Subscribe to Gizbot

IPL ನೋಡುವವರಿಗಾಗಿ BSNLನಿಂದ ದಿನಕ್ಕೆ 3 GB ಡೇಟಾ ಪ್ಲಾನ್‌..!

Written By: Precilla Dias

ಜಿಯೋ ದೇಶಿಯ ಮಾರುಕಟ್ಟೆಯಲ್ಲಿ ಜೋರಾಗಿರುವ IPL ಹವಾದ ಲಾಭ ಮಾಡಿಕೊಂಡು ಹೆಚ್ಚಿನ ಬಳಕೆದಾರರನ್ನು ಸೆಳೆಯುವ ಪ್ರಯತ್ನವನ್ನು ಮಾಡಿರುವ ಹಿನ್ನಲೆಯಲ್ಲಿ ಸರಕಾರಿ ಸ್ವಾಮ್ಯದ BSNL ಸಹ ಹೊಸ ಹೊಸ ಆಫರ್ ಗಳನ್ನು ಲಾಂಚ್ ಮಾಡಲು ಮುಂದಾಗಿದೆ. ತನ್ನ ಬಳಕೆದಾರರಿಗೆ ಹೊಸ ಮಾದರಿಯಲ್ಲಿ ಹೆಚ್ಚು ಡೇಟಾ ಹೊಂದಿರುವ ಆಫರ್ ಅನ್ನು ನೀಡುತ್ತಿದೆ. ರೂ.258 ಪ್ಲಾನ್ ಘೊಷಣೆ ಮಾಡಿದೆ.

IPL ನೋಡುವವರಿಗಾಗಿ BSNLನಿಂದ ದಿನಕ್ಕೆ 3 GB ಡೇಟಾ ಪ್ಲಾನ್‌..!

ರೂ.258ರ ಪ್ಲಾನ್ ಘೋಷಣೆ ಮಾಡಿರುವ BSNL ಬಳಕೆದಾರರಿಗೆ ನಿತ್ಯ ಮೂರು GB ಡೇಟಾದಂತೆ 153GB ಡೇಟಾವನ್ನು 51 ದಿನ ಗಳ ವ್ಯಾಲಿಡಿಟಿಗೆ ನೀಡಲಿದೆ ಎನ್ನಲಾಗಿದೆ. BSNL ನೀಡುತ್ತಿರುವ ಈ ಪ್ಲಾನ್‌ನಲ್ಲಿ ಬಳಕೆದಾರರಿಗೆ ಯಾವುದೇ ಕರೆ ಮಾಡುವ ಸೇವೆಯೂ ಲಭ್ಯವಿಲ್ಲ ಎನ್ನಲಾಗಿದೆ. ಇದರ ಬದಲಾಗಿ ಕೇಲವ ಡೇಟಾ ಆಫರ್ ಮಾತ್ರವೇ ದೊರೆಯಲಿದೆ.

ಇದು ಲಿಮೆಟೆಡ್ ಆಫರ್ ಆಗಿದ್ದು, ಏಪ್ರಿಲ್ 7 ರಿಂದ ಏಪ್ರಿಲ್ 30ರ ವರೆಗೆ ಮಾತ್ರವೇ ದೊರಯಲಿದೆ ಎನ್ನಲಾಗಿದೆ. ಅದರ ಒಳಗೆ ರಿಚಾರ್ಜ್ ಮಾಡಿಸಿಕೊಂಡವರಿಗೆ ಮಾತ್ರವೇ ಈ ಯೋಜನೆ ಲಾಭ ದೊರೆಯಲಿದೆ ಎನ್ನಲಾಗಿದೆ. ಅಲ್ಲದೇ ಈ ಆಫರ್ ಇಡೀ ಭಾರತದಲ್ಲಿ ಎಲ್ಲಿಗೂ ದೊರೆಯಲಿದೆ. ಎಲ್ಲಾ BSNL ಬಳಕೆದಾರರು ರಿಚಾರ್ಜ್ ಮಾಡಿಸಿಕೊಳ್ಳಬಹುದಾಗಿದೆ.

ವಾಟ್ಸ್ಆಪ್‌ನಲ್ಲಿ ಫುಲ್ ರೆಸಲ್ಯೂಶನ್ ಫೋಟೋ ಸೆಂಡ್ ಮಾಡುವುದು ಹೇಗೆ? GIZBOT
ಇದೇ ಮಾದರಿಯಲ್ಲಿ ಜಿಯೋ ತನ್ನ ಬಳಕೆದಾರರಿಗೆ ರೂ.251ಕ್ಕೆ 102 GB ಡೇಟಾವನ್ನು ನೀಡಲಿದ್ದು, ಇದು ಸಹ 51 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, IPL ನೋಡುವ ಸಲುವಾಗಿ ಮಾತ್ರವೇ ಈ ಆಫರ್ ನೀಡುತ್ತಿದೆ ಎನ್ನಲಾಗಿದ್ದು, ನಿತ್ಯ ಬಳಕೆದಾರರಿಗೆ 2GB ಡೇಟಾ ದೊರೆಯುತ್ತಿದೆ. ಇದಕ್ಕೆ BSNL ಸೆಡ್ಡು ಹೊಡೆದಿದೆ.

ಇನ್ಮುಂದೆ ಫೇಸ್‌ಬುಕ್ ಖಾತೆ ಹೊಂದಿಲ್ಲದಿದ್ದರೂ 'ಮೆಸೇಂಜರ್' ಬಳಸಬಹುದಂತೆ!?

ಇದಲ್ಲದೇ ಜಿಯೋ ತನ್ನ ಬಳಕೆದಾರರಿಗೆ ಮಾತ್ರವಲ್ಲದೇ ದೇಶದ ಎಲ್ಲಾ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಕ್ರಿಕೆಟ್ ಗೇಮ್ ವೊಂದನ್ನು ಆಡಲು ನೀಡಿದ್ದು, ಬಹುಮಾನಗಳನ್ನು ಗೆಲ್ಲುವ ಅವಕಾಶ ನೀಡಿದೆ. ಅಲ್ಲದೇ ಕ್ರಿಕೆಟ್-ಕಾಮಿಡಿ ಶೋ ಒಂದನ್ನು ಸಹ ಆಯೋಜಿಸಿದೆ ಎನ್ನಲಾಗಿದೆ.

English summary
With an aim to counter Reliance Jio's cricket Season Pack, State-run telecom service provider BSNL has also announced its IPL pack on Friday in which the company is offering 153 GB mobile data for Rs. 258 with 51 days validity.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot