iPhone 15 Feature leaks: ಬಿಗ್ ಬ್ಯಾಟರಿ ಬ್ಯಾಕಪ್‌ನೊಂದಿಗೆ ಬರಲಿದೆ ಐಫೋನ್ 15 ಸರಣಿ!
ಆಪಲ್ ಐಫೋನ್ 15 ಬಿಡುಗಡೆಗೂ ಮುನ್ನವೇ ಸಾಕಷ್ಟು ಸದ್ದು ಮಾಡ್ತಿದೆ. ಬಿಡುಗಡೆಗೆ ಇನ್ನು ಕೆಲವು ತಿಂಗಳುಗಳು ಬಾಕಿ ಉಳಿದಿರುವಾಗಲೇ ಕೆಲವು ಫೀಚರ್ಸ್‌ಗಳು ಸೋರಿಕೆಯಾಗಿವೆ. ಅದರಲ್ಲೂ ಈ ಭಾರಿಯ ಐಫೋನ್ 15 ಬಿಗ್ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಹೊಂದಿರಲಿದೆ ಎಂದು ಹೇಳಲಾಗಿದೆ.
ಹೌದು, ಆಪಲ್ ಐಫೋನ್ 15 ಸರಣಿ ಬಿಡುಗಡೆ ದಿನಾಂಕ ಸದ್ಯದಲ್ಲೇ ಬಹಿರಂಗವಾಗುವ ಸಾಧ್ಯತೆಯಿದೆ. ಈ ಸಮಯದಲ್ಲಿ ಐಫೋನ್ 15 ಫೀಚರ್ಸ್ ಲೀಕ್ ಆಗಿರೋದು ಭಾರಿ ಟ್ರೆಂಡ್ ಹುಟ್ಟುಹಾಕಿದೆ. ಇನ್ನು ಈ ಸರಣಿಯು ಕೂಡ ನಾಲ್ಕು ಮಾದರಿಯಗಳನ್ನು ಹೊಂದಿರಲಿದೆ ಎಂದು ವರದಿಯಾಗಿದೆ. ಹಾಗಾದ್ರೆ ಐಫೋನ್ 15 ಸರಣಿಯಲ್ಲಿ ಏನೆಲ್ಲಾ ನಿರೀಕ್ಷಿಸಬಹುದು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಐಫೋನ್ 15 ಸರಣಿ ಡಿಸ್‌ಪ್ಲೇ ನಿರೀಕ್ಷೆ ಏನು?
ಐಫೋನ್ 15 ಸರಣಿಯು ಐಫೋನ್ 14 ರಂತೆಯೇ ಐಫೋನ್ 15 ಸರಣಿ ಕೂಡ 6.1 ಇಂಚಿನ ಡಿಸ್‌ಪ್ಲೇ ಹೊಂದಿರಲಿದೆ ಎಂದು ನಿರೀಕ್ಷಿಸಲಾಗಿದೆ. ಇನ್ನು ಈ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್ ಮತ್ತು ಆಲ್‌ವೇಸ್ ಆನ್ ಡಿಸ್‌ಪ್ಲೇ ಫೀಚರ್ಸ್ ಕೂಡ ಹೊಂದಿರಬಹುದು.
ಐಫೋನ್ 15 ಸರಣಿ ಪ್ರೊಸೆಸರ್ ನಿರೀಕ್ಷೆ?
ಐಫೋನ್ 15 ಸರಣಿಯು ಪವರ್‌ಫುಲ್ ಬಯೋನಿಕ್ A16 SoC ಪ್ರೊಸೆಸರ್ ಹೊಂದಿರಲಿದೆ ಎಂದು ಅಂದಾಜಿಸಲಾಗಿದೆ. ಕಳೆದ ವರ್ಷದ ಐಫೋನ್ 14 ಪ್ರೊ ಮಾದರಿಯ ಕೂಡ ಇದೇ ಪ್ರೊಸೆಸರ್ ಅನ್ನು ಹೊಂದಿತ್ತು ಅನ್ನೊದು ವಿಶೇಷ. ಅದೇ ರೀತಿ, ಐಫೋನ್ 15 ಪ್ರೊ ಮತ್ತು ಐಫೋನ್ 15ಪ್ರೊ ಮ್ಯಾಕ್ಸ್ ಮಾದರಿಗಳು ಬಯೋನಿಕ್ A17 ಪ್ರೊಸೆಸರ್ ನಲ್ಲಿ ಬರಲಿದೆ ಎಂದು ನಿರೀಕ್ಷಿಸಲಾಗಿದೆ. ಇನ್ನು ಈ ಸರಣಿಯು 1TB ವರೆಗೆ ಸ್ಟೋರೇಜ್ ಸಾಮರ್ಥ್ಯವನ್ನು ಪಡೆಯುವ ನಿರೀಕ್ಷೆಯಿದೆ.
ಐಫೋನ್ 15 ಸರಣಿ ಕ್ಯಾಮೆರಾ ಸೆಟ್‌ಅಪ್
ಐಫೋನ್ 15 ಸರಣಿಯು ಐಫೋನ್ 14 ಸರಣಿಯ ಪ್ರೊ ಮಾದರಿಗಳಂತೆಯೇ 48 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾಗಳನ್ನು ಹೊಂದಿರಲಿದೆ ಎನ್ನಲಾಗಿದೆ. ಇದಲ್ಲದೆ ಸ್ಟ್ಯಾಂಡರ್ಡ್ ಮಾಡೆಲ್‌ಗಳು ಆಪ್ಟಿಕಲ್ ಜೂಮ್‌ಗಾಗಿ ಟೆಲಿಫೋಟೋ ಲೆನ್ಸ್ ಅಥವಾ ಲಿಡಾರ್ ಸ್ಕ್ಯಾನರ್ ಅನ್ನು ಹೊಂದಿರುವುದಿಲ್ಲ ಎಂದು ಅಂದಾಜಿಸಲಾಗಿದೆ. ಇನ್ನು ಪ್ರೊ ಮ್ಯಾಕ್ಸ್ ಮಾದರಿಯು ಹೆಚ್ಚು ಪ್ರಮುಖವಾದ ಕ್ಯಾಮೆರಾ ಮಾಡ್ಯೂಲ್ ಅನ್ನು ಹೊಂದಿರಲಿದೆ ಎಂದು ನಿರೀಕ್ಷಿಸಲಾಗಿದೆ.

ಐಫೋನ್ 15 ಸರಣಿ ಬ್ಯಾಟರಿ
ಐಫೋನ್ 15 3,877mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಲಿದೆ ಎಂದು ಹೇಳಲಾಗುತ್ತದೆ. ಐಫೋನ್ 15 ಪ್ಲಸ್ 4,912mAh ಸಾಮರ್ಥ್ಯದ ಬಿಗ್ ಬ್ಯಾಟರಿಯನ್ನು ಹೊಂದಿದೆ ಎಂದು ಅಂದಾಜಿಸಲಾಗಿದೆ. ಐಫೋನ್ 15 ಪ್ರೊ ಮಾದರಿಯು 3,650mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಐಫೋನ್ 15 ಪ್ರೊ ಮ್ಯಾಕ್ಸ್ 4,852mAh ಸಾಮರ್ಥ್ಯದ ಬ್ಯಾಟರಿಯನ್ನು ಬಳಸಿಕೊಳ್ಳುವ ನಿರೀಕ್ಷೆಯಿದೆ. ಇದಲ್ಲದೆ ಆಪಲ್‌ನ ಲೈಟ್‌ನಿಂಗ್ ಪೋರ್ಟ್ ಬದಲಿಗೆ USB ಟೈಪ್-ಸಿ ಪೋರ್ಟ್‌ನೊಂದಿಗೆ ಬರುತ್ತದೆ ಎಂದು ಹೇಳಲಾಗುತ್ತದೆ.
ಇದೇ ಸಂದರ್ಭದಲ್ಲಿ ಐಫೋನ್ 14 ಒಳಗೊಂಡಿರುವ ಫೀಚರ್ಸ್‌ಗಳ ಬಗ್ಗೆ ಕೂಡ ಗಮನಹರಿಸುವುದಾದರೇ, ಐಫೋನ್ 14 ಫೋನ್ 6.1 ಇಂಚಿನ FHD+ ಡಿಸ್‌ಪ್ಲೇ ಹೊಂದಿರಲಿದೆ. ಇನ್ನು ಡಿಸ್‌ಪ್ಲೇ 1200ನೀಟ್ಸ್ ಬ್ರೈಟ್ನಸ್ ಸಪೋರ್ಟ್ ಪಡೆದುಕೊಂಡಿದೆ. ಜೊತೆಗೆ ಈ ಐಫೋನ್ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್ ಅನ್ನು ಒಳಗೊಂಡಿದೆ. ಇದರಲ್ಲಿ ಮುಖ್ಯ ಕ್ಯಾಮೆರಾವು 12 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಇದಲ್ಲದೆ ಮುಂಭಾಗದಲ್ಲಿ 12 ಮೆಗಾ ಪಿಕ್ಸಲ್‌ನ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಹಾಗೆಯೇ ಇದು 128GB, 256GB ಮತ್ತು 512GB ಸ್ಟೋರೇಜ್ ಆಯ್ಕೆಗಳನ್ನು ಒಳಗೊಂಡಿದೆ.


Click it and Unblock the Notifications








