Apple: ಚೀನಾಗೆ ದೊಡ್ಡ ಶಾಕ್; ಭಾರತದಲ್ಲೇ 80 ಮಿಲಿಯನ್ iPhone ಉತ್ಪಾದನೆ.. ಕಾರಣ ಇಷ್ಟೇ..!
ಚೀನಾಗೆ ದೊಡ್ಡ ಆಘಾತ ನೀಡಿದ ಆಪಲ್..! ಭಾರತಕ್ಕೆ ಗೋಲ್ಡನ್ ಅಪರ್ಚುನಿಟಿ.. ಶೀಘ್ರದಲ್ಲೇ ಭಾರತದಲ್ಲೇ 70 ರಿಂದ 80 ಮಿಲಿಯನ್ ಐಫೋನ್ (iPhone production) ಉತ್ಪಾದನೆ. ಹೌದು, ಅಮೆರಿಕದಲ್ಲಿ ಮಾರಾಟವಾಗಲಿರುವ ಎಲ್ಲಾ ಐಫೋನ್‌ಗಳ ಉತ್ಪಾದನೆಯನ್ನು ಭಾರತಕ್ಕೆ ವರ್ಗಾಯಿಸಲು ಆಪಲ್ (Apple) ಕಂಪನಿ ಸಜ್ಜಾಗಿದೆ. ಪ್ರಸ್ತುತ ಚೀನಾ ದೇಶ ಶೇಕಡಾ 80ಕ್ಕಿಂತ ಹೆಚ್ಚು ಐಫೋನ್‌ಗಳನ್ನು ತಯಾರಿಸುತ್ತಿದೆ. ಭೌಗೋಳಿಕ ರಾಜಕೀಯ ಸಮಸ್ಯೆಗಳಿಂದಾಗಿ ಆಪಲ್ ತನ್ನ ಐಫೋನ್ ಉತ್ಪಾದನೆಯನ್ನು ಭಾರತಕ್ಕೆ (iPhone production in India) ವರ್ಗಾಯಿಸುತ್ತಿದೆ. ಹಾಗಿದ್ರೆ, ಭಾರತದಲ್ಲಿ ಐಫೋನ್‌ಗಳ ಬೆಲೆ ಕಡಿಮೆ ಇರುತ್ತದೆಯೇ? ಯಾವಾಗ ಉತ್ಪಾದನೆ ಪ್ರಾರಂಭವಾಗುತ್ತದೆ? ಎಂಬ ಬಗ್ಗೆ ನಿಮಗೆ ಗೊತ್ತಿರದ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ ನೋಡಿ.
ಹೌದು, ಮುಂದಿನ ವರ್ಷವೇ ಭಾರತದಲ್ಲಿ ಐಫೋನ್ ಉತ್ಪಾದನೆ ಮಾಡಲಾಗುತ್ತದೆ ಎಂದು ಐಫೋನ್ ತಯಾರಿಕಾ ಸಂಸ್ಥೆ ಆಪಲ್ ಘೋಷಿಸಿದೆ. ಅಮೆರಿಕಕ್ಕಾಗಿ 60 ಮಿಲಿಯನ್‌ಗಿಂತಲೂ ಹೆಚ್ಚು ಐಫೋನ್‌ಗಳು ನಮ್ಮ ದೇಶದಲ್ಲೇ ತಯಾರಾಗಲಿವೆ. ವರದಿಯ ಪ್ರಕಾರ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಸರ್ಕಾರವು ಕೆಲವು ದೇಶಗಳ ಮೇಲೆ ಪರಸ್ಪರ ಸುಂಕಗಳನ್ನು (Trump Tariff) ಘೋಷಿಸಿದೆ. ಇದಾದ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ. 2026ರ ಅಂತ್ಯದ ವೇಳೆಗೆ ಅಮೆರಿಕದಲ್ಲಿ ವಾರ್ಷಿಕವಾಗಿ ಮಾರಾಟವಾಗುವ 60 ಮಿಲಿಯನ್‌ಗಿಂತಲೂ ಹೆಚ್ಚು ಐಫೋನ್‌ಗಳನ್ನು ಭಾರತದಲ್ಲೇ ತಯಾರಿಸಲು ಆಪಲ್ ಕಂಪನಿ ಸಜ್ಜಾಗಿದೆ.

ಚೀನಾಗೆ ಬಿಗ್ ಶಾಕ್! ಶೇ.145% ದುಬಾರಿ ಸುಂಕ
ಅಮೆರಿಕಕ್ಕೆ ಭಾರತದ ರಫ್ತಿನ ಮೇಲಿನ ಪರಸ್ಪರ ಸುಂಕವನ್ನು ಶೇಕಡಾ 26 ರಷ್ಟು ನಿಗದಿಪಡಿಸಲಾಗಿತ್ತು. ಆದರೆ, ಚೀನಾ ವಿರುದ್ಧ ಶೇಕಡಾ 145 ರಷ್ಟು ಸುಂಕವನ್ನು ವಿಧಿಸಲಾಗಿದೆ. ಹಾಗೆಯೇ ವಿಯೆಟ್ನಾಂ ಮೇಲೆಯೂ ಶೇಕಡಾ 46 ರಷ್ಟು ಸುಂಕ ವಿಧಿಸಲಾಗಿದೆ. ಇದರಿಂದ ಈಗಾಗಲೇ ಚೀನಾದಲ್ಲಿ ತಯಾರಾಗುತ್ತಿರುವ ಐಫೋನ್‌ಗಳ ಮೇಲೆ ದುಬಾರಿ ಸುಂಕ ಹೇರುವ ಸಾಧ್ಯತೆಯಿದೆ. ಈ ಕಾರಣದಿಂದ ಆಪಲ್ ತನ್ನ ಅಮೆರಿಕದಲ್ಲಿ ಮಾರಾಟ ಮಾಡುವ ಐಫೋನ್ ಗಳನ್ನು ಭಾರತದಲ್ಲಿ ತಯಾರಿಸಲು ನಿರ್ಧರಿಸಿದೆ. ಅದರಂತೆ, ಆಪಲ್ ಸಂಸ್ಥೆಯು ಜಾಗತಿಕವಾಗಿ ಐಫೋನ್‌ಗಳ ಪ್ರಮುಖ ಉತ್ಪಾದಕ ಘಟಕ ಚೀನಾದಿಂದ ತನ್ನ ಉತ್ಪಾದನೆಯನ್ನು ಭಾರತಕ್ಕೆ ವರ್ಗಾಯಿಸಲಿದೆ.
ಭಾರತದಲ್ಲಿ ಶೇ.60 ರಷ್ಟು ಐಫೋನ್ ಉತ್ಪಾದನೆ
ವರದಿಯ ಪ್ರಕಾರ, ಭಾರತದಲ್ಲಿ 22 ಬಿಲಿಯನ್ ಡಾಲರ್ ಮೌಲ್ಯದ ಐಫೋನ್‌ಗಳನ್ನು ತಯಾರಿಸಿದೆ. ಇದು 2024 - 25ರ ಹಣಕಾಸು ವರ್ಷದಲ್ಲಿನ ಉತ್ಪಾದನೆಯಾಗಿದೆ. ಇದು ಹಿಂದಿನ ವರ್ಷಕ್ಕಿಂತ ಶೇ.60 ರಷ್ಟು ಹೆಚ್ಚಳವಾಗಿದೆ. ಆಪಲ್ ಕಂಪನಿಯು ಪ್ರಸ್ತುತ, ಭಾರತದಲ್ಲಿ ಶೇ.20 ರಷ್ಟು ಅಥವಾ ತಾನು ಉತ್ಪಾದನೆ ಮಾಡುವ ಪ್ರತಿ ಐದು ಐಫೋನ್‌ಗಳಲ್ಲಿ ಒಂದನ್ನು ಭಾರತದಲ್ಲಿ ಉತ್ಪಾದಿಸುತ್ತಿದೆ. ಆಪಲ್ ಸಂಸ್ಥೆಯು ಈ ಹಿಂದೆ ತನ್ನ ಐಫೋನ್‌ಗಳಲ್ಲಿ ಶೇ.25 ರಷ್ಟು ಮಾತ್ರ ಭಾರತದಲ್ಲಿ ತಯಾರಿಸುವ ಗುರಿ ಹೊಂದಿತ್ತು.

1.31 ಬಿಲಿಯನ್ ಡಾಲರ್ ಮೌಲ್ಯದ ಐಫೋನ್ ಉತ್ಪಾದನೆ
ಪ್ರಸ್ತುತ ಭಾರತದಲ್ಲಿ ಮೂರು ಪ್ರಮುಖ ಐಫೋನ್ ತಯಾರಕ ಘಟಕಗಳು ಕೆಲಸ ನಿರ್ವಹಿಸುತ್ತಿವೆ. ದೇಶದ ಒಟ್ಟು ಐಫೋನ್ ಉತ್ಪಾದನೆಯ ಶೇ.67 ರಷ್ಟು ಉತ್ಪಾದಿಸುವ ಫಾಕ್ಸ್‌ಕಾನ್ (ಪೆಗಾಟ್ರಾನ್) ಶೇ.17 ರಷ್ಟು ಪಾಲು ಹೊಂದಿದೆ. ಟಾಟಾ ಎಲೆಕ್ಟ್ರಾನಿಕ್ಸ್ ಉಳಿದ ಪಾಲನ್ನು ಹೊಂದಿದೆ. ಮಾರ್ಚ್ ವೇಳೆಗೆ, ಭಾರತದಲ್ಲಿ ಆಪಲ್‌ನ ಅತಿದೊಡ್ಡ ತಯಾರಕರಾದ ಫಾಕ್ಸ್‌ಕಾನ್ 1.31 ಬಿಲಿಯನ್ ಡಾಲರ್ ಮೌಲ್ಯದ ಐಫೋನ್‌ಗಳನ್ನು ಉತ್ಪಾದಿಸಿದೆ. ಇದು ಒಂದೇ ತಿಂಗಳಲ್ಲಿ ಈವರೆಗಿನ ಅತ್ಯಧಿಕ ಉತ್ಪಾದನೆಯಾಗಿದೆ. ಶೇ.63 ರಷ್ಟು ಉತ್ಪಾದನೆ ಹೆಚ್ಚಳವಾಗಿ ಮಾರ್ಚ್ ತಿಂಗಳಲ್ಲಿ 612 ಮಿಲಿಯನ್ ಡಾಲರ್ ತಲುಪಿದೆ.
ಭಾರತದಿಂದ 60 ಮಿಲಿಯನ್‌ಗಿಂತಲೂ ಹೆಚ್ಚು ಐಫೋನ್ ಖರೀದಿ!
ಕಳೆದ ವರ್ಷ (2024) ಆಪಲ್ ಕಂಪನಿಯ ಜಾಗತಿಕ ಐಫೋನ್ ಸಾಗಣೆ 232.1 ಮಿಲಿಯನ್ ಇತ್ತು. ಈ ಪೈಕಿ ಅಮೆರಿಕದ ಪಾಲು ಶೇ.28 ರಷ್ಟಿತ್ತು. ಮುಂದಿನ ವರ್ಷದ (2026) ಅಂತ್ಯಕ್ಕೆ ಅಮೆರಿಕದಲ್ಲಿ ಮಾರಾಟವಾಗುವ 60 ಮಿಲಿಯನ್‌ಗಿಂತಲೂ ಹೆಚ್ಚು ಐಫೋನ್‌ಗಳನ್ನು ಭಾರತದಿಂದ ಖರೀದಿಸಲು ಆಪಲ್ ನಿರ್ಧರಿಸಿದೆ. ಇದರಿಂದ ಭಾರತದಲ್ಲಿ ಐಫೋನ್ ಉತ್ಪಾದನೆ ದ್ವಿಗುಣಗೊಳ್ಳಲಿದೆ.
ಇದನ್ನೂ ಓದಿ: ಸಿಹಿ ಸುದ್ದಿ: ಇನ್ಸ್ಟಾಗ್ರಾಮ್ನಿಂದ ಹೊಸ ಆಪ್ ಲಾಂಚ್; ಯಾರಿಗೆಲ್ಲಾ Edits ಆಪ್ ಲಭ್ಯ.. ಹೀಗಿವೆ ಫೀಚರ್ಸ್!
ಭಾರತದಲ್ಲಿ ಐಫೋನ್‌ಗಳ ಬೆಲೆ ಮತ್ತು ರಿಯಾಯಿತಿ
ಐಫೋನ್ 16e ಬೆಲೆ = 59,900 ರೂ.
ಐಫೋನ್ 16e ಖರೀದಿ ಮೇಲೆ 4,000 ರೂ.ಗಳ ತಕ್ಷಣದ ಕ್ಯಾಶ್‌ಬ್ಯಾಕ್ (ಐಸಿಐಸಿಐ ಬ್ಯಾಂಕ್ ಮತ್ತು ಕೋಟಕ್ ಮಹೀಂದ್ರಾ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳಲ್ಲಿ) ಪಡೆಯಬಹುದು. ಇದಲ್ಲದೆ 8,000 ರೂ.ಗಳವರೆಗೆ ಎಕ್ಸ್‌ಚೇಂಜ್ ಬೋನಸ್ ಲಭ್ಯವಿದೆ.
ಐಫೋನ್ 16 ಬೆಲೆ = 79,900 ರೂ.
ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಪಾವತಿ ಮೇಲೆ 9,901 ರೂ.ಗಳ ಬೆಲೆ ಇಳಿಕೆ ಮಾಡಲಾಗಿದೆ. ಜೊತೆಗೆ 9,799 ರೂ.ಗಳವರೆಗೆ ಎಕ್ಸ್‌ಚೇಂಜ್ ಬೋನಸ್ ಮತ್ತು ಶೇ.5 ರಷ್ಟು ಕ್ಯಾಶ್‌ಬ್ಯಾಕ್ ಲಭ್ಯವಿದೆ.
ಐಫೋನ್ 15 ಬೆಲೆ = 69,900 ರೂ.
ಐಫೋನ್ 15 ಬೆಲೆಯನ್ನು 4,901 ರೂ. ಇಳಿಕೆ ಮಾಡಲಾಗಿದೆ. ಇದಲ್ಲದೆ 2,799 ರೂ. ಎಕ್ಸ್‌ಚೇಂಜ್ ಬೋನಸ್, ಎಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ವಹಿವಾಟಿನ ಮೇಲೆ 1,000 ರೂ. ಡಿಸ್ಕೌಂಟ್, ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳಿಗೆ ಶೇ.5 ರಷ್ಟು ಕ್ಯಾಶ್‌ಬ್ಯಾಕ್ ನೀಡಲಾಗುತ್ತಿದೆ.
ಐಫೋನ್ 15 ಪ್ಲಸ್ ಬೆಲೆ = 79,900 ರೂ.
ಐಫೋನ್ 15 ಪ್ಲಸ್ ಮೊಬೈಲ್ 10,901 ರೂ. ಬೆಲೆ ಕಡಿತ ಪಡೆದಿದೆ. ಜೊತೆಗೆ 6,799 ರೂ.ವರೆಗೆ ಎಕ್ಸ್‌ಚೇಂಜ್ ಬೋನಸ್ ಲಭ್ಯವಿದೆ. ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಲ್ಲಿ ಶೇ.5 ರಷ್ಟು ಕ್ಯಾಶ್‌ಬ್ಯಾಕ್, ಎಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಲ್ಲಿ 1,000 ರೂ. ರಿಯಾಯಿತಿ ಪಡೆಯಬಹುದು.
ಐಫೋನ್ 16 ಪ್ಲಸ್ ಬೆಲೆ 89,900 ರೂ.
ಐಫೋನ್ 16 ಪ್ಲಸ್ ಖರೀದಿ ಮೇಲೆಯೂ 10,901 ರೂ. ಬೆಲೆ ಇಳಿಕೆ ಮಾಡಲಾಗಿದೆ. ನೀವು 13,000 ರೂ. ಎಕ್ಸ್‌ಚೇಂಜ್ ಬೋನಸ್ ಮತ್ತು ಯುಪಿಐ ವಹಿವಾಟುಗಳ ಮೇಲೆ 2,000 ರೂ. ಆಫರ್ ಪಡೆಯಬಹುದು. ಎಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳ ಮೇಲೆ 1,000 ರೂ., ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳಲ್ಲಿ ಶೇ.5 ರಷ್ಟು ಕ್ಯಾಶ್‌ಬ್ಯಾಕ್ ಲಭ್ಯವಿದೆ.
ಐಫೋನ್ 16 ಪ್ರೊ ಬೆಲೆ = 1,19,900 ರೂ.
ಐಫೋನ್ 16 ಪ್ರೊ ಬೆಲೆ 7,000 ರೂ. ಇಳಿಕೆಯಾಗಿದೆ. ಇದಲ್ಲದೆ 65,200 ರೂ. ಎಕ್ಸ್‌ಚೇಂಜ್ ಬೋನಸ್ ಮತ್ತು ಯುಪಿಐ ವಹಿವಾಟುಗಳಿಗೆ 2,000 ರೂ. ರಿಯಾಯಿತಿ ಸಿಗುತ್ತದೆ. ಎಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ವಹಿವಾಟುಗಳಿಗೆ 1,000 ರೂ. ಡಿಸ್ಕೌಂಟ್ ಸಹ ಪಡೆಯಬಹುದು.
ಐಫೋನ್ 16 ಪ್ರೊ ಮ್ಯಾಕ್ಸ್ ಬೆಲೆ = 1,44,900 ರೂ.
ಐಫೋನ್ 16 ಪ್ರೊ ಮ್ಯಾಕ್ಸ್ ಬೆಲೆಯನ್ನು 9,000 ರೂ. ಇಳಿಕೆ ಮಾಡಲಾಗಿದೆ. ಬರೋಬ್ಬರಿ 65,200 ರೂ. ಎಕ್ಸ್‌ಚೇಂಜ್ ಬೋನಸ್ ಮತ್ತು ಯುಪಿಐ ವಹಿವಾಟುಗಳಿಗೆ 2,000 ರೂ. ಡಿಸ್ಕೌಂಟ್ ನೀಡಲಾಗುತ್ತಿದೆ. ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ವಹಿವಾಟುಗಳಿಗೆ ಶೇ.5 ರಷ್ಟು ಕ್ಯಾಶ್‌ಬ್ಯಾಕ್ ಲಭ್ಯವಿದೆ.
ಪ್ರಸ್ತುತ ದಿನಗಳಲ್ಲಿ ಐಫೋನ್ ಖರೀದಿ ಕ್ರೇಜ್ ಹೆಚ್ಚಿದೆ. ಬಹುತೇಕರು ಐಫೋನ್ ಬಗ್ಗೆ ಒಲವು ತೋರುತ್ತಿದ್ದಾರೆ. ಅದರಂತೆ, ಗ್ರಾಹಕರನ್ನು ಸೆಳೆಯಲು ಆನ್‌ಲೈನ್ ಶಾಪಿಂಗ್ ಸೈಟ್‌ಗಳು ಬೊಂಬಾಟ್ ರಿಯಾಯಿತಿ ಘೋಷಿಸಿವೆ. ನಿಮಗೂ ಹೊಸ ಐಫೋನ್ ಖರೀದಿಸುವ ಆಸೆ ಇದ್ದರೆ, ಈ ರಿಯಾಯಿತಿಯ ಲಾಭ ಪಡೆಯಬಹುದು.


Click it and Unblock the Notifications








