ಕೇವಲ 15 ನಿಮಿಷಗಳಲ್ಲಿ ಫುಲ್ ಚಾರ್ಜಿಂಗ್! ಯಾವುದು ಈ ಫೋನ್! ಎಂಟ್ರಿ ಯಾವಾಗ!
ಕಳೆದ ಕೆಲವು ವರ್ಷಗಳಲ್ಲಿ ಐಕ್ಯೂ ಕಂಪೆನಿ ಪ್ರಮುಖ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ಆಗಿ ರೂಪುಗೊಂಡಿದೆ. ಟಾಪ್ ಬ್ರ್ಯಾಂಡ್‌ಗಳ ಜೊತೆಗೆ ಪೈಪೋಟಿ ನೀಡುತ್ತಿರುವ ಐಕ್ಯೂ ಕಂಪೆನಿ ತನ್ನದೇ ಆದ ಗ್ರಾಹಕ ವರ್ಗವನ್ನು ಸೃಷ್ಟಿಸಿದೆ. ಇನ್ನು ಪ್ರತಿಭಾರಿಯೂ ಹೊಸತನದ ಸ್ಮಾರ್ಟ್‌ಫೋನ್ ಪರಿಚಯಿಸುವ ಐಕ್ಯೂ ಇದೀಗ ಮತ್ತೊಂದು ಹೊಸ ಸ್ಮಾರ್ಟ್‌ಫೋನ್ ಮೂಲಕ ಸೌಂಡ್ ಮಾಡ್ತಿದೆ.
ಹೌದು, ಐಕ್ಯೂ ಕಂಪೆನಿಯ ಐಕ್ಯೂ 12 ಸ್ಮಾರ್ಟ್‌ಫೋನ್ ಸರಣಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಮಾರುಕಟ್ಟೆಗೆ ಇನ್ನು ಎಂಟ್ರಿ ನೀಡದ ಈ ಸ್ಮಾರ್ಟ್‌ಫೋನ್ ಸರಣಿಯ ಬಗ್ಗೆ ಟೆಕ್ ವಲಯದಲ್ಲಿ ಈಗಾಗಲೇ ಭಾರಿ ಚರ್ಚೆ ನಡೆಯುತ್ತಿದೆ. ಅದರಲ್ಲೂ ಈ ಸರಣಿ ಫೋನ್ 200W ಫಾಸ್ಟ್ ಚಾರ್ಜಿಂಗ್ ಟೆಕ್ನಾಲಜಿ ಬೆಂಬಲಿಸಲಿದೆ ಅನ್ನೊದು ಮೇನ್ ಹೈಲೈಟ್ ಆಗಿದೆ. ಹಾಗಾದ್ರೆ ಐಕ್ಯೂ 12 ಸರಣಿ ವಿಶೇಷತೆ ಏನಿರಬಹುದು? ಏನೆಲ್ಲಾ ನಿರೀಕ್ಷೆ ಇಡಲಾಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಐಕ್ಯೂ 12 ಸರಣಿಯ ಬಗ್ಗೆ ಏನೆಲ್ಲಾ ನಿರೀಕ್ಷೆ?
ಐಕ್ಯೂ 12 ಸ್ಮಾರ್ಟ್‌ಫೋನ್ ಸರಣಿ ಕೆಲವೇ ತಿಂಗಳುಗಳ ನಂತರ ಮಾರುಕಟ್ಟೆಗೆ ಎಂಟ್ರಿ ನೀಡುವ ನಿರೀಕ್ಷೆಯಿದೆ. ಇನ್ನು ಈ ಸರಣಿಯ ಸ್ಮಾರ್ಟ್‌ಫೋನ್ 200W ವೇಗದ ಚಾರ್ಜಿಂಗ್ ಟೆಕ್ನಾಲಜಿಯನ್ನು ಬೆಂಬಲಿಸಲಿದೆ ಎನ್ನಲಾಗಿದೆ. ಇದು ಫೋನ್ ಅನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲು 15 ನಿಮಿಷಗಳಿಗಿಂತ ಕಡಿಮೆ ಸಮಯ ತೆಗೆದುಕೊಳ್ಳಬಹುದು. ಈ ಸ್ಮಾರ್ಟ್‌ಫೋನ್ ಬ್ಯಾಟರಿ 5,000mAh ಸಾಮರ್ಥ್ಯದ ಬ್ಯಾಕ್‌ಅಪ್ ಅನ್ನು ಹೊಂದಿರಬಹುದು ಎಂದು ಅಂದಾಜಿಸಲಾಗಿದೆ.
ಐಕ್ಯೂ 12 ಫೋನ್ ಡಿಸ್‌ಪ್ಲೇ ವಿನ್ಯಾಸ
ಐಕ್ಯೂ 12 ಸ್ಮಾರ್ಟ್‌ಫೋನ್ 6.79 ಇಂಚಿನ ಫುಲ್ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿರಲಿದೆ ಎಂದು ನಿರೀಕ್ಷಿಸಲಾಗಿದೆ. ಈ ಡಿಸ್‌ಪ್ಲೇ 1080 x 2400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿರಲಿದ್ದು, 388 ಪಿಪಿಐ ಪಿಕ್ಸೆಲ್ ಸಾಂದ್ರತೆಯನ್ನು ಹೊಂದಿರಬಹುದು ಎಂದು ಅಂದಾಜಿಸಲಾಗಿದೆ.

ಐಕ್ಯೂ 12 ಪ್ರೊಸೆಸರ್ ಯಾವುದು?
ಐಕ್ಯೂ 12 ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 Gen 2 SoC ಪ್ರೊಸೆಸರ್ ಹೊಂದಿರಲಿದೆ. ಇದು ಆಂಡ್ರಾಯ್ಡ್ 13 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 12GB RAM ಮತ್ತು 256 GB ಇಂಟರ್ ಸ್ಟೋರೇಜ್ ಹೊಂದಿರಲಿದೆ ಎಂದು ಅಂದಾಜಿಸಲಾಗಿದೆ. ಈ ಸ್ಮಾರ್ಟ್‌ಫೋನ್ ಮೆಮೊರಿ ಕಾರ್ಡ್ ಬೆಂಬಲಿಸುವ ಸಾಧ್ಯತೆಯಿಲ್ಲ.
ಐಕ್ಯೂ 12 ಕ್ಯಾಮೆರಾ ಸೆಟ್‌ಅಪ್ ನಿರೀಕ್ಷೆ?
ಐಕ್ಯೂ 12 ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿರಲಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 16 ಮೆಗಾಪಿಕ್ಸೆಲ್ ಸೆನ್ಸಾರ್ ಮತ್ತು ಮೂರನೇ ಕ್ಯಾಮೆರಾ 12 ಮೆಗಾಪಿಕ್ಸೆಲ್ ಸೆನ್ಸಾರ್‌ನಲ್ಲಿ ಬರಲಿದೆ ಎಂದು ಅಂದಾಜಿಸಲಾಗಿದೆ. ಇದಲ್ಲದೆ 24 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಪಡೆದಿರಲಿದೆ ಎಂದು ಹೇಳಲಾಗಿದೆ.

ಐಕ್ಯೂ 12 ಬ್ಯಾಟರಿ ಬ್ಯಾಕ್‌ಅಪ್ ಹಾಗೂ ಇತರೆ ಫೀಚರ್ಸ್
ಐಕ್ಯೂ 12 ಸ್ಮಾರ್ಟ್‌ಫೋನ್ 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಹೊಂದಿರಲಿದೆ. ಇದು 200W ವೇಗದ ಚಾರ್ಜಿಂಗ್ ಟೆಕ್ನಾಲಜಿಯ್ನು ಬೆಂಬಲಿಸಲಿದೆ ಎನ್ನಲಾಗಿದೆ. ಇದು ಫೋನ್ ಅನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲು 15 ನಿಮಿಷಗಳಿಗಿಂತ ಕಡಿಮೆ ಸಮಯ ತೆಗೆದುಕೊಳ್ಳಬಹುದು. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್, ವೈಫೈ, ಯುಎಸ್‌ಬಿ ಸಿ ಪೋರ್ಟ್, ಹೆಡ್‌ಫೋನ್ ಜ್ಯಾಕ್, ಬ್ಲೂಟೂತ್ ಅನ್ನು ಬೆಂಬಲಿಸಲಿದೆ. ಇದಲ್ಲದೆ ಲೈಟ್ ಸೆನ್ಸಾರ್, ಪ್ರಾಕ್ಸಿಮಿಟಿ ಸೆನ್ಸಾರ್, ಅಕ್ಸಲೆರೊಮೀಟರ್, ಕಂಪಾಸ್, ಜಿರೋಸ್ಕೋಪ್ ಅನ್ನು ಒಳಗೊಂಡಿರಲಿದೆ ಎಂದು ಹೇಳಲಾಗಿದೆ.


Click it and Unblock the Notifications








