ಆಂಡ್ರಾಯ್ಡ್‌ಗಿಂತ ಆಪಲ್ ಫೋನ್ ಅತ್ಯುತ್ತಮ ಹೇಗೆ?

By Shwetha
|

ಆಂಡ್ರಾಯ್ಡ್ ಫೋನ್ ಅನ್ನು ಬಳಸುವ ಬಳಕೆದಾರರು ಕೆಲವೊಂದು ಕಾರಣಗಳಿಗೆ ಆಪಲ್ ಅನ್ನು ಮೆಚ್ಚುತ್ತಾರೆ ಎಂಬ ಅಂಶವನ್ನು ನೀವು ಗಮನಿಸಿದ್ದೀರಾ? ಕೆಲವೊಮ್ಮೆ ಆಂಡ್ರಾಯ್ಡ್ ಬಳಕೆದಾರರಿಗೆ ಇಷ್ಟವಾದಲ್ಲಿ ಇನ್ನು ಕೆಲವೊಮ್ಮೆ ಆಪಲ್ ಬಳಕೆದಾರರ ಮನವನ್ನು ಹಿಡಿದಿಡುತ್ತದೆ.

ಹಾಗಿದ್ದರೆ ಇಂದಿನ ಲೇಖನದಲ್ಲಿ ಆಪಲ್ ಮತ್ತು ಆಂಡ್ರಾಯ್ಡ್ ಫೋನ್‌ಗಳು ಏಕೆ ಅತಿವಿಶಿಷ್ಟವಾಗಿದೆ ಎಂಬುದನ್ನು ತಿಳಿದುಕೊಳ್ಳೋಣ. ಕೆಳಗೆ ನಾವು ನೀಡಿರುವ ಕಾರಣಗಳು ನಿಜಕ್ಕೂ ಅತಿವಿಶಿಷ್ಟವಾಗಿದ್ದು ಆಪಲ್ ಮತ್ತು ಆಂಡ್ರಾಯ್ಡ್ ಫೋನ್ ಬಳಕೆಗೆ ಅತಿ ವಿಶಿಷ್ಟ ಏಕಿದೆ ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ.

#1

#1

ಆಂಡ್ರಾಯ್ಡ್ ಫೋನ್‌ಗಳು 5 ಇಂಚುಗಳ ದೊಡ್ಡ ಪರದೆಯೊಂದಿಗೆ ಬಂದಿದ್ದು ಇದು 6 ಇಂಚುಗಳಿಗೂ ವಿಸ್ತರಿಸಿದೆ. ನಿಮಗೆ ದೊಡ್ಡ ಪರದೆಯುಳ್ಳ ಫೋನ್ ಬೇಕೆಂದಿದ್ದರೆ ಆಂಡ್ರಾಯ್ಡ್ ಅನ್ನೇ ನೀವು ಆರಿಸಬೇಕಾಗುತ್ತದೆ.

ಇದೀಗ ಐಫೋನ್ 6, 4.7 ಇಂಚುಗಳ ಡಿಸ್‌ಪ್ಲೇಯೊಂದಿಗೆ ಬಂದಿದ್ದು ಐಫೋನ್ 6 ಪ್ಲಸ್ 5.5 ಇಂಚುಗಳ ಡಿಸ್‌ಪ್ಲೇಯೊಂದಿಗೆ ಬಂದಿದೆ. ಮಾರುಕಟ್ಟೆಯಲ್ಲಿ ಈ ಎರಡೂ ಫೋನ್‌ಗಳು ದೊಡ್ಡ ಹವಾವನ್ನೇ ಉಂಟುಮಾಡಿವೆ. ಐಫೋನ್ 6 ಮತ್ತು 6 ಪ್ಲಸ್‌ನೊಂದಿಗೆ ಆಂಡ್ರಾಯ್ಡ್ ಬಳಕೆದಾರರ ಮನವನ್ನು ಗೆಲ್ಲಹೊರಟಂತಿದೆ ಆಪಲ್.

#2

#2

ಆಪಲ್‌ನ ಐಓಎಸ್ ಆಪರೇಟಿಂಗ್ ಸಿಸ್ಟಮ್ ಸರಳ ಮತ್ತು ಅತ್ಯುತ್ತಮ ಬಳಕೆದಾರ ಅನುಭವವನ್ನು ಒದಗಿಸುವಲ್ಲಿ ಅತ್ಯುತ್ತಮವಾಗಿದೆ, ಇದು ಕಸ್ಟಮೈಸೇಶನ್‌ನತ್ತ ಹೆಚ್ಚು ದೃಷ್ಟಿಯನ್ನು ಹರಿಸುವಂತಿದ್ದು ಅಪ್ಲಿಕೇಶನ್‌ಗಳು ಮತ್ತು ಇತರ ವೈಶಿಷ್ಟ್ಯತೆಗಳ ಅಭಿವೃದ್ಧಿಗೆ ಪೂರಕವಾಗಿದೆ.

#3

#3

ಆಪಲ್ ತನ್ನ ಐಓಎಸ್‌ನಲ್ಲಿ ನಡೆಸುವ ಎಲ್ಲಾ ಅಪ್‌ಡೇಟ್‌ಗಳ ಮಾಹಿತಿಯನ್ನು ತನ್ನ ಬೆಂಬಲ ಡಿವೈಸ್‌ಗಳಿಗೆ ಕಳುಹಿಸುತ್ತದೆ. ಇದರಿಂದಾಗಿ ಎಲ್ಲಾ ಐಓಎಸ್ ಡಿವೈಸ್‌ಗಳಿಗೆ ನವೀಕರಣ ಲಭ್ಯವಾಗುತ್ತದೆ. ಆದರೆ ಆಂಡ್ರಾಯ್ಡ್ ನವೀಕರಣಗಳು ಸ್ವಲ್ಪ ಭಿನ್ನವಾಗಿರುವುದರಿಂದ ಡಿವೈಸ್ ತಯಾರಿಕೆಗಳಿಗೆ ಇದು ಹೋಗಿ ನಂತರ ಮೊಬೈಲ್ ಕ್ಯಾರಿಯರ್‌ಗಳನ್ನು ಇದು ತಲುಪಿ ಬಳಕೆದಾರರನ್ನು ಸಮೀಪಿಸುತ್ತದೆ. ನೀವು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಅನ್ನು ಹೊಂದಿದ್ದರೂ ಕೂಡ ನಿಮ್ಮೆಲ್ಲಾ ಸಂಗೀತಗಳು ಐಟ್ಯೂನ್‌ಗಳಲ್ಲಿ ಇರುತ್ತವೆ. ಆಪಲ್ ಮತ್ತು ಆಂಡ್ರಾಯ್ಡ್ ಪ್ಲಾಟ್‌ಫಾರ್ಮ್‌ನ ಅಭಿಮಾನಿಗಳು ಇವೆರೆಡಕ್ಕಿರುವ ವ್ಯತ್ಯಾಸಗಳನ್ನು ಶೀಘ್ರವೇ ಪತ್ತೆಹಚ್ಚಬಹುದಾಗಿದೆ. ಆಂಡ್ರಾಯ್ಡ್ ಮೊಬೈಲ್ ಡಿವೈಸ್ ಅನ್ನು ಆಪಲ್ ಕಂಪ್ಯೂಟರ್‌ಗೆ ಸಂಪರ್ಕಪಡಿಸುವುದು ಹಸ್ತಚಾಲಿತವಾಗಿ ಒಂದು ಡಿವೈಸ್‌ನಿಂದ ಇನ್ನೊಂದಕ್ಕೆ ಫೈಲ್‌ಗಳನ್ನು ಸರಿಸಲು ಬಳಕೆದಾರರಿಗೆ ಸಹಾಯ ಮಾಡುತ್ತದೆ.

#4

#4

ಆಪಲ್‌ನ ಸಾಫ್ಟ್‌ವೇರ್ ಬಳಕೆದಾರರ ಭದ್ರತೆಗೆ ಪ್ರಾಮುಖ್ಯತೆಯನ್ನು ನೀಡುತ್ತದೆ. ಆಪಲ್ ತನ್ನ ಸಾಫ್ಟ್‌ವೇರ್ ಮತ್ತು ಹಾರ್ಡ್‌ವೇರ್ ಎರಡನ್ನೂ ಎನ್‌ಕ್ರಿಪ್ಟ್ ಮಾಡುತ್ತದೆ. ಇದರಿಂದಾಗಿ ಇದರಲ್ಲಿರುವ ಎಲ್ಲಾ ಮಾಹಿತಿ ಗೌಪ್ಯವಾಗಿರುತ್ತದೆ. ಆದರೆ ಆಂಡ್ರಾಯ್ಡ್ ಪ್ಲಾಟ್‌ಫಾರ್ಮ್ ತೆರೆದ ಮೂಲ ಎಂದು ಪರಿಗಣಿಸಲ್ಪಟ್ಟಿರುವುದರಿಂದ ಸಿಸ್ಟಮ್‌ನ ಕೋಡ್ ಮತ್ತು ಅವರ ಇಷ್ಟಗಳನ್ನು ಇದು ಮಾರ್ಪಡಿಸುತ್ತದೆ.

#5

#5

ಆಪಲ್ ಇತ್ತೀಚೆಗೆ ಹೊಸ ಡಿವೈಸ್ ಆಪಲ್ ವಾಚ್ ಮತ್ತು ಆಪಲ್ ಪೇ ಯನ್ನು ಇತ್ತೀಚೆಗೆ ಘೋಷಿಸಿದೆ. ಇತರ ಆಪಲ್ ಡಿವೈಸ್‌ಗಳೊಂದಿಗೆ ಮಾತ್ರವೇ ಇದು ಸಂಯೋಜನೆಗೊಳ್ಳುತ್ತದೆ. ಆದ್ದರಿಂದ ನಿಮ್ಮ ಬಳಿ ಐಫೋನ್ ಇರುವುದು ಅತ್ಯವಶ್ಯಕವಾಗಿದೆ.

#6

#6

ಸ್ಯಾಮ್‌ಸಂಗ್ ಇತ್ತೀಚೆಗೆ ತಾನೇ ಗ್ಯಾಲಕ್ಸಿ ನೋಟ್ 4 ಮತ್ತು ಗ್ಯಾಲಕ್ಸಿ ನೋಡ್ ಎಡ್ಜ್ ಸ್ಮಾರ್ಟ್‌ಫೋನ್‌ಗಳನ್ನು ಘೋಷಿಸಿದ್ದು ಹೀಗೆ ಹೊಸ ಹೊಸ ಆಂಡ್ರಾಯ್ಡ್ ಫೋನ್‌ಗಳು ಮಾರುಕಟ್ಟೆಗೆ ಮುತ್ತಿಗೆ ಹಾಕುತ್ತಿರುತ್ತವೆ. ಇದರಿಂದ ಆಂಡ್ರಾಯ್ಡಗ ಬಳಕೆದಾರರಲ್ಲಿ ಯಾವ ಫೋನ್ ಅನ್ನು ಖರೀದಿಸಬೇಕು ಎಂಬ ಗೊಂದಲ ಮೂಡುವುದು ಸಹಜವಾಗಿದೆ.

Best Mobiles in India

English summary
This article tells about iPhone 6 vs. Android: 9 Signs You're A Samsung User Who Should Switch To Apple.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X