ಐಪ್ಯಾಡ್‌ನಲ್ಲಿ ಟಾಯ್ಲೆಟ್‌ ಬಂತು

By Super
|

ಐಪ್ಯಾಡ್‌ನಲ್ಲಿ ಟಾಯ್ಲೆಟ್‌ ಬಂತು
ಐಪ್ಯಾಡ್‌, ಐ ಟ್ಯೂನ್‌ ಆಯ್ತು ಇನ್ನು ನಿಮ್ಮ ಮನೆಗೆ ಐಪಾಟಿ ಬರಲಿದೆ. ಹೌದು ಆಪಲ್‌ ಕಂಪೆನಿಯವರು ಈಗ ಹೊಸ ಒಂದು ಉತ್ಪನ್ನವನ್ನು ಬಿಡುಗಡೆ ಮಾಡಿದ್ದಾರೆ.

ನಿಮ್ಮ ಮನೆಯಲ್ಲಿರುವ ಸಣ್ಣ ಮಕ್ಕಳು ಆಗಾಗ ಮಲ, ಮೂತ್ರ ವಿಸರ್ಜನೆ ಮಾಡುತ್ತಿದ್ದರೆ ಏನು ಮಾಡುತ್ತೀರಿ ? ಮಾರುಕಟ್ಟೆಗೆ ಹೋಗಿ ಪ್ಯಾಡ್‌ ತೆಗೆದುಕೊಂಡು ಬಂದು ಮಗುವಿನ ಪೃಷ್ಠಕ್ಕೆ ಪ್ಯಾಡ್‌ ಹಾಕಿಬಿಡುತ್ತೀರಿ ಅಲ್ಲವೇ ?

ಆದರೆ ಇನ್ನು ಮುಂದೆ ಮಕ್ಕಳು ಮೂತ್ರ ವಿಸರ್ಜನೆ ಮಾಡಿದ್ರೆ ಇದನ್ನೆಲ್ಲ ತರಬೇಕಾಗಿಲ್ಲ. ಐಪಾಟಿಯನ್ನು ತಂದರೆ ಸಾಕು ಮಕ್ಕಳು ಇದರಲ್ಲಿ ವಿಸರ್ಜನೆ ಮಾಡಬಹುದು. ಐಪ್ಯಾಡ್‌ ಮತ್ತು ಟಾಯ್ಲೆಟ್‌ ಎರಡು ಈ ಐಪಾಟಿಯಲ್ಲಿದೆ.

ನಿಮ್ಮ ಮನೆಯಲ್ಲಿರುವ ಮಗುವನ್ನು ಐ ಪಾಟಿಯಲ್ಲಿರುವ ಮಿನಿ ಟಾಯ್ಲೆಟ್‌ನಲ್ಲಿ ಕುಳ್ಳಿರಿಸಿ ಐ ಪ್ಯಾಡ್‌ ವಿಡಿಯೋವನ್ನು ಪ್ಲೇ ಮಾಡಿ ನಿಮ್ಮ ಕೆಲಸಕ್ಕೆ ಹೋಗಬಹುದು. ಮಗು ವಿಡಿಯೋ ನೋಡುತ್ತಿರುವಾಗ ಮಲ, ಮೂತ್ರ ವಿಸರ್ಜನೆ ಮಾಡಿದ್ರೆ ಅದು ಈ ಟಾಯ್ಲೆಟ್‌ನಲ್ಲಿ ಶೇಖರಗೊಳ್ಳುತ್ತದೆ. ನಂತರ ಶೇಖರಣೆಗೊಂಡ ಪಾಟ್‌ ತೆಗೆದು ಕ್ಲೀನ್‌ ಮಾಡಿ ಮತ್ತೆ ಇದಕ್ಕೆ ಜೋಡಿಸಬಹುದು.

ಇದನ್ನು ತಂದರೆ ಹಣ ಮತ್ತು ಪೋಷಕರ ಸಮಯ ಉಳಿತಾಯವಾಗುತ್ತದೆ . ಅಲ್ಲದೇ ಸಣ್ಣ ಮಕ್ಕಳು ವಿಡಿಯೋ ನೋಡುವುದರಿಂದ ಪೋಷಕರು ಆರಾಮವಾಗಿ ಅವರ ಕೆಲಸ ಮಾಡಲು ಸಾಧ್ಯವಾಗಲಿದೆ ಎಂದು ಆಪಲ್‌ ಕಂಪೆನಿ ಹೇಳಿದೆ.

ಒಟ್ಟಿನಲ್ಲಿ ಈ ಐಪಾಟ್‌ ಮಾರುಕಟ್ಟೆಯಲ್ಲಿ ಯಾವರೀತಿ ಕಮಾಲ್‌ ಮಾಡುತ್ತದೆ ಎಂಬುದನ್ನು ನೋಡಬೇಕಾದ್ರೆ ನೀವು ಮುಂದಿನ ಮಾರ್ಚ್‌ವರೆಗೂ ಕಾಯಬೇಕು.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X