Home
ಸುದ್ದಿಜಾಲ

IPL 2023 ಟಿಕೆಟ್‌ ಅನ್ನು ಆನ್‌ಲೈನ್‌ನಲ್ಲಿ ಬುಕ್‌ ಮಾಡುವುದು ಹೇಗೆ?

ಕ್ರಿಕೆಟ್‌ ಪ್ರಿಯರ ಹಬ್ಬ, ವಿಶ್ವ ಕ್ರಿಕೆಟ್‌ ಅನ್ನೇ ತನ್ನತ್ತ ಸೆಳೆದಿರುವ ಐಪಿಎಲ್‌ 2023 ಸೀಸನ್‌ ಅದ್ದೂರಿಯಾಗಿ ಪ್ರಾರಂಭವಾಗಿದೆ. ಎಂದಿನಂತೆ ಈ ಭಾರಿಯು ಕೂಡ ಐಪಿಎಲ್‌ 2023 ಪಂದ್ಯಗಳನ್ನು ನೋಡವುದಕ್ಕೆ ಕ್ರಿಕೆಟ್‌ ಪ್ರಿಯರು ಸೇರುತ್ತಿದ್ದಾರೆ. ಅದರಲ್ಲೂ ಮೈದಾನಗಳಿಗೆ ತೆರಳಿ ತಮ್ಮ ನೆಚ್ಚಿನ ತಂಡವನ್ನು ಬೆಂಬಲಿಸುವುದಕ್ಕೆ ಮುಗಿಬೀಳುತ್ತಿದ್ದಾರೆ.

ಹೌದು, ಐಪಿಎಲ್‌ 2023 ಕ್ರಿಕೆಟ್‌ ಪಂದ್ಯಾವಳಿಗಳನ್ನು ಮೈದಾನದಲ್ಲಿ ವೀಕ್ಷಿಸುವುದಕ್ಕೆ ಕ್ರಿಕೆಟ್‌ ಪ್ರಿಯರು ಮುಗಿಬೀಳುತ್ತಿದ್ದಾರೆ. ಇದಕ್ಕಾಗಿ ತಮ್ಮ ನೆಚ್ಚಿನ ತಂಡಗಳ ಕಾದಾಟದ ದಿನಗಳ ಟಿಕೆಟ್‌ ತೆಗೆದುಕೊಳ್ಳು ಸ್ಟೆಡಿಯಂ ಮುಂದೆ ಸರದಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಹಾಗಾದ್ರೆ ಐಪಿಎಲ್‌ 2023 ಟಿಕೆಟ್‌ ಪಡೆದುಕೊಳ್ಳುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

IPL 2023 ಟಿಕೆಟ್‌ ಅನ್ನು ಆನ್‌ಲೈನ್‌ನಲ್ಲಿ ಬುಕ್‌ ಮಾಡುವುದು ಹೇಗೆ?

IPL 2023 ಗಾಗಿ ಟಿಕೆಟ್ ಬುಕ್ ಮಾಡುವುದು ಹೇಗೆ?

IPL 2023 ಪಂದ್ಯಾವಳಿಯ ಟಿಕೆಟ್‌ ಬೆಲೆ ಟೀಂ ಮತ್ತು ಸ್ಟೇಡಿಯಂ ಆಧಾರದ ಮೇಲೆ ಬದಲಾಗಲಿದೆ. ಅದರಂತೆ ಪಂದ್ಯದ ಟಿಕೆಟ್‌ ಬೆಲೆ 400ರೂ. ರಿಂದ ಪ್ರಾರಂಭವಾಗಲಿದ್ದು, 30,000ರೂ. ವರೆಗೂ ಇರಲಿದ. ಆದರೆ ಹೆಚ್ಚುವರಿ ಅತಿಥ್ಯದ ಆದಾರದ ಮೇಲೆ ಟಿಕೆಟ್‌ ದರವಿರಲಿದೆ. ಇನ್ನು ಹಲವು ಫ್ರಾಂಚೈಸಿಗಳು ಸಹ ಸ್ಥಳದಲ್ಲಿ ಟಿಕೆಟ್‌ಗಳನ್ನು ಮಾರಾಟ ಮಾಡುವುದರಿಂದ ವೀಕ್ಷಕರು ಸ್ಟೇಡಿಯಂ ಟಿಕೆಟ್ ಕೌಂಟರ್‌ಗಳಲ್ಲಿ ಕೂಡ ಖರೀದಿಸಬಹುದು. ಇದಲ್ಲದೆ ಇನ್ನು ಕೆಲವು ಫ್ರಾಂಚೈಸಿಗಳು BookMyShow ಮತ್ತು PayTM ಇನ್ಸೈಡರ್‌ನಲ್ಲಿ ಕೂಡ ಟಿಕೆಟ್‌ಗಳನ್ನು ಮಾರಾಟ ಮಾಡುತ್ತಿದ್ದು, ಅಧಿಕೃತ ವೆಬ್‌ಸೈಟ್‌ಗಳ ಮೂಲಕ ಟಿಕೆಟ್‌ಗಳನ್ನು ಖರೀದಿಸಬಹುದಾಗಿದೆ.

IPL 2023 ಟಿಕೆಟ್‌ ಅನ್ನು ಆನ್‌ಲೈನ್‌ನಲ್ಲಿ ಬುಕ್‌ ಮಾಡುವುದು ಹೇಗೆ?

ಇನ್ನು ಐಪಿಎಲ್‌ ತಂಡಗಳ ಬುಕಿಂಗ್‌ ಟಿಕೆಟ್‌ಗಳು ಪ್ರತಿ ಪಂದ್ಯಕ್ಕೆ ಹೋಮ್‌ ಸ್ಟೇಡಿಯಂ ಅನ್ನು ಅವಲಂಬಿಸಿರುತ್ತದೆ. ಅದರಂತೆ ಹೋಮ್‌ ಫ್ರಾಂಚೈಸಿಗಳು ತಮ್ಮದೇ ಆದ ಟಿಕೆಂಟಿಂಗ್‌ ಪಾಲುದಾರರನ್ನು ಆರಿಸಿಕೊಳ್ಳುತ್ತಾರೆ. ಅದರಂತೆ ಕೆಲವು ಫ್ರಾಂಚೈಸಿಗಳು BookMyShow ಅಥವಾ PayTM ಇನ್ಸೈಡರ್‌ಗೆ ಹೋಗಲು ಆಯ್ಕೆ ಮಾಡಿಕೊಂಡಿವೆ. ಇನ್ನು ಕೆಲವು ಫ್ರಾಂಚೈಸಿಗಳು ತಮ್ಮ ಸ್ವಂತ ವೆಬ್‌ಸೈಟ್‌ಗಳಲ್ಲಿ ಟಿಕೆಟ್‌ಗಳನ್ನು ಖರೀದಿಸುವುದಕ್ಕೆ ಅವಕಾಶ ನೀಡಿವೆ.

IPL 2023 ಟಿಕೆಟ್‌ ಅನ್ನು ಆನ್‌ಲೈನ್‌ನಲ್ಲಿ ಬುಕ್‌ ಮಾಡುವುದು ಹೇಗೆ?

ಸದ್ಯ ಗುಜರಾತ್ ಟೈಟಾನ್ಸ್, ಲಕ್ನೋ ಸೂಪರ್ ಜೈಂಟ್ಸ್, ಪಂಜಾಬ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ಟೀಂಗಳು ವೀಕ್ಷಕರಿಗೆ PayTM ಇನ್‌ಸೈಡರ್ ಮೂಲಕ ಟಿಕೆಟ್ ಬುಕಿಂಗ್‌ ಮಾಡಲು ಅವಕಾಶ ನೀಡಿವೆ. ಆದರೆ ರಾಜಸ್ಥಾನ್ ರಾಯಲ್ಸ್, ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಮುಂಬೈ ಇಂಡಿಯನ್ಸ್ ಟೀಂಗಳು BookMyShow ಮೂಲಕ ಟಿಕೆಟ್‌ ಬುಕ್ ಮಾಡುವುದಕ್ಕೆ ಅವಕಾಶ ಕಲ್ಪಿಸಿವೆ. ಇದೆಲ್ಲದಕ್ಕಿಂತ ಮುಖ್ಯವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಟಿಕೆಟ್‌ಗಳನ್ನು ಪ್ರಾಂಚೈಸಿಯ ಅಧಿಕೃತ ವೆಬ್‌ಸೈಟ್‌ಗಳಲ್ಲಿ ಬುಕ್ ಮಾಡುವುದಕ್ಕೆ ಅವಕಾಶ ನೀಡಿವೆ.

ಇನ್ನು ಈ ವರ್ಷ ಮುಕೇಶ್ ಅಂಬಾನಿ ಒಡೆತನದ ಜಿಯೋ ಸಿನಿಮಾದಲ್ಲಿ IPL 2023 ಕ್ರಿಕೆಟ್‌ ಪಂದ್ಯಗಳು ಪ್ರಸಾರ ವಾಗುವುದರಿಂದ ವೀಕ್ಷಕರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ. ಇದರೊಂದಿಗೆ ಇನ್ನು ಹಲವು ಆ್ಯಪ್‌ಗಳಲ್ಲಿ ನೀವು ಐಪಿಎಲ್‌ ಮ್ಯಾಚ್‌ಗಳನ್ನು ನೋಡಬಹುದಾಗಿದೆ.

IPL 2023 ಟಿಕೆಟ್‌ ಅನ್ನು ಆನ್‌ಲೈನ್‌ನಲ್ಲಿ ಬುಕ್‌ ಮಾಡುವುದು ಹೇಗೆ?

ಜಿಯೋ ಸಿನಿಮಾ

ಮುಕೇಶ್‌ ಅಂಬಾನಿ ಒಡೆತನದ ಜಿಯೋಸಿನಿಮಾ ಅಪ್ಲಿಕೇಶನ್‌ ಐಪಿಎಲ್‌ 2023-27 ಸೀಸನ್‌ ಪ್ರಸಾರದ ಹಕ್ಕುಗಳನ್ನು ಹೊಂದಿದೆ. ಆದರಿಂದ ಜಿಯೋ ಸಿನಿಮಾ ಅಪ್ಲಿಕೇಶನ್‌ನಲ್ಲಿ ಐಪಿಎಲ್‌ ಕ್ರಿಕೆಟ್‌ ಪಂದ್ಯಗಳನ್ನು ಲೈವ್‌ ಸ್ಟ್ರೀಮ್‌ ಮಾಡಲಾಗುತ್ತದೆ. ಇನ್ನು ಜಿಯೋ ಎಲ್ಲಾ IPL ಪಂದ್ಯಗಳನ್ನು 4K ಗುಣಮಟ್ಟದಲ್ಲಿ ಉಚಿತವಾಗಿ ಸ್ಟ್ರೀಮ್ ಮಾಡುವುದಾಗಿ ಹೇಳಿಕೊಂಡಿದೆ. ಇದಲ್ಲದೆ ಜಿಯೋ ಸಿನಿಮಾದಲ್ಲಿ ಐಪಿಎಲ್‌ ಕ್ರಿಕೆಟ್‌ ಪಂದ್ಯಗಳನ್ನು 12 ವಿವಿಧ ಭಾಷೆಗಳಲ್ಲಿ ಸ್ಟ್ರೀಮ್ ಮಾಡಲಿದೆ. ಇದರಿಂದ ನಿಮ್ಮ ಆಯ್ಕೆಯ ಭಾಷೆಯಲ್ಲಿ ಕ್ರಿಕೆಟ್‌ ಕಾಮೆಂಟರಿಯನ್ನು ಕೇಳುತ್ತಾ ಪಂದ್ಯವನ್ನು ವೀಕ್ಷಿಸಬಹುದಾಗಿದೆ.

Best Mobiles in India

English summary
The biggest cricket league is happening, and that’s reason enough for fans to stay glued to their screens or book tickets to the live match.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+