ಗೂಗಲ್ ಅಸಿಸ್ಟೆಂಟ್ ನಲ್ಲಿ ಐಪಿಎಲ್ ಬಗ್ಗೆ ಏನು ಪ್ರಶ್ನೆ ಬೇಕಿದ್ದರೂ ಕೇಳಬಹುದು!
ದೇಶದ ಪ್ರಮುಖ ಕ್ರಿಕೆಟ್ ಟೂರ್ನಮೆಂಟ್ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) 2019 ಆರಂಭವಾಗಿದೆ.ಮೇ ಮಧ್ಯಭಾಗದ ವರೆಗೆ ಈ ಕ್ರಿಕೆಟ್ ಟೂರ್ನಮೆಂಟ್ ನಡೆಯಲಿದೆ. ಯಾವುದೇ ಕ್ರಿಕೆಟ್ ಅಭಿಮಾನಿಗಳು ಕೂಡ ಈ ಮ್ಯಾಚ್ ಗಳನ್ನು ತಪ್ಪಿಸಿಕೊಳ್ಳುವುದಕ್ಕೆ ಇಷ್ಟಪಡುವುದಿಲ್ಲ. ಆದರೆ ಇತರೆ ಕೆಲಸಗಳು ಕೂಡ ಇರುತ್ತದೆ ಮತ್ತು ಅವುಗಳ ಮಧ್ಯೆ ಯಾವಾಗಲೂ ಮ್ಯಾಚ್ ನೋಡುತ್ತಾ ಕುಳಿತುಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ.
ಹಾಗಾಗಿ ಐಪಿಎಲ್ ಬಗ್ಗೆ ಹೆಚ್ಚುವರಿ ಮಾಹಿತಿಗಳನ್ನು, ಸಂತೋಷ ನೀಡುವ ಸಂಗತಿಗಳನ್ನು ಮತ್ತು ಪ್ಲೇಯರ್, ಕ್ರಿಕೆಟ್ ನಡೆಯುವ ಜಾಗ ಸೇರಿದಂತೆ ಐಪಿಎಲ್ ಬಗೆಗಿನ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ಇಚ್ಛಿಸುವವರಿಗೆ ಇಲ್ಲೊಂದು ಮಾರ್ಗವಿದೆ.

ಗೂಗಲ್ ಅಸಿಸ್ಟೆಂಟ್ ಬಳಸಿ ಸಂಪೂರ್ಣ ಮಾಹಿತಿ :
ಮ್ಯಾಚ್ ಸ್ಕೋರ್ ಮತ್ತು ಇತರೆ ಮ್ಯಾಚ್ ಸಂಬಂಧಿ ಪ್ರಶ್ನೆಗಳಿಗೆ ಉತ್ತರ ಪಡೆಯುವುದಕ್ಕೆ ನಿಮಗೆ ಗೂಗಲ್ ಅಸಿಸ್ಟೆಂಟ್ ನಿಮ್ಮ ನೆರವಿಗೆ ಬರುತ್ತದೆ.

ಐಪಿಎಲ್ ಬಗ್ಗೆ ಸಂಪೂರ್ಣ ಮಾಹಿತಿ:
ವರ್ಚುವಲ್ ವಾಯ್ಸ್ ಅಸಿಸ್ಟೆಂಟ್ ನ್ನು ಬಳಸಿ ಕ್ರಿಕೆಟ್ ಪ್ರೇಮಿಗಳು ಐಪಿಎಲ್ ಮ್ಯಾಚ್ ಗಳ ಬಗ್ಗೆ ಮಾಹಿತಿಯನ್ನು ಪಡೆಯುತ್ತಲೇ ಇರುವುದಕ್ಕೆ ಅವಕಾಶವಿದೆ.
ಲೈವ್ ಐಪಿಲ್ ಸ್ಕೋರ್, ಮುಂಬರುವ ಐಪಿಎಲ್ ಮ್ಯಾಚ್ ಗಳು ಮತ್ತು ನಿಮ್ಮ ನೆಚ್ಚಿನ ಆಟಗಾರ ಮುಂದಿನ ಆಟದಲ್ಲಿ ಆಡಲಿದ್ದಾರೆಯೇ ಅಥವಾ ಇಲ್ಲವೇ ಇತ್ಯಾದಿ ಎಲ್ಲಾ ಮಾಹಿತಿಗಳನ್ನು ನೀವು ಗೂಗಲ್ ಅಸಿಸ್ಟೆಂಟ್ ಬಳಿ ಕೇಳಿ ತಿಳಿದುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಐಪಿಎಲ್ ಪ್ರೇಮಿಗಳು 'What's the IPL schedule?'.ಎಂಬಂತ ಪ್ರಶ್ನೆಗಳನ್ನು ಬೇಕಿದ್ದರೂ ಗೂಗಲ್ ಅಸಿಸ್ಟೆಂಟ್ ಬಳಿ ಕೇಳುವುದಕ್ಕೆ ಅವಕಾಶವಿದೆ.

ಹಾಸ್ಯಾಸ್ಪದ ಪ್ರಶ್ನೆಗಳಿಗೂ ಅವಕಾಶ:
ಐಪಿಎಲ್ ಬಗೆಗಿನ ಕೆಲವು ಹಾಸ್ಯಾಸ್ಪದ ಪ್ರಶ್ನೆಗಳನ್ನು ಗೂಗಲ್ ಅಸಿಸ್ಟೆಂಟ್ ನಲ್ಲಿ ಕೇಳುವುದಕ್ಕೂ ಕೂಡ ಅವಕಾಶವಿರುತ್ತದೆ. ಉದಾಹರಣೆಗೆ ಗೂಗಲ್ ಅಸಿಸ್ಟೆಂಟ್ ಬಳಿ ನಿನಗೆ ಬ್ಯಾಟಿಂಗ್ ಇಷ್ಟವೋ ಇಲ್ಲ ಬೌಲಿಂಗ್ ಇಷ್ಟವೋ?, ನಿನಗೆ ಹೆಲಿಕಾಪ್ಟರ್ ಶಾಟ್ ಇಷ್ಟವಿದೆಯೇ? ಐಪಿಲ್ ಸೀಸನ್ ಬಗ್ಗೆ ನೀನೇನು ಊಹಿಸುತ್ತಿದ್ದೀಯಾ? ಇತ್ಯಾದಿ ಪ್ರಶ್ನೆಗಳನ್ನು ಬೇಕಿದ್ದರೂ ಕೇಳಬಹುದು. ಅಷ್ಟೇ ಅಲ್ಲ ಮುಂಬೈ ಇಂಡಿಯನ್ಸ್ ಪ್ಲೇಯರ್ ಲಿಸ್ಟ್ ನ್ನು ಬೇಕಿದ್ದರೂ ಕೇಳಬಹುದು.

ನಾಲ್ಕು ಭಾರತೀಯ ಭಾಷೆಗಳಿಗೆ ಬೆಂಬಲ:
ಮೊಬೈಲ್ ವರ್ಲ್ಡ್ ಕಾಂಗ್ರೆಸ್ 2019 ರಲ್ಲಿ ಗೂಗಲ್ ಅಸಿಸ್ಟೆಂಟ್ ನಾಲ್ಕು ಪ್ರಮುಖ ಭಾರತೀಯ ಭಾಷೆಗಳಿಗೆ ಬೆಂಬಲ ನೀಡುವ ಬಗ್ಗೆ ಪ್ರಕಟಣೆ ನೀಡಿತ್ತು. ಹೌದು ನಾಲ್ಕು ಪ್ರಮುಖ ಭಾಷೆಗಳನ್ನು ಗೂಗಲ್ ಸಂಸ್ಥೆ ಗೂಗಲ್ ಅಸಿಸ್ಟೆಂಟ್ ಗೆ ಸೇರಿಸಿದೆ.ಗುಜರಾತಿ, ಕನ್ನಡ, ಉರ್ದು ಮತ್ತು ಮಳಯಾಳಂ ಭಾಷೆಗಳು ಇದರಲ್ಲಿ ಸೇರಿವೆ. ಹೆಚ್ಚುವರಿಯಾಗಿ ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಸ್ವಿಚ್ ಆಗುವುದಕ್ಕೂ ಕೂಡ ಇದರಲ್ಲಿ ಅನುಕೂಲವನ್ನು ಮಾಡಿಕೊಡಲಾಗಿದೆ.

ಸುಲಭದಲ್ಲಿ ಭಾಷೆಯ ಬದಲಾವಣೆ:
ಓಕೆ ಗೂಗಲ್, ಟಾಕ್ ಟು ಮಿ ಇನ್ ತೆಲುಗು ಎಂದು ಹೇಳುವ ಮೂಲಕ ಗೂಗಲ್ ಅಸಿಸ್ಟೆಂಟ್ ನ ಭಾಷೆಯನ್ನು ಬದಲಾಯಿಸುವುದಕ್ಕೆ ಸಾಧ್ಯವಾಗುತ್ತದೆ. ವಾಯ್ಸ್ ಟೈಪಿಂಗ್ ಬೆಂಬಲವನ್ನು ಕೂಡ ಫೋನ್ ಗಳಲ್ಲಿ ತರುವ ಬಗ್ಗೆ ಈಗಾಗಲೇ ಗೂಗಲ್ ಹೇಳಿದೆ. ಅದಕ್ಕಾಗಿ ಕಿಯೋಸ್ ಕೀಬೋರ್ಡ್ ಬೆಂಬಲ ಪಡೆಯಲಾಗುತ್ತದೆ ಎಂದು ತಿಲಿದುಬಂದಿದೆ. ಹೊಸ ಬೆಂಬಲದಿಂದಾಗಿ ಅಸಿಸ್ಟೆಂಟ್ ಮೆಸೇಜ್ ಟೈಪಿಂಗ್ ನ್ನು ಸುಲಭದಲ್ಲಿ ಮಾಡುವುದಕ್ಕೆ ಗೂಗಲ್ ಅನುಕೂಲ ಮಾಡಿಕೊಡುತ್ತದೆ ಎಂದು ತಿಳಿದುಬಂದಿದೆ.


Click it and Unblock the Notifications