ಕ್ಷಣಗಣನೆ ಶುರು! ನಾಳೆಯೇ ಅಗ್ಗದ iPhone SE 4 ಲಾಂಚ್; ಮಸ್ತ್ ಫೀಚರ್ಸ್.. ರೇಟ್ ಇಷ್ಟೆನಾ?
ಐಫೋನ್ ಪ್ರಿಯರ ಕಾಯುವಿಕೆ ಮುಗಿಯಿತು! ಆಪಲ್ ನಾಳೆಯೇ ಅಗ್ಗದ ಐಫೋನ್ ಬಿಡುಗಡೆ ಮಾಡಲಿದೆ. ಹೌದು, ಕಳೆದ ವರ್ಷ ಆ್ಯಪಲ್ ಕಂಪನಿ ಬಹುನಿರೀಕ್ಷಿತ ಐಫೋನ್ 16 ಸರಣಿಯನ್ನು ಪರಿಚಯಿಸಿತ್ತು. ಸದ್ಯ ಮಾರುಕಟ್ಟೆಯಲ್ಲಿ ಮಾರಾಟ ನಡೆಸುತ್ತಿದೆ. ಇದೀಗ ನಾಳೆ (ಫೆಬ್ರವರಿ 19) ಅಗ್ಗದ ಆಪಲ್ ಐಫೋನ್ SE 4 (iPhone SE 4) ಮೊಬೈಲ್ ಅಧಿಕೃತವಾಗಿ ಲೋಕಾರ್ಪಣೆಯಾಗಲಿದೆ. ಸ್ಮಾರ್ಟ್‌ಫೋನ್ ಪ್ರಿಯರು ಈ ಹೊಸ ಐಫೋನ್ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಬನ್ನಿ, ಈ ಐಫೋನ್ SE 4 ಬೆಲೆ ಮತ್ತು ವಿಶೇಷತೆಗಳನ್ನು ತಿಳಿಯೋಣ.
ಬಹುತೇಕರು ಹೊಸ ಐಫೋನ್ ಖರೀದಿಸಲು ಸಜ್ಜಾಗಿದ್ದಾರೆ. ಅವರಿಗೆ ಇದು ಸಿಹಿಸುದ್ದಿ ಆಗಿದೆ. ಈ ಕಡಿಮೆ ಬಜೆಟ್ ಐಫೋನ್ SE 4 ಮೊಬೈಲ್ ನಾಳೆ ಅಧಿಕೃತವಾಗಿ ಬಿಡುಗಡೆಯಾಗಲಿದೆ. ಇದರ ಬೆಲೆ ಕಡಿಮೆ ಇರುತ್ತದೆ ಮತ್ತು ಇದು ಪ್ರೀಮಿಯಂ ಸ್ಮಾರ್ಟ್‌ಫೋನ್ ಆಗಿದೆ. ಕಂಪನಿಯು 2022 ರಲ್ಲಿ ಐಫೋನ್ SE 3 ಅನ್ನು ಬಿಡುಗಡೆ ಮಾಡಿತ್ತು. ಇದೀಗ, ಹೊಸ ಐಫೋನ್ ಹಲವು ಅಪ್ಡೇಟ್ ವೈಶಿಷ್ಟ್ಯಗಳೊಂದಿಗೆ ಬರುತ್ತಿದೆ. ಇದು ಐಫೋನ್ SE 3 ಫೋನಿಗೆ ಹೋಲಿಸಿದರೆ ದೊಡ್ಡ ಡಿಸ್ಪ್ಲೇ, ಹೆಚ್ಚು ಶಕ್ತಿಶಾಲಿ ಪ್ರೊಸೆಸರ್ ಮತ್ತು ದೊಡ್ಡ ಬ್ಯಾಟರಿ ಹೊಂದಿದೆ.

ಐಫೋನ್ SE 4 ಬಿಡುಗಡೆ ವಿವರ
ಆಪಲ್ ಸಿಇಒ ಟಿಮ್ ಕುಕ್ ಇತ್ತೀಚೆಗೆ ತಮ್ಮ ಎಕ್ಸ್ ಖಾತೆಯಲ್ಲಿ 'ಕುಟುಂಬದ ಹೊಸ ಸದಸ್ಯರನ್ನು ಭೇಟಿ ಮಾಡಲು ಸಿದ್ಧರಾಗಿ' ಎಂದು ಪೋಸ್ಟ್ ಮಾಡಿದ್ದರು. ಇಲ್ಲಿ ಯಾವುದೇ ಫೋನಿನ ಹೆಸರನ್ನು ಉಲ್ಲೇಖಿಸಿಲ್ಲ. ಆದರೆ, ಕುಟುಂಬಕ್ಕೆ ಸೇರುವ ಈ ಹೊಸ ಸದಸ್ಯ ಐಫೋನ್ SE 4 ಆಗಿದೆ. ತಮ್ಮ ಪೋಸ್ಟ್‌ನಲ್ಲಿ ಆಪಲ್ ಸಿಇಒ ಹೊಸ ಐಫೋನ್ ಅನ್ನು ಫೆಬ್ರವರಿ 19 ರಂದು ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದರು. ನಾಳೆ ಐಫೋನ್ SE4 ಲಾಂಚ್ ಆಗಲಿದ್ದು, ಇದರ ಬೆಲೆ ಲೀಕ್ ಆಗಿದೆ.
ಐಫೋನ್ SE 4 ಬೆಲೆ
ಐಫೋನ್ SE 4 ಮೊಬೈಲ್‌ನ ಬೆಲೆ ಐಫೋನ್ 15 ಗಿಂತಲೂ ಕಡಿಮೆ ಇರಲಿದೆ. ವರದಿಯ ಪ್ರಕಾರ, ಈ ಫೋನನ್ನು 43,490 ರೂ.ಗೆ ($499) ಬಿಡುಗಡೆ ಮಾಡುವ ಸಾಧ್ಯತೆಯಿದೆ. ಭಾರತದಲ್ಲಿ ಐಫೋನ್ SE 4 ಅನ್ನು 50 ಸಾವಿರ ರೂ.ಗಿಂತ ಕಡಿಮೆ ಬೆಲೆಯಲ್ಲಿ ಪರಿಚಯಿಸುವ ಸಾಧ್ಯತೆಯಿದೆ. ಕಂಪನಿಯು ಐಫೋನ್ SE 4 ಜೊತೆಗೆ ಹೊಸ ಪವರ್‌ಬೀಟ್ಸ್ ಪ್ರೊ 2 ಇಯರ್‌ಬಡ್‌ಗಳನ್ನು ಸಹ ಬಿಡುಗಡೆ ಮಾಡಬಹುದು ಎಂದು ಹೇಳಲಾಗುತ್ತಿದೆ. ಆದರೆ, ಈ ಆಪಲ್ ಲಾಂಚ್ ಈವೆಂಟ್‌ನಲ್ಲಿ ಪರಿಚಯಿಸಲಾಗುವ ಉತ್ಪನ್ನಗಳ ಸಂಪೂರ್ಣ ವಿವರ ಬಹಿರಂಗವಾಗಿಲ್ಲ.

ಐಫೋನ್ SE 4 ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ಐಫೋನ್ SE 4 ಸ್ಮಾರ್ಟ್‌ಫೋನ್ 6.1 ಇಂಚಿನ ಡಿಸ್ಪ್ಲೇಯನ್ನು ಹೊಂದಿರುತ್ತದೆ. ಈ ಕಾಂಪ್ಯಾಕ್ಟ್ ಐಫೋನ್ ಡಿಸ್ಪ್ಲೇಯನ್ನು OLED ಪ್ಯಾನೆಲ್‌ನಲ್ಲಿ ನಿರ್ಮಿಸಲಾಗಿದೆ. ಈ ಫೋನ್ ಸೂಪರ್ ರೆಟಿನಾ XDR ಡಿಸ್ಪ್ಲೇಯನ್ನು ಹೊಂದಿರಲಿದೆ. ಇದು 460ppi ಪಿಕ್ಸೆಲ್ ಸಾಂದ್ರತೆಯನ್ನು ಸಪೋರ್ಟ್ ಮಾಡಲಿದೆ.
ಪ್ರೊಸೆಸರ್ ಸಾಮರ್ಥ್ಯ
ಈ ಅಗ್ಗದ ಐಫೋನ್ SE 4 ಅನ್ನು ಬಯೋನಿಕ್ A18 ಪ್ರೊಸೆಸರ್‌ನೊಂದಿಗೆ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗುತ್ತದೆ. ವಿಶೇಷವಾಗಿ ಐಫೋನ್ 16 ಬಯೋನಿಕ್ A18 ಪ್ರೊಸೆಸರ್ ಅನ್ನು ಹೊಂದಿದೆ. ಇದು ಸರಾಗವಾಗಿ ಮತ್ತು ವೇಗವಾಗಿ ಕಾರ್ಯನಿರ್ವಹಿಸುತ್ತದೆ. ಐಫೋನ್ 16 ಸರಣಿಯಂತೆ, ಐಫೋನ್ SE 4 ಸಹ 8GB RAM ಅನ್ನು ಹೊಂದಿರುತ್ತದೆ. ಐಫೋನ್ SE 4 ಅನ್ನು ಆಪಲ್ ಇಂಟೆಲಿಜೆನ್ಸ್ ತಂತ್ರಜ್ಞಾನದೊಂದಿಗೆ ಬಿಡುಗಡೆ ಮಾಡಲಾಗುವುದು.
ಕ್ಯಾಮೆರಾ ಸೆಟಪ್
ಮುಂಬರುವ ಐಫೋನ್ SE 4 ಮೊಬೈಲ್ 48 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಹೊಂದಿರುವ ಸಾಧ್ಯತೆಯಿದೆ. ಇದು ಫ್ಲ್ಯಾಷ್ ಲೈಟ್ ಜೊತೆಗೆ ಬರುತ್ತದೆ. ಈ ಹೊಸ ಐಫೋನ್ SE 4 ಸ್ಮಾರ್ಟ್‌ಫೋನ್ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 12 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿರುತ್ತದೆ.


Click it and Unblock the Notifications








