ಇದೇ ಶುಕ್ರವಾರ ಆಪಲ್ ಐಫೋನ್ 5 ಭಾರತಕ್ಕೆ ಬರಲಿದೆ
ಆಪಲ್ ಸಂಸ್ಥೆಯು ತನ್ನಯ ನೂತನ ಆರನೇ ತಲೆಮಾರಿನ ಸ್ಮಾರ್ಟ್‌ಫೋನ್ ಆದಂತಹ ಐಫೋನ್ 5, ನವೆಂಬರ್ 2 ರಂದು ಭಾರತೀಯ ಮಾರುಕಟ್ಟೆಗೆ ಅಧಿಕೃತವಾಗಿ ಬಿಡುಗಡೆ ಮಾಡಲಿದೆ. ಆದರೆ ಈಗಾಗಲೇ ಏರ್‌ಟೆಲ್ ಸೇರಿದಂತೆ ಹಲವು ಆನ್‌ಲೈನ್ ರೀಟೇಲ್ ಮಳಿಗೆಗಳಲ್ಲಿ 16GB ಮಾದರಿಯ ಸ್ಮಾರ್ಟ್‌ಫೋನ್ ರೂ. 45,500 ದರದಲ್ಲಿ ಪ್ರಿ ಆರ್ಡರ್‌ನಲ್ಲಿ ಲಭ್ಯವಿದೆ.
ಆಪಲ್ ಐಫೋನ್ 5 ಭಾರತಕ್ಕೆ ಬರುವಿಕೆಯನ್ನು ಉತ್ಸುಕರಾಗಿ ಕಾದುಕುಳಿತಿರುವ ಆಪಲ್ ಅಭಿಮಾನಿಗಳಿಗೆ ಹಾಗೂ ತಾಂತ್ರಿಕ ಆಸಕ್ತರುಗಳಿಗಾಗಿ ಇದೇ ಶುಕ್ರವಾರ ನಡೆಯುವ ನೂತನ ಸ್ಮಾರ್ಟ್‌ಫೋನ್‌ನ ಉದ್ಘಾಟನ ಸಮಾರಂಭದಲ್ಲಿ ಪಾಲ್ಗೊಳುವ ಅವಕಾಷ ಕೂಡ ಸಂಸ್ಥೆಮಾಡಿದ್ದು ಡೆಪ್ರದರ್ಶನ ನೋಡುವುದರ ಜೊತೆಗೆ ಸಂಜೆ 7 PM ರಿಂದ 11 PM ಗಂಟೆಯ ಸಮಯದಂದು ಖರೀದಿ ಮಾಡುವುದಕ್ಕೂ ಕೂಡ ಅವಕಾಶ ಕಲ್ಪಿಸಲಾಗಿದೆ.
ಅಂದಾಹಗೆ ಭಾರತದಲ್ಲಿನ ನಾಲ್ಕು ಪ್ರಮುಖ ನಗರಗಲ್ಲಿ ಏಕಕಾಲಕ್ಕೆ ಐಫೋನ್ 5 ಸ್ಮಾರ್ಟ್‌ಫೋನ್‌ನ ಸಾರ್ವಜನಿಕ ಬಿಡುಗಡೆಗಾಗಿ ಸಂಸ್ಥೆಯು ಯೋಜನೆ ರೂಪಿಸಿದ್ದು, ಉದ್ಘಾಟನೆ ನಡೆಯಲಿರುವ ನಾಲ್ಕು ಭಾರತದ ನಾಲ್ಕು ಪ್ರಮುಖ ನಗರಗಳು ಈ ಕೆಳಗಿನಂತಿವೆ.
ನವ ದೆಹಲಿ – ಡಿಎಲ್‌ಎಫ್ ಪ್ಲಾಜಾ, ಸಾಕೆತ್ ಜಿಲ್ಲಾ ಕೇಂದ್ರ, ಪುಷ್ಪ ವಿಹಾರ.
ಗುರ್ಗಾಂವ್ – ಗಲ್ಲೇರಿಯಾ ಡಿಎಲ್‌ಎಫ್ ಫೇಸ್ 2.
ಮುಂಬೈ – ಇನೊರ್‌ಬಿಟ್ ಮಾಲ್ ಹಾಗೂ ಫೂನಿಕ್ಸ್.
ಬೆಂಗಳೂರು – ಯುಬಿ ಸಿಟಿ, ವಿಟ್ಟಲ್ ಮಲ್ಯ ರಸ್ತೆ.
ಅಂದಹಾಗೆ ಭಾರತೀಯ ಮಾರುಕಟ್ಟೆಗೆ ಪಾದಾರ್ಪಣೆ ಮಾಡು ಸಿದ್ಧವಾಗಿರುವ ನೂತನ ಐಫೋನ್ 5 ನಲ್ಲಿ ಏನೆಲ್ಲಾ ವಿಶೇಷತೆಗಳಿವೆ ಎಂದು ಮತ್ತೊಮ್ಮೆ ತಿಳಿದುಕೊಳ್ಳೋಣ.
ವಿಶೇಷತೆ:
- 8-MP ಕ್ಯಾಮೆರಾ ಹಾಗೂ a 5-ಎಲಿಮೆಂಟ್ ಲೆನ್ಸ್ ಸೇರಿದಂತೆ f/2.4 ಅಪೇಚರ್.
- ಕ್ಯಾಮೆರಾ ಲೆನ್ಸ್‌ಗಳಿಗೆ ಸಪೈರ್ ಕವರ್‌ನ ರಕ್ಷಣೆ.
- ಆಪರೇಟಿಂಗ್ ಸಿಸ್ಟಂ: iOS (6)
- 4-ಇಂಚಿನ ರೆಟಿನಾ ದರ್ಶಕ ಹಾಗೂ 16:9 ಆಸ್ಪೆಕ್ಟ್ಸ್‌ನ ಅಂತರ.
- 1136 ಬೈ 640 ಪಿಕ್ಸೆಲ್ ರೆಸೆಲ್ಯೂಷನ್.
- 7.6mm ಸ್ಲಿಮೆಸ್ಟ್ ಐಫೊನ್.
- 4G ಕನೆಕ್ಟಿವಿಟಿ.
- ನೂತನ A6 ಪ್ರೊಸೆಸರ್.
- ದ್ವಿಗುಣ ಗ್ರಾಫಿಕ್ಸ್ ಸಾಮರ್ತ್ಯ.
- 1024 MB RAM.
- 16 GB ಬಿಲ್ಟ್‌ಇನ್ ಸ್ಟೋರೇಜ್.
- 3G ಹಾಗೂ Wi-Fi.
- Li-Po 1440 mAh ಸ್ಟ್ಯಾಂಡರ್ಡ್ ಬ್ಯಾಟರಿ.


Click it and Unblock the Notifications
