ಜಿಯೋದಿಂದ ಐತಿಹಾಸಿಕ IPL ಆಫರ್ ಬಿಡುಗಡೆ!..ಗ್ರಾಹಕರು ಫುಲ್ ಖುಷ್!
ಭಾರತೀಯರ ಕ್ರೀಡಾ ಹಬ್ಬ ಎಂದೇ ಕರೆಸಿಕೊಳ್ಳುವ IPL (ಇಂಡಿಯನ್ ಪ್ರೀಮಿಯರ್ ಲೀಗ್) ಕ್ರಿಕೆಟ್ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಇದೇ ಮಾರ್ಚ್ ೨೨ ರಿಂದ ಆರಂಭವಾಗತ್ತಿರುವ ಐಪಿಎಲ್ ಕ್ರೀಡಾಕೂಟವನ್ನು ವೀಕ್ಷಿಸಲು ಭಾರತದ ಸೇರಿದಂತೆ ಪ್ರಪಂಚದಾದ್ಯಂತ ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಎದುರು ನೋಡುತ್ತದ್ದಾರೆ. ಇದೇ ವೇಳೆಯಲ್ಲಿ ರಿಲಯನ್ಸ್ ಜಿಯೋ ತನ್ನೆಲ್ಲಾ ಗ್ರಾಹಕರಿಗೆ ಭರ್ಜರಿ ಸಿಹಿಸುದ್ದಿಯೊಂದನ್ನು ನೀಡಿದೆ. ಹೌದು, ಇಂಡಿಯನ್ ಪ್ರೀಮಿಯರ್ ಲೀಗ್‌ನ ವ್ಯಾಪಕ ಆಕರ್ಷಣೆಯನ್ನು ಬಳಸಿಕೊಳ್ಳಲು ಮುಂದಾಗಿರುವ ರಿಲಯನ್ಸ್ ಜಿಯೋ 299 ರೂ. ಅಥವಾ ಅದಕ್ಕಿಂತ ಹೆಚ್ಚಿನ ಯೋಜನೆಯೊಂದಿಗೆ ರೀಚಾರ್ಜ್ ಮಾಡುವ ತನ್ನೆಲ್ಲಾ ಗ್ರಾಹಕರಿಗೆ ಉಚಿತ ಐಪಿಎಲ್ ವೀಕ್ಷಣೆಯನ್ನು ಒದಗಿಸುವುದಾಗಿ ತಿಳಿಸಿದೆ. ಜಿಯೋಸಿನೆಮಾ ಮತ್ತು ಡಿಸ್ನಿ+ ಹಾಟ್‌ಸ್ಟಾರ್‌ನ ಸಂಯೋಜನೆಯ ನಂತರ ಜಿಯೋಹಾಟ್‌ಸ್ಟಾರ್ ಸ್ಟ್ರೀಮಿಂಗ್ ಸೇವೆ ಆರಂಭವಾದ ನಂತರ ಈ ರೀತಿಯ ಭರ್ಜರಿ ಕೊಡುಗೆಯೊಂದನ್ನು ಘೋಷಿಸಿದೆ.
ರಿಲಯನ್ಸ್ ಜಿಯೋವಿನ ಅಸ್ತಿತ್ವದಲ್ಲಿರುವ ಮತ್ತು ಎಲ್ಲಾ ಹೊಸ ಗ್ರಾಹಕರಿಗೆ ಉಚಿತ ಜಿಯೋಹಾಟ್‌ಸ್ಟಾರ್ ಚಂದಾದಾರಿಕೆಗಳು ಮತ್ತು ಹೈ-ಸ್ಪೀಡ್ ಇಂಟರ್ನೆಟ್ ಅನ್ನು ಒದಗಿಸುವುದಾಗಿ ಜಿಯೋ ಕಂಪೆನಿ ತಿಳಿಸಿದೆ. ಇದೇ ಮಾರ್ಚ್ 17 ರಿಂದ ಮಾರ್ಚ್ 31 ರವರೆಗೆ ಮಾತ್ರ ಈ ಆಫರ್ ಲಭ್ಯವಿರಲಿದ್ದು, ಜಿಯೋವಿನ ಎಲ್ಲಾ ಗ್ರಾಹಕರು 299 ರೂ. ಮೇಲ್ಪಟ್ಟ ರೀಚಾರ್ಜ್ ಯೋಜನೆಗಳ ಜೊತೆಗೆ 90 ದಿನಗಳ ಉಚಿತ ಜಿಯೋಹಾಟ್‌ಸ್ಟಾರ್ ಚಂದಾದಾರಿಕೆಯನ್ನು ಪಡೆಯುತ್ತಾರೆ. ಇದು ಅವರಿಗೆ ಹೋಮ್ ಟಿವಿ ಅಥವಾ ಮೊಬೈಲ್ ಸಾಧನದಲ್ಲಿ 4K ರೆಸಲ್ಯೂಶನ್‌ನಲ್ಲಿ ಐಪಿಎಲ್ ಪಂದ್ಯಗಳನ್ನು ವೀಕ್ಷಿಸಲು ಅನುಮತಿಸುತ್ತದೆ ಎಂದು ತಿಳಿಸಿದೆ. ಆದರೆ, ಈಗಾಗಲೇ ರೀಚಾರ್ಜ್ ಹೊಂದಿರುವ ಗ್ರಾಹಕರಿಗೆ ಈ ಲಾಭ ದೊರೆಯುತ್ತಿಲ್ಲ.! ಏಕೆಂದರೆ, ಈಗಾಗಲೇ ಸಕ್ರಿಯ ರೀಚಾರ್ಜ್ ಯೋಜನೆಯನ್ನು ಹೊಂದಿರುವ ಗ್ರಾಹಕರು 100 ರೂ. ಪ್ಯಾಕ್ ಅನ್ನು ಆಯ್ಕೆ ಮಾಡಬಹುದು ಎಂದು ಕಂಪನಿ ಹೇಳಿದೆ.
ಜಿಯೋ 299 ರೂ. ರೀಚಾರ್ಜ್ ಯೋಜನೆಯೊಂದಿಗೆ ಅನಿಯಮಿತ ಧ್ವನಿ ಕರೆಗಳು, ದಿನಕ್ಕೆ 1.5GB ಡೇಟಾ ಮತ್ತು 100 SMS ಮತ್ತು ಜಿಯೋಕ್ಲೌಡ್ ಮತ್ತು ಜಿಯೋಟಿವಿಯಂತಹ ಬಂಡಲ್ ಮಾಡಿದ ಅಪ್ಲಿಕೇಶನ್‌ಗಳಿಗೆ ಪ್ರವೇಶವನ್ನು ನೀಡುತ್ತದೆ. ಬಳಕೆದಾರರು ಈ ರೀಚಾರ್ಜ್ ಯೋಜನೆ ಅಥವಾ ಹೆಚ್ಚಿನ ಬೆಲೆಯ ಯೋಜನೆಯೊಂದಿಗೆ ಈ ಎಲ್ಲಾ ಪ್ರಯೋಜನಗಳನ್ನು ಪಡೆಯಬಹುದು. ಒಂದು ವೇಳೆ ನೀವು ಅನಿಯಮಿತ ಇಂಟರ್‌ನೆಟ್ ಬಯಸಿದರೆ, ದಿನಕ್ಕೆ 2GB ಅಥವಾ ಅದಕ್ಕಿಂತ ಹೆಚ್ಚಿನದನ್ನು ನೀಡುವ ಯೋಜನೆಗಳಿಗೆ ರೀಚಾರ್ಜ್ ಮಾಡಬಹುದು. "ಕೇವಲ ಒಂದು ಜಿಯೋ ಸಿಮ್ ಮತ್ತು 299 ರೂ. ಅಥವಾ ಅದಕ್ಕಿಂತ ಹೆಚ್ಚಿನ ಯೋಜನೆಯೊಂದಿಗೆ, ಗ್ರಾಹಕರು ಹಿಂದೆಂದೂ ಕಾಣದ ಅತ್ಯುತ್ತಮ ಕ್ರಿಕೆಟ್ ಋತುವನ್ನು ಅನುಭವಿಸಬಹುದು" ಎಂದು ರಿಲಯನ್ಸ್ ಜಿಯೋ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಪ್ರಸ್ತುತ ರೀಚಾರ್ಜ್ ಮಾಡಿಸಿರುವ ಜಿಯೋ ಗ್ರಾಹಕರಿಗಾಗಿ 100 ರೂ. ರೀಚಾರ್ಜ್ ಯೋಜನೆ
ನೀವು ಈಗಾಗಲೇ ಜಿಯೋ ಗ್ರಾಹಕರಾಗಿದ್ದರೆ ಮತ್ತು ಸಕ್ರೀಯ ರೀಚಾರ್ಜ್ ಪ್ಲ್ಯಾನ್ ಜೊತೆಗೆ ಉಚಿತ ಜಿಯೋಹಾಟ್‌ಸ್ಟಾರ್ ಚಂದಾದಾರಿಕೆ ಹೊಂದಿಲ್ಲದಿದ್ದರೆ, ನಿಮಗಾಗಿ 100 ರೂಪಾಯಿಯ ಹೊಸ ರೀಚಾರ್ಜ್ ಯೋಜನೆ ಲಭ್ಯವಿದೆ. ಈ ಯೋಜನೆಯು ಜಿಯೋಹಾಟ್‌ಸ್ಟಾರ್ ಒಟಿಟಿ ಪ್ಲಾಟ್‌ಫಾರ್ಮ್‌ಗೆ ಉಚಿತ ಪ್ರವೇಶವನ್ನು ನೀಡುತ್ತದೆ. 100 ರೂಪಾಯಿಯ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯು 90 ದಿನಗಳ ಅವಧಿಗೆ ಜಾಹೀರಾತು-ಬೆಂಬಲಿತ ಜಿಯೋಹಾಟ್‌ಸ್ಟಾರ್ ಚಂದಾದಾರಿಕೆಯನ್ನು ಒದಗಿಸುತ್ತದೆ. ಈ ಯೋಜನೆಯನ್ನು ಆಯ್ಕೆ ಮಾಡುವ ಮೂಲಕ, ರಿಲಯನ್ಸ್ ಜಿಯೋ ಬಳಕೆದಾರರು ಸ್ಟ್ರೀಮಿಂಗ್ ಸೇವೆಯ ಮಾಸಿಕ ಅಥವಾ ವಾರ್ಷಿಕ ಚಂದಾದಾರರಾಗದೆ ಜಾಹೀರಾತು-ಬೆಂಬಲಿತ ವಿಷಯವನ್ನು ಉಚಿತವಾಗಿ ವೀಕ್ಷಿಸಬಹುದು.

ಈ ಯೋಜನೆಯು 90 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, ಜಿಯೋ ಗ್ರಾಹಕರು 5 ಜಿಬಿ ಹೈ-ಸ್ಪೀಡ್ ಇಂಟರ್ನೆಟ್ ಅನ್ನು ಪಡೆಯುತ್ತಾರೆ. ಆದರೆ, ಹೈ-ಸ್ಪೀಡ್ ಡೇಟಾ ಮುಗಿದ ನಂತರ, ಡೇಟಾ ಡೌನ್‌ಲೋಡ್ ವೇಗ 64 ಕೆಬಿಪಿಎಸ್‌ಗೆ ಇಳಿಯುತ್ತದೆ. ಜಿಯೋ ಹಾಟ್‌ಸ್ಟಾರ್ ಚಂದಾದಾರಿಕೆ ಮೊಬೈಲ್ ಅಥವಾ ಟಿವಿಯಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ಜಿಯೋ ತಿಳಿಸಿದೆ. ಜಿಯೋ ಹಾಟ್‌ಸ್ಟಾರ್‌ನ ಜಾಹೀರಾತು ಬೆಂಬಲಿತ ಯೋಜನೆಯು ಪ್ರಸ್ತುತ ತಿಂಗಳಿಗೆ 149 ರೂ. ಬೆಲೆಯಲ್ಲಿ ಲಭ್ಯವಿದೆ, ಇದರಲ್ಲಿ 720p ರೆಸಲ್ಯೂಶನ್‌ನಲ್ಲಿ ಒಂದು ಮೊಬೈಲ್ ಸಾಧನದಲ್ಲಿ ವಿಷಯ ಸ್ಟ್ರೀಮಿಂಗ್ ನೀಡಲಾಗುತ್ತದೆ. ಉನ್ನತ-ಮಟ್ಟದ ಜಿಯೋಹಾಟ್‌ಸ್ಟಾರ್ ಪ್ರೀಮಿಯಂ ಯೋಜನೆಗೆ ತಿಂಗಳಿಗೆ 299 ರೂ. ಮತ್ತು ವರ್ಷಕ್ಕೆ 1,499 ರೂ. ಪಾವತಿ ಮಾಡಬೇಕಾಗುತ್ತದೆ.
ಹೆಚ್ಚಿನ ಡೇಟಾ ಮತ್ತು ಸಮಾನ ಪ್ರಯೋಜನಗಳನ್ನು ಹೊಂದಿರುವ ರೀಚಾರ್ಜ್ ಆಯ್ಕೆ ಮಾಡಲು ಬಯಸುವವರು ಜಿಯೋ 195 ಪ್ರಿಪೇಯ್ಡ್ ಯೋಜನೆಯನ್ನು ಪರಿಗಣಿಸಬಹುದು. ಕ್ರಿಕೆಟ್ ಡಾಟಾ ಪ್ಯಾಕ್ ಎಂದು ಪರಿಚಯಿಸಲ್ಪಟ್ಟ ಈ ಯೋಜನೆಯು 15 ಜಿಬಿ ಹೈ-ಸ್ಪೀಡ್ ಇಂಟರ್ನೆಟ್ ಅನ್ನು ಒಳಗೊಂಡಿದೆ, ಆದರೆ ಇತರ ಪ್ರಯೋಜನಗಳು ಒಂದೇ ರೀತಿಯಲ್ಲಿರುತ್ತವೆ. ಧ್ವನಿ ಕರೆ ಮತ್ತು ಎಸ್‌ಎಂಎಸ್‌ಗಳಿಗೆ ಅಗತ್ಯವಿದ್ದರೆ, 949 ರೂ. ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯನ್ನು ಆಯ್ಕೆ ಮಾಡಬಹುದು, ಇದು 90 ದಿನಗಳ ಅವಧಿಗೆ ಅನಿಯಮಿತ ಧ್ವನಿ ಕರೆಗಳು, ದಿನಕ್ಕೆ 100 ಎಸ್‌ಎಂಎಸ್ ಮತ್ತು ದಿನಕ್ಕೆ 2 ಜಿಬಿ ಡೇಟಾವನ್ನು ಒದಗಿಸುತ್ತದೆ. ಜಿಯೋ ಹಾಟ್‌ಸ್ಟಾರ್‌ನ ಜಾಹೀರಾತು ಬೆಂಬಲಿತ ಯೋಜನೆಯೊಂದಿಗೆ ಹೋಲಿಸಿದರೆ, ಈ ರೀಚಾರ್ಜ್ ಯೋಜನೆಯು ಗ್ರಾಹಕರಿಗೆ ಹೆಚ್ಚಿನ ಮೌಲ್ಯವನ್ನು ನೀಡುತ್ತದೆ.


Click it and Unblock the Notifications








