iPhone ಬಳಕೆದಾರರಿಗೆ iOS 26.1 ಅಪ್‌ಡೇಟ್ ಲಭ್ಯ: ಸಂಪೂರ್ಣ ಮಾಹಿತಿ!
ಭಾರತ ಸೇರಿದಂತೆ ವಿಶ್ವದಾದ್ಯಂತ iPhone ಬಳಕೆದಾರರಿಗೆ iOS 26.1 ಅಪ್‌ಡೇಟ್ ಇದೀಗ ಲಭ್ಯವಾಗಿದೆ. ಆಪಲ್ ತನ್ನ ಹೊಸ iOS 26.1 ಅಪ್ಡೇಟ್ ಅನ್ನು ಅಧಿಕೃತವಾಗಿ ಬಿಡುಗಡೆಗೊಳಿಸಿದ್ದು, ಈ ಆವೃತ್ತಿಯು ಹೆಚ್ಚು ವೈಯಕ್ತಿಕ ಇಂಟರ್ಫೇಸ್, ಸುಧಾರಿತ ನಿಯಂತ್ರಣಗಳು ಮತ್ತು ದಿನನಿತ್ಯದ ಬಳಕೆಯನ್ನು ಸುಲಭಗೊಳಿಸುವ ಹಲವು ಬದಲಾವಣೆಗಳನ್ನು ಒಳಗೊಂಡಿದೆ. ಹಾಗಾದರೆ ಹೊಸ iOS 26.1 ಅಪ್ಡೇಟ್ ಏನೆಲ್ಲಾ ವೈಶಿಷ್ಟ್ಯಗಳನ್ನು ಹೊಂದಿದೆ?, ಸಪೋರ್ಟ್ ಮಾಡುವ ಡಿವೈಸ್‌ಗಳು ಯಾವುವು? ಮತ್ತು ಅಪ್‌ಡೇಟ್ ಮಾಡುವುದು ಹೇಗೆ? ಎಂಬ ಸಂಪೂರ್ಣ ಮಾಹಿತಿಯನ್ನು ಮುಂದೆ ಓದಿ ತಿಳಿಯೋಣ ಬನ್ನಿ.
ಹೆಚ್ಚು ಕಸ್ಟಮೈಸ್ ಮಾಡಬಹುದಾದ ಇಂಟರ್ಫೇಸ್
ಈ ಹೊಸ iOS 26.1 ಅಪ್‌ಡೇಟ್‌ನ್ ಪ್ರಮುಖ ಆಕರ್ಷಣೆ ಎಂದರೆ 'Liquid Glass' ಸೆಟ್ಟಿಂಗ್. ಇದರ ಮೂಲಕ ಬಳಕೆದಾರರು ತಮ್ಮ ಡಿಸ್‌ಪ್ಲೇಯನ್ನು ಪಾರದರ್ಶಕತೆಯನ್ನು ನಿಖರವಾಗಿ ನಿಯಂತ್ರಿಸಬಹುದು. ಹೊಸ 'Tinted Mode' ಆಯ್ಕೆಯು ಹಿನ್ನೆಲೆಯನ್ನು ಸ್ವಲ್ಪ ಮಬ್ಬಾಗಿಸಲು ಸಹಕಾರಿಯಾಗುತ್ತದೆ, ಇದರಿಂದ ಪಠ್ಯ ಓದುವ ಅನುಭವ ಸುಧಾರಿಸುತ್ತದೆ. ಪಾರದರ್ಶಕ ಹಿನ್ನೆಲೆಯ ಮೇಲೆ ಪಠ್ಯ ಸ್ಪಷ್ಟವಾಗಿ ಕಾಣದವರಿಗೆ ಇದು ಅತ್ಯಂತ ಉಪಯುಕ್ತ ವೈಶಿಷ್ಟ್ಯ.
ಅದೇ ರೀತಿ, ಬಳಕೆದಾರರು ವರ್ಷಗಳಿಂದ ಕೇಳುತ್ತಿದ್ದ 'Lock Screen Swipe-to-Open Camera' ಆಯ್ಕೆಯನ್ನು ನಿಷ್ಕ್ರಿಯಗೊಳಿಸುವ ವ್ಯವಸ್ಥೆ ಈಗ ಲಭ್ಯವಾಗಿದೆ. ಇದು "Settings > Camera > Lock Screen Swipe to Open Camera" ವಿಭಾಗದಲ್ಲಿ ಕಾಣಿಸುತ್ತದೆ. ತಿಳಿಯದೇ ಕ್ಯಾಮೆರಾ ತೆರೆಯುವವರಿಗಾಗಿ ಇದು ಅತ್ಯಂತ ಉಪಯುಕ್ತ ಬದಲಾವಣೆಯಾಗಿದೆ.

ಇತರೆ ಎಲ್ಲಾ ಪ್ರಮುಖ ವೈಶಿಷ್ಟ್ಯಗಳು.
iOS 26.1 ಅಪ್ಡೇಟ್‌ನಲ್ಲಿ FaceTime ಆಡಿಯೋ ಗುಣಮಟ್ಟ ಕಡಿಮೆ ನೆಟ್ವರ್ಕ್‌ನಲ್ಲಿಯೂ ಸುಧಾರಿಸಲಾಗಿದೆ. Fitness ಆಪ್ ಈಗ ನಿಮ್ಮ ಕೈಯಾರೆ ವರ್ಕೌಟ್‌ಗಳನ್ನು ದಾಖಲಿಸಲು ಅವಕಾಶ ನೀಡುತ್ತದೆ. Apple TV ಆಪ್ ನಲ್ಲಿ ಹೊಸ ಅನಿಮೇಷನ್‌ಗಳು ಸೇರಿವೆ. Music ಆಪ್ ಈಗ ಹೆಚ್ಚು ಸ್ಮೂತ್ ಅನುಭವ ನೀಡಲಿದೆ. ಹೊಸ MiniPlayer Swipe Gesture ಮೂಲಕ ಹಾಡುಗಳನ್ನು ಮುಂದಕ್ಕೆ ಅಥವಾ ಹಿಂದಕ್ಕೆ ಬದಲಾಯಿಸಲು ಸಾಧ್ಯವಿದೆ.
AutoMix ವೈಶಿಷ್ಟ್ಯವು ಈಗ AirPlay ಮೂಲಕವೂ ಕಾರ್ಯನಿರ್ವಹಿಸುತ್ತದೆ. ಜೊತೆಗೆ, ಹೊಸ "Slide to Stop Alarm" ಆಯ್ಕೆಯು ಅಲಾರಂ ತಪ್ಪಾಗಿ ನಿಲ್ಲಿಸುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಇನ್ನು Live Translation for AirPods ವೈಶಿಷ್ಟ್ಯವು ಹೊಸ ಭಾಷೆಗಳನ್ನು ಬೆಂಬಲಿಸುತ್ತದೆ. ಇದರೊಳಗೆ ಚೈನೀಸ್ (ಸರಳ ಮತ್ತು ಸಂಪ್ರದಾಯಿಕ), ಇಟಾಲಿಯನ್, ಜಪಾನೀಸ್, ಮತ್ತು ಕೊರಿಯನ್ ಸೇರಿವೆ.
ಅಪ್‌ಡೇಟ್ ಮಾಡುವುದು ಹೇಗೆ?
ಈ ಹೊಸ ಅಪ್‌ಡೇಟ್ iPhone 11 ಸರಣಿ, iPhone SE (2ನೇ ತಲೆಮಾರಿನ) ಮಾದರಿಗಳಿಂದ ಪ್ರಾರಂಭಿಸಿ ಇತ್ತೀಚಿನ iPhone 17 ಸರಣಿವರೆಗೂ ಲಭ್ಯವಿದೆ. ಇದರಲ್ಲಿ iPhone 17, 17 Pro, 17 Pro Max, ಮತ್ತು iPhone Air ಸೇರಿದಂತೆ iPhone 16, 15, 14, 13, ಮತ್ತು 12 ಸರಣಿ ಒಳಗೊಂಡಿವೆ. ಇನ್ನು ಅಪ್‌ಡೇಟ್ ಮಾಡುವುದು ಕೂಡ ಸರಳವಾಗಿದ್ದು, ನೀಮ್ಮ ಪೋನಿನಲ್ಲಿ Settings ತೆರೆಯಿರಿ, General > Software Update ಆಯ್ಕೆಮಾಡಿ"iOS 26.1" ಕಾಣಿಸಿದರೆ Download & Install ಒತ್ತಿರಿ. ನಿಮ್ಮ iPhoneಗೆ ಹೊಸ ಜೀವ ತುಂಬಲು ಇದು ಸೂಕ್ತ ಸಮಯ.!


Click it and Unblock the Notifications








