ್‌ಬರ್ಗ್‌ನ ಬಿಸಿನೆಸ್‌ವೀಕ್ ಡೈಲಿಯ ನಿರೂಪಕ ಟಿಮ್ ಸ್ಟೆನೋವೆಕ್ ಅವರು ತಿಳಿಸಿದ್ದಾರೆ.
ಟಿಮ್ ಸ್ಟೆನೋವೆಕ್ ಅವರ ಪ್ರಕಾರ, WWDC 2025 ನಲ್ಲಿ iOS 19 ಯೂಸರ್ ಇಂಟರ್‌ಫೇಸ್ ಸಂಪೂರ್ಣ ಗ್ಲಾಸಿ ಎಫೆಕ್ಟ್ ಅನ್ನು ಒಳಗೊಂಡಿರುತ್ತದೆ. ಈ ವೈಶಿಷ್ಟ್ಯವು ಕಳೆದ ವರ್ಷ iOS 18 ನಲ್ಲಿ ಬರಬೇಕಾಗಿತ್ತು, ಆದರೆ ಆ ನವೀಕರಣವು ಯಾವುದೇ ಪ್ರಮುಖ ದೃಶ್ಯ ಬದಲಾವಣೆಗಳನ್ನು ಪರಿಚಯಿಸಿರಲಿಲ್ಲ. iOS 19 ಈ ವೈಶಿಷ್ಟ್ಯದೊಂದಿಗೆ, ಐಫೋನ್‌ಗಳಿಗೆ ದೃಶ್ಯ ಪರಿಷ್ಕರಣೆಗಳನ್ನು ತರುತ್ತದೆ, ಇದರಿಂದ ಹೆಚ್ಚಿನ ಸ್ಥಿರತೆಯನ್ನು ಒದಗಿಸುತ್ತದೆ. ಇದರಿಂದ ಆಪಲ್‌ನ ಮುಂದಿನ ಪೀಳಿಗೆಯ ಆಪರೇಟಿಂಗ್ ಸಿಸ್ಟಮ್ (OS) ಐಫೋನ್, ಐಪ್ಯಾಡ್, ಮ್ಯಾಕ್ ಮತ್ತು ಆಪಲ್ ವಿಷನ್ ಪ್ರೊ ಸೇರಿದಂತೆ ವಿವಿಧ ಸಾಧನಗಳಲ್ಲಿ ದೃಶ್ಯ ವ್ಯತ್ಯಾಸಗಳನ್ನು ಕಡಿಮೆ ಮಾಡುತ್ತದೆ ಮತ್ತು ಹೆಚ್ಚು ಏಕೀಕೃತ ಅನುಭವವನ್ನು ನೀಡುತ್ತದೆ ಎಂದು ತಿಳಿಸಲಾಗಿದೆ.
ಆಪಲ್ ತನ್ನ ಎಐ ಬುದ್ಧಿಮತ್ತೆ ವೈಶಿಷ್ಟ್ಯಗಳನ್ನು ಅಭಿವೃದ್ಧಿಪಡಿಸಲು ಗಮನ ಹರಿಸುತ್ತಿರುವುದರಿಂದ, ಈ ಎಲ್ಲಾ ಬದಲಾವಣೆಗಳು ಸಂಭವಿಸುತ್ತಿವೆ. ಆಪಲ್ ತನ್ನ ಮುಂದಿನ OS ನವೀಕರಣದೊಂದಿಗೆ ಹೊಸ ದೃಶ್ಯ ವ್ಯವಸ್ಥೆಯ ಅಂಶಗಳನ್ನು ಪರಿಚಯಿಸುವ ನಿರೀಕ್ಷೆಯೊಂದಿಗೆ, ಗ್ರಾಹಕರ ಅನುಭವವು ಇನ್ನಷ್ಟು ಉತ್ತಮವಾಗಲಿದೆ. ಈಗಾಗಲೇ, ಆಪಲ್ ತನ್ನ AI-ಚಾಲಿತ ಆಪಲ್ ಇಂಟೆಲಿಜೆನ್ಸ್ ಅನ್ನು ಭಾರತದಲ್ಲಿ ಅಧಿಕೃತವಾಗಿ ಪರಿಚಯಿಸಿದೆ. iOS 18.4, iPadOS 18.4, ಮತ್ತು macOS Sequoia 15.4 ನವೀಕರಣಗಳೊಂದಿಗೆ, ಐಫೋನ್ ಮತ್ತು ಇತರ ಆಪಲ್ ಉತ್ಪನ್ನಗಳ ಬಳಕೆದಾರರು ಉತ್ಪಾದಕತೆ, ಸೃಜನಶೀಲತೆ ಮತ್ತು ಗೌಪ್ಯತೆಯನ್ನು ಸುಧಾರಿಸಲು ಹಲವಾರು ಹೊಸ ವೈಶಿಷ್ಟ್ಯಗಳನ್ನು ಪಡೆಯುತ್ತಿದ್ದಾರೆ.
ಇತ್ತೀಚಿನ ನವೀಕರಣಗಳೊಂದಿಗೆ, ಬಳಕೆದಾರರು ಬರವಣಿಗೆ ಟೂಲ್‌ಗಳನ್ನು ಬಳಸಿಕೊಂಡು ಮೇಲ್, ಸಂದೇಶಗಳು, ಟಿಪ್ಪಣಿಗಳು ಮತ್ತು ಮೂರನೇ ವ್ಯಕ್ತಿಯ ಅಪ್ಲಿಕೇಶನ್‌ಗಳಲ್ಲಿ ಪಠ್ಯವನ್ನು ಪುನಃ ಬರೆಯಲು, ಪ್ರೂಫ್‌ರೀಡ್ ಮಾಡಲು ಮತ್ತು ಸಾರಾಂಶಗೊಳಿಸಲು ಸಾಧ್ಯವಾಗುತ್ತದೆ. ಈ ವೈಶಿಷ್ಟ್ಯವು ವೃತ್ತಿಪರ, ಸಂಕ್ಷಿಪ್ತ ಅಥವಾ ಸ್ನೇಹಪರ ಬರವಣಿಗೆಯ ಶೈಲಿಗಳಿಗೆ ಟೋನ್ ಹೊಂದಾಣಿಕೆಗಳನ್ನು ಒದಗಿಸುತ್ತದೆ, ಮತ್ತು ಸ್ಮಾರ್ಟ್ ಪ್ರತ್ಯುತ್ತರ ವೈಶಿಷ್ಟ್ಯವು ಸಂದೇಶಗಳಿಗೆ ತ್ವರಿತ ಪ್ರತಿಕ್ರಿಯೆಗಳನ್ನು ಸೂಚಿಸುತ್ತದೆ. ಈ ಕೆಳಗೆ ಆಪಲ್ AI-ಚಾಲಿತ ಆಪಲ್ ಇಂಟೆಲಿಜೆನ್ಸ್ ಮೂಲಕ ದೊರೆಯುವ ಪ್ರಮುಖ ವೈಶಿಷ್ಟ್ಯಗಳ ವಿವರಗಳಿವೆ.
AI-ಚಾಲಿತ ಫೋಟೋಗಳು ಮತ್ತು ವಿಷುಯಲ್ ಇಂಟೆಲಿಜೆನ್ಸ್
ಈ ಹೊಸ ಅಪ್‌ಡೇಟ್ ಫೋಟೋ ಅಪ್ಲಿಕೇಶನ್‌ಗಾಗಿ AI ನವೀಕರಣವನ್ನು ಒದಗಿಸುತ್ತದೆ, ಇದು ಬಳಕೆದಾರರಿಗೆ ಚಿತ್ರಗಳಿಂದ ಗಮನ ಸೆಳೆಯದ ಅಂಶಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಹೊಸ ಮೆಮೊರೀಸ್ ವೈಶಿಷ್ಟ್ಯವು ಬಳಕೆದಾರರ ವಿವರಣೆಗಳನ್ನು ಅರ್ಥಮಾಡಿಕೊಳ್ಳುವ ಮೂಲಕ ಕಸ್ಟಮೈಸ್ ಮಾಡಿದ ವೀಡಿಯೊ ಮಾಂಟೇಜ್‌ಗಳನ್ನು ರಚಿಸುತ್ತದೆ. ಆಪಲ್‌ನ ವಿಷುಯಲ್ ಇಂಟೆಲಿಜೆನ್ಸ್ ಸಸ್ಯಗಳು, ಪ್ರಾಣಿಗಳು ಮತ್ತು ಹೆಗ್ಗುರುತುಗಳನ್ನು ಗುರುತಿಸಲು, ಪಠ್ಯವನ್ನು ಅನುವಾದಿಸಲು ಮತ್ತು ಸ್ಕ್ಯಾನ್ ಮಾಡಿದ ಪೋಸ್ಟರ್‌ಗಳಿಂದ ಕ್ಯಾಲೆಂಡರ್ ಈವೆಂಟ್‌ಗಳನ್ನು ರಚಿಸಲು ಸಹ ಸಾಧ್ಯವಾಗುತ್ತದೆ.

ಇಮೇಜ್ ಪ್ಲೇಗ್ರೌಂಡ್ ಮತ್ತು ಜೆನ್‌ಮೋಜಿ
ಹೊಸ ಇಮೇಜ್ ಪ್ಲೇಗ್ರೌಂಡ್ ವೈಶಿಷ್ಟ್ಯವು AI-ಚಾಲಿತ ಇಮೇಜ್ ಉತ್ಪಾದನೆಯನ್ನು ಸುಲಭಗೊಳಿಸುತ್ತದೆ, ಬಳಕೆದಾರರಿಗೆ ಥೀಮ್‌ಗಳು, ವೇಷಭೂಷಣಗಳು ಮತ್ತು ಪರಿಕರಗಳ ಆಧಾರದ ಮೇಲೆ ದೃಶ್ಯಗಳನ್ನು ರಚಿಸಲು ಅವಕಾಶ ನೀಡುತ್ತದೆ. ಈ ಉಪಕರಣವು ಫ್ರೀಫಾರ್ಮ್ ಮತ್ತು ಕೀನೋಟ್‌ನಂತಹ ಸಂದೇಶಗಳು ಮತ್ತು ಅಪ್ಲಿಕೇಶನ್‌ಗಳಲ್ಲಿ ನೇರವಾಗಿ ಸಂಯೋಜಿಸುತ್ತದೆ. ಜೆನ್‌ಮೋಜಿ ಬಳಕೆದಾರರಿಗೆ ಪಠ್ಯ ವಿವರಣೆಗಳ ಆಧಾರದ ಮೇಲೆ ವಿಶಿಷ್ಟ ಎಮೋಜಿಗಳನ್ನು ರಚಿಸಲು ಅಥವಾ ಸ್ನೇಹಿತರು ಮತ್ತು ಕುಟುಂಬದಿಂದ ಪ್ರೇರಿತವಾದ ಆವೃತ್ತಿಗಳನ್ನು ಸೃಷ್ಟಿಸಲು ಅವಕಾಶ ನೀಡುತ್ತದೆ.
ChatGPT ಜೊತೆಗೆ ಸ್ಮಾರ್ಟ್ ಸಿರಿ
ಸಿರಿ ಈಗ ಹೆಚ್ಚು ಸಂವಾದಾತ್ಮಕ, ಸಂದರ್ಭ-ಅರಿವುಳ್ಳ ಮತ್ತು ಆಪಲ್‌ನ ಪರಿಸರ ವ್ಯವಸ್ಥೆಯಲ್ಲಿಸಂಯೋಜಿತವಾಗಿದೆ. ಬಳಕೆದಾರರು ಸಿರಿಯೊಂದಿಗೆ ಟೈಪ್ ಮಾಡಬಹುದು ಅಥವಾ ಮಾತನಾಡಬಹುದು ಮತ್ತು ನೈಸರ್ಗಿಕ ಪ್ರತಿಕ್ರಿಯೆಗಳನ್ನು ನಿರೀಕ್ಷಿಸಬಹುದು. ಆಪಲ್ ಸಿರಿ ಜೊತೆಗೆ ChatGPT ಅನ್ನು ಸಂಯೋಜಿಸಿದೆ, ಇದರಿಂದ ಬಳಕೆದಾರರು ಅಪ್ಲಿಕೇಶನ್‌ಗಳನ್ನು ಬದಲಾಯಿಸದೇ ಕಂಟೆಂಟ್ ಜನರೇಷನ್ ಮತ್ತು ಸಮಸ್ಯೆ ಪರಿಹಾರಕ್ಕಾಗಿ OpenAI ನ ಪರಿಣತಿಯನ್ನು ಬಳಸಿಕೊಳ್ಳಬಹುದು. ChatGPT ಪ್ರವೇಶವನ್ನು ಬಳಸಲು ಆಯ್ಕೆ ಮಾಡುವ ಬಳಕೆದಾರರಿಗೆ ಕಟ್ಟುನಿಟ್ಟಾದ ಗೌಪ್ಯತೆ ನಿಯಂತ್ರಣಗಳನ್ನು ಒದಗಿಸಲಾಗಿದೆ.
ಎನಾನ್ಸ್ ಪ್ರಾಡಕ್ಟಿವಿಟಿ ಮತ್ತು ಗೌಪ್ಯತೆ
ಇದೀಗ ಇಮೇಲ್‌ಗಳಲ್ಲಿ ಹೊಸ ಆದ್ಯತೆಯ ಸಂದೇಶಗಳು ಮತ್ತು ನೋಟಿಫಿಕೇಶನ್ ಸಾರಾಂಶಗಳು ಬಳಕೆದಾರರಿಗೆ ಹೆಚ್ಚು ಮುಖ್ಯವಾದ ವಿಷಯಗಳ ಮೇಲೆ ಕೇಂದ್ರೀಕರಿಸಲು ಸುಲಭಗೊಳಿಸುತ್ತವೆ. ಇಮೇಜ್ ವಾಂಡ್‌ನೊಂದಿಗೆ ನೋಟ್ಸ್ ಅಪ್ಲಿಕೇಶನ್ AI ಎನಾನ್ಸ್ ಪಡೆಯುತ್ತದೆ, ಇದು ರೇಖಾಚಿತ್ರಗಳನ್ನು ಸಂಸ್ಕರಿಸಿದ ವಿವರಣೆಗಳಾಗಿ ಪರಿವರ್ತಿಸುತ್ತದೆ. ಆಪಲ್ ಇಂಟೆಲಿಜೆನ್ಸ್ ಪ್ರಾಥಮಿಕವಾಗಿ ಸಾಧನದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಗೌಪ್ಯತೆಯನ್ನು ಖಚಿತಪಡಿಸುತ್ತವೆ. ಆದರೆ ಖಾಸಗಿ ಕ್ಲೌಡ್ ಕಂಪ್ಯೂಟ್ ಅಗತ್ಯವಿದ್ದಾಗ AI ಸಾಮರ್ಥ್ಯಗಳನ್ನು ಕ್ಲೌಡ್‌ಗೆ ಸುರಕ್ಷಿತವಾಗಿ ವಿಸ್ತರಿಸುತ್ತದೆ ಎಂದು ತಿಳಿಸಲಾಗಿದೆ.


Click it and Unblock the Notifications








