ಐಪ್ಯಾಡ್‌ ಏರ್‌ (2022) ಲಾಂಚ್‌! 10 ಗಂಟೆಗಳ ಬ್ಯಾಟರಿ ಅವಧಿ!

|

ಟೆಕ್‌ ದೈತ್ಯ ಆಪಲ್‌ ಕಂಪೆನಿ ಜಾಗತಿಕ ಮಾರುಕಟ್ಟೆಯಲ್ಲಿ ಹೊಸ ಐಪ್ಯಾಡ್‌ ಏರ್‌ (2022) ಅನ್ನು ಲಾಂಚ್‌ ಮಾಡಿದೆ. ಮಾರ್ಚ್ 8ರ ತಡರಾತ್ರಿ ನಡೆದ ಆಪಲ್ ವರ್ಚುವಲ್ ಈವೆಂಟ್‌ನಲ್ಲಿ ತನ್ನ ಬಹು ನಿರೀಕ್ಷಿತ ಐಫೋನ್‌ SE (2022) , ಐಪ್ಯಾಡ್ ಏರ್ ಅನ್ನು ಪರಿಚಯಿಸಿದೆ. ಇದರಲ್ಲಿ ಐಪ್ಯಾಡ್‌ ಏರ್‌ (2022) ಆಪಲ್‌ನ ಎಂ1 ಚಿಪ್‌ನಿಂದ ಚಾಲಿತವಾಗಿದೆ. ಇನ್ನು ಈ ಐಪ್ಯಾಡ್ ಏರ್ (2022) ಅಪ್‌ಗ್ರೇಡ್ ಮಾಡಲಾದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಇದು ಸೆಂಟರ್ ಸ್ಟೇಜ್ ಅನ್ನು ಬೆಂಬಲಿಸುತ್ತದೆ.

ವರ್ಚುವಲ್‌

ಹೌದು, ಆಪಲ್‌ ಕಂಪೆನಿ ತನ್ನ ವರ್ಚುವಲ್‌ ಈವೆಂಟ್‌ನಲ್ಲಿ ಹೊಸ ಐಪ್ಯಾಡ್ ಏರ್‌ ಅನ್ನು ಬಿಡುಗಡೆ ಮಾಡಿದೆ. ಇನ್ನು ಈ ಐಪ್ಯಾಡ್‌ ಏರ್‌ (2022) 10.9-ಇಂಚಿನ LED-ಬ್ಯಾಕ್‌ಲಿಟ್ ಲಿಕ್ವಿಡ್ ರೆಟಿನಾ ಡಿಸ್‌ಪ್ಲೇಯನ್ನು ಹೊಂದಿದೆ. ಇದು 64GB ಮತ್ತು 256GB ಸ್ಟೋರೇಜ್ ಆಯ್ಕೆಗಳಲ್ಲಿ ಬರುತ್ತದೆ. ಜೊತೆಗೆ 28.6Wh ಲಿಥಿಯಂ-ಪಾಲಿಮರ್ ಬ್ಯಾಟರಿಯನ್ನು ಒಳಗೊಂಡಿದೆ. ಇನ್ನುಳಿದಂತೆ ಈ ಐಪ್ಯಾಡ್‌ ಏರ್‌ ಏನೆಲ್ಲಾ ವಿಶೇಷತೆ ಹೊಂದಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಐಪ್ಯಾಡ್‌ ಏರ್‌ (2022)

ಐಪ್ಯಾಡ್‌ ಏರ್‌ (2022) 2360x1640 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 10.9 ಇಂಚಿನ LED-ಬ್ಯಾಕ್‌ಲಿಟ್ ಲಿಕ್ವಿಡ್ ರೆಟಿನಾ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇಯು 500 ವರೆಗಿನ ಗರಿಷ್ಠ ಬ್ರೈಟ್‌ನೆಸ್‌ ಅನ್ನು ಹೊಂದಿದೆ. ಜೊತೆಗೆ ನಿಟ್ಸ್ ಮತ್ತು P3 ವೈಡ್-ಕಲರ್ ಗ್ಯಾಮಟ್ ಜೊತೆಗೆ ಟ್ರೂ ಟೋನ್ ವೈಟ್ ಬ್ಯಾಲೆನ್ಸ್ ಬೆಂಬಲವನ್ನು ಹೊಂದಿದೆ. ಇನ್ನು ಈ ಹೊಸ ಐಪ್ಯಾಡ್ ಏರ್ ಟಚ್ ಐಡಿ ಬೆಂಬಲವನ್ನು ಹೊಂದಿದ್ದು, ಪವರ್/ಸ್ಟ್ಯಾಂಡ್‌ಬೈ ಬಟನ್‌ಗೆ ಸಂಯೋಜಿಸಲ್ಪಟ್ಟಿದೆ.

ಐಪ್ಯಾಡ್ ಏರ್ (2022)

ಆಪಲ್ ಐಪ್ಯಾಡ್ ಏರ್ (2022) ಆಕ್ಟಾ-ಕೋರ್ M1 ಚಿಪ್ ಹೊಂದಿದ್ದು, ಇದು ಐಪ್ಯಾಡ್‌OS 15ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 8GB RAM ಮತ್ತು 64GB ಇಂಟರ್‌ ಸ್ಟೋರೇಜ್‌ ಅನ್ನು ಒಳಗೊಂಡಿದೆ. ಇದಲ್ಲದೆ ಈ ಹೊಸ ಐಪ್ಯಾಡ್‌ ಏರ್‌ (2022) ಹೊಂದಿರುವ ಚಿಪ್‌ ಹಿಂದಿನ ಐಪ್ಯಾಡ್‌ ಏರ್‌ಗಿಂತ 60% ವೇಗವಾದ CPU ಕಾರ್ಯಕ್ಷಮತೆ ಮತ್ತು ಎರಡು ಪಟ್ಟು ವೇಗದ ಗ್ರಾಫಿಕ್ಸ್ ಕಾರ್ಯಕ್ಷಮತೆಯನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ. ಸ್ಥಳೀಯ ಕೃತಕ ಬುದ್ಧಿಮತ್ತೆ (AI) ಪ್ರಕ್ರಿಯೆಗಾಗಿ ಆಂತರಿಕ ಚಿಪ್ ಆಪಲ್ ನ್ಯೂರಲ್ ಎಂಜಿನ್ ಅನ್ನು ಸಹ ಹೊಂದಿದೆ.

ಐಪ್ಯಾಡ್ ಏರ್‌ (2022)

ಇನ್ನು ಆಪಲ್ ಐಪ್ಯಾಡ್ ಏರ್‌ (2022) 12 ಮೆಗಾಪಿಕ್ಸೆಲ್ ವೈಡ್ ಲೆನ್ಸ್‌ ಹೊಂದಿರುವ ಸಿಂಗಲ್‌ ರಿಯರ್‌ ಕ್ಯಾಮೆರಾ ಹೊಂದಿದೆ. ಇದು ಫೋಕಸ್ ಪಿಕ್ಸೆಲ್‌ಗಳೊಂದಿಗೆ ಆಟೋಫೋಕಸ್, ಪನೋರಮಾ (63-ಮೆಗಾಪಿಕ್ಸೆಲ್ ವರೆಗೆ), ಸ್ಮಾರ್ಟ್ ಎಚ್‌ಡಿಆರ್ 3, ಫೋಟೋ ಜಿಯೋಟ್ಯಾಗಿಂಗ್, ಆಟೋ ಇಮೇಜ್ ಸ್ಟೆಬಿಲೈಸೇಶನ್ ಮತ್ತು ಬರ್ಸ್ಟ್ ಮೋಡ್ ಸೇರಿದಂತೆ ಅನೇಕ ಫೀಚರ್ಸ್‌ಗಳನ್ನು ಬೆಂಬಲಿಸಲಿದೆ. ಇದಲ್ಲದೆ, ಇದು 24, 25, 30, ಮತ್ತು 60fps ಫ್ರೇಮ್ ದರದಲ್ಲಿ 4K ವೀಡಿಯೊ ರೆಕಾರ್ಡಿಂಗ್ ಬೆಂಬಲವನ್ನು ಹೊಂದಿದೆ. ಜೊತೆಗೆ ಈ ಕ್ಯಾಮರಾ 120fps ಅಥವಾ 240fps ನಲ್ಲಿ 1080p ಗಾಗಿ ಸ್ಲೋ ಮೋಷನ್‌ ವೀಡಿಯೊ ಬೆಂಬಲವನ್ನು ಹೊಂದಿದೆ. ಹಾಗೆಯೇ 12 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಸೆಲ್ಫಿ ಕ್ಯಾಮೆರಾವನ್ನು ಕೂಡ ಹೊಂದಿದೆ. ಇದು ಮೆಷಿನ್ ಲರ್ನಿಂಗ್-ಬೆಂಬಲಿತ ಸೆಂಟರ್ ಸ್ಟೇಜ್ ಅನ್ನು ಬೆಂಬಲಿಸುತ್ತದೆ.

ಐಪ್ಯಾಡ್‌ ಏರ್‌(2022)

ಐಪ್ಯಾಡ್‌ ಏರ್‌(2022) 28.6Wh ಲಿಥಿಯಂ ಪಾಲಿಮರ್ ಬ್ಯಾಟರಿಯನ್ನು ಹೊಂದಿದೆ. ಇದು 10 ಗಂಟೆಗಳವರೆಗೆ ವೆಬ್ ಬ್ರೌಸಿಂಗ್ ಅಥವಾ ವೈಫೈನಲ್ಲಿ ವೀಡಿಯೊ ಪ್ಲೇಬ್ಯಾಕ್ ಅನ್ನು ನೀಡಲಿದೆ. ಇದಲ್ಲದೆ ವೈ-ಫೈ + ಸೆಲ್ಯುಲಾರ್ ರೂಪಾಂತರವು ಸಿಂಗಲ್‌ ಚಾರ್ಜ್‌ನಲ್ಲಿ ಒಂಬತ್ತು ಗಂಟೆಗಳವರೆಗೆ ವೆಬ್ ಬ್ರೌಸಿಂಗ್ ಅನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ. ಈ ಹೊಸ ಐಪ್ಯಾಡ್ ಏರ್‌ನಲ್ಲಿನ ಅಂತರ್ನಿರ್ಮಿತ ಬ್ಯಾಟರಿಯು ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇದು 20W USB-C ಪವರ್ ಅಡಾಪ್ಟರ್ ಅನ್ನು ಒಳಗೊಂಡಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G (ಐಚ್ಛಿಕ), Wi-Fi 6, ಬ್ಲೂಟೂತ್ v5, GPS/ A-GPS (ಸೆಲ್ಯುಲಾರ್ ಆವೃತ್ತಿಯಲ್ಲಿ ಮಾತ್ರ), ಮತ್ತು USB ಟೈಪ್-C ಕನೆಕ್ಟರ್ ಸೇರಿವೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಭಾರತದಲ್ಲಿ ಐಪ್ಯಾಡ್‌ ಏರ್‌ (2022) ವೈಫೈ-ಒನ್ಲಿ 64GB ರೂಪಾಂತರದ ಆಯ್ಕೆಗೆ 54,900ರೂ.ಹೊಂದಿದೆ. ಆದರೆ ವೈಫೈ + 64GB ಸ್ಟೋರೇಜ್‌ ಸೆಲ್ಯುಲಾರ್ ರೂಪಾಂತರವು 68,900ರೂ.ಬೆಲೆಯನ್ನು ಹೊಂದಿದೆ. ಇನ್ನು ಈ ಹೊಸ ಐಪ್ಯಾಡ್ ಏರ್ 256GB ವೈಫೈ-ಓನ್ಲಿ ಮತ್ತು ವೈಫೈ + ಸೆಲ್ಯುಲಾರ್ ಮಾದರಿಗಳ ಬೆಲೆ ಬಹಿರಂಗವಾಗಿಲ್ಲ. ಇನ್ನು ಈ ಐಪ್ಯಾಡ್‌ ಏರ್‌ ಬ್ಲೂ, ಸ್ಪೇಸ್ ಗ್ರೇ, ಸ್ಟಾರ್‌ಲೈಟ್, ಪಿಂಕ್ ಮತ್ತು ಪರ್ಪಲ್ ಬಣ್ಣಗಳಲ್ಲಿ ಬರುತ್ತದೆ. ಇದು ಮಾರ್ಚ್ 18 ರಿಂದ US ಸೇರಿದಂತೆ 29 ದೇಶಗಳಲ್ಲಿ ಮಾರಾಟವಾಗಲಿದೆ. ಈ ಹೊಸ ಮಾದರಿಯು ಭಾರತದಲ್ಲಿ ಮಾರ್ಚ್ 11 ರಿಂದ ಫ್ರೀ ಆರ್ಡರ್‌ಗೆ ಲಭ್ಯವಾಗಲಿದೆ.

Best Mobiles in India

English summary
iPad Air (2022) was launched at the virtual Apple event on Tuesday (March 8) alongside the much-anticipated iPhone SE (2022).

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X