Home
ಸುದ್ದಿಜಾಲ

ಐಫೋನ್‌ ಬಳಕೆದಾರರಿಗೆ ಸಮಸ್ಯೆಯಾಯ್ತು ಟ್ವಿಟರ್‌ ಆಟೋ-ರಿಫ್ರೆಷ್‌..!

By Gizbot Bureau

ಜನಪ್ರಿಯ ಸಾಮಾಜಿಕ ಜಾಲತಾಣ ಟ್ವಿಟರ್ ತನ್ನ ಎಲ್ಲಾ ಬಳಕೆದಾರರು ಅನುಸರಿಸುವ ತಮ್ಮ ನೆಚ್ಚಿನ ಕಂಪನಿ ಮತ್ತು ಜನರ ಇತ್ತೀಚಿನ ಟ್ವೀಟ್‌ಗಳೊಂದಿಗೆ ಅಪ್‌ಡೇಟ್‌ ಆಗಬೇಕೆಂದು ಬಯಸುತ್ತದೆ. ವಾಸ್ತವವಾಗಿ ಟ್ವಿಟರ್‌ ಬಗ್ಗೆ ಯಾವುದೇ ದೂರುಗಳು ಕೇಳಿಬರುವುದಿಲ್ಲ. ಇಷ್ಟಿದ್ದರೂ, ಈ ಫೀಚರ್‌ ಹಲವಾರು ಐಫೋನ್‌ಗಳಿಗೆ ಅತ್ಯಂತ ಕಿರಿಕಿರಿಗೊಳಿಸುತ್ತಿದೆ. ನಿರ್ದಿಷ್ಟವಾಗಿ ಆಪಲ್ ಐಫೋನ್ ಬಳಕೆದಾರರ ಬಗ್ಗೆ ಮಾತನಾಡುತ್ತಿದ್ದು, 'ಸ್ವಯಂ-ರಿಫ್ರೆಶ್’ ಎಂಬ ಈ ಹೊಸ ಫೀಚರ್‌ ಐಒಎಸ್ ಗಾಗಿ ಲಭ್ಯವಿರುವ ಟ್ವಿಟರ್ ಅಪ್ಲಿಕೇಶನ್‌ನಲ್ಲಿ ಮಾತ್ರ ಇದೆ.

ಸಾಮಾಜಿಕ ಮಾಧ್ಯಮದಲ್ಲಿ ಬೆಳಕಿಗೆ

ಸಾಮಾಜಿಕ ಮಾಧ್ಯಮದಲ್ಲಿ ಬೆಳಕಿಗೆ

ಈ ಬಗ್ಗೆ, ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಅಭಿಪ್ರಾಯ ಹೊರಹಾಕಿರುವ ಬಳಕೆದಾರರು, ಸ್ವಯಂ-ರಿಫ್ರೆಶ್‌ ಸ್ವಯಂಚಾಲಿತವಾಗಿ ಮತ್ತು ಅನಾನುಕೂಲಕಾರಿ ಸಮಯಗಳಲ್ಲಿ ನಡೆಯುತ್ತದೆ. ಇದರಿಂದ ಬಳಕೆದಾರರು ಫೀಡ್ ಮೂಲಕ ದಾರಿ ತಪ್ಪುತ್ತಾರೆ. ಸ್ವಯಂ-ರಿಫ್ರೆಶ್ ಆದಾಗ, ಟೈಮ್‌ಲೈನ್ ವೀಕ್ಷಣೆಯು ಮೇಲಕ್ಕೆ ಸ್ಕ್ರಾಲ್ ಆಗುತ್ತದೆ, ಇದರಿಂದ ಓದುಗರು ಫೀಡ್‌ನಲ್ಲಿ ಎಲ್ಲಿದ್ದರು ಎಂಬುದೇ ಮರೆತುಹೋಗುವಂತೆ ಮಾಡುತ್ತದೆ. ಇದರಿಂದ ಬೇಕಾದ ನಿರ್ದಿಷ್ಟ ಟ್ವೀಟ್ ತಲುಪಲು ಫೀಡ್ ಮೂಲಕ ಮತ್ತೊಮ್ಮೆ ಸ್ಕ್ರೋಲ್ ಮಾಡಬೇಕಾಗುತ್ತದೆ.

ನಿಧಾನ ಕಾರ್ಯಕ್ಷಮತೆ

ನಿಧಾನ ಕಾರ್ಯಕ್ಷಮತೆ

9to5Mac ವೆಬ್‌ಸೈಟ್ ವರದಿ ಮಾಡಿದಂತೆ, ಈ ಫೀಚರ್‌ನ್ನು ಒಳಗೊಂಡಿರುವ ಅಪ್‌ಡೇಟ್‌, ಕೆಲವು ಐಫೋನ್ ಬಳಕೆದಾರರಿಗೆ ನಿಧಾನ ಕಾರ್ಯಕ್ಷಮತೆ ಜೊತೆಗೆ ಕೆಲವು ಅಸ್ಥಿರತೆಯ ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ. ಇದರರ್ಥ ಟ್ವೀಟ್‌ ರಚಿಸುವಾಗ ಅಪ್ಲಿಕೇಶನ್ ಕ್ರ್ಯಾಶ್‌ ಆಗಿದೆ. ಇದು ಎಲ್ಲಾ ಐಒಎಸ್ ಸಾಧನಗಳಿಗೆ ಅಪ್ಲಿಕೇಶನ್ ನವೀಕರಣದ ಒಂದು ಭಾಗವಾಗಿದ್ದು, ಐಫೋನ್ 11 ಸೇರಿ ಇತ್ತೀಚಿನ ಸಾಧನಗಳ ಮೇಲೂ ಪರಿಣಾಮ ಬೀರುತ್ತವೆ.

ಇಚ್ಛೆಗೆ ವಿರುದ್ಧವಾಗಿ ರಿಫ್ರೆಷ್

ಇಚ್ಛೆಗೆ ವಿರುದ್ಧವಾಗಿ ರಿಫ್ರೆಷ್

Wcwebbonline ಹೆಸರಿನ ಟ್ವಿಟ್ಟರ್ ಬಳಕೆದಾರರೊಬ್ಬರು ವಿಡಿಯೋವನ್ನು ಸಹ ರೆಕಾರ್ಡ್ ಮಾಡಿದ್ದಾರೆ, ಇದು ದೋಷಯುಕ್ತ ಆಟೋ-ರಿಫ್ರೆಷ್‌ ಫೀಚರ್‌ನ್ನು ತೋರಿಸುತ್ತದೆ. "ಆತ್ಮೀಯ ಟ್ವಿಟರ್ ನಾನು ಟ್ವೀಟ್ ಓದಲು ಪ್ರಯತ್ನಿಸುತ್ತಿರುವಾಗ ನನ್ನ ಇಚ್ಛೆಗೆ ವಿರುದ್ಧವಾಗಿ ಪ್ರತಿ ಎರಡು ನಿಮಿಷಗಳಲ್ಲಿ ಈ ಸ್ವಯಂ-ರಿಫ್ರೆಶ್ ಸಂಭವಿಸುತ್ತದೆ. ಇದು ಬಹಳ ದಿನಗಳಿಂದ ನಡೆಯುತ್ತಿದೆ ಎಂದು ತಮ್ಮ ಟ್ವೀಟ್‌ನಲ್ಲಿ ಹೇಳಿದ್ದಾರೆ.

ಶೀಘ್ರ ಸಮಸ್ಯೆ ಸರಿಪಡಿಸಲು ಆಗ್ರಹ

ಶೀಘ್ರ ಸಮಸ್ಯೆ ಸರಿಪಡಿಸಲು ಆಗ್ರಹ

ಹಾಸ್ಯಾಸ್ಪದ ಸ್ವಯಂ-ರಿಫ್ರೆಶ್‌ ಫೀಚರ್‌ನೊಂದಿಗೆ ಟ್ವಿಟರ್ ಈಗ ಬಹುತೇಕ ನಿಷ್ಪ್ರಯೋಜಕವಾಗಿದೆ, ಟ್ವೀಟ್‌ಗಳನ್ನು ಓದುವಾಗ ನೀವು ಅವುಗಳನ್ನು ಕಳೆದುಕೊಳ್ಳುತ್ತೀರಿ ಮತ್ತು ಅವುಗಳನ್ನು ಮತ್ತೆ ಹುಡುಕಲು ಆಗದಂತ ಸ್ಥಿತಿ ಸೃಷ್ಟಿಯಾಗಿದೆ. ಟ್ವಿಟ್ಟರ್ ಈ ಸಮಸ್ಯೆಯನ್ನು ಬೇಗ ಸರಿಪಡಿಸಬೇಕು. ಇಲ್ಲ, ಜನರು ಟ್ವಿಟರ್‌ನ್ನು ತ್ಯಜಿಸುತ್ತಾರೆ ಎಂದು ಇನ್ನೊಬ್ಬ ಬಳಕೆದಾರರು ಟ್ವೀಟ್ ಮಾಡಿದ್ದಾರೆ.

ಪ್ರತಿಕ್ರಿಯಿಸದ ಟ್ವಿಟರ್

ಪ್ರತಿಕ್ರಿಯಿಸದ ಟ್ವಿಟರ್

ಆದರೆ, ಟ್ವಿಟರ್‌ ಈ ಬಗ್ಗೆ ಇನ್ನೂ ಪ್ರತಿಕ್ರಿಯಿಸಿಲ್ಲ. ಮುಂಬರುವ ದಿನಗಳಲ್ಲಿ ಟ್ವಿಟರ್‌ ಮತ್ತೊಂದು ಒಟಿಎ ಹೊರಡಿಸುವ ನಿರೀಕ್ಷೆಯಿದ್ದು, ಅದರಿಂದ ಐಫೋನ್ ಬಳಕೆದಾರರ ಸಮಸ್ಯೆಯನ್ನು ಪರಿಹರಿಸುತ್ತದೆ.

Best Mobiles in India

English summary
iPhone Users Are Unhappy About The New Twitter Feature
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+