Home
ಸುದ್ದಿಜಾಲ

ಭಾರತದಲ್ಲಿ ಐಫೋನ್‌ 15 ಕ್ರೇಜ್! MRPಗಿಂತ 32,000ರೂ. ಹೆಚ್ಚಿನ ಬೆಲೆಗೆ ಸೇಲ್‌!

ಟೆಕ್‌ ದೈತ್ಯ ಆಪಲ್‌ ಕಂಪೆನಿಯ ಐಫೋನ್‌ 15 ಸರಣಿ ಕ್ರೇಜ್‌ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇದಕ್ಕೆ ಭಾರತವು ಕೂಡ ಹೊರತಾಗಿಲ್ಲ. ಭಾರತದಲ್ಲಿ ಐಫೋನ್‌ 15 ಸರಣಿ ಸೇಲ್‌ ಶುರುವಾದ ದಿನದಿಂದಲೂ ಇದರ ಹೈಪ್‌ ಇನ್ನಷ್ಟು ಹೆಚ್ಚಾಗುತ್ತಲೇ ಇದೆ. ಅದರಲ್ಲೂ ಭಾರತದಲ್ಲಿ ಐಫೋನ್‌ 15 ಎಂಆರ್‌ಪಿಗಿಂತ ಹೆಚ್ಚಿನ ಬೆಲೆಯಲ್ಲಿ ಸೇಲ್‌ ಆಗುತ್ತಿದೆ ಎನ್ನಲಾಗಿದೆ.

ಹೌದು, ಭಾರತದ ಕೆಲವು ಪ್ರಮುಖ ನಗರಗಳಲ್ಲಿ ಐಫೋನ್‌ 15 ಸರಣಿಯನ್ನು ಎಂಆರ್‌ಪಿ ಬೆಲೆಗಿಂತ ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಭಾರತದಲ್ಲಿ ಆಪಲ್‌ನ ಎರಡು ಸ್ಟೋರ್‌ಗಳಾದ ಆಪಲ್‌ BKC ಮತ್ತು ಆಪಲ್‌ Saketನಲ್ಲಿ ಖರೀದಿಸುವವರ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿದೆ. ಹಾಗಾದ್ರೆ ಭಾರತದಲ್ಲಿ 15 ಸರಣಿಯ ಮೇಲೆ ಕ್ರೇಜ್‌ ಹೇಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಭಾರತದಲ್ಲಿ ಐಫೋನ್‌ 15 ಕ್ರೇಜ್! MRPಗಿಂತ 32,000ರೂ. ಹೆಚ್ಚಿನ ಬೆಲೆಗೆ ಸೇಲ್‌!

ಭಾರತದಲ್ಲಿ ಐಫೋನ್‌ 15 ಕ್ರೇಜ್ ಹೇಗಿದೆ?
ಟೆಕ್‌ ವಲಯದ ವರದಿಯ ಪ್ರಕಾರ ಭಾರತದಲ್ಲಿ ಐಫೋನ್‌ 15 ಮೇಲೆ ಭಾರಿ ಕ್ರೇಜ್ ಸೃಷ್ಟಿಯಾಗಿದೆ. ಇದಕ್ಕೆ ತಕ್ಕಂತೆ ಚಿಲ್ಲರೆ ವ್ಯಾಪಾರಿಗಳು ಐಫೋನ್‌ 15ಪ್ರೊ ಮತ್ತು ಐಫೋನ್‌ 15 ಪ್ರೊ ಮ್ಯಾಕ್ಸ್‌ ರೂಪಾಂತರಗಳು MRP ಬೆಲೆಗಿಂತ 20,000ರೂ. ವರೆಗೆ ಹೆಚ್ಚಿನ ಬೆಲೆಯಲ್ಲಿ ಮಾರಾಟಮಾಡುತ್ತುದ್ದಾರೆ. ಇನ್ನು ನ್ಯಾಚುರಕ್‌ ಟೈಟಾನಿಯಂ ಬಣ್ಣದಲ್ಲಿರುವ ಐಫೋನ್‌ 15ಪ್ರೊ ಮ್ಯಾಕ್ಸ್‌ನ 256GB ರೂಪಾಂತರವು ಎಂಆರ್‌ಪಿ ಬೆಲೆಗಿಂತ ಸುಮಾರು 20,000ರೂ. ಹೆಚ್ಚಿನ ಬೆಲೆಯಲ್ಲಿ ಮಾರಾಟವಾಗುತ್ತಿದೆ.

ಸದ್ಯದ ಟ್ರೆಂಡ್‌ ಪ್ರಕಾರ ಐಫೋನ್‌ 15 ಪ್ರೊ ರೂಪಾಂತರಗಳಿಗೆ MRP ಗಿಂತ 5,000-6,000 ವರೆಗೆ ಬೆಲೆ ಹೆಚ್ಚಿಗೆ ಇದೆ ಎಂದು ವರದಿಯಾಗಿದೆ. ನವದೆಹಲಿಯ ಕರೋಲ್ ಬಾಗ್‌ನಲ್ಲಿನ ಚಿಲ್ಲರೆ ವ್ಯಾಪಾರಿ ಐಫೋನ್ 15 ಪ್ರೊ ಅನ್ನು 1,51,000ರೂ. ಬೆಲೆಯಲ್ಲಿ ಮಾರಾಟ ಮಾಡಲಾಗ್ತಿದೆ. ಇದು ಫೋನ್‌ನ MRP ಗಿಂತ ಸುಮಾರು 6,000ರೂ. ಹೆಚ್ಚಾಗಿದೆ. ಅದೇ ರೀತಿ, ಜೈಪುರದ ಮತ್ತೊಂದು ಚಿಲ್ಲರೆ ವ್ಯಾಪಾರಿಯು ಬ್ಲೂ ಟೈಟಾನಿಯಂ ಬಣ್ಣದಲ್ಲಿರುವ ಐಫೋನ್‌ 15ಪ್ರೊ 256GB ರೂಪಾಂತರದ ಆಯ್ಕೆಯನ್ನು MRP ಗಿಂತ 8,000ರೂ. ಹೆಚ್ಚಿನ ಬೆಲೆಯಲ್ಲಿ ಸೇಲ್‌ ಮಾಡಿದ್ದಾರೆ.

ಐಫೋನ್‌ 15 ಪ್ರೊ ಫೀಚರ್ಸ್‌ ಹೇಗಿದೆ?
ಐಫೋನ್‌ 15 ಪ್ರೊ ಮಾದರಿಯು ಟೈಟಾನಿಯಂ ವಿನ್ಯಾಸವನ್ನು ಹೊಂದಿದ್ದು, ಮುಂಭಾಗದಲ್ಲಿ ಸೆರಾಮಿಕ್ ಶೀಲ್ಡ್ ಅನ್ನು ಹೊಂದಿದೆ. ಜೊತೆಗೆ ಟೆಕ್ಚರರ್ಡ್ ಮ್ಯಾಟ್ ಗ್ಲಾಸ್ ಬ್ಯಾಕ್ ಅನ್ನು ಹೊಂದಿದ್ದು, 6.1 ಇಂಚಿನ ಸೂಪರ್ ರೆಟಿನಾ XDR ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಡಿಸ್‌ಪ್ಲೇ 2556 x 1179 ಪಿಕ್ಸೆಲ್ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದು A17 ಪ್ರೊ ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಪ್ರತಿ ಸೆಕೆಂಡಿಗೆ 35 ಟ್ರಿಲಿಯನ್ ಕಾರ್ಯಾಚರಣೆಗಳಿಗೆ ಬೆಂಬಲಿಸುವ ಹೊಸ ಆರ್ಕಿಟೆಕ್ಚರ್‌ನೊಂದಿಗೆ ಸುಸಜ್ಜಿತವಾಗಿದೆ. ರೇ ಟ್ರೇಸಿಂಗ್‌ಗೆ ಬೆಂಬಲದೊಂದಿಗೆ ಸುಧಾರಿತ GPU ಕಾರ್ಯಕ್ಷಮತೆಯನ್ನು ಹೊಂದಿದೆ ಎಂದು ಆಪಲ್ ಕಂಪೆನಿ ಹೇಳಿದೆ.

ಇನ್ನು ಐಫೋನ್‌ 15 ಪ್ರೊ 48 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಮುಖ್ಯ ಕ್ಯಾಮೆರಾವನ್ನು ಹೊಂದಿದೆ. ಇದು ಸೂಪರ್-ಹೈ-ರೆಸಲ್ಯೂಶನ್ ಫೋಟೋಗಳಿಗೆ ಬೆಂಬಲವನ್ನು ನೀಡಲಾಗಿದೆ. ಇದರೊಂದಿಗೆ 12 ಮೆಗಾಪಿಕ್ಸೆಲ್‌ ಅಲ್ಟ್ರಾ ವೈಡ್ ಲೆನ್ಸ್‌ ಹಾಗೂ 12-ಮೆಗಾಪಿಕ್ಸೆಲ್ 3x ಟೆಲಿಫೋಟೋ ಕ್ಯಾಮೆರಾವನ್ನು ಸಹ ಒದಗಿಸಲಾಗಿದೆ. ಕ್ಯಾಮೆರಾದಲ್ಲಿ 15x ವರೆಗೆ ಡಿಜಿಟಲ್ ಜೂಮ್ ಆಯ್ಕೆ ನೀಡಲಾಗಿದೆ.

ಇದರ ಮತ್ತೊಂದು ವಿಶೇಷತೆ ಎಂದರೆ ಐಫೋನ್‌ 15 ಪ್ರೊನಲ್ಲಿ ಮ್ಯೂಟ್‌ ಬಟನ್‌ ಬದಲಿಗೆ 'ಆಕ್ಷನ್' ಬಟನ್‌ ಹೊಂದಿರುವುದು. ಇದನ್ನು ವಾಯ್ಸ್‌ ರೆಕಾರ್ಡಿಂಗ್ ಅನ್ನು ತ್ವರಿತವಾಗಿ ಪ್ರಾರಂಭಿಸುವುದಕ್ಕೆ ಬಳಸಬಹುದಾಗಿದೆ. ಇದಲ್ಲದೆ ಆಕ್ಷನ್‌ ಬಟನ್‌ ಸೈಲೆಂಟ್ ಮೋಡ್, ಫೋಕಸ್, ಕ್ಯಾಮೆರಾ, ಫ್ಲ್ಯಾಶ್‌ಲೈಟ್, ವಾಯ್ಸ್ ಮೆಮೊ, ಟ್ರಾನ್ಸ್‌ಲೇಟ್11, ಮ್ಯಾಗ್ನಿಫೈಯರ್, ಶಾರ್ಟ್‌ಕಟ್ ಫೀಚರ್ಸ್‌ಗಳನ್ನು ಒಳಗೊಂಡಿದೆ.

Best Mobiles in India

English summary
iPhone 15 craze in India: iPhone 15 Pro Max selling for upto Rs 32000 above MRP in India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+