Home
ಸುದ್ದಿಜಾಲ

ಆಪಲ್‌ ಸ್ಟೋರ್‌ನಲ್ಲಿಯೇ ಐಪಾಡ್‌ ಸ್ಫೋಟ..!

By Avinash

ಇತ್ತೀಚೆಗೆ ಮೊಬೈಲ್, ಸ್ಮಾರ್ಟ್‌ಫೋನ್‌ಗಳು ಸ್ಫೋಟಗೊಳ್ಳುವುದು ಹೆಚ್ಚಾಗುತ್ತಿದೆ. ಅದರಂತೆ ಭಾನುವಾರ ಆಮ್ಸಟ್ರಾಡಾಂನ ಆಪಲ್‌ ಸ್ಟೋರ್‌ನಲ್ಲಿ ಆಪಲ್‌ ಐಪಾಡ್‌ ಸ್ಫೋಟವಾಗಿದೆ. ಬ್ಯಾಟರಿ ಹೆಚ್ಚು ಬಿಸಿಯಾಗಿರುವುದು ಅಥವಾ ಬ್ಯಾಟರಿ ಲೀಕ್‌ ಆಗಿರುವುದು ಈ ಸ್ಫೋಟಕ್ಕೆ ಕಾರಣವಾಗಿದೆ ಎಂದು ಡಚ್‌ ಔಟ್‌ಲೇಟ್‌ ಎಟಿ5 ವರದಿ ಮಾಡಿದೆ.

ಆಪಲ್‌ ಸ್ಟೋರ್‌ನಲ್ಲಿಯೇ ಐಪಾಡ್‌ ಸ್ಫೋಟ..!

ಯಾವುದೇ ಪ್ರಾಣಹಾನಿಯಾಗಿಲ್ಲಎಂದು ವರದಿಯಾಗಿದ್ದರೂ ಸಹ, ಮೂವರು ಗ್ರಾಹಕರು ಸ್ಟೋರ್‌ನಲ್ಲಿ ಉಸಿರಾಟದ ಸಮಸ್ಯೆಯನ್ನು ಎದುರಿಸಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಟ್ಯಾಬ್ಲೆಟ್‌ ಸ್ಫೋಟಿಸಿದಾಗ ಬೆಂಕಿಯ ಜ್ವಾಲೆಗಳು ಬಂದಿರುವುದು ಅಸ್ಪಷ್ಟವಾಗಿದ್ದು, ಆಪಲ್‌ ಸಿಬ್ಬಂದಿ ಆದಷ್ಟು ಶೀಘ್ರ ಡಿವೈಸ್‌ನ್ನು ಮರಳು ತುಂಬಿದ ಕಂಟೇನರ್‌ಗೆ ಹಾಕಿದ್ದರಿಂದ ಹೆಚ್ಚಿನ ಅಪಾಯ ತಪ್ಪಿದೆ. ಆದರೆ, ಐಪಾಡ್‌ನಿಂದ ಅಪಾಯಕಾರಿ ಅನಿಲ ಬಿಡುಗಡೆಯಾಗಿದ್ದರಿಂದ ಮೂವರು ಗ್ರಾಹಕರು ಉಸಿರಾಟದ ಸಮಸ್ಯೆಯಿಂದ ಬಳಲಿದರು.

ನಗರ ಅಗ್ನಿಶಾಮಕದಳ ಆಗಮಿಸಿ ಪರಿಸ್ಥಿತಿಯನ್ನು ಅವಲೋಕಿಸಿತು. ನಂತರ, ಲೈಡ್‌ಸೆಪ್ಲಿನ್‌ ಸ್ಟೋರ್‌ನ್ನು ಸ್ಥಳಾಂತರಗೊಳಿಸಲಾಯಿತು. ಮಧ್ಯಾಹ್ನ 3 ಗಂಟೆಯ ನಂತರ ವ್ಯವಹಾರವನ್ನು ಮತ್ತೆ ಪ್ರಾರಂಭಿಸಿ, ಗ್ರಾಹಕರನ್ನು ಸ್ಟೋರ್‌ಗೆ ಬರಲು ಅನುವು ಮಾಡಿಕೊಡಲಾಯಿತು.

ಇದೇ ಮೊದಲಲ್ಲ

ಇದೇ ಮೊದಲಲ್ಲ

ಆದರೂ, ಆಪಲ್‌ನ ಉತ್ಪನ್ನಗಳು ಇದುವರೆಗೂ ಅಧಿಕೃತವಾಗಿ ಸ್ಫೋಟಗೊಂಡ ಬಗ್ಗೆ ವರದಿಯಾಗಿದ್ದಿಲ್ಲ. ಆದರೆ, ಈಗ ವರದಿಯಾಗಿದೆ. ಇದಕ್ಕೂ ಮುಂಚೆ ಜನೇವರಿಯಲ್ಲಿ ಐಫೋನ್ ಬ್ಯಾಟರಿ ಹೆಚ್ಚು ಬಿಸಿಯಾಗಿ ಝೂರಿಚ್‌ನ ಶೋರೂಂ ಒಂದರಲ್ಲಿ ಸ್ಫೋಟಗೊಂಡಿತ್ತು. ಆ ಸಮಯದಲ್ಲಿ ಐಫೋನ್‌ ರಿಪೇರಿ ಸಿಬ್ಬಂದಿಗೆ ಚಿಕ್ಕ-ಪುಟ್ಟ ಗಾಯಗಳಾಗಿದ್ದವು. 2016ರಲ್ಲಿ ಆಸ್ಟ್ರೇಲಿಯಾದಲ್ಲಿ ಐಫೋನ್‌ 7 ಸ್ಫೋಟಗೊಂಡು ಅದರ ಜ್ವಾಲೆಯಿಂದ ಕಾರು ಭಸ್ಮವಾಗಿತ್ತು.

ರಿಚಾರ್ಜೆಬಲ್ ಲೀಥೀಯಂ-ಐಆನ್‌ ಬ್ಯಾಟರಿ

ರಿಚಾರ್ಜೆಬಲ್ ಲೀಥೀಯಂ-ಐಆನ್‌ ಬ್ಯಾಟರಿ

ಆಪಲ್‌ ತನ್ನ ಡಿವೈಸ್‌ಗಳಿಗೆ ಸದ್ಯ ಬಳಸುತ್ತಿರುವುದು ರಿಚಾರ್ಜೆಬಲ್ ಲೀಥೀಯಂ-ಐಆನ್‌ ಬ್ಯಾಟರಿಗಳನ್ನು. ಇವುಗಳು ಹೆಚ್ಚು ಬಿಸಿಯಾದರೆ ಸ್ಫೋಟಗೊಳ್ಳುವ ಸಾಧ್ಯತೆಯೇ ಹೆಚ್ಚು ಎಂದು ತಜ್ಞರು ಹೇಳುತ್ತಾರೆ.

ಸ್ಯಾಮ್‌ಸಂಗ್‌ಗೂ ತಪ್ಪಿಲ್ಲ ಸ್ಫೋಟದ ಬಿಸಿ

ಸ್ಯಾಮ್‌ಸಂಗ್‌ಗೂ ತಪ್ಪಿಲ್ಲ ಸ್ಫೋಟದ ಬಿಸಿ

ಸ್ಯಾಮ್‌ಸಂಗ್‌ ಗ್ಯಾಲಾಕ್ಷಿ ನೋಟ್‌ 7 ಸ್ಮಾರ್ಟ್‌ಫೋನ್ ಕೂಡ ಸ್ಫೋಟಗಳಿಂದ ಗ್ರಾಹಕರ ನಂಬಿಕೆಯನ್ನು ಕಳೆದುಕೊಂಡಿತು. 12ಕ್ಕೂ ಹೆಚ್ಚು ಗ್ಯಾಲಾಕ್ಷಿ ನೋಟ್‌ 7 ಸ್ಮಾರ್ಟ್‌ಫೋನ್‌ಗಳು ಸ್ಫೋಟಗೊಂಡಿದ್ದರಿಂದ ಸ್ಯಾಮ್‌ಸಂಗ್ ಗ್ಯಾಲಾಕ್ಷಿ ನೋಟ್‌ 7 ಸ್ಮಾರ್ಟ್‌ಫೋನ್‌ ಉತ್ಪನ್ನವನ್ನು ನಿಲ್ಲಿಸಿತು. ಈ ಸ್ಫೋಟಕ್ಕೆ ಪ್ರಮುಖ ಕಾರಣ ಡಿವೈಸ್ ಅತಿ ಹೆಚ್ಚು ಬಿಸಿಯಾಗುತ್ತಿರುವುದಾಗಿತ್ತು. ನಂತರ ಸ್ಯಾಮ್‌ಸಂಗ್ ಗ್ರಾಹಕರ ಕ್ಷಮೆ ಕೇಳಿ ವೈರ್‌ಲೆಸ್ ಬಿಲ್‌ಗಳನ್ನು ರಿಕ್ಲೇಮ್ ಮಾಡಿತು.

ಸ್ಫೋಟದಲ್ಲಿ ಹೆಚ್ಚು ಸದ್ದು ಮಾಡಿರುವುದು ಶಿಯೋಮಿ

ಸ್ಫೋಟದಲ್ಲಿ ಹೆಚ್ಚು ಸದ್ದು ಮಾಡಿರುವುದು ಶಿಯೋಮಿ

ಸ್ಮಾರ್ಟ್‌ಫೋನ್‌ಗಳ ಸ್ಫೋಟಕ್ಕೆ ಸಂಬಂಧಿಸಿದಂತೆ ಶಿಯೋಮಿನ ಅತಿ ಹೆಚ್ಚು ಸದ್ದು ಮಾಡಿದೆ. ಶಿಯೋಮಿಯ ಅನೇಕ ಸ್ಮಾರ್ಟ್‌ಫೋನ್‌ಗಳು ಅತಿ ಹೆಚ್ಚು ಬಿಸಿಯಾಗುವ ಕಾರಣದಿಂದ ಸ್ಫೋಟಗೊಳ್ಳುತ್ತಿದ್ದು, ಅನೇಕ ಘಟನೆಗಳು ವರದಿಯಾಗಿವೆ.

Best Mobiles in India

English summary
iPad Battery Explodes in Amsterdam Apple Store. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+