ಐಫೋನ್ ಫೋಟೋಗ್ರಫಿ ಸ್ಪರ್ಧೆ: ಕೋಲಾರದಲ್ಲಿ ಬಿಲ್ಲು ಹಿಡಿದ ಶ್ರೀರಾಮನ ಚಿತ್ರ ಫಸ್ಟ್!
2019ರ ಐಫೋನ್ ಫೋಟೋಗ್ರಫಿ ಪ್ರಶಸ್ತಿಗಳ ಸ್ಪರ್ಧೆಯ ವಿಜೇತರನ್ನು ಆಪಲ್ ಘೋಷಿಸಿದ್ದು, ಕೋಲಾರದಲ್ಲಿ ಸೆರೆಹಿಡಿದ ಬಿಲ್ಲು ಹಿಡಿದ ಶ್ರೀರಾಮನ ಚಿತ್ರವನ್ನು ಬೆಸ್ಟ್ ಸನ್‌ಸೆಟ್ ಫೋಟೋ ಎಂದು ಆಪಲ್ ಕಂಪೆನಿ ಆಯ್ಕೆ ಮಾಡಿದೆ. 'ಸನ್‌ಸೆಟ್' ವಿಭಾಗದಲ್ಲಿ ರಾಜ್ಯದ ಯುವಕನೋರ್ವ ಸೆರೆಹಿಡಿದ ಚಿತ್ರವು ಮೊದಲ ಬಹುಮಾನ ಗಳಿಸಿರುವುದು ದೇಶದೆಲ್ಲೆಡೆ ಸಂತಸವನ್ನು ಹೆಚ್ಚಿಸಿದೆ.

ಹೌದು, 2019ರ ಐಫೋನ್ ಫೋಟೋಗ್ರಫಿ ಸ್ಪರ್ಧೆಯಲ್ಲಿ ಇಬ್ಬರು ಭಾರತೀಯರು ಫೋಟೋಗ್ರಫಿ ವಿಭಾಗಗಳಲ್ಲಿ ಸ್ಥಾನ ಪಡೆದಿದ್ದಾರೆ. ರಾಜ್ಯದ ಶ್ರೀಕುಮಾರ್ ಕೃಷ್ಣನ್ ಅವರು 'ಸೂರ್ಯಾಸ್ತ' ವಿಭಾಗದಲ್ಲಿ ವಿಶ್ವದಲ್ಲೇ ಪ್ರಥಮ ಸ್ಥಾನ ಪಡೆದಿದ್ದು, ಮಹಾರಾಷ್ಟ್ರ ಮೂಲದ ಭಲೋಟಿಯಾ ಅವರು ಸರಣಿ ವಿಭಾಗದಲ್ಲಿ ಎರಡನೇ ಸ್ಥಾನ ಪಡೆದಿರುವ ಪಟ್ಟಿಯನ್ನು ಕಂಪೆನಿ ಬಿಡುಗಡೆ ಮಾಡಿದೆ.
ಕೃಷ್ಣನ್ ಅವರು ಐಫೋನ್ 6 ಎಸ್ ಬಳಸಿ ಬೆಸ್ಟ್ ಸನ್‌ಸೆಟ್ ಫೋಟೋ ಪ್ರಶಸ್ತಿ ವಿಜೇತರಾಗಿದ್ದರೆ, ಐಫೋನ್ ಎಕ್ಸ್ ಬಳಸಿ ಇಟಲಿಯ ಗೇಬ್ರಿಯೆಲಾ ಸಿಗ್ಲಿನೊ ಕ್ಲಿಕ್ಕಿಸಿದ 'ಬಿಗ್ ಸಿಸ್ಟರ್' ಚಿತ್ರಕ್ಕೆ ಫೋಟೋಗ್ರಾಫರ್ ಆಫ್ ದಿ ಇಯರ್ ಪ್ರಶಸ್ತಿ ಲಭಿಸಿದೆ. ಇನ್ನು 2ನೇ ಸ್ಥಾನ ರಷ್ಯಾದ ಯುಲಿಯಾ ಇಬ್ರೇವಾ ಹಾಗೂ ಮೂರನೇ ಸ್ಥಾನ ಚೀನಾದ ಪೆಂಗ್ ಹಾವೊಗೆ ಎಂಬುವವರಿಗೆ ದೊರೆತಿದೆ.

ಪ್ರಸಕ್ತ 12 ನೇ ವರ್ಷದ ವಾರ್ಷಿಕ ಐಫೋನ್ ಛಾಯಾಗ್ರಹಣ ಪ್ರಶಸ್ತಿಗಳನ್ನು ಭಾರತ, ಆಸ್ಟ್ರೇಲಿಯಾ, ಬಹ್ರೇನ್, ಬೆಲಾರಸ್, ಬ್ರೆಜಿಲ್, ಕೆನಡಾ, ಚೀನಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಪೆರು, ಪೋರ್ಚುಗಲ್, ರಷ್ಯಾ, ದಕ್ಷಿಣ ಆಫ್ರಿಕಾ, ತೈವಾನ್, ಯು ಕೆ ಮತ್ತು ಅಮೆರಿಕಾ ಸೇರಿದಂತೆ ಈ ಬಾರಿ ಒಟ್ಟು 18 ದೇಶಗಳ ಜನರು ವಿಜೇತರಾಗಿದ್ದಾರೆ ಎಂದು ಆಪಲ್ ಕಂಪೆನಿ ತಿಳಿಸಿದೆ.

ಐಫೋನ್ ಎಸ್‌ಇ ಮಾದರಿಯಿಂದ ತೊಡಗಿ ಐಫೋನ್ ಎಕ್ಸ್ಎಸ್ ವರೆಗಗೆ ಜಗತ್ತಿನಾದ್ಯಂತ ಐಫೋನ್ ಬಳಕೆದಾರರು ಚಿತ್ರಗಳನ್ನು ಸ್ಪರ್ಧೆಗೆ ಕಳುಹಿಸಿಕೊಟ್ಟಿದ್ದಾರೆ. ಇದರಲ್ಲಿ ಸನ್‌ಸೆಟ್ ವಿಭಾಗದಲ್ಲಿ ರಾಜ್ಯದ ಯುವಕನ ಚಿತ್ರಕ್ಕೆ ಮೊದಲ ಸ್ಥಾನ ಬಂದಿರುವುದು ನಮಗೆಲ್ಲರಿಗೂ ಖುಷಿಯ ವಿಚಾರ. ವಿಶ್ವದ ಬೆಸ್ಟ್ ಮೊಬೈಲ್ ಫೋಟೋಗ್ರಫಿಯಲ್ಲಿ ಕೃಷ್ಣನ್ ಅವರ ಕೈಚಳಕವು ಅಪಾರ.


Click it and Unblock the Notifications