Home
ಸುದ್ದಿಜಾಲ

ಬಿಗ್‌ ಬ್ಯಾಟರಿ ಬ್ಯಾಕ್‌ಅಪ್‌ ಒಳಗೊಂಡ ಐಕ್ಯೂ 12 ಪ್ರೊ ಸ್ಮಾರ್ಟ್‌ಫೋನ್‌ ಲಾಂಚ್‌!

ಭಾರಿ ನಿರೀಕ್ಷೆ ಹುಟ್ಟುಹಾಕಿದ್ದ ಐಕ್ಯೂ 12 ಸರಣಿ ಟೆಕ್‌ ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಈ ಸರಣಿಯಲ್ಲಿ ಐಕ್ಯೂ 12 ಮತ್ತು ಐಕ್ಯೂ 12ಪ್ರೊ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಲಾಗಿದೆ. ಇದರಲ್ಲಿ ಐಕ್ಯೂ 12 ಪ್ರೊ ಮಾದರಿಯು ಹೆಚ್ಚು ಪ್ರೀಮಿಯಂ ಆಗಿದ್ದು, ಬಿಗ್‌ ಡಿಸ್‌ಪ್ಲೇ ಹೊಂದಿದೆ. ಇನ್ನು ಸ್ಮಾರ್ಟ್‌ಫೋನ್‌ ಬಿಗ್‌ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ನೀಡಲಿದೆ.

ಹೌದು, ಐಕ್ಯೂ 12 ಸರಣಿ ಸ್ಮಾರ್ಟ್‌ಫೋನ್‌ಗಳು ಬಿಡುಗಡೆ ಆಗಿದೆ. ಈ ಸರಣಿಯ ಐಕ್ಯೂ 12 ಪ್ರೊ ಸ್ಮಾರ್ಟ್‌ಫೋನ್‌ ಅತ್ಯಾಕರ್ಷಕ ಫೀಚರ್ಸ್‌ಗಳಿಂದ ಗಮನಸೆಳೆದಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಹೊಂದಿರಲಿದೆ. ಇದರ ಮುಖ್ಯ ಕ್ಯಾಮೆರಾ 50-ಮೆಗಾಪಿಕ್ಸೆಲ್ OmniVision OV50H ಸೆನ್ಸಾರ್‌ ಹೊಂದಿರಲಿದೆ. ಹಾಗಾದ್ರೆ ಐಕ್ಯೂ 12 ಪ್ರೊ ಸ್ಮಾರ್ಟ್‌ಫೋನ್‌ ಸಂಪೂರ್ಣ ಫೀಚರ್ಸ್‌ ವಿವರಗಳು ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಬಿಗ್‌ ಬ್ಯಾಟರಿ ಬ್ಯಾಕ್‌ಅಪ್‌ ಒಳಗೊಂಡ ಐಕ್ಯೂ 12 ಪ್ರೊ ಸ್ಮಾರ್ಟ್‌ಫೋನ್‌ ಲಾಂಚ್‌!

ಐಕ್ಯೂ 12 ಪ್ರೊ ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ
ಐಕ್ಯೂ 12ಪ್ರೊ ಸ್ಮಾರ್ಟ್‌ಫೋನ್‌ 6.7 ಇಂಚಿನ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಡಿಸ್‌ಪ್ಲೇ 144Hz ರಿಫ್ರೆಶ್ ರೇಟ್‌ ಬೆಂಬಲಿಸಲಿದ್ದು, 3,000 ನೀಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಅನ್ನು ಒಳಗೊಂಡಿದೆ. ಈ ಡಿಸ್‌ಪ್ಲೇ HDR10 ಬೆಂಬಲವನ್ನು ಪಡೆದುಕೊಂಡಿದ್ದು, 1440Hz PWM ಡಿಮ್ಮಿಂಗ್‌ ಅನ್ನು ಸಹ ಒಳಗೊಂಡಿದೆ.

ಐಕ್ಯೂ 12 ಪ್ರೊ ಪ್ರೊಸೆಸರ್‌ ಯಾವುದು?
ಐಕ್ಯೂ 12 ಪ್ರೊ ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 8 Gen 3 SoC ಪ್ರೊಸೆಸರ್‌ ವೇಗವನ್ನು ಹೊಂದಿದೆ. ಇದು ಆಂಡ್ರಾಯ್ಡ್‌ 14 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 16GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿದೆ. ಇದರ ಟಾಪ್‌ ಎಂಡ್‌ ಮಾಡೆಲ್‌ 16GB ಮತ್ತು 1TB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯದ ಆಯ್ಕೆಯನ್ನು ಪಡೆದಿದೆ.

ಬಿಗ್‌ ಬ್ಯಾಟರಿ ಬ್ಯಾಕ್‌ಅಪ್‌ ಒಳಗೊಂಡ ಐಕ್ಯೂ 12 ಪ್ರೊ ಸ್ಮಾರ್ಟ್‌ಫೋನ್‌ ಲಾಂಚ್‌!

ಐಕ್ಯೂ 12 ಪ್ರೊ ಕ್ಯಾಮೆರಾ ಸೆಟ್‌ಅಪ್‌ ಏನಿದೆ?
ಐಕ್ಯೂ 12 ಪ್ರೊ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಹೊಂದಿದೆ. ಇದರ ಮುಖ್ಯ ಕ್ಯಾಮೆರಾ 50-ಮೆಗಾಪಿಕ್ಸೆಲ್ OmniVision OV50H ಸೆನ್ಸಾರ್‌, ಎರಡನೇ ಕ್ಯಾಮೆರಾ 50-ಮೆಗಾಪಿಕ್ಸೆಲ್ ಸ್ಯಾಮ್‌ಸಂಗ್ JN1 ಅಲ್ಟ್ರಾವೈಡ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 64 ಮೆಗಾಪಿಕ್ಸೆಲ್ OV64B ಪೆರಿಸ್ಕೋಪ್ ಟೆಲಿಫೋಟೋ ಕ್ಯಾಮೆರಾ ಹೊಂದಿದೆ. ಇದಲ್ಲದೆ 16 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸೆಲ್ಫಿ ಕ್ಯಾಮೆರಾವನ್ನು ಪಡೆದುಕೊಂಡಿದೆ.

ಐಕ್ಯೂ 12 ಪ್ರೊ ಬ್ಯಾಟರಿ ಮತ್ತು ಇತರೆ
ಐಕ್ಯೂ 12 ಪ್ರೊ ಸ್ಮಾರ್ಟ್‌ಫೋನ್‌ 5,100mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 120W ವೈರ್ಡ್ ಮತ್ತು 50W ವಾಯರ್‌ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್ 5.4, USB-C ಪೋರ್ಟ್, Wi-Fi-7, NFC, IR ಬ್ಲಾಸ್ಟರ್ ಅನ್ನು ಹೊಂದಿದೆ. ಇದಲ್ಲದೆ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್‌ ಅನ್ನು ಹೊಂದಿದೆ.

ಬಿಗ್‌ ಬ್ಯಾಟರಿ ಬ್ಯಾಕ್‌ಅಪ್‌ ಒಳಗೊಂಡ ಐಕ್ಯೂ 12 ಪ್ರೊ ಸ್ಮಾರ್ಟ್‌ಫೋನ್‌ ಲಾಂಚ್‌!

ಐಕ್ಯೂ 12 ಪ್ರೊ ಬೆಲೆ ಮತ್ತು ಲಭ್ಯತೆ
ಐಕ್ಯೂ 12 ಪ್ರೊ ಸ್ಮಾರ್ಟ್‌ಫೋನ್‌ ಪ್ರಸ್ತುತ ಚೀನಾದಲ್ಲಿ ಅನಾವರಣಗೊಂಡಿದೆ. ಅದರಂತೆ ಐಕ್ಯೂ 12 ಪ್ರೊ ಸ್ಮಾರ್ಟ್‌ಫೋನ್‌ 16GB RAM ಮತ್ತು 256GB ಸ್ಟೋರೇಜ್‌ನ ಬೆಲೆ CNY 4,999 (ಅಂದಾಜು 58,000ರೂ)ಬೆಲೆ ಹೊಂದಿದೆ. ಇದರ 512GB ಸ್ಟೋರೇಜ್ ಮಾಡೆಲ್ ಆಯ್ಕೆಯು CNY 5,499 (ಅಂದಾಜು 63,800ರೂ)ಬೆಲೆಯಲ್ಲಿ ಬರಲಿದೆ. ಇದರ ಗರಿಷ್ಠ 1TB ಸ್ಟೋರೇಜ್ ಹೊಂದಿರುವ ರೂಪಾಂತರವು CNY 5,999 (ಅಂದಾಜು 69,700ರೂ)ಬೆಲೆ ಹೊಂದಿದೆ.

Best Mobiles in India

English summary
iQOO 12 Pro With Snapdragon 8 Gen 3 SoC Launched: Price and Specs Details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+