ಭಾರತದಲ್ಲಿ ಅ.19 ರಿಂದ ಐಫೋನ್‌ 5 ಪ್ರೀಆರ್ಡರ್‌ನಲ್ಲಿ ಲಭ್ಯ!

By Vijeth Kumar Dn
|

ಭಾರತದಲ್ಲಿ ಅ.19 ರಿಂದ ಐಫೋನ್‌ 5 ಪ್ರೀಆರ್ಡರ್‌ನಲ್ಲಿ ಲಭ್ಯ!

ಆಪಲ್‌ ಸಂಸ್ಥೆಯು ತನ್ನಯ ನೂತನ ಆರನೇ ತಲೆ ಮಾರಿನ ಸ್ಮಾರ್ಟ್‌ಫೋನ್‌ ಎಂದೇ ಕರೆಸಿಕೊಂಡಿರುವ ಐಫೋನ್‌ 5 ಯನ್ನು ಸೆಪ್ಟೆಂಬರ್‌ ತಿಂಗಳಿನಲ್ಲಿಯೇ ಬಿಡುಗಡೆ ಮಾಡಿದೆ ಯಾದರೂ ಕೇವಲ ಬೆರಳೆಣಿಕೆಯ ರಾಷ್ಟ್ರಗಳು ಮಾತ್ರವಷ್ಟೇ ನೂತನ ಸ್ಮಾರ್ಟ್‌ಫೋನ್‌ ಪಡೆದುಕೊಂಡಿವೆ. ಅಂದಹಾಗೆ ಐಫೋನ್‌ 5 ಭಾರತದಲ್ಲಿ ಅಕ್ಟೋಬರ್‌ 26 ರಂದು ಅಧಿಕೃತವಾಗಿ ಬಿಡುಗಡೆ ಯಾಗಲಿದೆ ಎಂದು ಈ ಗಾಗಲೇ ವದಂತಿಗಳು ಹಬ್ಬಿವೆ, ಆದರೆ ಬಲ್ಲ ಮೂಲಗಳ ಪ್ರಕಾರ ಆಪಲ್‌ ಸಂಸ್ಥೆಯು ಅಕ್ಟೋಬರ್‌ 19 ರಿಂದ ತನ್ನಯ ಐಫೋನ್‌ 5 ಸ್ಮಾರ್ಟ್‌ಫೋನ್‌ನ ಫ್ರೀ ಆರ್ಡರ್‌ ಆರಂಭಿಸಲಿದೆ ಎಂದು ತಿಳಿಸಿವೆ.

ಆಪಲ್‌ನ ಅಧಿಕೃತ ರಿಸೆಲ್ಲರ್‌ಗಳಲ್ಲಿ ಪ್ರೀ ಆರ್ಡರ್‌ ತೆಗೆದುಕೊಳ್ಳ ಲಾಗುತ್ತದೆ. ಹಾಗೂ ನೂತನ ಐಫೋನ್ 5 ನ ದರವು ಸಂಸ್ಥೆಯು ಈ ಹಿಂದೆ ಬಿಡುಗಡೆ ಮಾಡಿದ್ದ ಐಫೋನ್‌ 4S ನ ದರದಷ್ಟೇ ಇರಲಿದೆ. 16GB ಮಾದರಿಯ ಐಫೋನ್‌ 5 ರೂ.45,000 ದರದಲ್ಲಿ ಹಾಗೂ 32GB ಮಾದರಿಯು ರೂ.50,000 ದರದಲ್ಲಿ ಲಭ್ಯವಾಗಲಿದ್ದು 64GB ಮಾದರಿಯ ದರದ ಕುರಿತಾಗಿ ಯಾವುದೇ ಮಾಹಿತಿ ಲಭ್ಯವಿಲ್ಲ. ಈ ಗಾಗಲೇ ಗ್ರೇ ಮಾರುಕಟ್ಟೆ ಮೂಲಕ ಈಗಾಗಲೇ ಐಫೋನ್‌ 5 ಹಲವು ಭಾರತೀಯರ ಕೈ ಸೇರಿದೆ.

ಅಂದಹಾಗೆ ಆರನೇ ತಲೆಮಾರಿನ ಸ್ಮಾರ್ಟ್‌ಫೋನ್‌ ಆದಂತಹ ಐಫೋನ್‌ 5 ನಲ್ಲಿ ಏನೆಲ್ಲಾ ಫೀಚರ್ಸ್‌ಗಳಿವೆ ಎಂಬುದನ್ನು ತಿಳಿದುಕೊಳ್ಳೋಣ.

ಐಫೋನ್‌ 5 :

ವಿಶೇಷತೆ

  • 8-MP ಕ್ಯಾಮೆರಾ ಹಾಗೂ a 5-ಎಲಿಮೆಂಟ್‌ ಲೆನ್ಸ್‌ ಸೇರಿದಂತೆ f/2.4 ಅಪೇಚರ್‌.

  • ಕ್ಯಾಮೆರಾ ಲೆನ್ಸ್‌ಗಳಿಗೆ ಸಪೈರ್‌ ಕವರ್‌ನ ರಕ್ಷಣೆ.

  • ಆಪರೇಟಿಂಗ್‌ ಸಿಸ್ಟಂ: iOS (6)

  • 4-ಇಂಚಿನ ರೆಟಿನಾ ದರ್ಶಕ ಹಾಗೂ 16:9 ಆಸ್ಪೆಕ್ಟ್ಸ್‌ನ ಅಂತರ.

  • 1136 ಬೈ 640 ಪಿಕ್ಸೆಲ್‌ ರೆಸೆಲ್ಯೂಷನ್‌.

  • 7.6mm ಸ್ಲಿಮೆಸ್ಟ್‌ ಐಫೊನ್‌.

  • 4G ಕನೆಕ್ಟಿವಿಟಿ.

  • ನೂತನ A6 ಪ್ರೊಸೆಸರ್.

  • ದ್ವಿಗುಣ ಗ್ರಾಫಿಕ್ಸ್‌ ಸಾಮರ್ತ್ಯ.

  • 1024 MB RAM.

  • 16 GB ಬಿಲ್ಟ್‌ಇನ್‌ ಸ್ಟೋರೇಜ್‌.

  • 3G ಹಾಗೂ Wi-Fi.

  • Li-Po 1440 mAh ಸ್ಟ್ಯಾಂಡರ್ಡ್‌ ಬ್ಯಾಟರಿ.
Read In English...

ವಿಶ್ವದ ಮೊದಲ ಗೊಲ್ಡ್‌ ಪ್ಲೇಟೆಡ್‌ ಐಫೋನ್‌ 5 ಬಂದಿದೆ

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X