Home
ಸುದ್ದಿಜಾಲ

ಐಫೋನ್‌ 13 ಖರೀದಿಸೋರಿಗೆ ಗುಡ್‌ನ್ಯೂಸ್‌! ಫ್ಲಿಪ್‌ಕಾರ್ಟ್‌ನಲ್ಲಿ ಭಾರಿ ಬೆಲೆ ಕಡಿತ!

ಆಪಲ್‌ ಐಫೋನ್ 13 ಖರೀದಿಸುವವರಿಗೆ ಫ್ಲಿಪ್‌ಕಾರ್ಟ್‌ ಗುಡ್‌ನ್ಯೂಸ್‌ ನೀಡಿದೆ. ಐಫೋನ್ 13 5G ಫೋನ್ ಮೇಲೆ ಭಾರಿ ಡಿಸ್ಕೌಂಟ್‌ ನೀಡಿದ್ದು, ಅತಿ ಕಡಿಮೆ ಬೆಲೆಯಲ್ಲಿ ನೀವು ಖರೀದಿಸಬಹುದಾಗಿದೆ. ಆಸಕ್ತ ಗ್ರಾಹಕರು ನಿರ್ದಿಷ್ಟ ಬ್ಯಾಂಕ್ ಕಾರ್ಡ್‌ನೊಂದಿಗೆ ಮಾತ್ರ ಈ ರಿಯಾಯಿತಿಯನ್ನು ಪಡೆದುಕೊಳ್ಳಬಹುದಾಗಿದೆ.

ಹೌದು, ಫ್ಲಿಪ್‌ಕಾರ್ಟ್‌ನಲ್ಲಿ ಆಪಲ್‌ ಐಫೋನ್ 13 ಅನ್ನು 58,749 ರೂ.ಗಿಂತ ಕಡಿಮೆ ಬೆಲೆಗೆ ಖರೀದಿಸಲು ಅವಕಾಶ ನೀಡಲಾಗಿದೆ. ಇದರಲ್ಲಿ ಬ್ಯಾಂಕ್‌ ಕಾರ್ಡ್‌ ಆಫರ್‌ ಮಾತ್ರವಲ್ಲದೆ ಹೆಚ್ಚುವರಿ ಎಕ್ಸ್‌ಚೇಂಜ್‌ ಆಫರ್‌ಗಳು ಸಹ ಸೇರಿವೆ. ಹಾಗಾದ್ರೆ ಐಫೋನ್ 13 ಮೇಲೆ ಫ್ಲಿಪ್‌ಕಾರ್ಟ್‌ನಲ್ಲಿ ಏನೆಲ್ಲಾ ಆಫರ್‌ಗಳು ಲಭ್ಯವಾಗಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಐಫೋನ್‌ 13 ಖರೀದಿಸೋರಿಗೆ ಗುಡ್‌ನ್ಯೂಸ್‌! ಫ್ಲಿಪ್‌ಕಾರ್ಟ್‌ನಲ್ಲಿ ಭಾರಿ ಬೆಲೆ ಕಡಿತ

ಐಫೋನ್ 13 ಮೇಲೆ ಫ್ಲಿಪ್‌ಕಾರ್ಟ್‌ನಲ್ಲಿ ಬಿಗ್‌ ಆಫರ್‌!

ಐಫೋನ್ 13 ಪ್ರಸ್ತುತ ಫ್ಲಿಪ್‌ಕಾರ್ಟ್‌ನಲ್ಲಿ 128GB ಸ್ಟೋರೇಜ್ ಮಾದರಿಯಲ್ಲಿ ಬೆಲೆ ಕಡಿತವನ್ನು ಪಡೆದುಕೊಂಡಿದೆ. ಇದರಿಂದ ಐಫೋನ್ 13 58,749ರೂ.ಗಳ ಆರಂಭಿಕ ಬೆಲೆಯೊಂದಿಗೆ ಲಭ್ಯವಿದೆ. ಐಫೋನ್ 13 ಅಧಿಕೃತವಾಗಿ ಆಪಲ್‌ ಆನ್‌ಲೈನ್ ಸ್ಟೋರ್‌ನಲ್ಲಿ 69,900ರೂ. ಗೆ ಮಾರಾಟವಾಗುತ್ತಿದೆ. ಅಂದರೆ ಫ್ಲಿಪ್‌ಕಾರ್ಟ್‌ನಲ್ಲಿ ಐಫೋನ್ 13 ಬರೋಬ್ಬರಿ 11,151ರೂ. ಗಳ ಫ್ಲಾಟ್ ರಿಯಾಯಿತಿಯನ್ನು ಪಡೆದುಕೊಂಡಿದೆ..

ಇದಲ್ಲದೆ SBI ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆದಾರರು ಐಫೋನ್ 13 ಅನ್ನು 57,999ರೂ.ಗಳಿಗೆ ಖರೀದಿಸಲು ಸಾಧ್ಯವಾಗುತ್ತದೆ. ಏಕೆಂದರೆ ಫ್ಲಿಪ್‌ಕಾರ್ಟ್ ಎಸ್‌ಬಿಐ ಕಾರ್ಡ್‌ನಲ್ಲಿ ಖರೀದಿಸುವವರಿಗೆ 10%ರಿಯಾಯಿತಿಯನ್ನು ನೀಡುತ್ತಿದೆ. ಇದರೊಂದಿಗೆ 30,000ರೂ. ಗಳ ತನಕ ಎಕ್ಸ್‌ಚೇಂಜ್‌ ಆಫರ್‌ (ಡಿವೈಸ್‌ಗಳ ಗುಣಮಟ್ಟದ ಆಧಾರದಲ್ಲಿ) ನೀಡುತ್ತಿದೆ. ಇದರಿಂದ ನೀವು ಐಫೋನ್ 13 ಅನ್ನು ಇನ್ನಷ್ಟು ಕಡಿಮೆ ಬೆಲೆಗೆ ಖರೀದಿಸುವುದಕ್ಕೆ ಅವಕಾಶವಿದೆ.

ಐಫೋನ್‌ 13 ಖರೀದಿಸೋರಿಗೆ ಗುಡ್‌ನ್ಯೂಸ್‌! ಫ್ಲಿಪ್‌ಕಾರ್ಟ್‌ನಲ್ಲಿ ಭಾರಿ ಬೆಲೆ ಕಡಿತ

ಐಫೋನ್ 13 ಫೋನ್‌ ಫೀಚರ್ಸ್‌
ಐಫೋನ್ 13 ಫೋನ್‌ 6.1 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಅತ್ಯುತ್ತುಮ ಪಿಕ್ಸಲ್ ರೆಸಲ್ಯೂಶನ್ ಪಡೆದಿದೆ. 1200nits ಬ್ರೈಟ್ನೆಸ್‌ ಹೊಂದಿದೆ. ಹಾಗೆಯೇ ಈ ಫೋನ್ A15 ಬಯೋನಿಕ್ ಸೋಕ್ ಕ್ವಾಡ್‌ ಕೋರ್ ಪ್ರೊಸೆಸರ್‌ ಅನ್ನು ಹೊಂದಿದೆ. 5G ಅನ್ನು ಬೆಂಬಲಿಸುತ್ತದೆ. ಐಫೋನ್ 13 ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಹೊಂದಿದ್ದು, ಅವುಗಳು ಕ್ರಮವಾಗಿ 12 ಮೆಗಾ ಪಿಕ್ಸೆಲ್ ಅಲ್ಟ್ರಾ ಕ್ಯಾಮೆರಾ ಸೆನ್ಸಾರ್ ಹೊಂದಿದ್ದು, ಇನ್ನೊಂದು ಕ್ಯಾಮೆರಾವು 12 ಮೆಗಾ ಪಿಕ್ಸಲ್ ವೈಲ್ಡ್‌ ಆಂಗಲ್ ಲೆನ್ಸ್‌ ಪಡೆದಿದೆ. ಯಾವುದೇ ಸಂದರ್ಭದಲ್ಲಿಯೂ ಅತ್ಯುತ್ತಮ ಫೋಟೊ ಸೆರೆಹಿಡಿಯಲು ನೆರವಾಗಲಿದೆ. ಸಿನಿಮ್ಯಾಟಿಕ್ ಮೋಡ್ ಆಯ್ಕೆ ಪಡೆದಿದೆ. ಇನ್ನು ಈ ಫೋನ್ ಪಿಂಕ್, ರೆಡ್, ಬ್ಲ್ಯಾಕ್, ವೈಟ್ ಸೇರಿದಂತೆ ಐದು ಬಣ್ಣಗಳಲ್ಲಿ ಲಭ್ಯವಾಗಲಿದೆ.

ಇನ್ನು ಇತ್ತೀಚಿಗೆ ಆಪಲ್‌ ವರ್ಲ್ಡ್‌ವೈಡ್ ಡೆವಲಪರ್ಸ್ ಕಾನ್ಫರೆನ್ಸ್ನಲ್ಲಿ ಮ್ಯಾಕ್‌ಬುಕ್‌ ಏರ್‌ 15 ಅನ್ನು ಪ್ರದರ್ಶನ ಮಾಡಿದೆ. ಇದು 8 ಕೋರ್ CPU ಮತ್ತು 10-ಕೋರ್ GPU ಅನ್ನು ಹೊಂದಿದ್ದು, ಇಂಟೆಲ್ ಚಾಲಿತ ಮ್ಯಾಕ್‌ಬುಕ್‌ಗಿಂತ 12 ಪಟ್ಟು ವೇಗವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಲಾಗಿದೆ.

ಮ್ಯಾಕ್‌ಬುಕ್ ಏರ್ 15 ವಿಶೇಷತೆ ಏನು?
ಮ್ಯಾಕ್‌ಬುಕ್ ಏರ್ 15 ಹೆಸರೇ ಸೂಚಿಸುವಂತೆ ಇದು 15.3 ಇಂಚಿನ ಲಿಕ್ವಿಡ್ ರೆಟಿನಾ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 500 ನಿಟ್ಸ್‌ ಬ್ರೈಟ್‌ನೆಸ್ ಅನ್ನು ಬೆಂಬಲಿಸಲಿದ್ದು, ಕೇವಲ 11.5mm ಅಳತೆಯನ್ನು ಹೊಂದಿದೆ. ಆಪಲ್‌ ಕಂಪೆನಿ ಪ್ರಕಾರ ಇದು ವಿಶ್ವದ ಅತ್ಯಂತ ತೆಳುವಾದ 15 ಇಂಚಿನ ಲ್ಯಾಪ್‌ಟಾಪ್ ಆಗಿದೆ. ಇನ್ನು ಮ್ಯಾಕ್‌ಬುಕ್ ಏರ್ 15 MagSafe ಚಾರ್ಜಿಂಗ್, ಪರಿಕರಗಳನ್ನು ಸಂಪರ್ಕಿಸಲು ಎರಡು ಥಂಡರ್‌ಬೋಲ್ಟ್ ಪೋರ್ಟ್‌ಗಳನ್ನು ಹೊಂದಿದೆ.

ಇನ್ನು 6K ಇನರ್‌ ಡಿಸ್‌ಪ್ಲೇ ಜೊತೆಗೆ 3.5mm ಹೆಡ್‌ಫೋನ್ ಜ್ಯಾಕ್ ಅನ್ನು ಒಳಗೊಂಡಿದೆ. ಮ್ಯಾಕ್‌ಬುಕ್ ಏರ್ 15-ಇಂಚಿನ ನಾಲ್ಕು ಕಾರ್ಯಕ್ಷಮತೆಯ ಕೋರ್‌ಗಳು ಮತ್ತು ನಾಲ್ಕು ದಕ್ಷತೆಯ ಕೋರ್‌ಗಳನ್ನು ಸಹ ಹೊಂದಿದೆ. ಅಲ್ಲದೆ 10-ಕೋರ್ ಜಿಪಿಯು ಮತ್ತು 16-ಕೋರ್ ನ್ಯೂರಲ್ ಎಂಜಿನ್‌ನೊಂದಿಗೆ 8-ಕೋರ್ ಸಿಪಿಯು ನಲ್ಲಿ ಕಾರ್ಯನಿರ್ವಹಿಸಲಿದೆ. ಇದರಲ್ಲಿ 1080p ವೆಬ್‌ಕ್ಯಾಮ್ ಮತ್ತು ಸ್ಪಷ್ಟವಾದ ಧ್ವನಿ ಕರೆಗಳಿಗಾಗಿ ಮೂರು-ಮೈಕ್ ರೇಂಜ್‌ ಅನ್ನು ಸಹ ನೀಡಲಾಗಿದೆ. ಇದರಲ್ಲಿ ಒಟ್ಟು ಆರು ಸ್ಪೀಕರ್‌ಗಳನ್ನು ನೀಡಲಾಗಿದೆ.

Best Mobiles in India

English summary
iPhone 13 gets Huge price drop on Flipkart: Offer deatils in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+