Home
ಸುದ್ದಿಜಾಲ

ಶೀಘ್ರದಲ್ಲೇ ಬರಲಿದೆ ಆಪಲ್‌ನ ಐಫೋನ್‌ 5ಎಸ್‌!

By Vijeth Kumar Dn

ಶೀಘ್ರದಲ್ಲೇ ಬರಲಿದೆ ಆಪಲ್‌ನ ಐಫೋನ್‌ 5ಎಸ್‌!

ಇತ್ತೀಚೆಗಷ್ಟೇ ಬಿಡುಗಡೆಯಾದಂತಹ ಆರನೇ ತಲೆಮಾರಿನ ಸ್ಮಾರ್ಟ್‌ಫೋನ್‌ ಆದಂತಹ ಐಫೋನ್‌ 5 ಖರೀದಿಸುವ ಮೂಲಕ ಸಂತೃಪ್ತರಾದ ಐಫೋನ್‌ ಅಭಿಮಾನಿಗಳಿಗೆ ಇದೊಂದು ಅಚ್ಚರಿಯ ಸುದ್ದಿಯಾಗಿದೆ ಅದೇನೆಂದರೆ ಆಪಲ್‌ ಸಂಸ್ಥೆಯು ಬಹುಬೇಗನೆ ಐಫೋನ್‌ 5ಎಸ್‌ ಸ್ಮಾರ್ಟ್‌ಫೋನ್‌ ಹೊರತರುತ್ತಿರುವುದಾಗಿ ವದಂತಿಗಳು ಹಬ್ಬಿದೆ.

ಚೀನಾದ ಕಮರ್ಷಿಯಲ್‌ ಟೈಮ್ಸ್‌ ನಲ್ಲಿನ ವರದಿಯನ್ನು ಭಾಷಾಂತರಿಸಿರುವ ಥೈವಾನ್‌ ಮೂಲದ ಸುದ್ದಿ ಸಂಸ್ಥೆಯಾದ ಡಿಗ್‌ಟೈಮ್ಸ್‌ ನೀಡಿರುವ ವರದಿ ಪ್ರಕಾರ ಆಪಲ್‌ ಸಂಸ್ಥೆಯು ತನ್ನಯ ನೂತನ ಮಾದರಿಯ ಐಫೋನ್‌ 5 ನ ಪರಿಷ್ಕೃತ ಮಾದರಿಯಾದ ಐಫೋನ್‌ 5ಎಸ್‌ ಸ್ಮಾರ್ಟ್‌ಫೋನ್‌ ಪರೀಕ್ಷಾರ್ಥಕ ಉತ್ಪಾದನೆಯನ್ನು ಡಿಸೆಂಬರ್‌ನಿಂದ ಆರಂಭಿಸಲಿದೆ ಹಾಗೂ ಇದಾದ ಮೂರು ತಿಂಗಳ ಬಳಿಕ 2013 ರಲ್ಲಿ ನೂತನ ಐಫೋನ್‌ 5ಎಸ್‌ ಸ್ಮಾರ್ಟ್‌ಫೋನ್‌ ಮಾರುಕಟ್ಟೆ ಪ್ರವೇಶಿಸಲಿದೆ ಎಂದು ವರದಿ ತಿಳಿಸಿದೆ.

ಮುಂಬರುವ ಐಫೋನ್‌ 5ಎಸ್‌ ಸ್ಮಾರ್ಟ್‌ಫೋನ್‌ ಐಫೋನ್‌ 5 ನ ಪರಿಷ್ಕೃತ ಮಾದರಿ ಎಂಬುದರಲ್ಲಿ ಯಾವುದೇ ಸಂಶಯ ಇಲ್ಲವಾಗಿದೆ. ಐಫೋನ್‌ 5 ನ ಫೀಚರ್ಸ್‌, ಸಾಮರ್ತ್ಯ, ಗಾತ್ರ ಇವೆಲ್ಲವುದಕ್ಕಿಂತಲೂ ಮುಂಬರುವ ಸ್ಮಾರ್ಟ್‌ಫೋನ್‌ನಲ್ಲಿ ಪರಿಷ್ಕರಿಸಲು ಆಪಲ್‌ ಮುಂದಾಗಿರುವುದಾಗಿ ವರದಿಯಲ್ಲಿ ಹೇಳಲಾಗಿದೆ.

ಇದಲ್ಲದೆ ವರದಿಗಳ ಪ್ರಕಾರ ಆಪಲ್‌ ಆರಂಭಿಕ 50,000 ರಿಂದ 100,000 ಸ್ಮಾರ್ಟ್‌ಫೋನ್‌ಗಳನ್ನು ಉತ್ಪಾದಿಸುವ ಯೋಜನೆ ರೂಪಿಸಿದೆ ಎಂದು ತಿಳಿಸಿವೆ, ಆದರೆ ವದಂತಿಗಳ ಕುರಿತಾಗಿ ಪ್ರತಿಕ್ರಿಯೆ ನೀಡಲು ಆಪಲ್‌ ಸಂಸ್ಥೆಯು ಈ ವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದಲ್ಲದೆ ಬಹು ನಿರೀಕ್ಷಿತ ಐಟಿವಿ ಎಂದೆ ಕರೆಸಿಕೊಂಡಿರುವ ಆಪಲ್‌ ಟೆಲಿವಿಷನ್‌ ಕೂಡಾ ಐಫೋನ್‌ 5ಎಸ್‌ ಬಿಡುಗಡೆ ವೇಳೆಗೆ ಮಾರುಕಟ್ಟೆಗೆ ಬರುವ ಸಾಧ್ಯತೆಗಳಿವೆ.

ಮತ್ತಷ್ಟು ಐಫೋನ್‌ ಮಾಹಿತಿಗಾಗಿ ಇಲ್ಲಿ ಕ್ಲಿಕ್‌ಮಾಡಿ.

Read In English...

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+