ಐಫೋನ್ 14 ಅನ್ನು ಅತಿ ಕಡಿಮೆ ಬೆಲೆಗೆ ಖರೀದಿಸೋಕೆ ಇದಕ್ಕಿಂತ ಬೆಸ್ಟ್ ಟೈಂ ಮತ್ತೊಂದಿಲ್ಲ!
ಐಫೋನ್ 14 ಅನ್ನು ಡಿಸ್ಕೌಂಟ್‌ನಲ್ಲಿ ಖರೀದಿಸಬೇಕು ಅಂದುಕೊಂಡವರಿಗೆ ಅಮೆಜಾನ್ ಗುಡ್‌ನ್ಯೂಸ್ ನೀಡಿದೆ. ಅಮೆಜಾನ್ ತನ್ನ ಪ್ರೈಮ್‌ಡೇ 2023 ಸೇಲ್‌ನಲ್ಲಿ ಐಫೋನ್ 14 ಭಾರಿ ರಿಯಾಯಿತಿ ಪಡೆದುಕೊಳ್ಳಲಿದೆ ಎಂದು ವರದಿಯಾಗಿದೆ. ಇದರಿಂದ ಡಿಸ್ಕೌಂಟ್‌ನಲ್ಲಿ ಐಫೋನ್ 14 ಖರೀದಿಸುವುದಕ್ಕೆ ಇದು ಮತ್ತೊಂದು ಅವಕಾಶವಾಗಲಿದೆ.
ಹೌದು, ಅಮೆಜಾನ್ ಪ್ರೈಮ್ ಡೇ 2023 ಸೇಲ್‌ನಲ್ಲಿ ಐಫೋನ್ 14 ಭರ್ಜರಿ ಡಿಸ್ಕೌಂಟ್ ಪಡೆದುಕೊಳ್ಳುವುದು ಕನ್ಫರ್ಮ್ ಆಗಿದೆ. ಐಫೋನ್ 14 ಸರಣಿಯ ಸ್ಮಾರ್ಟ್‌ಫೋನ್‌ಗಳು ಸೇರಿದಂತೆ ಹಲವು ಆಕರ್ಷಕ ಸ್ಮಾರ್ಟ್‌ಫೋನ್‌ಗಳ ಮೇಲೆ ರಿಯಾಯಿತಿ ದೊರೆಯಲಿದೆ. ಅದರಲ್ಲೂ ಐಫೋನ್ 14 ಮೇಲೆ ಬಿಗ್ ಆಫರ್ ಲಭ್ಯವಾಗುತ್ತದೆ ಅನ್ನೊ ವಿಚಾರ ಟೆಕ್ ವಲಯದಲ್ಲಿ ಹಲ್‌ಚಲ್ ಎಬ್ಬಿಸಿದೆ. ಹಾಗಾದ್ರೆ ಅಮೆಜಾನ್ ಪ್ರೈಮ್ ಡೇ ಸೇಲ್‌ನಲ್ಲಿ ಐಫೋನ್ 14 ಬೆಲೆ ಎಷ್ಟು ಕಡಿಮೆ ಆಗಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಅಮೆಜಾನ್ ಪ್ರೈಮ್ ಡೇ ಸೇಲ್‌ನಲ್ಲಿ ಐಫೋನ್ 14 ಬೆಲೆ ಎಷ್ಟಿರಲಿದೆ?
ಅಮೆಜಾನ್ ಪ್ರೈಮ್ ಡೇ ಸೇಲ್‌ನಲ್ಲಿ ಐಫೋನ್ 14 ಬೆಲೆ ಕೇವಲ 66,499 ರೂ. ಇರಲಿದೆ ಎಂದು ಹೇಳಲಾಗಿದೆ. ಅಂದರೆ ಐಫೋನ್ 14 128GB ಮಾದರಿಯನ್ನು ಕೇವಲ 66,499ರೂ.ಬೆಲೆಯಲ್ಲಿ ಖರೀದಿಸಬಹುದಾಗಿದೆ. ಇದರೊಂದಿಗೆ SBI ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮತ್ತು ICICI ಬ್ಯಾಂಕ್ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ವಹಿವಾಟುಗಳ ಮೇಲೆ 10% ಡಿಸ್ಕೌಂಟ್ ಕೂಡ ದೊರೆಯಲಿದೆ. ಇದರಿಂದ ಐಫೋನ್ 14 ಅನ್ನು ಇನ್ನಷ್ಟು ಕಡಿಮೆ ಬೆಲೆಗೆ ಖರೀದಿಸುವುದಕ್ಕೆ ಸಾದ್ಯವಾಗಲಿದೆ.
ಐಫೋನ್ 14 ಫೀಚರ್ಸ್ ಹೇಗಿದೆ?
ಐಫೋನ್ 14 6.1 ಇಂಚಿನ ಸೂಪರ್ ರೆಟಿನಾ XDR OLED ಡಿಸ್‌ಪ್ಲೆಯನ್ನು ಹೊಂದಿದೆ. ಈ ಡಿಸ್‌ಪ್ಲೇ 1200 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಅನ್ನು ಒಳಗೊಂಡಿದೆ. ಇದು ಡಾಲ್ಬಿ ವಿಷನ್ ಬೆಂಬಲ ಮತ್ತು ಸೆರಾಮಿಕ್ ಶೀಲ್ಡ್ ಪ್ರೊಟೆಕ್ಷನ್ ಅನ್ನು ಪಡೆದುಕೊಂಡಿದೆ. ಇನ್ನು ಐಫೋನ್ 14 A15 ಬಯೋನಿಕ್ ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಈ ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 12 ಮೆಗಾ ಪಿಕ್ಸಲ್ ಸೆನ್ಸಾರ್ ಹೊಂದಿದೆ. ಇದಲ್ಲದೆ 12 ಮೆಗಾ ಪಿಕ್ಸಲ್ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.

ಇನ್ನು ಆಪಲ್ ಕಂಪೆನಿಯ ಇತ್ತೀಚಿನ ಸುದ್ದಿಗಳನ್ನು ಗಮನಿಸುವುದಾದರೆ ಐಫೋನ್ 15 ಸರಣಿ ಬಗ್ಗೆ ಸಾಕಷ್ಟು ಊಹಾಪೋಹಗಳು ಹರಿದಾಡುತ್ತಿವೆ. ಅದರಂತೆ ಐಫೋನ್ 15 ಸರಣಿಯು 6.1 ಇಂಚಿನ ಡಿಸ್‌ಪ್ಲೇ ಹೊಂದಿರಲಿದೆ ಎಂದು ನಿರೀಕ್ಷಿಸಲಾಗಿದೆ. ಇನ್ನು ಈ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್ ಮತ್ತು ಆಲ್‌ವೇಸ್ ಆನ್ ಡಿಸ್‌ಪ್ಲೇ ಫೀಚರ್ಸ್ ಹೊಂದಿರಲಿದೆ. ಇದು ಪವರ್‌ಫುಲ್ ಬಯೋನಿಕ್ A16 SoC ಪ್ರೊಸೆಸರ್ ಹೊಂದಿರಲಿದೆ ಎಂದು ಹೇಳಲಾಗಿದೆ. ಇದಲ್ಲದೆ ಈ ಸರಣಿಯು 1TB ವರೆಗೆ ಸ್ಟೋರೇಜ್ ಸಾಮರ್ಥ್ಯವನ್ನು ಪಡೆಯುವ ನಿರೀಕ್ಷೆಯಿದೆ.
ಇನ್ನು ಐಫೋನ್ 15 ಸರಣಿ ಐಫೋನ್ 14 ಸರಣಿಯ ಪ್ರೊ ಮಾದರಿಗಳಂತೆಯೇ 48 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾಗಳನ್ನು ಹೊಂದಿರಲಿದೆ ಎನ್ನಲಾಗಿದೆ. ಇದಲ್ಲದೆ ಸ್ಟ್ಯಾಂಡರ್ಡ್ ಮಾಡೆಲ್‌ಗಳು ಆಪ್ಟಿಕಲ್ ಜೂಮ್‌ಗಾಗಿ ಟೆಲಿಫೋಟೋ ಲೆನ್ಸ್ ಅಥವಾ ಲಿಡಾರ್ ಸ್ಕ್ಯಾನರ್ ಅನ್ನು ಹೊಂದಿರುವುದಿಲ್ಲ ಎಂದು ಅಂದಾಜಿಸಲಾಗಿದೆ. ಇದಲ್ಲದೆ ಆಪಲ್ ಐಫೋನ್ 15 ಪ್ರೊ ಮ್ಯಾಕ್ಸ್ ಮಾದರಿಯು ಹೆಚ್ಚು ಪ್ರಮುಖವಾದ ಕ್ಯಾಮೆರಾ ಮಾಡ್ಯೂಲ್ ಅನ್ನು ಹೊಂದಿರಲಿದೆ ಎಂದು ನಿರೀಕ್ಷಿಸಲಾಗಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಈ ಸರಣಿಯು ಬಿಗ್ ಬ್ಯಾಟರಿ ಬ್ಯಾಕ್‌ಅಪ್‌ನೊಂದಿಗೆ ಬರಲಿದೆ ಎಂದು ಅಂದಾಜಿಸಲಾಗಿದೆ.


Click it and Unblock the Notifications








