iPhone 17 Pro Max ಉತ್ಪಾದನಾ ವೆಚ್ಚ ಬಹಿರಂಗ: ಬ್ಯಾಟರಿ ₹370, ಕ್ಯಾಮೆರಾ ₹7,110!..ಆಸಕ್ತಿದಾಯಕ ವರದಿ!
ಪ್ರಸ್ತುತ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಸದ್ಯಕ್ಕೆ ಐಫೋನ್ 17 ಪ್ರೊ ಮ್ಯಾಕ್ಸ್ ನಷ್ಟು ದುಬಾರಿ ಫೋನ್ ಇನ್ನೊಂದಿಲ್ಲ ಎನ್ನಬಹುದು. ಭಾರತದಲ್ಲಿ 2TB ಮಾದರಿಯ ಈ ಫೋನ್ ಬೆಲೆ ಬರೋಬ್ಬರಿ ₹2,29,900! ಈ ಬೆಲೆ ಕೇಳಿದಾಗ, ಸಾಮಾನ್ಯ ಗ್ರಾಹಕರ ಮನಸ್ಸಿನಲ್ಲಿ ಬರುವ ಮೊದಲ ಪ್ರಶ್ನೆ: "ಈ ಫೋನ್ ಚಿನ್ನದಿಂದ ಮಾಡಿದ್ದಾರಾ?" ಎಂಬುದು. ವಾಸ್ತವವಾಗಿ, ಐಫೋನ್‌ಗಳ ಈ ಅಗಾಧ ಬೆಲೆಯ ಹಿಂದೆ ಆಪಲ್‌ನ ಬ್ರ್ಯಾಂಡ್ ಮೌಲ್ಯ, ಗುಣಮಟ್ಟ ಮತ್ತು ವಿಶ್ವಾಸಾರ್ಹತೆಯ ಖ್ಯಾತಿ ಅಡಗಿದೆ. ಐಫೋನ್ ಹೊಂದುವುದು ಒಂದು 'ಪ್ರತಿಷ್ಠೆಯ' ಸಂಕೇತ ಎಂದೇ ಹಲವರು ಭಾವಿಸುತ್ತಾರೆ.
ಆದರೆ ಈ ಎಲ್ಲಾ ಬ್ರ್ಯಾಂಡ್ ಮೌಲ್ಯವನ್ನು ಬದಿಗಿಟ್ಟು ನೋಡಿದರೆ, ಈ ಶಕ್ತಿಶಾಲಿ ಐಫೋನ್ 17 ಪ್ರೊ ಮ್ಯಾಕ್ಸ್ ಫೋನ್ ಅನ್ನು ತಯಾರಿಸಲು ಆಪಲ್‌ಗೆ ನಿಜವಾಗಿಯೂ ಎಷ್ಟು ಖರ್ಚಾಗುತ್ತದೆ? ಎಂಬುದು. ಈ ಕುತೂಹಲಕ್ಕೆ ಉತ್ತರ ನೀಡುವ ಒಂದು ವರದಿಯನ್ನು ಟೆಲಿಕಾಂ ಟಾಕ್ ಪ್ರಕಟಿಸಿದ್ದು, ಇದು ನಿಜಕ್ಕೂ ಆಸಕ್ತಿದಾಯಕ ಅಂಶಗಳನ್ನು ಬಹಿರಂಗಪಡಿಸಿದೆ. ಈ ವರದಿಯ ಪ್ರಕಾರ, ಐಫೋನ್ 17 ಪ್ರೊ ಮ್ಯಾಕ್ಸ್‌ನ ಪ್ರಮುಖ ಭಾಗಗಳ ಅಂದಾಜು ಬೆಲೆ ಹೀಗಿದೆ, ಟೆಲಿಕಾಂ ಟಾಕ್ ವರದಿಯು ಡಾಲರ್‌ನಲ್ಲಿ ಪ್ರಕಟವಾಗಿದೆ. ನಾವು ಭಾರತೀಯ ರೂಪಾಯಿ ಮೌಲ್ಯದದಲ್ಲಿ ಅಂದಾಜಿಸಿ ನೋಡೋಣ.
ಐಫೋನ್ 17 ಪ್ರೊ ಮ್ಯಾಕ್ಸ್ : ತಯಾರಿಕಗೆ ಅಂದಾಜು ಖರ್ಚು ಎಷ್ಟು?
ಬ್ಯಾಟರಿ: $410 (ಅಂದಾಜು ಕೇವಲ ₹370)
256GB ಸಂಗ್ರಹಣೆ: $20.59 (ಅಂದಾಜು ₹1,840)
ಡಿಸ್ಪ್ಲೇ: $80 (ಅಂದಾಜು ₹7,110)
ಮುಖ್ಯ ಫ್ರೇಮ್: $20.79 (ಅಂದಾಜು ₹1,900)
ಕ್ಯಾಮೆರಾ ಮಾಡ್ಯೂಲ್: $80 (ಅಂದಾಜು ₹7,110)
A19 ಪ್ರೊ ಚಿಪ್: $90 (ಅಂದಾಜು ₹8,100)
5G ಮೋಡೆಮ್: $90 (ಅಂದಾಜು ₹8,100)

ಈ ವರದಿಯ ಪ್ರಕಾರ, ಎಲ್ಲ ಬಿಡಿಭಾಗಗಳ ಒಟ್ಟು ಅಂದಾಜು ವೆಚ್ಚವನ್ನು ಸೇರಿಸಿದರೆ, ಒಂದು ಐಫೋನ್ 17 ಪ್ರೊ ಮ್ಯಾಕ್ಸ್ ತಯಾರಿಸಲು ಬೇಕಾಗುವ ಭಾಗಗಳ ಒಟ್ಟು ಬೆಲೆ ಕೇವಲ $408 (ಅಂದಾಜು ₹37,000)! ಆಗಿದೆ. ಆದರೆ, ₹2 ಲಕ್ಷಕ್ಕೂ ಹೆಚ್ಚು ಬೆಲೆಯ ಫೋನಿಗೆ, ಕೇವಲ ₹37,000 ಕಚ್ಚಾವಸ್ತುಗಳ ಬೆಲೆ ಎಂದರೆ ಆಶ್ಚರ್ಯವಾಗುವುದು ಸಹಜ. ಆದರೆ ನೆನಪಿರಲಿ, ಈ ₹37,000 ಕೇವಲ ಬಿಡಿಭಾಗಗಳ ಅಂದಾಜು ಬೆಲೆ. ಇದು ಐಫೋನ್ ತಯಾರಿಸಲು ಆಪಲ್‌ಗೆ ತಗಲುವ ನಿಜವಾದ ವೆಚ್ಚವಲ್ಲ. ಏಕೆಂದರೆ, ಉತ್ಪಾದನಾ ವೆಚ್ಚದಲ್ಲಿ ಈ ಕೆಳಗಿನ ಅಂಶಗಳು ಸೇರಿರುವುದಿಲ್ಲ.
ಸಂಶೋಧನೆ ಮತ್ತು ಅಭಿವೃದ್ಧಿ (R&D): ಅತ್ಯಾಧುನಿಕ ಚಿಪ್‌ಸೆಟ್ ಮತ್ತು ಕ್ಯಾಮೆರಾ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಆಪಲ್ ಮಾಡುವ ಬೃಹತ್ ಹೂಡಿಕೆ.
ಸಾಫ್ಟ್‌ವೇರ್ ಅಭಿವೃದ್ಧಿ: iOS ನಂತಹ ಸುಧಾರಿತ ಆಪರೇಟಿಂಗ್ ಸಿಸ್ಟಮ್ ರಚನೆ ಮತ್ತು ನಿರ್ವಹಣೆ.
ಮಾರ್ಕೆಟಿಂಗ್ ಮತ್ತು ವಿತರಣೆ: ಪ್ರಚಾರ, ಸಾರಿಗೆ, ಮತ್ತು ಅಂಗಡಿಗಳ ವೆಚ್ಚ.
ಲಾಭಾಂಶ: ಬ್ರ್ಯಾಂಡ್‌ನ ಮೌಲ್ಯ ಮತ್ತು ಪ್ರತಿಷ್ಠೆಗೆ ಅನುಗುಣವಾಗಿ ಆಪಲ್ ಗಳಿಸುವ ಲಾಭ.
ತೆರಿಗೆ: ಆಮದು ಮಾಡಬೇಕಾದಾಗ ಆಮದು ತೆರಿಗೆ, ಜಿಎಸ್ಟಿ, ಮತ್ತುಇತರೆ ತೆರಿಗೆ ಖರ್ಚುಗಳು.
ಅಂತಿಮವಾಗಿ, ಐಫೋನ್‌ಗಳಿಗೆ ಜನರು ಹೆಚ್ಚಿನ ಬೆಲೆ ಪಾವತಿಸುವುದು ಕೇವಲ ಅದರ ಬಿಡಿಭಾಗಗಳಿಗಲ್ಲ. ಅದು ಆಪಲ್ ನೀಡುವ ಗುಣಮಟ್ಟದ ಭರವಸೆ, ವಿಶಿಷ್ಟ ಅನುಭವ ಮತ್ತು ಬ್ರ್ಯಾಂಡ್ ಮೇಲಿನ ಅಚಲವಾದ ನಂಬಿಕೆಗಾಗಿ. ₹370 ಬ್ಯಾಟರಿ ಇದ್ದರೂ, ಆ ಐಫೋನ್ ನೀಡುವ ಸ್ಥಿರತೆ ಮತ್ತು ಗೌರವವೇ ಗ್ರಾಹಕರನ್ನು ಈ ದುಬಾರಿ ಬೆಲೆ ತೆರಲು ಪ್ರೇರೇಪಿಸುತ್ತದೆ. ಈ ವರದಿಯ ಬಗ್ಗೆ ನಿಮ್ಮ ಅಭಿಪ್ರಾಯವೇನು? ಐಫೋನ್‌ನ ಬೆಲೆ ನಿಮಗೆ ಸಮಂಜಸ ಎನಿಸುತ್ತದೆಯೇ? ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.


Click it and Unblock the Notifications








