ಅ.23 ರಂದು ಐಪ್ಯಾಡ್ ಮಿನಿ ಬಿಡುಗಡೆ : ಆಪಲ್

ಅಕ್ಟೋಬರ್ 23 ಕ್ಕೆ ನಡೆಯಲಿರುವ ಸಮಾರಂಭ ದಲ್ಲಿ ಆಪಲ್ ಸಂಸ್ಥೆಯು ತನ್ನಯ ನೂತನ ಐಪ್ಯಾಡ್ ಮಾದರಿಯಲ್ಲಿನ 7.85 ಇಂಚಿನ ಐಪ್ಯಾಡ್ ಮಿನಿ ಬಿಡುಗಡೆ ಮಾಡಲಿದೆ. ಆದರೆ ನೂತನ ಟ್ಯಾಬ್ಲೆಟ್‌ನ ವಿಶೇಷತೆ ಕುರಿತಾಗಿ ಆಪಲ್ ಸಂಸ್ಥೆಯು ಮಾಧ್ಯಮದ ಎದುರಿಗೆ ಈ ವರೆಗೂ ಎಲ್ಲಿಯೂ ತುಟಿ ಬಿಚ್ಚಿಲ್ಲ. ಆದರೆ ವದಂತಿಗಳ ಪ್ರಕಾರ ಸಂಸ್ಥೆಯು ಈ ಹಿಂದೆ ಬಿಡುಗಡೆ ಮಾಡಿದ್ದ ಐಪ್ಯಾಡ್3 ನಲ್ಲಿದ್ದ ರೆಟಿನಾ ದರ್ಶಕ್ ಐಪ್ಯಾಡ್ ಮಿಯಲ್ಲಿಲ್ಲಾ ಎಂದು ತಿಳಿದುಬಂದಿದೆ. ಅಮದಹಾಗೆ ಐಪ್ಯಾಡ್ ಮಿನಿ ಕುರಿತಾಗಿ ಹೆಚ್ಚಿನ ಮಾಹಿತಿಗಳು ಲಭ್ಯವಿಲ್ಲಾ.
ಅಂದಹಾಗೆ ಆಪಲ್ ಸಂಸ್ಥೆಯು ದಿಡೀರನೆ ಐಪ್ಯಾಡ್ ಮಿನಿ ಬಿಡುಗಡೆ ಮಾಡುವುದಾಗಿ ಎಲ್ಲರಿಗೂ ಶಾಕ್ ನೀಡಿದೆ ಅಂತಾನೆ ಹೇಳ ಬಹುದು. ಕಳೆದ ಸೆಪ್ಟೆಂಬರ್‌ನಲ್ಲಿ ಆಪಲ್ ತನ್ನಯ ಬಹುನಿರೀಕ್ಷತ ಐಫೋನ್5 ಬಿಡುಗಡೆ ಮಾಡಿತ್ತು. ಇದೀಗ ಅಕ್ಟೋಬರ್ 23 ರಂದು ಕ್ಯಾಲಿಫೋರ್ನಿಯಾದಲ್ಲಿಸ ಸ್ಯಾನ್ ಜೋನಲ್ಲಿ ಬೆಳಗ್ಗೆ 10 ಗಂಟೆ ಸುಮಾರಿಗೆ ಐಪ್ಯಾಡ್ ಮಿನಿ ಬಿಡುಗಡೆ ಮಾಡಲು ಮುಂದಾಗಿದೆ. ಇದರಿಂದ ವಿಶ್ವದಾದ್ಯಂತ ಆಪಲ್ ಅಭಿಮಾನಿಗಳು ಹಾಗೂ ಮಾಧ್ಯಮದವರ ಚಿತ್ತ ಬಿಡುಗಡೆಯ ದಿನಾಂಕದತ್ತ ತಿರುಗಿದೆ.


Click it and Unblock the Notifications