ಐಫೋನ್ ಗೆ ಬೆಂಕಿ ತಗುಲಿ ಪ್ರಾಣಾಪಾಯದಿಂದ ಪಾರಾದ ಹುಡುಗಿ

By Gizbot Bureau
|

ಕ್ಯಾಲಿಫೋರ್ನಿಯಾದಲ್ಲಿ 11 ವರ್ಷದ ಹುಡುಗಿಯೊಬ್ಬಳ ಮಾಲೀಕತ್ವದಲ್ಲಿದ್ದ ಆಪಲ್ ಐಫೋನ್ 6 ಗೆ ಬೆಂಕಿ ತಗುಲಿರುವ ಘಟನೆ ನಡೆದಿದೆ. ಆಕೆಯ ಹೊದಿಕೆಯಲ್ಲಿ ಇದರಿಂದ ರಂಧ್ರಗಳಾಗಿದ್ದು ಆಕೆ ಕೂಡಲೇ ಡಿವೈಸ್ ನ್ನು ಎಸೆದಿದ್ದರಿಂದಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂದು ಮಾಧ್ಯಮಗಳು ವರದಿ ಮಾಡಿದೆ.

ಪಾರಾದ ಹುಡುಗಿ ಹೇಳಿದ್ದೇನು?

ಪಾರಾದ ಹುಡುಗಿ ಹೇಳಿದ್ದೇನು?

"ನಾನು ಕೆಳಗೆ ಕೂತಿದ್ದೆ ಮತ್ತು ನನ್ನ ಕೈಯಲ್ಲಿ ಮೊಬೈಲ್ ಫೋನ್ ಇತ್ತು ಮತ್ತು ನಾನು ಫೋನಿನಲ್ಲಿ ಬೆಂಕಿಯ ಕಿಡಿಗಳನ್ನು ಗಮನಿಸಿದೆ ಮತ್ತು ನೋಡಿದ ಕೂಡಲೇ ಫೋನ್ ನ್ನು ನನ್ನ ಹೊದಿಕೆಯ ಮೇಲೆ ಎಸೆದುಬಿಟ್ಟೆ. ಕೂಡಲೇ ಹಾಸಿಗೆಯಿಂದ ಎದ್ದೆ ಮತ್ತು ಫೋನ್ ನನ್ನ ಹೊದಿಕೆಯನ್ನು ಸುಟ್ಟು ಹಾಕಿದೆ ಮತ್ತು ಹೊದಿಕೆಯಲ್ಲಿ ರಂಧ್ರಗಳಾಗಿವೆ" ಎಂದು ಹುಡುಗಿ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾಳೆ.

ಕಂಪೆನಿ ಪ್ರತಿಕ್ರಿಯೆ:

ಕಂಪೆನಿ ಪ್ರತಿಕ್ರಿಯೆ:

ಹುಡುಗಿಯ ತಾಯಿಯಾಗಿರುವ ಮರಿಯಾ ಅದಾಟಾ ಕೂಡಲೇ ಆಪಲ್ ಸಂಸ್ಥೆಗೆ ಕರೆ ಮಾಡಿದ್ದಾರೆ ಮತ್ತು ಬೆಂಬಲ ಯಾಚಿಸಿದ್ದಾರೆ ಮತ್ತು ಅವರು ಫೋಟೋಗಳನ್ನು ಕಳಿಸಲು ಹೇಳಿದ್ದು ಫೋನ್ ನ್ನು ರೀಟೈಲರ್ ಗೆ ಕಳುಹಿಸಿಕೊಡುವಂತೆ ತಿಳಿಸಿದ್ದಾರೆ.

ಹುಡುಗಿಯ ತಾಯಿ ಹೇಳಿಕೆ:

ಹುಡುಗಿಯ ತಾಯಿ ಹೇಳಿಕೆ:

ನನ್ನ ಮಗುವಿಗೆ ಏನೂ ಆಗಬಹುದಿತ್ತು ಆದರೆ ಅದೃಷ್ಟವಶಾತ್ ಪಾರಾಗಿದ್ದಾಳೆ. ಆಕೆಗೆ ಗಾಯಗಳಾಗುವ ಸಾಧ್ಯತೆ ಇತ್ತು. ಆದರೆ ಹಾಗೇನೂ ಆಗಿಲ್ಲ. ನಾನು ದೇವರಿಗೆ ಧನ್ಯವಾದ ಹೇಳುತ್ತೇನೆ ಎನ್ನುತ್ತಾರೆ ಹುಡುಗಿಯ ತಾಯಿ.

ಅನಧಿಕೃತ ಚಾರ್ಜರ್ ಬಳಕೆ:

ಅನಧಿಕೃತ ಚಾರ್ಜರ್ ಬಳಕೆ:

ಐಫೋನ್ ತಯಾರಕರು ತಿಳಿಸುವಂತೆ ಐಫೋನ್ ನಲ್ಲಿ ಈ ರೀತಿ ಬೆಂಕಿ ಕಾಣಿಸಿಕೊಳ್ಳುವುದಕ್ಕೆ ಹಲವು ಕಾರಣಗಳಿವೆ. ಅಧಿಕೃತವಲ್ಲದ ಅಥವಾ ಅನಧಿಕೃತವಾಗಿರುವ ಚಾರ್ಜರ್ ಅಥವಾ ಚಾರ್ಜಿಂಗ್ ಕೇಬಲ್ ಗಳ ಬಳಕೆಯಿಂದ ಕೂಡ ಈ ರೀತಿ ಆಗುವ ಸಾಧ್ಯತೆ ಇದೆ ಎಂದು ಅವರು ಹೇಳುತ್ತಾರೆ.

ಈ ಹಿಂದಿನ ಘಟನೆಗಳು:

ಈ ಹಿಂದಿನ ಘಟನೆಗಳು:

ಹಾಗಂತ ಐಫೋನ್ ನಲ್ಲಿ ಬೆಂಕಿ ಕಾಣಿಸಿಕೊಂಡಿರುವುದು ಇದೇ ಮೊದಲೇನಲ್ಲ. ಈಗಾಗಲೇ ಇಂತಹ ಹಲವು ಘಟನೆಗಳು ಸಂಭವಿಸಿದೆ. ಎರಡು ವರ್ಷಗಳ ಹಿಂದೆ ಐಫೋನ್ 7 ಪ್ಲಸ್ ನಲ್ಲಿ ಬೆಂಕಿ ಕಾಣಿಸಿಕೊಂಡಿರುವ ವೀಡಿಯೋ ವೈರಲ್ ಆಗಿತ್ತು. ಕಳೆದ ಡಿಸೆಂಬರ್ ನಲ್ಲಿ ಮೂರು ವಾರ ಹಳೆಯದಾದ ಐಫೋನ್ ಎಕ್ಸ್ಎಸ್ ಮ್ಯಾಕ್ಸ್ ಸ್ಮಾರ್ಟ್ ಫೋನ್ ನಲ್ಲಿ ಬೆಂಕಿ ಕಾಣಿಸಿತ್ತು. ಅದೂ ಕೂಡ ಯುನೈಡೆಟ್ ಸ್ಟೇಟ್ಸ್ ನ ಓಹಿಯೋದ ವ್ಯಕ್ತಿಯೊಬ್ಬರು ತಮ್ಮ ಜೇಬಿನಲ್ಲಿ ಫೋನ್ ಇಟ್ಟುಕೊಂಡಿದ್ದಾಗ ಈ ಘಟನೆ ನಡೆದಿತ್ತು. ಆ ವ್ಯಕ್ತಿಯು ಆಪಲ್ ಸಂಸ್ಥೆಗೆ ಕರೆ ಮಾಡಿದ್ದರು ಮತ್ತು ರಿಪ್ಲೇಸ್ಮೆಂಟ್ ಆಯ್ಕೆಯ ಬಗ್ಗೆ ಕಂಪೆನಿಯ ಪ್ರತಿಕ್ರಿಯೆಯ ಬಗ್ಗೆ ಅವರು ಬೇಸರ ವ್ಯಕ್ತಪಡಿಸಿದ್ದರು.

ಒಟ್ಟಾರೆ ಮೊಬೈಲ್ ಗೆ ಬೆಂಕಿ ತಗುಲುವ ಘಟನೆ ಪದೇ ಪದೇ ಮರುಕಳಿಸುತ್ತಲೇ ಇದೆ. ಯಾವುದಕ್ಕೂ ನೀವು ಹುಷಾರಾಗಿರಿ!

Best Mobiles in India

Read more about:
English summary
iPhone 6 Catches Fire In The US Buring A Hole In 11 Year-Old Girl's Blanket

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X