Home
ಸುದ್ದಿಜಾಲ

ಆಪಲ್‌ ಬಳಕೆದಾರರಿಗೆ ಶಾಕಿಂಗ್ ನ್ಯೂಸ್: 6 ತಿಂಗಳಲ್ಲಿ ಡೆಡ್ ಆಗಲಿದೆ ಎಲ್ಲಾ ಐಫೋನ್....!

By Srinidhi

ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ ಜಾರಿಗೆ ತಂದಿರುವ ಹೊಸ ನಿಯಮವನ್ನು ಅನುಸರಿಸದ ಯಾವುದೇ ಸ್ಮಾರ್ಟ್‌ಫೋನ್‌ಗಳಿಗೆ ಟೆಲಿಕಾಂ ಸೇವೆಯನ್ನು ನೀಡಬಾರದು ಎನ್ನುವ ಆದೇಶವನ್ನು ಹೊರಡಿಸಿದೆ. ಟ್ರಾಯ್ ಹೊಸದಾಗಿ DND ಆಪ್ ಅನ್ನು ಲಾಂಚ್ ಮಾಡಿದ್ದು, ಇದಕ್ಕೇ ಸಫೋಟ್ ಮಾಡದ ಯಾವುದೇ ಸ್ಮಾರ್ಟ್‌ಫೋನ್‌ಗಳಿಗೆ ಸೇವೆಯನ್ನು ನೀಡದಂತೆ ಆದೇಶವನ್ನು ಹೊರಡಿಸಿದೆ.

ಇದರಿಂದಾಗಿ ಆಪಲ್ ಬಳಕೆದಾರರು ಸಂಕಷ್ಟಕ್ಕೆ ಸಿಲುಕಿಕೊಳ್ಳಲಿದ್ದಾರೆ. ಕಾರಣ ಆಪಲ್ ತನ್ನ ಐಫೋನ್ ಗಳಲ್ಲಿ DND ಆಪ್ ಅನ್ನು ಬಳಕೆ ಮಾಡಿಕೊಳ್ಳಲು ಅವಕಾಶವನ್ನು ನೀಡುತ್ತಿಲ್ಲ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ನೇರವಾಗಿ ಆಪಲ್‌ಗೆ ಸೆಡ್ಡು ಹೊಡೆಯುವ ಸಲುವಾಗಿ ಮತ್ತು ಭಾರತದಲ್ಲಿತನ್ನ ನಿಯಮಗಳ ಅನುಸಾರವಾಗಿಯೇ ಕಾರ್ಯನಿರ್ವಹಿಸಬೇಕು ಎನ್ನುವುದನ್ನು ಮನದಟ್ಟು ಮಾಡಲು ಜುಲೈ 19 ರಂದು ಸೇವೆಯನ್ನು ನಿಲ್ಲಿಸುವ ಬಗ್ಗೆ ಟೆಲಿಕಾಂ ಕಂಪನಿಗಳಿಗೆ ಸೂಚನೆಯನ್ನು ನೀಡಿದೆ.

ಏನೀದು DND:

ಏನೀದು DND:

ಟ್ರಾಯ್ ಟೆಲಿಕಾಂ ಬಳಕೆದಾರರ ಸಹಾಯಕ್ಕಾಗಿ ಹೊಸದೊಂದು ಆಪ್‌ ಅನ್ನು ಲಾಂಚ್ ಮಾಡಿದ್ದು, ಇದು ಟೆಲಿ ಮಾರ್ಕೆಟಿಂಗ್ ಕರೆಗಳನ್ನು ಮತ್ತು SMSಗಳನ್ನು ತಡೆಹಿಡಿಯುವ ಆಪ್‌ ಆಗಿದೆ. ಈ ಆಪ್ ಬಳಕೆದಾರರ ಕರೆಯ ಲಾಗ್ ಮತ್ತು SMSಗಳನ್ನು ಓದುವ ಮತ್ತು ಸಂಗ್ರಹಿಸುವ ಅಧಿಕಾರವನ್ನು ಹೊಂದಲಿದೆ. ಇದಕ್ಕಾಗಿ ಆಪಲ್ ಇದಕ್ಕೆ ಅನುಮತಿ ನೀಡುತ್ತಿಲ್ಲ.

ಆಪಲ್ ನೀತಿ:

ಆಪಲ್ ನೀತಿ:

ಬಳಕೆದಾರರಿಗೆ ಸಾಕಷ್ಟು ಸೆಕ್ಯೂರಿಟಿಯನ್ನು ನೀಡುವ ಸಲುವಾಗಿ ಹೆಚ್ಚಿನ ಪ್ರಮಾದ ಆಪ್‌ಗಳನ್ನು ಫಿಲ್ಟರ್ ಮಾಡುವ ಆಪಲ್, ಈ ಬಾರಿ ಟ್ರಾಯ್ ಬಿಡುಗಡೆ ಮಾಡಲಿರುವ DND ಆಪ್‌ ಬಳಕೆದಾರರನ್ನು ಮಾಹಿತಿಯ ಆಕ್ಸಿಸ್ ಅನ್ನು ಪಡೆಯುವುದಕ್ಕೆ ತಡೆಯನ್ನು ಓಡಿದೆ. ಕಾರಣ ಐಫೋನ್ ಆಪ್‌ಗಳು ಬಳಕೆದಾರರ ಕರೆಯ ಲಾಗ್ ಮತ್ತು SMSಗಳನ್ನು ಓದುವ ಮತ್ತು ಸಂಗ್ರಹಿಸುವ ಅಧಿಕಾರವನ್ನು ಹೊಂದುವ ಹಾಗೆ ಇಲ್ಲ.

ಆಪ್‌ ಪ್ರಿಲೋಡ್:

ಆಪ್‌ ಪ್ರಿಲೋಡ್:

ಟ್ರಾಯ್ ಲಾಂಚ್ ಮಾಡಿರುವ ಟೆಲಿ ಮಾರ್ಕೆಟಿಂಗ್ ಕರೆಗಳನ್ನು ಮತ್ತು SMSಗಳನ್ನು ತಡೆಹಿಡಿಯುವ ಸಲುವಾಗಿ ಕರೆಯ ಲಾಗ್ ಮತ್ತು SMSಗಳನ್ನು ಓದುವ ಮತ್ತು ಸಂಗ್ರಹಿಸುವ DND ಆಪ್‌ ಅನ್ನು ಎಲ್ಲಾ ಸ್ಮಾರ್ಟ್‌ಫೋನ್ ಕಂಪನಿಗಳು ಪ್ರೀಲೋಡ್ ಆಗಿ ನೀಡಬೇಕು ಎಂಬ ನಿಯಮವನ್ನು ಟ್ರಾಯ್ಸ್ ಜಾರಿಗೆ ತಂದಿದೆ.

ಆಪಲ್:

ಆಪಲ್:

ಆದರೆ ಆಪಲ್ DND ಆಪ್‌ ಅನ್ನು ಪ್ರಿಲೋಡ್ ಮಾಡಲು ಹಿಂದೆಟು ಹಾಕುತ್ತಿದೆ. ಇದರಿಂದಾಗಿ ಐಫೋನ್ ಗಳು ಮುಂದಿನ ದಿನಗಳಲ್ಲಿ ಯಾವುದೇ ಟೆಲಿಕಾಂ ನೆಟ್‌ವರ್ಕ್‌ನಲ್ಲಿ ಕಾರ್ಯನಿರ್ವಹಿಸಲು ಶಕ್ತವಾಗುವುದಿಲ್ಲ ಎನ್ನಲಾಗಿದೆ. ಎಲ್ಲಾ ಟೆಲಿಕಾಂ ಕಂಪನಿಗಳು ಐಫೋನ್‌ಗಳಿಗೆ ತಮ್ಮ ಸೇವೆಯನ್ನು ಸ್ಥಗಿತಗೊಳಿಸಲಿವೆ ಎನ್ನಲಾಗಿದೆ.

ಆಪ್‌ ಗೆ ಅನುಮತಿ ನೀಡಲೇ ಬೇಕು:

ಆಪ್‌ ಗೆ ಅನುಮತಿ ನೀಡಲೇ ಬೇಕು:

ಭಾರತದಲ್ಲಿ ಐಪೋನ್‌ಗಳು ಕಾರ್ಯನಿರ್ವಹಿಸಬೇಕು ಎಂದಾದರೆ ಟ್ರಾಯ್ಸ್ ನಿಯಮದಂತೆ ತನ್ನ ಐಫೋನ್ ಗಳಲ್ಲಿ ಈ ಹೊಸ ಸೇವೆಗೆ ಅನುಮತಿಯನ್ನು ನೀಡಲೇಬೇಕು ಇಲ್ಲವಾದರೆ ದೊಡ್ಡ ಪ್ರಮಾಣದಲ್ಲಿ ತೊಂದರೆಯನ್ನು ಅನುಭವಿಸಬೇಕಾಗುತ್ತದೆ. ಅಲ್ಲದೇ ಐಫೋನ್ ಗಳು ಕೆಲಸಕ್ಕೆ ಬಾರದ ವಸ್ತುಗಳಾಗಲಿವೆ,

ಆರು ತಿಂಗಳ ಅವಕಾಶ:

ಆರು ತಿಂಗಳ ಅವಕಾಶ:

ಆಪಲ್ ಸೇರಿದಂತೆ ಎಲ್ಲಾ ಸ್ಮಾರ್ಟ್‌ಫೋನ್ ತಯಾರಕ ಕಂಪನಿಗಳು ಟ್ರಾಯ್ ಬಿಡುಗಡೆ ಮಾಡಿರುವ DND ಆಪ್ ಅನ್ನು ಸಪೋರ್ಟ್ ಮಾಡಲೇ ಬೇಕು. ಇದಕ್ಕಾಗಿ ಆರು ತಿಂಗಳ ಕಾಲಾವಶವನ್ನು ನೀಡಲಾಗಿದೆ. ಇದನ್ನು ಮೀರಿದರೆ ಟೆಲಿಕಾಂ ಕಂಪನಿಗಳು ತಮ್ಮ ಸೇವೆಯನ್ನು ಸ್ಥಗಿತಗೊಳಿಸಲಿವೆ ಎನ್ನಲಾಗಿದೆ.

Best Mobiles in India

English summary
iPhones may soon stop working on any network in India: Here's why. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+