Home
ಸುದ್ದಿಜಾಲ

ಐಫೋನ್ 15 ಸರಣಿ ಬಿಡುಗಡೆಗೂ ಮುನ್ನವೇ ಬಿಗ್‌ ಶಾಕ್‌ ಕೊಟ್ಟ ಆಪಲ್‌ ಕಂಪೆನಿ!

ಐಫೋನ್ 15 ಸರಣಿ ಬಿಡುಗಡೆಗೂ ಮುನ್ನವೇ ಐಫೋನ್‌ ಪ್ರಿಯರಿಗೆ ಆಪಲ್‌ ಕಂಪೆನಿ ಶಾಕಿಂಗ್‌ ನ್ಯೂಸ್‌ ನೀಡಿದೆ. ತನ್ನ ಪ್ರತಿ ಹೊಸ ಐಫೋನ್‌ ಸರಣಿಯಲ್ಲಿಯೂ ಮೂರು ಮಾಡೆಲ್‌ಗಳನ್ನು ಪರಿಚಯಿಸುತ್ತಿದ್ದ ಆಪಲ್‌ ಇದೀಗ ಹೊಸ ಬದಲಾವಣೆಗೆ ಮುಂದಾಗಿದೆ. ಅದರಂತೆ ಐಫೋನ್ 15 ಸರಣಿಯಲ್ಲಿ ಐಫೋನ್‌ ಮಿನಿಯನ್ನು ಪರಿಚಯಿಸುವುದಿಲ್ಲ ಎನ್ನಲಾಗಿದೆ.

ಹೌದು, ಐಫೋನ್ 15 ಸರಣಿಯೊಂದಿಗೆ ಯಾವುದೇ ಐಫೋನ್‌ ಮಿನಿ ಮಾಡೆಲ್‌ ಬಿಡುಗಡೆ ಮಾಡುವುದಿಲ್ಲ ಎನ್ನಲಾಗಿದೆ. ಈ ಮೂಲಕ ಐಫೋನ್‌ ಪ್ರಿಯರ ಗಮನಸೆಳೆದಿದ್ದ ಐಫೋನ್‌ ಮಿನಿ ಮಾಡೆಲ್‌ ಇನ್ನು ನೆನಪು ಮಾತ್ರ ಎನ್ನಲಾಗಿದೆ. ಈಗಾಗಲೇ ಐಫೋನ್‌ ಮಿನಿ ಸ್ಟಾಕ್‌ ಅನ್ನು ಕೂಡ ಕಡಿಮೆ ಮಾಡಿದೆ ಎನ್ನಲಾಗಿದೆ. ಹಾಗಾದ್ರೆ ಐಫೋನ್ 15 ಜೊತೆಗೆ ಐಫೋನ್‌ ಮಿನಿ ಯಾಕೆ ಬಿಡುಗಡೆ ಆಗುವುದಿಲ್ಲ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಐಫೋನ್ 15 ಸರಣಿ ಬಿಡುಗಡೆಗೂ ಮುನ್ನವೇ ಬಿಗ್‌ ಶಾಕ್‌ ಕೊಟ್ಟ ಆಪಲ್‌ ಕಂಪೆನಿ!

ಆಪಲ್‌ ಕಂಪೆನಿ ಹೊಸ ಐಫೋನ್‌ ಸರಣಿ ಪರಿಚಯಿಸುವಾಗ ಪ್ರತಿ ಭಾರಿಯು ಮೂರು ಐಫೋನ್ ಮಾಡೆಲ್‌ಗಳನ್ನು ಬಿಡುಗಡೆ ಮಾಡುತ್ತಿತ್ತು. ಆದರೆ 2020 ರಲ್ಲಿ ಹೊಸ ಐಫೋನ್ ಮಿನಿ ರೂಪಾಂತರವನ್ನು ಪರಿಚಯಿಸಿದಾಗ ಹೊಸ ಬದಲಾವಣೆ ಮಾಡಿತ್ತು. ಅಲ್ಲದೆ ನಿರೀಕ್ಷೆಯಂತೆ 2021 ರಲ್ಲಿ ಐಫೋನ್ 13 ಮಿನಿಯೊಂದಿಗೆ ಬಂದಿತ್ತು. ಆದರೆ ಐಫೋನ್ 14 ಸರಣಿಯಲ್ಲಿ ಐಫೋನ್ 14 ಪ್ಲಸ್‌ನೊಂದಿಗೆ ಬದಲಾಯಿಸಲಾಯಿತು. ಇದೀಗ, ಮುಂಬರುವ ಐಫೋನ್ 15 ಸರಣಿಯಲ್ಲಿ ಐಫೋನ್ ಮಿನಿಯನ್ನು ಕೈ ಬಿಡಲು ನಿರ್ಧರಿಸಿದೆ.

ಈ ವಾರವೇ ಸ್ಥಗಿತವಾಗಲಿದೆ ಐಫೋನ್ 13 ಮಿನಿ ಸ್ಟಾಕ್
ಈಗಾಗಲೇ ಆಪಲ್‌ ಐಫೋನ್‌ 13 ಮಿನಿ ಸ್ಟಾಕ್‌ ಕಡಿಮೆ ಆಗಿದೆ ಎಂದು ವರದಿ ಆಗಿದೆ. ಇದೀಗ ಐಫೋನ್ 15 ಸರಣಿಯ ಬಿಡುಗಡೆಯ ನಂತರ ಆಪಲ್ ಅಧಿಕೃತವಾಗಿ ಐಫೋನ್ ಮಿನಿ ಸರಣಿಯನ್ನು ಸ್ಥಗಿತಗೊಳಿಸಬಹುದು ಎಂದು ಹೇಳಲಾಗಿದೆ. ಈ ನಡೆ ಐಫೋನ್‌ ಮಿನಿ ಪ್ರಿಯರಿಗೆ ಬಿಗ್‌ ಶಾಕ್ ಅಂತಾನೇ ಹೇಳಬಹುದು ಆದರೆ ಕಾಂಪ್ಯಾಕ್ಟ್ ಐಫೋನ್‌ ವಿಶ್ವಾದ್ಯಂತ ಸೇಲ್‌ನಲ್ಲಿ ಹೆಚ್ಚು ಸ್ಥಾಪಿತ ಉತ್ಪನ್ನವಾಗಿದೆ ಎಂದು ಹೇಳಲಾಗಿದೆ.

ಐಫೋನ್‌ ಮಿನಿ ಮಾಡೆಲ್‌ ಬಗ್ಗೆ ಗಮನಿಸುವುದಾದರೆ ಆಪಲ್ 2020 ರಲ್ಲಿ ಐಫೋನ್ 12 ಮಿನಿ ಅನ್ನು ಸಣ್ಣ 5.4-ಇಂಚಿನ ಡಿಸ್‌ಪ್ಲೇ ಮಾದರಿಯಲ್ಲಿ ಬಿಡುಗಡೆ ಮಾಡಿತ್ತು. ಅದರ ಮುಂದಿನ ವರ್ಷವೇ ಐಫೋನ್ 13 ಮಿನಿ ಅನ್ನು ಬಿಡುಗಡೆ ಮಾಡಿತು. ಆದರೆ ಕಳೆದ ವರ್ಷ ಆಪಲ್ ಐಫೋನ್‌ ಮಿನಿ ಮಾಡೆಲ್‌ಗೆ ಬದಲಾಗಿ ಐಫೋನ್ 14 ಪ್ಲಸ್ ಪರಿಚಯಿಸಿತ್ತು. ಇದು 6.7 ಇಂಚಿನ ಡಿಸ್‌ಪ್ಲೇಯೊಂದಿಗೆ ಎಂಟ್ರಿ ನೀಡಿತ್ತು. ಈ ಮೂಲಕ ಕಳೆದ ವರ್ಷವೇ ಐಫೋನ್‌ ಮಿನಿಗೆ ಗೇಟ್‌ಪಾಸ್‌ ನೀಡಿತ್ತು. ಆದರೆ ಈ ವರ್ಷ ಶಾಶ್ವತವಾಗಿ ಐಫೋನ್‌ ಮಿನಿಯನ್ನು ಸ್ಥಗಿತಗೊಳಿಸುವುದಕ್ಕೆ ಆಪಲ್‌ ಮುಂದಾಗಿದೆ.

ಸದ್ಯ ಆಪಲ್‌ ಕಂಪನಿಯು ತನ್ನ ವೆಬ್‌ಸೈಟ್ ಮತ್ತು ಆಫ್‌ಲೈನ್ ಸ್ಟೋರ್‌ಗಳ ಮೂಲಕ ಐಫೋನ್‌ 13 ಮಿನಿಯನ್ನು ಅಧಿಕೃತವಾಗಿ ಮಾರಾಟ ಮಾಡುತ್ತಿದೆ. ಐಫೋನ್ 13 ಮಿನಿ 128GB ಆಯ್ಕೆಗೆ 64,900 ರೂ. ಬೆಲೆ ಹೊಂದಿದೆ. ಇದರ 256GB ಆಯ್ಕೆಯು 74,900ರೂ ಬೆಲೆಯಲ್ಲಿ ಲಭ್ಯವಿದೆ. ಇವು ಆಪಲ್‌ ವೆಬ್‌ಸೈಟ್‌ನಲ್ಲಿರುವ ಬೆಲೆ ಆಗಿದೆ. ಇದರ ಬೆಲೆ ಇತರೆ ವೆಬ್‌ಸೈಟ್‌ಗಳಲ್ಲಿ ಇನ್ನಷ್ಟು ಕಡಿಮೆ ಆಗಿರುವ ಸಾಧ್ಯತೆ ಕೂಡ ಇದೆ.

ಇನ್ನು ಐಫೋನ್‌ 15 ಸರಣಿ ನಾಳೆ (ಸೆಪ್ಟೆಂಬರ್ 12) ನಡೆಯುವ ಆಪಲ್‌ ಈವೆಂಟ್‌ನಲ್ಲಿ ಬಿಡುಗಡೆ ಆಗಲಿದೆ. ಈ ಈವೆಂಟ್‌ನಲ್ಲಿ ಐಫೋನ್ 15 ಸರಣಿ ಮತ್ತು ಹೊಸ ಆಪಲ್ ವಾಚ್ ಮಾದರಿಗಳನ್ನು ಪ್ರಕಟಿಸುವ ನಿರೀಕ್ಷೆಯಿದೆ. ಅಲ್ಲದೆ ಐಕಾನಿಕ್ ಲೈಟ್ನಿಂಗ್ ಪೋರ್ಟ್‌ಗೆ ವಿದಾಯ ಹೇಳಲು ಕಂಪನಿಯು ಸಿದ್ಧವಾಗಿರುವುದರಿಂದ ಯುಎಸ್‌ಬಿ ಟೈಪ್-ಸಿ ಪೋರ್ಟ್ ಹೊಂದಿರುವ ಐಫೋನ್ ಅನ್ನು ಪರಿಚಯಿಸಲಿದೆ ಎಂದು ಹೇಳಲಾಗಿದೆ.

ಐಫೋನ್‌ 15 ಸರಣಿಯ ಪ್ರೊ ಮಾದರಿಯು 128GB ಸ್ಟೋರೇಜ್‌ ಆಯ್ಕೆಯ ಬೇಸ್‌ ಮಾಡೆಲ್‌ ಹೊಂದಿರುವ ನಿರೀಕ್ಷೆಯಿದೆ. ಭಾರತದಲ್ಲಿ ಬಿಡುಗಡೆ ಆಗಲಿರುವ ಐಫೋನ್‌ 15 ಸರಣಿ ಮೇಡ್ ಇನ್ ಇಂಡಿಯಾ ಐಫೋನ್ ಮಾದರಿ ಆಗಿದೆ. ಏಕೆಂದರೆ ಆಪಲ್ ಭಾರತದಲ್ಲಿ ಸ್ಥಳೀಯವಾಗಿ ಐಫೋನ್ 15 ಮಾದರಿಗಳನ್ನು ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿರುವ ಫಾಕ್ಸ್‌ಕಾನ್‌ನ ಸೌಲಭ್ಯದಲ್ಲಿ ಉತ್ಪಾದಿಸುತ್ತಿದೆ ಎಂದು ವರದಿಯಾಗಿದೆ.

Best Mobiles in India

English summary
iPhone Mini Get Discontinued After the iPhone 15 Series Launch: Report
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+