ಐಫೋನ್ 12 ಮಿನಿ ಮತ್ತು ಐಫೋನ್ 12 ಪ್ರೊ ಮ್ಯಾಕ್ಸ್‌ ಈಗ ಪ್ರೀ-ಆರ್ಡರ್‌ಗೆ ಲಭ್ಯ!

|

ಆಪಲ್‌ ಸಂಸ್ಥೆಯು ಇತ್ತೀಚಿನ ಐಫೋನ್ 12 ಸರಣಿಯು ಹಲವು ವಿಶೇಷತೆಗಳಿಂದ ಗ್ರಾಹಕರನ್ನು ಆಕರ್ಷಿಸಿದೆ. ಈ ಸರಣಿಯಲ್ಲಿನ ಐಫೋನ್ 12 ಮತ್ತು ಐಫೋನ್ 12 ಪ್ರೊ ಫೋನ್‌ಗಳು ಭಾರತದಲ್ಲಿ ಈಗಾಗಲೇ ಸೇಲ್ ನಡೆಸಿವೆ. ಇದೀಗ ಐಫೋನ್ 12 ಮಿನಿ ಮತ್ತು ಐಫೋನ್ 12 ಪ್ರೊ ಮ್ಯಾಕ್ಸ್‌ ಫೋನ್‌ಗಳು ಸಹ ಭಾರತದಲ್ಲಿ ಪ್ರೀ-ಆರ್ಡರ್‌ ಮಾಡಲು ಲಭ್ಯವಾಗಿವೆ.

ಐಫೋನ್ 12 ಮಿನಿ

ಹೌದು, ಆಪಲ್‌ ಐಫೋನ್ 12 ಮಿನಿ ಮತ್ತು ಐಫೋನ್ 12 ಪ್ರೊ ಮ್ಯಾಕ್ಸ್‌ ಈಗ ಭಾರತದಲ್ಲಿ ಪ್ರೀ-ಆರ್ಡರ್‌ ಲಭ್ಯವಿದೆ. ಗ್ರಾಹಕರು ಆಪಲ್ ಇಂಡಿಯಾ ಆನ್‌ಲೈನ್ ಸ್ಟೋರ್ ಮೂಲಕ ಪ್ರೀ-ಆರ್ಡರ್ ಮಾಡಬಹುದಾಗಿದೆ. ಹಾಗಾದರೇ ಐಫೋನ್ 12 ಮಿನಿ ಮತ್ತು ಐಫೋನ್ 12 ಪ್ರೊ ಮ್ಯಾಕ್ಸ್‌ ಫೋನಿನ್‌ ಬೆಲೆ ಎಷ್ಟು? ಹಾಗೂ ಫೀಚರ್ಸ್‌ಗಳು ಯಾವುವು ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಐಫೋನ್ 12 ಮಿನಿ-ಫೀಚರ್ಸ್‌

ಐಫೋನ್ 12 ಮಿನಿ-ಫೀಚರ್ಸ್‌

ಐಫೋನ್ 12 ಮಿನಿ ಫೋನ್ 5.4-ಇಂಚಿನ ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯು ಸೂಪರ್ ರೆಟಿನಾ XRD ಡಿಸ್‌ಪ್ಲೇ ಮಾದರಿಯಲ್ಲಿದೆ. ಇದು ಸಹ A14 ಬಯೋನಿಕ್ ಎಸ್‌ಒಸಿ ಹಾಗೂ, 5G ಸಪೋರ್ಟ್ ಪಡೆದಿದೆ. ಐಫೋನ್ 12 ಮಿನಿ ಬಹುತೇಕ ಐಫೋನ್ 12 ಫೀಚರ್ಸ್‌ಗಳನ್ನು ಹೊಂದಿದ್ದು, ಗಾತ್ರದಲ್ಲಿ ಮಾತ್ರ ವ್ಯತ್ಯಾಸವಿದೆ. ಐಫೋನ್ 12 ಮಿನಿ ಫೋನಿನ ಆರಂಭಿಕ ಬೆಲೆಯು 69,900ರೂ. ಆಗಿದೆ.

ಐಫೋನ್ 12 ಪ್ರೊ ಮ್ಯಾಕ್ಸ್‌-ಫೀಚರ್ಸ್‌

ಐಫೋನ್ 12 ಪ್ರೊ ಮ್ಯಾಕ್ಸ್‌-ಫೀಚರ್ಸ್‌

ಐಫೋನ್ 12 ಪ್ರೊ ಮ್ಯಾಕ್ಸ್‌ 6.7 ಇಂಚಿನ ಡಿಸ್‌ಪ್ಲೇ ಹೊಂದಿದೆ. ಹಾಗೆಯೇ ಐಫೋನ್ 12 ಪ್ರೊ ಮ್ಯಾಕ್ಸ್ ಟೆಲಿಫೋಟೋ ಕ್ಯಾಮೆರಾದೊಂದಿಗೆ ಉತ್ತಮವಾದ ಕ್ಯಾಮೆರಾ ಸೆಟ್ ಹೊಂದಿದ್ದು, ಇದು 65 ಎಂಎಂ ಫೋಕಲ್ ಉದ್ದವನ್ನು ಹೊಂದಿದ್ದು ಅದು ನಿಮಗೆ 2.5x ಆಪ್ಟಿಕಲ್ ಜೂಮ್ ಮತ್ತು 5x ಜೂಮ್ ಶ್ರೇಣಿಯನ್ನು ಅನುಮತಿಸುತ್ತದೆ. ಸುಧಾರಿತ ಅಲ್ಟ್ರಾ-ವೈಡ್-ಆಂಗಲ್ ಕ್ಯಾಮೆರಾ ಕೂಡ ಹೊಂದಿದೆ. ಡಾಲ್ಬಿ ಸಪೋರ್ಟ್‌ ಸಹ ಪಡೆದಿದೆ. ಈ ಫೋನ್ ಫೋನಿನ ಆರಂಭಿಕ ಬೆಲೆಯು 1,29,900ರೂ. ಆಗಿದೆ.

ಬೆಲೆ ಎಷ್ಟು?

ಬೆಲೆ ಎಷ್ಟು?

ಭಾರತದಲ್ಲಿ ಐಫೋನ್ 12 ಮಿನಿ ಮತ್ತು ಐಫೋನ್ 12 ಪ್ರೊ ಮ್ಯಾಕ್ಸ್‌ ಇದೀಗ ಪ್ರೀ-ಆರ್ಡರ್‌ಗೆ ಲಭ್ಯ ಇವೆ. ಐಫೋನ್ 12 ಮಿನಿ 64GB ವೇರಿಯಂಟ್‌ ದರವು 69,900ರೂ. ಆಗಿದೆ. ಹಾಗೂ 128GB ವೇರಿಯಂಟ್‌ ದರವು 74,900ರೂ. ಆಗಿದೆ ಹಾಗೂ 256GB ವೇರಿಯಂಟ್‌ ಬೆಲೆಯು 84,900ರೂ. ಆಗಿದೆ. ಅದೇ ರೀತಿ ಐಫೋನ್ 12 ಪ್ರೊ ಮ್ಯಾಕ್ಸ್‌ ಫೋನ್‌ 128GB ವೇರಿಯಂಟ್ ಬೆಲೆಯು 1,29,900ರೂ. ಆಗಿದೆ. 256GB ವೇರಿಯಂಟ್‌ ದರವು 1,39,900ರೂ. ಆಗಿದೆ ಹಾಗೂ 512GB ವೇರಿಯಂಟ್‌ ಬೆಲೆಯು 1,59,900ರೂ.ಗಳು ಆಗಿದೆ.

Most Read Articles
Best Mobiles in India

English summary
iPhone 12 mini has its price in India set at Rs. 69,900 for the 64GB storage variant, while its 128GB storage model carries a price tag of Rs. 74,900 and the top-end 256GB storage option is priced at Rs. 84,900.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X