Home
ಸುದ್ದಿಜಾಲ

ಬಹುನಿರೀಕ್ಷಿತ ''ಆಪಲ್‌ ಐಫೋನ್‌SE'' (2020) ಬಿಡುಗಡೆ!

ಟೆಕ್‌ ಮಾರುಕಟ್ಟೆಯಲ್ಲಿ ಬಹಳ ನಿರೀಕ್ಷೆಯನ್ನ ಹುಟ್ಟುಹಾಕಿದ್ದ ಬಹು ನಿರೀಕ್ಷಿತ ಆಪಲ್‌ ಐಫೋನ್‌SE ಬಿಡುಗಡೆ ಆಗಿದೆ. ನಿಮಗೆಲ್ಲಾ ಗೊತ್ತಿರುವ ಹಾಗೇ ಜಾಗತಿಕವಾಗಿ ನಂಬರ್‌ ಒನ್‌ ಬ್ರಾಂಡ್‌ ಆಗಿರುವ ಆಪಲ್‌ ಐಫೋನ್‌ ತನ್ನ ಹೊಸ ಆವತರಣಿಕೆಯನ್ನ ಬಿಡುಗಡೆ ಮಾಡಿದೆ. ಸದ್ಯ ಈ ಸರಣಿಯನ್ನ ಐಫೋನ್‌se ಎಂದು ಹೆಸರಿಸಲಾಗಿದೆ. ಇನ್ನು ಆಪಲ್‌ ಬ್ರಾಂಡ್‌ ಬಹು ನಿರೀಕ್ಷಿತ ಸರಣಿಗಳಲ್ಲಿ ಐಫೋನ್ SE ಕೂಡ ಒಂದಾಗಿದೆ. ಸದ್ಯ ಈ ಐಫೋನ್‌ ಹಿಂದಿನ ಐಫೋನ್‌ ಮಾದರಿಗಳಲ್ಲಿ ಲಬ್ಯವಿರುವ ಡಿಸ್‌ಪ್ಲೇಯ 4.7 ಇಂಚಿನ ಗಾತ್ರವನ್ನೇ ಉಳಿಸಿಕೊಂಡಿದೆ.

ಜಾಗತಿಕ

ಹೌದು, ಜಾಗತಿಕ ಮಾರುಕಟ್ಟೆಗೆ ಐಫೋನ್‌SE (2020) ಎಂಟ್ರಿ ಕೊಟ್ಟಿದೆ. 2016 ರಲ್ಲಿ ಬಿಡುಗಡೆ ಆಗಿದ್ದ ಐಫೋನ್‌ SE ಸರಣಿಯ ಮುಮದುವರೆದ ಭಾಗವಾಗಿರುವ ಈ ಐಫೋನ್‌ ಪ್ರಸ್ತುತ ಶ್ರೇಣಿಯಲ್ಲಿ ಲಬ್ಯವಿರುವ ಅತ್ಯಂತ ಉತ್ತಮವಾದ ಐಫೋನ್ ಮಾದರಿಯಾಗಿ ಅನಾವರಣಗೊಂಡಿದೆ. ಇನ್ನು ಈ ಐಫೋನ್‌ ಆಪಲ್ ಎ 13 ಬಯೋನಿಕ್ SOC ಪ್ರೊಸೆಸರ್‌ ಅನ್ನು ಹೊಂದಿದೆ. ಜೊತೆಗೆ ಟಚ್ ಐಡಿ ಫಿಂಗರ್‌ಪ್ರಿಂಟ್‌ ಸೆನ್ಸಾರ್ ಅನ್ನು ಸಹ ಒಳಗೊಂಡಿದೆ. ಇನ್ನು ಯಾವೆಲ್ಲಾ ಫೀಚರ್ಸ್‌ಗಳನ್ನ ಈ ಐಫೋನ್‌ ಹೊಂದಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿರಿರ

ಡಿಸ್‌ಪ್ಲೇ

ಡಿಸ್‌ಪ್ಲೇ

ಆಪಲ್ ಐಫೋನ್ SE(2020) 4.7-ಇಂಚಿನ ರೆಟಿನಾ ಎಚ್‌ಡಿ ಮಾದರಿಯ ಐಪಿಎಸ್ ಎಲ್‌ಸಿಡಿ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇಯು 750x1334 ಪಿಕ್ಸೆಲ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ ವೈಟ್ ಬ್ಯಾಲೆನ್ಸ್ ಹೊಂದಿಸಲು ಟ್ರೂ ಟೋನ್ ಟೆಕ್ ಹೊಂದಿದೆ. ಇನ್ನು ಈ ಡಿಸ್‌ಪ್ಲೇಯು 625 ನಿಟ್‌ಗಳ ಗರಿಷ್ಠ ಬ್ರೈಟ್‌ನೆಶ್‌ ಅನ್ನು ನೀಡಲಿದೆ. ಅಲ್ಲದೆ ಡಾಲ್ಬಿ ವಿಷನ್ ಮತ್ತು ಎಚ್‌ಡಿಆರ್ 10 ಅನ್ನು ಬೆಂಬಲಿಸಲಿದೆ. ಇನ್ನು ಈ ಡಿಸ್‌ಪ್ಲೇ ಸ್ಕ್ರೀನ್‌ ಹೊಸ ಐಫೋನ್ ಮಾದರಿಗಳಲ್ಲಿ ಕಂಡುಬರುವ ಹ್ಯಾಪ್ಟಿಕ್ ಟಚ್ ಬೆಂಬಲವನ್ನು ಹೊಂದಿದೆ.

ಪ್ರೊಸೆಸರ್

ಪ್ರೊಸೆಸರ್

ಐಫೋನ್ SE(2020) ಆಪಲ್‌ ಕಂಪೆನಿ A 13 ಬಯೋನಿಕ್ SoC ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲಿದೆ. ಪ್ರೊಸೆಸರ್‌ಗೆ ಪೂರಕವಾಗಿ ಐಒಎಸ್‌ 13 ಬೆಂಬಲ ನೀಡಲಿದೆ. ಹುಡ್ ಅಡಿಯಲ್ಲಿ, ಐಫೋನ್ 11, ಐಫೋನ್ 11 ಪ್ರೊ ಮತ್ತು ಐಫೋನ್ 11 ಪ್ರೊ ಮ್ಯಾಕ್ಸ್‌ನ ಮಾದರಿಯನ್ನೆ ಹೊಂದಿದೆ. ಇನ್ನು ಈ ಐಫೋನ್‌ RAM ಸಾಮರ್ಥ್ಯದ ಬಗ್ಗೆ ಯಾವುದೇ ಮಾಹಿತಿ ಲಬ್ಯವಿಲ್ಲ, ಆದರೆ ಈ ಐಫೋನ್‌ 64GB, 128GB, ಮತ್ತು 256GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯ ವೇರಿಯೆಂಟ್‌ ಆಯ್ಕೆಯಲ್ಲಿ ಲಬ್ಯವಿದೆ. ಮೆಮೊರಿ ಕಾರ್ಡ್‌ ಮೂಲಕ ಸಂಗ್ರಹ ಸಾಮರ್ಥ್ಯ ವಿಸ್ತರಿಸಲು ಯಾವುದೇ ಅವಕಾಶವನ್ನ ನೀಡಿಲ್ಲ.

ಕ್ಯಾಮೆರಾ ವಿನ್ಯಾಸ

ಕ್ಯಾಮೆರಾ ವಿನ್ಯಾಸ

ಇನ್ನು ಈ ಹೊಸ ಐಫೋನ್ ರಿಯರ್‌ ಸೆಟ್‌ಅಪ್‌ನಲ್ಲಿ ಸಿಂಗಲ್‌ ಕ್ಯಾಮೆರಾ ಹೊಂದಿದೆ. ಇದು 2 ಮೆಗಾಪಿಕ್ಸೆಲ್ ಕ್ಯಾಮೆರಾ ಸೆನ್ಸಾರ್ f/ 1.8 ಲೆನ್ಸ್‌ + ಒಐಎಸ್ ಹೊಂದಿದೆ ಮತ್ತು ಸ್ಲೋ ಸಿಂಕ್‌ ಜೊತೆಗೆ ದಿಗೆ ಎಲ್ಇಡಿ ಟ್ರೂ ಟೋನ್ ಫ್ಲ್ಯಾಷ್ ಹೊಂದಿದೆ. ಇದು 60kps ವರೆಗೆ 4 ಕೆ ವಿಡಿಯೋ ರೆಕಾರ್ಡಿಂಗ್ ಮತ್ತು ಫೋಟೋಗಳಿಗಾಗಿ ಸ್ಮಾರ್ಟ್ HDR ಅನ್ನು ನೀಡುತ್ತದೆ. ಜೊತೆಗೆ ರಿಯರ್‌ ಕ್ಯಾಮೆರಾ ಪ್ರೊಟೆಕ್ಷನ್‌ ಗಾಗಿ ಶಾಂಪೈರ್‌ ಕ್ರಿಸ್ಟಲ್ ಲೆನ್ಸ್ ಕವರ್ ಅನ್ನು ನೀಡಲಾಗಿದೆ. ಇದಲ್ಲದೆ ಈ ಕ್ಯಾಮೆರಾ ಫೀಚರ್ಸ್‌ನಲ್ಲಿ ಪೋರ್ಟ್ರೇಟ್ ಮೋಡ್ ಅನ್ನು ನೀಡಲಾಗಿದೆ. ಜೊತೆಗೆ 7 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಾಗಿದೆ.

ಬ್ಯಾಟರಿ ಮತ್ತು ಇತರೆ

ಬ್ಯಾಟರಿ ಮತ್ತು ಇತರೆ

ಆಪಲ್‌ ಐಫೋನ್‌SE(2020) ಬ್ಯಾಟರಿ ಸಾಮರ್ಥ್ಯದ ಬಗ್ಗೆ ಯಾವುದೇ ಮಾಹಿತಿಯನ್ನ ಹಂಚಿಕೊಂಡಿಲ್ಲ. ಆದರೆ ಈ ಐಫೋನ್‌ ಬ್ಯಾಟರಿ ಸಾಮರ್ಥ್ಯವೂ ಐಫೋನ್‌ 8 ಮಾದರಿಯನ್ನ ಹೊಂದಿರುವ ಸಾಧ್ಯತೆ ಇದೆ. ಜೊತೆಗೆ ಈ ಬ್ಯಾಟರಿ ಪ್ಯಾಕ್‌ಅಪ್‌ 13 ಗಂಟೆಗಳ ವೀಡಿಯೊ ಪ್ಲೇಬ್ಯಾಕ್ ಟೈಂ ಮತ್ತು 40 ಗಂಟೆಗಳ ಆಡಿಯೊ ಪ್ಲೇಬ್ಯಾಕ್ ಟೈಂ ಹೊಂದಿರುತ್ತದೆ ಎಂದು ಹೇಳಲಾಗುತ್ತಿದೆ. ಆದಾಗ್ಯೂ, ಇದು ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದ್ದು, 18W ಚಾರ್ಜರ್ನೊಂದಿಗೆ 30 ನಿಮಿಷಗಳಲ್ಲಿ 50 ಪ್ರತಿಶತದಷ್ಟು ಚಾರ್ಜ್ ಮಾಡಲಿದೆ. ಕಿ ವೈರ್‌ಲೆಸ್ ಚಾರ್ಜಿಂಗ್ ಬಳಸಿಕೊಂಡು ವಾಯರ್‌ಲೆಸ್ ಚಾರ್ಜಿಂಗ್ ಅನ್ನು ಸಹ ಬೆಂಬಲಿಸಲಾಗುತ್ತದೆ ಎನ್ನಲಾಗಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G VOLTE, ವೈ-ಫೈ 802.11ax, ವೈ-ಫೈ ಕಾಲ್‌, ಎನ್‌ಎಫ್‌ಸಿ, ಬ್ಲೂಟೂತ್ ವಿ 5.0, 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಅನ್ನು ಬೆಂಬಲಿಸಲಿದೆ. ಹಾಗೇಯೆ ಅಕ್ಸೆಲೆರೊಮೀಟರ್, ಆಂಬಿಯೆಂಟ್ ಲೈಟ್ ಸೆನ್ಸರ್, ಬಾರೋಮೀಟರ್, ಮೂರು-ಆಕ್ಸಿಸ್ ಗೈರೊಸ್ಕೋಪ್ ಮತ್ತು ಸಾಮೀಪ್ಯ ಸಂವೇದಕ ಸೇರಿವೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಸದ್ಯ ಭಾರತದಲ್ಲಿ ಐಫೋನ್ SE (2020) ಬೆಲೆ 64GB ಶೇಖರಣಾ ರೂಪಾಂತರಕ್ಕೆ 42,500 ರೂ., 128GB ಶೇಖರಣಾ ರೂಪಾಂತರಕ್ಕೆ 47,800 ರೂ., ಮತ್ತು ರೂ. 256GB ಶೇಖರಣಾ ರೂಪಾಂತರಕ್ಕೆ 58,300 ರೂ. ಎಂದು ಹೇಳಲಾಗಿದೆ. ಜೊತೆಗೆ ಯುಎಸ್ನಲ್ಲಿ 64GB ಮಾದರಿಗೆ $399 (ಸುಮಾರು 30,600 ರೂ.), 128GB ಮಾದರಿಗೆ $499 (ಸುಮಾರು 38,200ರೂ), ಮತ್ತು 256GB ಮಾದರಿಗೆ $549 (ಸುಮಾರು ರೂ. 45,000). ಬೆಲೆಯನ್ನ ಹೊಂದಿದೆ. ಇದಲ್ಲದೆ, ಐಫೋನ್ SE 2020 ಕಪ್ಪು, ಬಿಳಿ ಮತ್ತು ಕೆಂಪು ಬಣ್ಣಗಳ ಆಯ್ಕೆಗಳಲ್ಲಿ ಸಿಗಲಿದೆ. ಯುಎಸ್‌ನಲ್ಲಿ ಇದೇ ಏಪ್ರಿಲ್ 17 ರಿಂದ ಖರೀದಿಸಲು ಲಬ್ಯವಾಗಲಿದೆ. ಆದರೆ ಭಾರತದಲ್ಲಿ ಯಾವಾಗ ಲಬ್ಯವಾಗಲಿದೆ ಎಂಬುದರ ಬಗ್ಗೆ ಇನ್ನು ಯಾವುದೇ ಮಾಹಿತಿ ಅಂತಿಮವಾಗಿಲ್ಲ.

Best Mobiles in India

English summary
iPhone SE price in India: The 64GB model is priced at Rs. 42,500, the 128GB model is priced at Rs. 47,800, while the 256GB variant costs Rs. 58,300.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+