Home
ಸುದ್ದಿಜಾಲ

iPlanet ನಿಂದ ಬೆಂಗಳೂರಿನಲ್ಲಿ ಭಾರತದ ಅತಿದೊಡ್ಡ ಆಪಲ್ ಪ್ರೀಮಿಯಂ ಪಾಲುದಾರ ಅಂಗಡಿ ಪ್ರಾರಂಭ!

ಆಪಲ್‌ ಪ್ರೀಮಿಯಂ ಪಾಲುದಾರಿಕೆ ಹೊಂದಿರುವ iPlanet ಭಾರತದ ಅತಿದೊಡ್ಡ ಆಪಲ್‌ ಪ್ರೀಮಿಯಂ ಪಾಲುದಾರ ಸ್ಟೋರ್‌ ಅನ್ನು ಉದ್ಘಾಟನೆ ಮಾಡಿದೆ. ಬೆಂಗಳೂರಿನ ಇಂದಿರಾನಗರದಲ್ಲಿ ಈ ಸ್ಟೋರ್‌ ತೆರೆಯಲಾಗಿದ್ದು, ಮೌಲ್ಯಯುತ ಗ್ರಾಹಕರಿಗೆ ಉನ್ನತ ಶಾಪಿಂಗ್ ಅನುಭವವನ್ನು ತಲುಪಿಸಲು iPlanet ಮುಂದಾಗಿದೆ.

ಹೌದು, ಬೆಂಗಳೂರಿನಲ್ಲಿ ಭಾರತದ ಅತಿದೊಡ್ಡ ಆಪಲ್‌ ಪ್ರೀಮಿಯಂ ಪಾಲುದಾರ ಸ್ಟೋರ್‌ ಉದ್ಘಾಟನೆ ಆಗಿದೆ. ಇದು ಬೆಂಗಳೂರಿನ ಇಂದಿರಾನಗರದಲ್ಲಿರುವ ಪ್ರತಿಷ್ಠಿತ 100 ಅಡಿ ರಸ್ತೆಯಲ್ಲಿದ್ದು, ಆಪಲ್‌ನ ಡಿವೈಸ್‌ಗಳನ್ನು ಖರೀದಿಸುವ ಗ್ರಾಹಕರನ್ನು ಸೆಳೆಯುತ್ತಿದೆ. ಹಾಗಾದ್ರೆ ಈ ಸ್ಟೋರ್‌ನಲ್ಲಿ ಏನೆಲ್ಲಾ ಲಭ್ಯವಾಗಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಮುಂದೆ ಓದಿರಿ.

iPlanetನಿಂದ ಬೆಂಗಳೂರಿನಲ್ಲಿ ಅತಿದೊಡ್ಡ ಆಪಲ್ ಪ್ರೀಮಿಯಂ ಪಾಲುದಾರ ಅಂಗಡಿ ಪ್ರಾರಂಭ

iPlanetನ ಈ ಸ್ಟೋರ್‌ನಲ್ಲಿ ಐಫೋನ್‌, ಐಪ್ಯಾಡ್‌, ಮ್ಯಾಕ್‌, ಆಪಲ್‌ ವಾಚ್‌, ಏರ್‌ಪಾಡ್ಸ್‌, ಹೋಮ್‌ಪಾಡ್‌ ಡಿವೈಸ್‌ಗಳು ಸೇರಿದಂತೆ ಆಪಲ್‌ ಸಂಸ್ಥೆಯ ವಿವಿಧ ಉತ್ಪನ್ನಗಳನ್ನು ಖರೀದಿಸಬಹುದು.

ಪ್ರಭಾವಿ ಕಾರ್ಯಾಗಾರದ ಅನುಭವ
ಇನ್ನು ಮಳಿಗೆಯ ಉದ್ಘಾಟನೆಯ ನಂತರ iPlanet ಪ್ರಭಾವಶಾಲಿ ಕಾರ್ಯಗಾರವನ್ನು ಸಹ ಆಯೋಜಿಸಿತ್ತು. ಈ ಕಾರ್ಯಗಾರದಲ್ಲಿ ಆಪಲ್‌ನ ಸೃಜನಾತ್ಮಕ ಪರಾಕ್ರಮದ ಬಗ್ಗೆ ತಿಳಿಸಿಕೊಡಲಾಯಿತು. ಇದರಲ್ಲಿ ಛಾಯಾಗ್ರಹಣ, ವೀಡಿಯೋಗ್ರಫಿ ಮತ್ತು ಆಪಲ್ ವಾಚ್ ಪರಿಣತಿಯಲ್ಲಿ ವೃತ್ತಿಪರರು ಸೆಷನ್‌ಗಳಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಅಲ್ಲದೆ ಸಂವಾದಾತ್ಮಕ ಪ್ರಶ್ನೋತ್ತರ ಅವಧಿಯಲ್ಲಿ ಹಲವು ಪ್ರಶ್ನೆಗಳಿಗೆ ಉತ್ತರ ನೀಡಲಾಯ್ತು.

iPlanetನಿಂದ ಬೆಂಗಳೂರಿನಲ್ಲಿ ಅತಿದೊಡ್ಡ ಆಪಲ್ ಪ್ರೀಮಿಯಂ ಪಾಲುದಾರ ಅಂಗಡಿ ಪ್ರಾರಂಭ

ವಿಶೇಷ ಕೊಡುಗೆಗಳು ಮತ್ತು ಪಾಲುದಾರಿಕೆಗಳು
iPlanet ಸ್ಟೋರ್‌ Cashify ಜೊತೆಗೆ ಸಹಭಾಗಿತ್ವವನ್ನು ಹೊಂದಿದ್ದು, ಬಳಸಿದ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ಮರುಮಾರಾಟ ಮಾಡುವ ಪ್ರಮುಖ ಆನ್‌ಲೈನ್ ಮಾರುಕಟ್ಟೆಯಾದ ಕ್ಯಾಶಿಫೈ, ಐಫೋನ್‌ಗಳ ಮೇಲೆ 8000 ವರೆಗೆ ವಿಶೇಷ ಎಕ್ಸ್‌ಚೇಂಜ್‌ ಬೋನಸ್ ನೀಡುತ್ತಿದೆ. ಇದರಿಂದ ಹಳೆಯ ಐಫೋನ್‌ಗಳನ್ನು ಅಪ್‌ಗ್ರೇಡ್ ಮಾಡಲು ಬಯಸುವ ಇದು ಸೂಕ್ತವಾಗಿದೆ. ಇದಲ್ಲದೆ ಐಫೋನ್‌ಗಳಿಗಾಗಿ AppleCare ಸೇವೆಗಳೊಂದಿಗೆ Protect+ ನಲ್ಲಿ ಗಮನಾರ್ಹವಾಗಿ 50% ರಿಯಾಯಿತಿಯೊಂದಿಗೆ Servify ಆಚರಣೆಯನ್ನು ಸೇರುತ್ತದೆ.

iPlanetನಿಂದ ಬೆಂಗಳೂರಿನಲ್ಲಿ ಅತಿದೊಡ್ಡ ಆಪಲ್ ಪ್ರೀಮಿಯಂ ಪಾಲುದಾರ ಅಂಗಡಿ ಪ್ರಾರಂಭ

ವಿಶೇಷ ರಿಯಾಯಿತಿಗಳು ಮತ್ತು ಸಂಭ್ರಮದ ಕಾರ್ನೀವಲ್
iPlanet ಸ್ಟೋರ್‌ ಗ್ರ್ಯಾಂಡ್ ಲಾಂಚ್ ಪ್ರಯುಕ್ತ iPlanet ಡಿಸೆಂಬರ್ 15 ರಿಂದ 17, 2023 ರವರೆಗೆ ವಿವಿಧ ಆಪಲ್‌ ಉತ್ಪನ್ನಗಳ ಮೇಲೆ ಆಕರ್ಷಕ ರಿಯಾಯಿತಿಗಳನ್ನು ನೀಡುತ್ತಿದೆ. ಇದರಲ್ಲಿ ಪ್ರಮುಖವಾದದ್ದು ಈ ಕೆಳಗಿನಂತಿದೆ.
* ಐಫೋನ್‌ಗಳ ಮೇಲೆ 18,000ರೂ ವರೆಗೆ ರಿಯಾಯಿತಿ
* ಐಫೋನ್‌ಗಳ EMI ಎಕ್ಸ್‌ಚೇಂಜ್‌ 1,501 ರಿಂದ ಪ್ರಾರಂಭವಾಗಲಿದೆ
* Mac ನಲ್ಲಿ 64,980ವರೆಗೆ ರೂ. ರಿಯಾಯಿತಿ
* ಮ್ಯಾಕ್‌ಬುಕ್ EMI ವಿನಿಮಯ 2,299 ರಿಂದ ಪ್ರಾರಂಭವಾಗುತ್ತದೆ
* Apple ವಾಚ್‌ಗಳ ಮೇಲೆ 15% ವರೆಗೆ ರಿಯಾಯಿತಿ
* Apple Watches EMI 1,059ರೂ ಗಳಿಂದ ಪ್ರಾರಂಭವಾಗುತ್ತದೆ
* AirPods ಮತ್ತು AirPods Pro ನಲ್ಲಿ ಫ್ಲಾಟ್ 13% ರಿಯಾಯಿತಿ ಸಿಗಲಿದೆ
* ಯಾವುದೇ ಐಪ್ಯಾಡ್ ಮಾದರಿಯಲ್ಲಿ ಫ್ಲಾಟ್ 12 ಆಫರ್‌ ಸಿಗಲಿದೆ
* ಐಫೋನ್‌ಗಳಿಗಾಗಿ Apple ಕೇರ್ ಸೇವೆಗಳೊಂದಿಗೆ Protect+ ನಲ್ಲಿ 50% ವರೆಗೆ ರಿಯಾಯಿತಿ ಸಿಗಲಿದೆ.

iPlanetನಿಂದ ಬೆಂಗಳೂರಿನಲ್ಲಿ ಅತಿದೊಡ್ಡ ಆಪಲ್ ಪ್ರೀಮಿಯಂ ಪಾಲುದಾರ ಅಂಗಡಿ ಪ್ರಾರಂಭ

ಇದಲ್ಲದೆ Paytm ಅಪ್ಲಿಕೇಶನ್ ಗ್ರಾಹಕರು 700ರೂ ಮೌಲ್ಯದ ಸಿನಿಮಾ ವೋಚರ್ ಅನ್ನು ಗೆಲ್ಲುವ ಅವಕಾಶ ಕೂಡ ಸಿಗಲಿದೆ. ಹೆಚ್ಚುವರಿಯಾಗಿ, Paytm ಪೋಸ್ಟ್‌ಪೇಯ್ಡ್ ಮತ್ತು ವ್ಯಾಲೆಟ್ ಗ್ರಾಹಕರು ಗ್ರ್ಯಾಂಡ್ ಲಾಂಚ್ ಸಮಯದಲ್ಲಿ ಎಲ್ಲಾ ಮುಂಗಡ ಬುಕಿಂಗ್‌ಗಾಗಿ 300ರೂ ರಿಂದ 700ರೂ ರವರೆಗಿನ ರಿಯಾಯಿತಿ ವೋಚರ್‌ಗಳಿಗೆ ಅರ್ಹರಾಗಿರುತ್ತಾರೆ. ಈ ವಿಶೇಷ ಕೊಡುಗೆಗಳು ಡಿಸೆಂಬರ್ 15 ರಿಂದ 31, 2023 ರವರೆಗೆ ಅಂಗಡಿಯಲ್ಲಿನ ಪ್ರಚಾರಗಳೊಂದಿಗೆ ಲಭ್ಯವಿದೆ.

ಸ್ಥಳದ ವಿವರಗಳು: ಬೆಂಗಳೂರಿನ ಇಂದಿರಾನಗರದಲ್ಲಿ 100 ಅಡಿ ರಸ್ತೆಯಲ್ಲಿ ಈ ಹೊಸ ಐಪ್ಲಾನೆಟ್ ಸ್ಟೋರ್ ಇದೆ.

Best Mobiles in India

English summary
iPlanet Launched India's Largest Apple Premium Partner Store in Bengaluru
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+