Home
ಸುದ್ದಿಜಾಲ

iPhone: ದೊಡ್ಡ ಕ್ಯಾಮೆರಾ ಮಾಡ್ಯೂಲ್‌ ಜೊತೆ ಲಾಂಚ್ ಆಗಲಿದೆ ಐಫೋನ್ 16 Pro !

ತನ್ನ ವಿಭಿನ್ನ ಹಾಗೂ ಕ್ವಾಲಿಟಿ ಸ್ಮಾರ್ಟ್‌ಫೋನ್‌ಗಳ (smartphone) ಮೂಲಕ ತನ್ನದೇ ಆದ ಗ್ರಾಹಕರನ್ನು ಹೊಂದಿರುವ ಆಪಲ್ ಸಂಸ್ಥೆ ಆಗಾಗ ತನ್ನ ಗ್ರಾಹಕರಿಗಾಗಿ ಅನೇಕ ಹೊಸ ಹೊಸ ಡಿಸೈನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಾ ಬಂದಿದೆ, ಇದೀಗ ಟೆಕ್‌ ದೈತ್ಯ ಆಪಲ್‌ (Apple) ಸಂಸ್ಥೆ ತನ್ನ ಸ್ಮಾರ್ಟ್‌ಫೋನ್‌ಗಳಿಗೆ ದೊಡ್ಡ ಗಾತ್ರ ಕ್ಯಾಮೆರಾ ಮಾಡ್ಯೂಲ್‌ಗಳನ್ನು ಅಳವಡಿಸಲು ಸಿದ್ಧವಾಗಿದೆ ಎಂಬ ವರದಿ ಹೊರ ಬಂದಿದೆ. ಇತ್ತೀಚಿಗೆ ಸೋರಿಕೆಯಾದ ಮಾಹಿತಿ ಪ್ರಕಾರ ಹಳೆಯ ಜನರೇಷನ್‌ಗೆ ಹೋಲಿಸಿದರೆ ಐಫೋನ್ 16 Pro (iPhone 16 Pro) ಹಿಂಭಾಗದಲ್ಲಿ ದೊಡ್ಡ ಕ್ಯಾಮೆರಾ ಮಾಡ್ಯೂಲ್ ಅನ್ನು ಹೊಂದಿರಬಹುದು ಎಂದು ತಿಳಿಸಿದೆ.

ಆಪಲ್‌ ಸಂಸ್ಥೆ ಸದ್ಯ ಹೊಸ ಜನರೇಷನ್‌ನ ಯಾವುದೇ ಸ್ಮಾರ್ಟ್‌ಫೋನ್ ಅನ್ನು ಸೆಪ್ಟೆಂಬರ್‌ ವರೆಗೆ ಬಿಡುಗಡೆ ಮಾಡಲು ನಿರ್ಧರಿಸಿಲ್ಲದಿದ್ದರೂ ಈ ದೊಡ್ಡ ಕ್ಯಾಮೆರಾ ಮಾಡ್ಯೂಲ್ ಅಳವಡಿಕೆ ಕುರಿತು ಈಗಾಗಲೆ ವದಂತಿಗಳು ಹೊರ ಬರಲು ಪ್ರಾರಂಭಿಸಿವೆ. ಟಿಪ್‌ಸ್ಟರ್‌ ಈ ಡೊಡ್ಡ ಗಾತ್ರದ ಕ್ಯಾಮೆರಾದ ವಿನ್ಯಾಸ, ಫೀಚರ್ಸ್‌, ಬಣ್ಣದ ಆಯ್ಕೆಗಳು ಸೇರಿ ಅನೇಕ ಅಂಶಗಳ ಸುಳಿವು ನೀಡಿದೆ. ಈ ಫೋನ್ ದೊಡ್ಡ ಕ್ಯಾಮೆರಾ ಐಸ್‌ಲ್ಯಾಂಡ್ ಜೊತೆಗೆ ನೂತನ ಸೆನ್ಸಾರ್ ಗಳ ಬಗ್ಗೆ ಮಾಹಿತಿ ಹಂಚಿಕೊಂಡಿದೆ.

ದೊಡ್ಡ ಕ್ಯಾಮೆರಾ ಮಾಡ್ಯೂಲ್‌ ಜೊತೆ ಲಾಂಚ್ ಆಗಲಿದೆ ಐಫೋನ್ 16 Pro !

ಐಫೋನ್ 16 Pro ನ ( iPhone 16 Pro) ದೊಡ್ಡ ಕ್ಯಾಮೆರಾಗಳು:

ಮೇ 28 ರಂದು ಮಜಿನ್‌ಬು ಎಂದು ಕರೆಯಲ್ಪಡುವ ಟಿಪ್‌ಸ್ಟರ್ ಎಕ್ಸ್ (X) ಮೂಲಕ ಪೋಸ್ಟ್‌ ಒಂದನ್ನು ಮಾಡಿದ್ದು, ಈ ಪೋಸ್ಟ್‌ ಮುಂಬರಲಿರುವ ಐಫೋನ್ 16 Pro ದೊಡ್ಡ ಕ್ಯಾಮೆರಾ ಕಟೌಟ್‌ ಜೊತೆಗೆ ಬಿಡುಗಡೆಯಾಗಬಹುದು ಎಂದು ಹೇಳಲಾಗುತ್ತಿದೆ. ಐಫೋನ್ 16 ಪ್ರೊ ಸ್ಮಾರ್ಟ್‌ಫೋನ್‌ ಕುರಿತಾದ ಸ್ಕ್ರೀನ್‌ಶಾಟ್‌ಗಳನ್ನು ಪೋಸ್ಟ್ ಮಾಡಿದೆ. ಐಫೋನ್ 16 ಪ್ರೊ ಸ್ಮಾರ್ಟ್‌ಫೋನ್ ಕ್ಯಾಮೆರಾ ಮಾಡ್ಯೂಲ್‌ಗಳು ದೊಡ್ಡದಾಗಿದೆ ಎಂದು ಟಿಪ್‌ಸ್ಟರ್ ತನ್ನ ಪೋಸ್ಟ್‌ಗೆ ಶೀರ್ಷಿಕೆ ನೀಡಿದೆ. ಇದರರ್ಥ ಐಫೋನ್ 16 ಪ್ರೊಗೆ ಅದರ ಹಿಂದಿನ ಜನರೇಶನ್‌ಗೆ ಹೋಲಿಸಿದರೆ ದೊಡ್ಡ ಕ್ಯಾಮೆರಾ ಸೆನ್ಸಾರ್‌ ಹೊಂದಿರಲಿದೆ ಎಂಬುದನ್ನು ಸೂಚಿಸುತ್ತದೆ.

ಆಪಲ್ ಸಂಸ್ಥೆ ತನ್ನ ಪ್ರೊ ಮಾದರಿಗಳಿಗೆ ಡಿಸ್‌ಪ್ಲೇ ಗಾತ್ರ ಹೆಚ್ಚಿಸಬಹುದು ಎಂದು ವರದಿಯಾಗಿದೆ. ಐಫೋನ್ 16 ಪ್ರೊ 0.2 ಇಂಚು ಹೆಚ್ಚಳ ಮಾಡಿಕೊಳ್ಳಲು ಸಿದ್ದವಾಗಿದೆ. ಇದರಿಂದಾಗಿ ಡಿಸ್‌ಪ್ಲೇ ಗಾತ್ರ 6.1 ಇಂಚಿನಿಂದ 6.3 ಇಂಚಿನ ವರೆಗೆ ವಿಸ್ತರಿಸುವ ಸಾಧ್ಯತೆ ಇದೆ. ಮತ್ತೊಂದೆಡೆ ಐಫೋನ್ 16 ಪ್ರೊ ಮ್ಯಾಕ್ಸ್ ಬೃಹತ್ ಗಾತ್ರದ 6.9 ಇಂಚಿನ ಸೂಪರ್ ರೆಟಿನಾ ಎಕ್ಸ್‌ಡಿಆರ್ ಡಿಸ್‌ಪ್ಲೇ ಅನ್ನು ಹೊಂದಿರಲಿದೆ ಎಂದು ವರದಿ ತಿಳಿಸಿದೆ. ಈ ಹಿಂದಿನ ವರದಿ ಪ್ರಕಾರ ಐಫೋನ್ 16 ಪ್ರೊ ದೊಡ್ಡ ಸೆನ್ಸಾರ್‌ ಹೊಂದಿರಬಹುದು, ಪ್ರೊ ಮ್ಯಾಕ್ಸ್ ಮಾದರಿಯಂತೆಯೇ 5X ಆಪ್ಟಿಕಲ್ ಜೂಮ್ ಅನ್ನು ಹೊಂದಿರಲಿದೆ ಎಂದು ತಿಳಿಸಿತ್ತು.

ಐಫೋನ್‌ 16 Pro (iPhone 16 Pro) ಬ್ರೈಟ್‌ನೆಸ್‌ ಹೆಚ್ಚಿಸುವ ಸಾಧ್ಯತೆ:

ಮೇ ತಿಂಗಳ ಆರಂಭದಲ್ಲಿ ಐಫೋನ್ 16 ಪ್ರೊ ದೊಡ್ಡ ಡಿಸ್‌ಪ್ಲೇ ಮಾತ್ರವಲ್ಲದೆ ಬ್ರೈಟ್‌ನೆಸ್ ಅನ್ನು ಕೂಡ ಕೂಡ ಹೆಚ್ಚಾಗಿರುವ ಸಾಧ್ಯತೆ ಹೆಚ್ಚಾಗಿರಲಿದೆ ಎಂದು ವರದಿಯಾಗಿದೆ. Weibo ಪೋಸ್ಟ್‌ನಲ್ಲಿ SDR ಸಬ್ಜೆಕ್ಟ್‌ ಪ್ಲೇ ಮಾಡುವಾಗ ಐಫೋನ್ 16 Pro 1,200 nits ವರೆಗಿನ ವಿಶೇಷ ಹೊಳಪನ್ನು ಹೊಂದಿರಲಿದೆ ಎಂದು ಟಿಪ್‌ಸ್ಟರ್ ಇನ್‌ಸ್ಟಂಟ್ ಡಿಜಿಟಲ್ ಹೇಳಿಕೊಂಡಿದೆ. ಇದು ನಿಜವಾಗಿದ್ದರೆ ಐಫೋನ್ 15 Pro ನ 1,000 nits ಮಿತಿಗಿಂತ 20 ಪ್ರತಿಶತದಷ್ಟು ಹೆಚ್ಚಳವಾಗಲಿದೆ ಎಂದು ಮಾಹಿತಿ ನೀಡಿದೆ.

Best Mobiles in India

English summary
A report has come out that Apple is ready to install large size camera modules in its smartphones. According to recent leaks, the iPhone 16 Pro may have a larger camera module on the back compared to the older generation.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+