ಆಪಲ್‌ನಿಂದ ಐಫೋನ್ 6 ಮಿನಿ ಬಿಗ್ ಹಿಟ್ ಮಾರುಕಟ್ಟೆಗೆ
ದೊಡ್ಡ ಸ್ಕ್ರೀನ್ ಉಳ್ಳ ಐಫೋನ್ 6 ಮತ್ತು ಐಫೋನ್ 6 ಪ್ಲಸ್‌ನ ಲಾಂಚ್‌ನಿಂದಾಗಿ ನಿರಾಶರಾಗಿರುವ ಐಫೋನ್ ಅಭಿಮಾನಿಗಳಿಗಾಗಿ ಕಂಪೆನಿ 4 ಇಂಚಿನ ಐಫೋನ್ ಅನ್ನು 2015 ರ ಆಗಮನದ ಸಮಯದಲ್ಲೇ ಹೊರತರುವ ಯೋಜನೆಯಲ್ಲಿದೆ. ಐಫೋನ್ 6 ಮಿನಿ ಎಂದು ಈ ಸ್ಮಾರ್ಟ್‌ಫೋನ್‌ಗೆ ನಾಮಕರಣ ಮಾಡಲಾಗಿದೆ.
ಕ್ಯುಪರ್ಟಿನೊ ಆಧಾರಿತ ಟೆಕ್ ಸಂಸ್ಥೆ 4 ಇಂಚಿನ ಹ್ಯಾಂಡ್‌ಸೆಟ್‌ಗಾಗಿ ಕಾರ್ಯನಿರ್ವಹಿಸುತ್ತಿದ್ದು, ಐಫೋನ್ 6 ಮಿನಿ ಎಂದು ಈ ಫೋನ್ ಅನ್ನು ಕರೆಯಲಾಗಿದೆ ಎಂಬುದು ವದಂತಿಗಳ ಸಾರವಾಗಿದೆ.

ಐಫೋನ್ 5 ಎಸ್‌ನ ಹೋಲಿಕೆ ಇರುವ ಐಫೋನ್ 6 ಮಿನಿ ವಿನ್ಯಾಸದಲ್ಲಿ ಐಫೋನ್ 6 ಅನ್ನು ಹೋಲುತ್ತಿದ್ದು ಕಂಪೆನಿಯ ಬಜೆಟ್ ಸ್ಮಾರ್ಟ್‌ಫೋನ್ ಆಗಿ ಮಾರುಕಟ್ಟೆಗೆ ಇದು ಆಗಮಿಸಲಿದೆ. ಕ್ವಾಲ್‌ಕಾಮ್ ಆಧಾರಿತವಾಗಿರುವ ಈ ಡಿವೈಸ್ ಬೆಲೆ ಆದಷ್ಟು ಕಡಿಮೆ ಇರಬಹುದು ಎಂದು ಊಹಿಸಲಾಗಿದೆ.
ಐಫೋನ್ 6 ಹಾಗೂ ಐಫೋನ್ 6 ಪ್ಲಸ್ ಅನ್ನು ಆಪಲ್ ಸಪ್ಟೆಂಬರ್‌ನಲ್ಲಿ ಲಾಂಚ್ ಮಾಡಿತ್ತು. ಈ ಎರಡೂ ಭಾರೀ ಐಫೋನ್‌ಗಳನ್ನು ಬಿಡುಗಡೆ ಮಾಡುವ ಮೂಲಕ ಕಂಪೆನಿ ಫೋನ್ ಕ್ಷೇತ್ರದಲ್ಲಿ ಹೊಸ ದಾಖಲೆಯನ್ನು ರಚಿಸಿತ್ತು. ಆದರೆ ಈ ಐಫೋನ್‌ಗಳು ಬಜೆಟ್ ಸ್ನೇಹಿಯಾಗಿರಲಿಲ್ಲ ಎಂಬುದು ಇಲ್ಲಿ ಗಮನಿಸಬೇಕಾದ ಅಂಶವಾಗಿದೆ.


Click it and Unblock the Notifications








