ನವೆಂಬರ್ 2 ರಂದು ಭಾರತಕ್ಕೆ ಐಫೋನ್ 5 ಪಾದಾರ್ಪಣೆ
ಆಪಲ್ ಸಂಸ್ಥೆಯ ಬಹು ನಿರೀಕ್ಷಿತ ಆರನೇ ತಲೆಮಾರಿನ ಸ್ಮಾರ್ಟ್‌ಫೋನ್ ಎಂದೇ ಕರೆಯಲ್ಪಡುವ ಐಪೋನ್ 5 ಸೆಪ್ಟೆಂಬರ್ 21 ಹಾಗೂ 28 ಅವಧಿಯಲ್ಲಿ ವಿಶ್ವದ ವಿವಿಧೆಡೆ ಬಿಡುಗಡೆಯಾಗಿ, ಮೊದಲ ವಾರದಲ್ಲಿಯೇ 5 ದಶಲಕ್ಷ ಯುನಿಟ್ ಮಾರಾಟದೊಂದಿಗೆ ಬಾರೀ ಯಶಸ್ಸನ್ನು ಪಡೆದ ಬಳಿಕ ಮುಂಬರುವ ನವೆಂಬರ್ 2 ರಂದು ಭಾರತೀಯ ಮಾರುಕಟ್ಟೆಗೆ ಕಾಲಿರಿಸಲು ಸಜ್ಜಾಗಿದೆ. ಅಂದಹಾಗೇ ಐಫೋನ್ 5 ಭಾರತೀಯ ಮಾರುಕಟ್ಟೆಗೆ ಕಾಲಿರಿಸುವುದರ ಕುರಿತಾಗಿ ಈಗಾಗಲೇ ಸಾಕಷ್ಟು ವದಂತಿಗಳು ಹಬ್ಬಿದ್ದವು ಆದರೆ ಇತ್ತೀಚಿನ ವರದಿಗಳ ಪ್ರಕಾರ ಐಫೋನ್ 5 ನ 16GB ಮಾದರಿಯು ರೂ. 45,000 ದರದಲ್ಲಿ ಭಾರತೀಯ ಮಾರುಕಟ್ಟೆಗೆ ಕಾಲಿರಿಸಲಿದೆ ಎಂದು ಬಿಜಿಆರ್ ವರದಿ ಮಾಡಿದೆ.
ಅಂದಹಾಗೆ ಈಗಾಗಲೇ ಇನ್ಫೀಬೀಮ್ ಅಕ್ಟೋಬರ್ 26. ರಿಂದ ರೂ.5,000 ದರದಲ್ಲಿ ಐಫೋನ್ 5 ನ ಪ್ರೀ ಆರ್ಡರ್ ಆರಂಭಿಸಿರುವುದು ಈ ವರದಿಗಳಿಗೆ ಪುಷ್ಟಿ ನೀಡಿದಂತಿದ್ದು ನವೆಂಬರ್ 2 ರಂದು ಐಫೋನ್ 5 ಭಾರತಕ್ಕೆ ಪಾದಾರ್ಪಣೆ ಮಾಡುವುದು ಬಹುತೇಕ ಖಚಿತ ಗೊಂಡಂತಿದೆ.
ಅಂದಹಾಗೆ ಭಾರತಕ್ಕೆ ಕಾಲಿರಿಸುತ್ತಿರುವ ಆಪಲ್ ಸಂಸ್ಥೆಯ ಆರನೇ ತಲೆಮಾರಿನ ಸ್ಮಾರ್ಟ್‌ಫೋನ್ ಐಫೋನ್ 5 ನಲ್ಲಿ ಏನೆಲ್ಲಾ ಫೀಚರ್ಸ್‌ಗಳಿವೆ ಎಂಬುದನ್ನು ತಿಳಿದುಕೊಳ್ಳೋಣ.
ವಿಶೇಷತೆ:
- 8-MP ಕ್ಯಾಮೆರಾ ಹಾಗೂ a 5-ಎಲಿಮೆಂಟ್ ಲೆನ್ಸ್ ಸೇರಿದಂತೆ f/2.4 ಅಪೇಚರ್.
- ಕ್ಯಾಮೆರಾ ಲೆನ್ಸ್‌ಗಳಿಗೆ ಸಪೈರ್ ಕವರ್‌ನ ರಕ್ಷಣೆ.
- ಆಪರೇಟಿಂಗ್ ಸಿಸ್ಟಂ: iOS (6)
- 4-ಇಂಚಿನ ರೆಟಿನಾ ದರ್ಶಕ ಹಾಗೂ 16:9 ಆಸ್ಪೆಕ್ಟ್ಸ್‌ನ ಅಂತರ.
- 1136 ಬೈ 640 ಪಿಕ್ಸೆಲ್ ರೆಸೆಲ್ಯೂಷನ್.
- 7.6mm ಸ್ಲಿಮೆಸ್ಟ್ ಐಫೊನ್.
- 4G ಕನೆಕ್ಟಿವಿಟಿ.
- ನೂತನ A6 ಪ್ರೊಸೆಸರ್.
- ದ್ವಿಗುಣ ಗ್ರಾಫಿಕ್ಸ್ ಸಾಮರ್ತ್ಯ.
- 1024 MB RAM.
- 16 GB ಬಿಲ್ಟ್‌ಇನ್ ಸ್ಟೋರೇಜ್.
- 3G ಹಾಗೂ Wi-Fi.
- Li-Po 1440 mAh ಸ್ಟ್ಯಾಂಡರ್ಡ್ ಬ್ಯಾಟರಿ.


Click it and Unblock the Notifications
