ದೀಪಾವಳಿ ಸಂಭ್ರಮ: iPhone 16 Pro ಎಲ್ಲಿ ಅತ್ಯಂತ ಕನಿಷ್ಠ ಬೆಲೆಗೆ ಸಿಗುತ್ತಿದೆ?
ಆಪಲ್ ಇತ್ತೀಚೆಗೆ iPhone 17 ಸರಣಿಯನ್ನು ಬಿಡುಗಡೆ ಮಾಡಿದ್ದರೂ, iPhone 16 Pro ಮಾದರಿಯು iPhone 17 Proಗೆ ಸಮಾನವಾದ ವೈಶಿಷ್ಟ್ಯಗಳನ್ನು ಕಡಿಮೆ ಬೆಲೆಯಲ್ಲಿ ನೀಡುತ್ತಿದೆ. ಇದರಿಂದ ಗ್ರಾಹಕರು ಸಹ iPhone 16 Pro ಖರೀದಿಗೆ ಒಲವು ತೋರುತ್ತಿರುವುದನ್ನು ನಾವು ನೋಡಬಹುದು. ಇದೀಗ ದೀಪಾವಳಿ ಹಬ್ಬ ಸಮೀಪಿಸುತ್ತಿರುವ ಈ ಶುಭ ಸಮಯದಲ್ಲಿ ಭಾರತೀಯ ರಿಟೇಲರ್‌ಗಳು ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳ ಮೇಲೆ ಆಕರ್ಷಕ ರಿಯಾಯಿತಿಗಳನ್ನು ನೀಡುತ್ತಿದ್ದಾರೆ. ಹಾಗಾಗಿ, ಇಂದಿನ ಲೇಖನದಲ್ಲಿ ಭಾರತದಲ್ಲಿ ಕನಿಷ್ಠ ಬೆಲೆಗೆ iPhone 16 Pro ಎಲ್ಲಿ ಸಿಗುತ್ತದೆ? ಎಂಬುದನ್ನು ನಾವು ನೋಡೋಣ.
iPhone 16 Pro ಏಕೆ ವಿಶೇಷ?
iPhone 17 ಸರಣಿ ಪರಿಚಯಗೊಂಡಿದ್ದರೂ, ಈಗಲೂ ಸಹ iPhone 16 Pro ಫೀಚರ್ಸ್ ಮತ್ತು ವಿನ್ಯಾಸವನ್ನು ಹೊಂದಿದೆ ಎಂದು ಖಡಾಖಂಡಿತವಾಗಿ ಹೇಳಬಹುದು. ಈ ಫೋನ್ ಇದು 6.3-ಇಂಚಿನ ಸೂಪರ್ ರೆಟಿನಾ XDR ಡಿಸ್ಪ್ಲೇ ಮತ್ತು 120Hz ರಿಫ್ರೆಶ್ ದರವನ್ನು ಹೊಂದಿದೆ. ಇದರಿಂದ ಸ್ಕ್ರೋಲಿಂಗ್ ಮತ್ತು ವಿಡಿಯೋ ವೀಕ್ಷಣೆ ಅತ್ಯಂತ ಸುಗಮವಾಗಿರುತ್ತದೆ. ಇದರ ಟೈಟಾನಿಯಂ ಬಾಡಿ ಮತ್ತು ಮ್ಯಾಟ್ ಗ್ಲಾಸ್ ಬ್ಯಾಕ್ಪ್ರೀಮಿಯಂ ಅನುಭವವನ್ನು ನೀಡುವುದಲ್ಲದೆ, ಬಾಳಿಕೆಯನ್ನು ಹೆಚ್ಚಿಸುತ್ತದೆ.
ಈ ಫೋನ್ 48MP ಮುಖ್ಯ ಸೆನ್ಸರ್ ಮತ್ತು 5x ಆಪ್ಟಿಕಲ್ ಜೂಮ್ ಅನ್ನು ಒಳಗೊಂಡಿದ್ದು, ಇದು ಹಿಂದೆ ಕೇವಲ Pro Max ಮಾದರಿಗಳಲ್ಲಿ ಮಾತ್ರ ಲಭ್ಯವಿತ್ತು. ಸುಧಾರಿತ ಕಡಿಮೆ-ಬೆಳಕಿನ ಕಾರ್ಯಕ್ಷಮತೆ ಮತ್ತು ಉತ್ತಮ ಜೂಮ್ ಸಾಮರ್ಥ್ಯಗಳಿಂದಾಗಿ, ಇದು ಫೋಟೋಗ್ರಫಿ ಪ್ರಿಯರಿಗೆ ಉತ್ತಮ ಆಯ್ಕೆಯಾಗಿದೆ. ಈ ಸಾಧನವು ಆಪಲ್‌ನ A18 Pro ಚಿಪ್‌ನಿಂದ ಚಾಲಿತವಾಗಿದ್ದು, ಭಾರೀ ಬಳಕೆಯಲ್ಲಿ ಮತ್ತು ಬಹುಕಾರ್ಯಕದಲ್ಲೂ ವೇಗದ ಕಾರ್ಯಕ್ಷಮತೆ ಮತ್ತು ಉತ್ತಮ ದಕ್ಷತೆಯನ್ನು ಖಚಿತಪಡಿಸುತ್ತದೆ.

ಈಗ ಖರೀದಿಸಬೇಕೆ?
ನೀವು ಪ್ರೀಮಿಯಂ ಐಫೋನ್‌ಗೆ ಅಪ್‌ಗ್ರೇಡ್ ಮಾಡಲು ಯೋಜಿಸುತ್ತಿದ್ದರೆ, ಈಗಲೇ ಖರೀದಿಸಲು ಇದು ಉತ್ತಮ ಸಮಯ ಎಂಬುದು ನನ್ನ ಅಭಿಪ್ರಾಯ. iPhone 16 Pro ಶಕ್ತಿಶಾಲಿ ಕಾರ್ಯಕ್ಷಮತೆ, ಸುಧಾರಿತ ಕ್ಯಾಮೆರಾ ಮತ್ತು ಸೊಗಸಾದ ವಿನ್ಯಾಸವನ್ನು ಹೊಂದಿದೆ. ಈ ದೀಪಾವಳಿ ಕೊಡುಗೆಗಳು ಈ ಮೌಲ್ಯಯುತ ಫೋನ್ ಅನ್ನು ಕಡಿಮೆ ಬೆಲೆಗೆ ಪಡೆಯಲು ಅವಕಾಶ ನೀಡುತ್ತಿವೆ. ದೀಪಾವಳಿಯ ರಿಯಾಯಿತಿಗಳನ್ನು ಆನ್‌ಲೈನ್ ಮತ್ತು ಆಫ್‌ಲೈನ್ ಪ್ಲಾಟ್‌ಫಾರ್ಮ್‌ಗಳು ನೀಡುತ್ತಿದ್ದರೂ, ಸಾಮಾನ್ಯವಾಗಿ ಆನ್‌ಲೈನ್ ವೇದಿಕೆಗಳಲ್ಲಿ ನಮಗೆ ಉತ್ತಮ ಬೆಲೆಗಳು ಲಭ್ಯವಿವೆ. ವಿವಿಧ ವೇದಿಕೆಗಳಲ್ಲಿ iPhone 16 Pro ನ ಬೇರೆ ಬೇರೆ ಸ್ಟೋರೇಜ್ ಮಾದರಿಗಳ ಬೆಲೆಗಳು ಮತ್ತು ಆಫರ್‌ಗಳ ಹೋಲಿಕೆ ಇಲ್ಲಿದೆ.
ಬಿಗ್‌ಬಾಸ್ಕೆಟ್‌ನಲ್ಲಿ iPhone 16 Pro 128GB ಮಾದರಿಯು ಕೇವಲ ₹99,990 ರೂ.ಗೆ ಲಭ್ಯವಿದೆ, ಇದು ಈ ಬೇಸ್ ಮಾದರಿಗಾಗಿ ಅತ್ಯಂತ ಕಡಿಮೆ ಬೆಲೆಯಾಗಿದೆ. ಕ್ರೋಮಾಯಲ್ಲಿ 256GB ಮಾದರಿಯ ಬೆಲೆ ₹1,13,490, ಇದು ಆಫ್‌ಲೈನ್ ಮತ್ತು ಆನ್‌ಲೈನ್ ಎರಡರಿಗೂ ಉತ್ತಮ ಹಾಗೂ ನಂಬಿಕಸ್ಥ ಆಯ್ಕೆಯಾಗಿದೆ. ವಿಜಯ್ ಸೇಲ್ಸ್ ನಲ್ಲಿ ಇದೇ 256GB ಮಾದರಿಯನ್ನು ₹1,14,900 ರೂ.ಗೆ ಖರೀದಿಸಬಹುದು, ಜೊತೆಗೆ ICICI ಕ್ರೆಡಿಟ್ ಕಾರ್ಡ್ (EMI ರಹಿತ) ಮೂಲಕ ಖರೀದಿಸಿದರೆ ₹5,000 ತ್ವರಿತ ರಿಯಾಯಿತಿ ದೊರೆಯುತ್ತದೆ. ಇದು ICICI ಕಾರ್ಡ್ ಬಳಕೆದಾರರಿಗೆ ಉತ್ತಮ ಅವಕಾಶ ಎನ್ನಬಹುದು.
ರಿಲಯನ್ಸ್ ಡಿಜಿಟಲ್ ನಲ್ಲಿ ಈ 256GB ಮಾದರಿಯ ಬೆಲೆ ₹1,19,900, ಬೆಲೆ ಸ್ವಲ್ಪ ಹೆಚ್ಚು ಇದ್ದರೂ ಕೆಲ ಆಫ್‌ಲೈನ್ ಸ್ಟೋರ್‌ಗಳಲ್ಲಿ ಸೀಮಿತ ಅವಧಿಯ ವಿಶೇಷ ಆಫರ್‌ಗಳು ಲಭ್ಯವಿರಬಹುದು. ಆದರೆ, ಎಲ್ಲಕ್ಕಿಂತ ಅತ್ಯಂತ ಆಕರ್ಷಕ ಡೀಲ್ ನಮಗೆ ಫ್ಲಿಪ್‌ಕಾರ್ಟ್ ನಲ್ಲಿ ಸಿಗುತ್ತದೆ. ಇಲ್ಲಿ 256GB ಮಾದರಿಯ ಬೆಲೆ ಕೇವಲ ₹1,04,999 (ಮೂಲ ಬೆಲೆ ₹1,19,900) ಆಗಿದೆ. ಜೊತೆಗೆ ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೇಲೆ ಹೆಚ್ಚುವರಿ ₹4,000 ರಿಯಾಯಿತಿ ಮತ್ತು ₹61,900 ವರೆಗೆ ಎಕ್ಸ್‌ಚೇಂಜ್ ಬೋನಸ್ ಸಹ ಇದೆ.
ಒಟ್ಟಿನಲ್ಲಿ, iPhone 16 Pro 256GB ಮಾದರಿಗಾಗಿ ಫ್ಲಿಪ್‌ಕಾರ್ಟ್ ನೀಡುತ್ತಿರುವ ಆಫರ್ ಅತ್ಯುತ್ತಮವಾದುದು, ಆದರೆ ನಿಮ್ಮ ಬಜೆಟ್ ಸೀಮಿತವಾಗಿದ್ದು 128GB ಸ್ಟೋರೇಜ್ ಸಾಕು ಎಂದಾದರೆ, ನಿಮಗೆ ಬಿಗ್‌ಬಾಸ್ಕೆಟ್‌ನ ₹99,990 ಬೆಲೆ ಅತ್ಯಂತ ಆಕರ್ಷಕ ಆಯ್ಕೆಯಾಗಬಹುದು. ಇವುಗಳಲ್ಲಿ ನಿಮ್ಮ ಆದ್ಯತೆ ಏನು? ಹೆಚ್ಚಿನ ಸ್ಟೋರೇಜ್ ಮತ್ತು ಗರಿಷ್ಠ ರಿಯಾಯಿತಿಯ ಫ್ಲಿಪ್‌ಕಾರ್ಟ್ ಆಫರ್ ಅಥವಾ ಕಡಿಮೆ ಬೆಲೆಯ ಬಿಗ್‌ಬಾಸ್ಕೆಟ್ 128GB ಮಾದರಿಯಾ? ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ. ನನಗಂತೂ ಫ್ಲಿಪ್‌ಕಾರ್ಟ್ ಆಫರ್ ಹೆಚ್ಚು ಇಷ್ಟವಾದ ಆಯ್ಕೆ ಎಂದೆನಿಸಿತು.


Click it and Unblock the Notifications








