Home
ಸುದ್ದಿಜಾಲ

ಐಫೋನ್‌ ಖರೀದಿಸುವವರಿಗೆ ಗುಡ್‌ ನ್ಯೂಸ್‌ ನೀಡಿದ ಆಪಲ್‌ ಕಂಪೆನಿ!

ಟೆಕ್‌ ದೈತ್ಯ ಆಪಲ್‌ ಕಂಪೆನಿ ಐಫೋನ್‌ ಖರೀದಿಸುವವರಿಗೆ ಗುಡ್‌ನ್ಯೂಸ್‌ ನೀಡಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿರುವ ಐಫೋನ್‌ಗಳ ಬೆಲೆಯನ್ನು ಕಡಿಮೆ ಮಾಡಿದೆ. ಈ ಮೂಲಕ ಐಫೋನ್‌ ಖರೀದಿಸಬೇಕೆಂದು ಕೊಂಡವರಿಗೆ ಒಳ್ಳೆಯ ಅವಕಾಶ ನೀಡಿದೆ. ಸದ್ಯ ಈ ಬೆಲೆ ಇಳಿಕೆಯ ಆಫರ್‌ ಐಫೋನ್ 12, ಐಫೋನ್ 12 ಮಿನಿ ಮತ್ತು ಐಫೋನ್ 11 ಗಳ ಮೇಲೆ ಮಾತ್ರ ಅನ್ವಯವಾಗಲಿದೆ. ಈಗಾಗಲೇ ಈ ಫೋನ್‌ಗಳ ಬೆಲೆಯನ್ನು ಕಡಿಮೆ ಮಾಡಲಾಗಿದ್ದು, ಇ-ಕಾಮರ್ಸ್ ಸೈಟ್‌ಗಳಾದ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಲೈವ್ ಆಗಿದೆ.

ಆಪಲ್‌

ಹೌದು, ಆಪಲ್‌ ಕಂಪೆನಿ ಐಫೋನ್ 12, ಐಫೋನ್ 12 ಮಿನಿ ಮತ್ತು ಐಫೋನ್ 11 ಗಳ ಬೆಲೆಯನ್ನು ಕಡಿಮೆ ಮಾಡಿದೆ. ಈ ಮೂಲಕ ಐಫೋನ್‌ಗಳನ್ನು ಕಡಿಮೆ ಬೆಲೆಗೆ ಖರೀದಿಸಬೇಕೆಂದು ಕೊಂಡವರಿಗೆ ಶುಭಸುದ್ದಿ ನೀಡಿದೆ. ಆದರೆ ನೀವು ಆಯ್ಕೆ ಮಾಡುವ ಕಲರ್‌ ಹಾಗೂ ರೂಪಾಂತರದ ಆಯ್ಕೆಯ ಮೇಲೆ ಬೆಲೆ ಬದಲಾಗುವ ಸಾದ್ಯತೆ ಕೂಡ ಇದೆ. ಸದ್ಯ ಈ ಬೆಲೆ ಇಳಿಕೆಯ ಆಫರ್‌ ಅಮೆಜಾನ್‌ ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಿದೆ. ಹಾಗಾದ್ರೆ ಬೆಲೆ ಇಳಿಕೆಯ ನಂತರ ಐಫೋನ್ 12, ಐಫೋನ್ 12 ಮಿನಿ ಮತ್ತು ಐಫೋನ್ 11 ಗಳ ಬೆಲೆ ಹೇಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಬೆಲೆ ಇಳಿಕೆಯ ನಂತರ ಹೊಸ ಬೆಲೆ ಎಷ್ಟು?

ಬೆಲೆ ಇಳಿಕೆಯ ನಂತರ ಹೊಸ ಬೆಲೆ ಎಷ್ಟು?

ಆಪಲ್‌ ಕಂಪೆನಿ ಬೆಲೆ ಕಡಿತವನ್ನು ಘೋಷಿಸಿದ ನಂತರ ಐಫೋನ್‌ 12, 64 Gb ರೂಪಾಂತರಾದ ಬ್ಲ್ಯಾಕ್‌ ಕಲರ್‌ ಆಯ್ಕೆ ಫ್ಲಿಪ್‌ಕಾರ್ಟ್‌ನಲ್ಲಿ 59,999ರೂ.ಗಳಿಗೆ ದೊರೆಯಲಿದೆ. ಇದರ ನೀಲಿ ಬಣ್ಣದ ಆಯ್ಕೆಗೆ ಫ್ಲಿಪ್‌ಕಾರ್ಟ್‌ನಲ್ಲಿ 60,499ರೂ. ಬೆಲೆಯನ್ನು ನಿಗದಿಪಡಿಸಲಾಗಿದೆ. ಜೊತೆಗೆ ಫ್ಲಿಪ್‌ಕಾರ್ಟ್‌ನಲ್ಲಿ 128GB ರೂಪಾಂತರದ ಆಯ್ಕೆ 64,999ರೂ.ಗಳಿಗೆ ಲಭ್ಯವಿದೆ. ಇನ್ನು ಅಮೆಜಾನ್‌ನಲ್ಲಿ ಐಫೋನ್‌ 12, 64 GB ರೂಪಾಂತರದ ಆಯ್ಕೆಗೆ 63,900 ಬೆಲೆ ನಿಗದಿಪಡಿಸಲಾಗಿದೆ. ಹಾಗೆಯೇ ಇದರ 128GB ರೂಪಾಂತರವು 70,900ರೂ.ಗಳಿಗೆ ದೊರೆಯಲಿದೆ.

ಇನ್ನು ಐಫೋನ್‌ 12 ಮಿನಿ 64 GB ರೂಪಾಂತರವು ಕಪ್ಪು, ಬಿಳಿ ಮತ್ತು ನೀಲಿ ಬಣ್ಣದ ಆಯ್ಕೆಗೆ ಅಮೆಜಾನ್‌ನಲ್ಲಿ 49,999ರೂ.ಗಳಿಗೆ ಲಭ್ಯವಾಗಲಿದೆ. ಇದರ ನೇರಳೆ ಬಣ್ಣದ ಆಯ್ಕೆಗೆ 53,900ರೂ ಮತ್ತು ಹಸಿರು ಬಣ್ಣದ ಆಯ್ಕೆಗೆ 59,900ರೂ. ಬೆಲೆ ಹೊಂದಿದೆ. ಇದಲ್ಲದೆ ಇದರ 128GB ರೂಪಾಂತರದ ಕೆಂಪು ಬಣ್ಣದ ಐಫೋನ್‌ 54,999ರೂ.ಬೆಲೆ ಹೊಂದಿದೆ. ಆದರೆ ಹಸಿರು ಬಣ್ಣದ ಆಯ್ಕೆಯು 64,900ರೂ. ಬೆಲೆಯನ್ನು ಪಡೆದುಕೊಂಡಿದೆ.

ಇದಲ್ಲದೆ ಐಫೋನ್‌ 11 64GB ಮಾದರಿಯು 49,900ರೂ. ರಿಯಾಯಿತಿ ದರದಲ್ಲಿ ಖರೀದಿಸಬಹುದು. ಇದರ 128GB ರೂಪಾಂತರವನ್ನು ಫ್ಲಿಪ್‌ಕಾರ್ಟ್‌ನಲ್ಲಿ 54,999ರೂ. ಬೆಲೆಯಲ್ಲಿ ಖರೀದಿಸಬಹುದಾಗಿದೆ.

ಐಫೋನ್‌ 12 ಫೀಚರ್ಸ್‌

ಐಫೋನ್‌ 12 ಫೀಚರ್ಸ್‌

ಇನ್ನು ಆಪಲ್‌ ಐಫೋನ್ 12 OLED ಡಿಸ್‌ಪ್ಲೇ ಹೊಂದಿದೆ. ಇದು A14 ಬಯೋನಿಕ್ ಸೋಕ್ ಕ್ವಾಡ್‌ ಕೋರ್ ಪ್ರೊಸೆಸರ್‌ ಅನ್ನು ಹೊಂದಿದ್ದು, 5G ನೆಟ್‌ವರ್ಕ್‌ ಅನ್ನು ಬೆಂಬಲಿಸಲಿದೆ. ಇನ್ನು ಐಫೋನ್ 12 ಫೋನ್ ಎರಡು ಕ್ಯಾಮೆರಾ ಹೊಂದಿದ್ದು, ಅವುಗಳು ಕ್ರಮವಾಗಿ 12 ಮೆಗಾಪಿಕ್ಸೆಲ್ ವೈಡ್-ಆಂಗಲ್ ಸಂವೇದಕಗಳನ್ನು ಹೊಂದಿವೆ. ಇದರಲ್ಲಿ ನೈಟ್‌ ಮೋಡ್‌ ಆಯ್ಕೆ ಕೂಡ ನೀಡಲಾಗಿದ್ದು ಕಡಿಮೆ ಬೆಳಕಿನಲ್ಲಿಯೂ ಅತ್ಯುತ್ತಮ ಫೋಟೊ ಸೆರೆಹಿಡಿಯಲು ನೆರವಾಗಲಿದೆ.

ಐಫೋನ್‌ 12 ಮಿನಿ ಫೀಚರ್ಸ್‌

ಐಫೋನ್‌ 12 ಮಿನಿ ಫೀಚರ್ಸ್‌

ಐಫೋನ್ 12 ಮಿನಿ 5.4-ಇಂಚಿನ ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯು ಸೂಪರ್ ರೆಟಿನಾ XRD ಡಿಸ್‌ಪ್ಲೇ ಮಾದರಿಯನ್ನು ಹೊಂದಿದೆ. ಈ ಐಫೋನ್‌ ಕೂಡ A14 ಬಯೋನಿಕ್ ಎಸ್‌ಒಸಿ ಪ್ರೊಸೆಸರ್‌ ಹೊಂದಿದ್ದು, 5G ಸಪೋರ್ಟ್ ಪಡೆದಿದೆ. ಇನ್ನು ಐಫೋನ್ 12 ಮಿನಿ ಕೂಡ 12 ಮೆಗಾಪಿಕ್ಸೆಲ್ ವೈಡ್-ಆಂಗಲ್ ಸೆನ್ಸಾರ್‌ ಹೊಂದಿರುವ ಡ್ಯುಯೆಲ್‌ ರಿಯರ್‌ ಕ್ಯಾಮೆರಾ ಹೊಂದಿದೆ. ಇದಲ್ಲದೆ ಈ ಐಫೋನ್‌ ಬಹುತೇಕ ಐಫೋನ್ 12 ಫೀಚರ್ಸ್‌ಗಳನ್ನು ಹೊಂದಿದ್ದು, ಗಾತ್ರದಲ್ಲಿ ಮಾತ್ರ ವ್ಯತ್ಯಾಸವಿದೆ.

ಐಫೋನ್‌ 11 ಫೀಚರ್ಸ್‌

ಐಫೋನ್‌ 11 ಫೀಚರ್ಸ್‌

ಇನ್ನು ಐಫೋನ್ 11 ಫೋನ್ 1792 × 828-ಪಿಕ್ಸೆಲ್ ರೆಸಲ್ಯೂಶನ್‌ ಸಾಮರ್ಥ್ಯದ 6.1 ಇಂಚಿನ ಡಿಸ್‌ಪ್ಲೇ ಹೊಂದಿದೆ. ಇದು ವೇಗದ ಚಿಪ್‌ಸೆಟ್‌ ಬೆಂಬಲದೊಂದಿಗೆ A13 ಬಯೋನಿಕ್ ಪ್ರೊಸೆಸರ್‌ ಪಡೆದುಕೊಂಡಿದ್ದು, ಈ ಬಯೋನಿಕ್ ಚಿಪ್ 8.5 ಬಿಲಿಯನ್ ಟ್ರಾನ್ಸಿಸ್ಟರ್‌ಗಳನ್ನು ಹೊಂದಿದೆ. ಈ ಐಫೋನ್‌ ಡ್ಯುಯಲ್ ಕ್ಯಾಮೆರಾ ಸೆಟಪ್‌ ಹೊಂದಿದ್ದು, ಎರಡು ಕ್ಯಾಮೆರಾಗಳು 12 ಮೆಗಾ ಪಿಕ್ಸಲ್ ಸೆನ್ಸಾರ್‌ ಬೆಂಬಲವನ್ನು ಪಡೆದಿವೆ. ಇದರೊಂದಿಗೆ ನೈಟ್‌ಮೋಡ್‌, 4K ವಿಡಿಯೊ, ಸ್ಲೋ ಮೋಶನ್ ಫೀಚರ್ಸ್‌ಗಳನ್ನು ಪಡೆದಿದೆ. ಇನ್ನು ಇದರ ಬ್ಯಾಟರಿ ಬ್ಯಾಕ್‌ಅಪ್‌ ಆಪಲ್‌ ಐಫೋನ್ ಎಕ್ಸ್‌ಆರ್‌ ಫೋನ್‌ ಗಿಂತ ಅಧಿಕವಾಗಿದೆ.

Best Mobiles in India

English summary
Apple announced massive price drop on iPhone 12 mini, iPhone 12 and iPhone 11.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+