Subscribe to Gizbot

ಪ್ರಾಣಕ್ಕೆ ಕುತ್ತಾದ ದುಬಾರಿ ಐಫೋನ್ ಕಥಾನಕ

Written By:

ದುಬಾರಿ ವೆಚ್ಚದ ಐಫೋನ್ ಕೂಡ ದೇಹಕ್ಕೆ ಹಾನಿಯನ್ನುಂಟು ಮಾಡುತ್ತದೆ ಎಂಬುದನ್ನು ಸಾಬೀತುಪಡಿಸಿದೆ. ಎರಿಕ್ ಜಾನ್‌ಸನ್ ಎಂಬ ವ್ಯಕ್ತಿ ಪಾರ್ಟಿಯಲ್ಲಿದ್ದಾಗ ಆತನ ಕಿಸೆಯಲ್ಲಿದ್ದ ಫೋನ್ ಉರಿದು ಕಾಲಿಗೆ ಹಾನಿಯನ್ನುಂಟು ಮಾಡಿದೆ.

ತನ್ನ ಫೋನ್ ಸ್ಫೋಟವಾಗಿದೆ ಎಂಬುದು ಜಾನ್‌ಗೆ ನಂತರ ಅರಿವಿಗೆ ಬಂದಿದ್ದು ಇದರ ಬಿಸಿ ಎಷ್ಟು ಭೀಕರವಾಗಿತ್ತೆಂದರೆ ಪಾಕೆಟ್‌ನ ಭಸ್ಮ ಮಾಡಿ ಜಾನ್‌ನ ತೊಡೆಯನ್ನು ಭಸ್ಮ ಮಾಡಿದೆ.

ಪ್ರಾಣಕ್ಕೆ ಕುತ್ತಾದ ದುಬಾರಿ ಐಫೋನ್ ಕಥಾನಕ

ಕಿಸೆಯಲ್ಲಿ ಫೋನ್ ಉರಿಯತ್ತಿರುವುದು ಗೊತ್ತಾದ ಒಡನೆಯೇ ಜಾನ್ ಫೋನ್ ಬೀಳಿಸಲು ಪ್ರಯತ್ನಿಸಿದ್ದಾರೆ ಆದರೆ ಇದು ಫಲಪ್ರದವಾಗಲಿಲ್ಲ ನಂತರ ಪ್ಯಾಂಟ್ ಅನ್ನೇ ಕಳಚಬೇಕಾಯಿತು ಎಂದು ಸುದ್ದಿಮಾಧ್ಯಮಕ್ಕೆ ಜಾನ್ ತಿಳಿಸಿದ್ದಾರೆ. ಹತ್ತು ದಿನಗಳ ಆಸ್ಪತ್ರೆ ವಾಸವನ್ನು ಎರಿಕ್ ಪಡೆದಿದ್ದು ಐಫೋನ್ ಪ್ರಾಣಕ್ಕೆ ಕಂಟಕವಾಗಿದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

ಪ್ರಾಣಕ್ಕೆ ಕುತ್ತಾದ ದುಬಾರಿ ಐಫೋನ್ ಕಥಾನಕ

ಅಂತೂ ಫೋನ್ ಎಷ್ಟೇ ದುಬಾರಿಯಾಗಿದ್ದರೂ ಅದರಲ್ಲಿರುವ ಸಣ್ಣ ದೋಷಗಳು ಎಷ್ಟೆಲ್ಲಾ ಹಾನಿಗಳನ್ನು ಮಾನವ ದೇಹಕ್ಕೆ ಉಂಟುಮಾಡುತ್ತದೆ ಎಂಬುದು ಇಲ್ಲಿ ಅರಿವಾಗುತ್ತದೆ.

English summary
This article tells about People could smell my body burning': iPhone ‘exploded in man’s pocket.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot