Home
ಸುದ್ದಿಜಾಲ

ಐಕ್ಯೂ 12 ಸರಣಿಯ ಸಂಪೂರ್ಣ ಫೀಚರ್ಸ್‌ ಬಹಿರಂಗ!.. ಧೂಳೆಬ್ಬಿಸೋದು ಗ್ಯಾರಂಟಿ!

ಮೊಬೈಲ್‌ ಮಾರುಕಟ್ಟೆಯಲ್ಲಿ ಐಕ್ಯೂ ಕಂಪೆನಿ ದಿನೇ ದಿನೇ ತನ್ನ ಖ್ಯಾತಿಯನ್ನು ವಿಸ್ತರಿಸಿಕೊಳ್ಳುತ್ತಿದೆ. ಯುವಜನತೆಗೆ ಸೂಕ್ತವಾದ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸುವ ಮೂಲಕ ಸೈ ಎನಿಸಿಕೊಂಡಿದೆ. ಅದರ ಮುಂದುವರೆದ ಭಾಗವೆಂಬಂತೆ ತನ್ನ ಐಕ್ಯೂ 12 ಸರಣಿ ಬಿಡುಗಡೆಗೆ ತಯಾರಿ ನಡೆಸಿದೆ. ಇದರಲ್ಲಿ ಐಕ್ಯೂ 12 ಮತ್ತು ಐಕ್ಯೂ 12 ಪ್ರೊ ಫೋನ್‌ಗಳು ಬರಲಿವೆ.

ಹೌದು, ಐಕ್ಯೂ 12 ಸರಣಿಯ ಬಿಡುಗಡೆ ದಿನಾಂಕ ಈಗಾಗಲೇ ಬಹಿರಂಗವಾಗಿದೆ. ಇದೀಗ ಈ ಸರಣಿ ಸ್ಮಾರ್ಟ್‌ಫೋನ್‌ಗಳ ಸಂಪೂರ್ಣ ಫೀಚರ್ಸ್‌ ಇದೀಗ ರಿವೀಲ್‌ ಆಗಿದೆ. ಅದರಂತೆ ಈ ಸರಣಿ ಸ್ಮಾರ್ಟ್‌ಫೋನ್‌ಗಳು ವಿಭಿನ್ನ ಮಾದರಿಯ ಫೀಚರ್ಸ್‌ಗಳೊಂದಿಗೆ ಎಂಟ್ರಿ ನೀಡೋದು ಪಕ್ಕಾ ಆಗಿದೆ. ಹಾಗಾದ್ರೆ ಐಕ್ಯೂ 12 ಸರಣಿ ಫೋನ್‌ಗಳಲ್ಲಿ ನೀವು ಯಾವೆಲ್ಲಾ ಫೀಚರ್ಸ್‌ಗಳನ್ನು ಕಾಣಬಹುದು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಐಕ್ಯೂ 12 ಸರಣಿಯ ಸಂಪೂರ್ಣ ಫೀಚರ್ಸ್‌ ಬಹಿರಂಗ!.. ಧೂಳೆಬ್ಬಿಸೋದು ಗ್ಯಾರಂಟಿ!

ಐಕ್ಯೂ 12 ಸ್ಮಾರ್ಟ್‌ಫೋನ್‌ ಫೀಚರ್ಸ್‌ ನಿರೀಕ್ಷೆ?
ಆನ್‌ಲೈನ್‌ನಲ್ಲಿ ಬಹಿರಂಗವಾಗಿರುವ ಮಾಹಿತಿಯ ಪ್ರಕಾರ, ಐಕ್ಯೂ 12 ಸ್ಮಾರ್ಟ್‌ಫೋನ್‌ 6.78 ಇಂಚಿನ BOE OLED ಫ್ಲಾಟ್ ಡಿಸ್‌ಪ್ಲೇಯನ್ನು ಹೊಂದಿರಲಿದೆ. ಇದು 1.5K ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ ಬರಲಿದೆ. ಇನ್ನು ಡಿಸ್‌ಪ್ಲೇ 144Hz ರಿಫ್ರೆಶ್ ರೇಟ್‌ ಜೊತೆಗೆ 3000nits ಪೀಕ್ ಬ್ರೈಟ್‌ನೆಸ್ ಬೆಂಬಲಿಸಲಿದೆ. ಇದಲ್ಲದೆ ಡಿಸ್‌ಪ್ಲೇ 2160Hz PWM ಡಿಮ್ಮಿಂಗ್ ಅನ್ನು ನೀಡುತ್ತದೆ. ಈ ಸ್ಮಾರ್ಟ್‌ಫೋನ್‌ ಸ್ನಾಪ್‌ಡ್ರಾಗನ್ 8 Gen 3 ಪ್ರೊಸೆಸರ್‌ ಹೊಂದಿದ್ದು, ಆಂಡ್ರಾಯ್ಡ್‌ 14 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ.

ಇನ್ನು ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಹೊಂದಿರಲಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ OmniVision OV50H ಸೆನ್ಸಾರ್‌, ಎರಡನೇ ಕ್ಯಾಮೆರಾ 50 ಮೆಗಾಪಿಕ್ಸೆಲ್ Samsung JN1 ಅಲ್ಟ್ರಾವೈಡ್ ಕ್ಯಾಮೆರಾ ಮತ್ತು ಮೂರನೇ ಕ್ಯಾಮೆರಾ 64 ಮೆಗಾಪಿಕ್ಸೆಲ್ OV64B ಟೆಲಿಫೋಟೋ ಲೆನ್ಸ್ ನೊಂದಿಗೆ ಬರಲಿದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್‌ 16 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿರಲಿದೆ. ಈ ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 120W ವೈರ್ಡ್ ಚಾರ್ಜಿಂಗ್‌ಗೆ ಬೆಂಬಲಿಸಲಿದೆ ಎಂದು ವರದಿಯಾಗಿದೆ.

ಐಕ್ಯೂ 12 ಸರಣಿಯ ಸಂಪೂರ್ಣ ಫೀಚರ್ಸ್‌ ಬಹಿರಂಗ!.. ಧೂಳೆಬ್ಬಿಸೋದು ಗ್ಯಾರಂಟಿ!

ಐಕ್ಯೂ 12ಪ್ರೊ ಫೀಚರ್ಸ್‌ ನಿರೀಕ್ಷೆ ಏನಿದೆ?
ಐಕ್ಯೂ 12ಪ್ರೊ ಸ್ಮಾರ್ಟ್‌ಫೋನ್‌ 6.78 ಇಂಚಿನ 2K Samsung E7 AMOLED ಡಿಸ್‌ಪ್ಲೇಯನ್ನು ಹೊಂದಿರುತ್ತದೆ. ಇದು 144Hz ರಿಫ್ರೆಶ್ ರೇಟ್‌ ನೊಂದಿಗೆ, 2700 ನೀಟ್ಸ್ ಗರಿಷ್ಠ ಬ್ರೈಟ್‌ನೆಸ್‌ ನೀಡಲಿದೆ. ಈ ಡಿಸ್‌ಪ್ಲೇ 1440Hz PWM ಡಿಮ್ಮಿಂಗ್‌ ಅನ್ನು ಸಹ ಒಳಗೊಂಡಿದೆ. ಐಕ್ಯೂ 12ಪ್ರೊ ಸ್ಮಾರ್ಟ್‌ಫೋನ್‌ ಸ್ನಾಪ್‌ಡ್ರಾಗನ್ 8 ಜನ್ 3 ಪ್ರೊಸೆಸರ್‌ ವೇಗವನ್ನು ಹೊಂದಿದ್ದು, ಆಂಡ್ರಾಯ್ಡ್‌ 14 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ.

ಐಕ್ಯೂ 12ಪ್ರೊ ಸ್ಮಾರ್ಟ್‌ಫೋನ್‌ ಕೂಡ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಹೊಂದಿರಲಿದೆ. ಇದರ ಮುಖ್ಯ ಕ್ಯಾಮೆರಾ 50-ಮೆಗಾಪಿಕ್ಸೆಲ್ OmniVision OV50H ಸೆನ್ಸಾರ್‌ ಹೊಂದಿರಲಿದೆ. ಎರಡನೇ ಕ್ಯಾಮೆರಾ 50-ಮೆಗಾಪಿಕ್ಸೆಲ್ ಸ್ಯಾಮ್‌ಸಂಗ್ JN1 ಅಲ್ಟ್ರಾವೈಡ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 64 ಮೆಗಾಪಿಕ್ಸೆಲ್ OV64B ಪೆರಿಸ್ಕೋಪ್ ಟೆಲಿಫೋಟೋ ಕ್ಯಾಮೆರಾ ಬರಲಿದೆ. ಇದಲ್ಲದೆ 16 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸೆಲ್ಫಿ ಕ್ಯಾಮೆರಾವನ್ನು ಹೊಂದಿರಲಿದೆ. ಜೊತೆಗೆ 120W ವೈರ್ಡ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್‌ಗೆ ಬೆಂಬಲ ನೀಡುವ 5,100mAh ಸಾಮಥ್‌ಯದ ಬ್ಯಾಟರಿಯನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ.

ಐಕ್ಯೂ 12 ಸರಣಿಯ ಸಂಪೂರ್ಣ ಫೀಚರ್ಸ್‌ ಬಹಿರಂಗ!.. ಧೂಳೆಬ್ಬಿಸೋದು ಗ್ಯಾರಂಟಿ!

ಐಕ್ಯೂ 12 ಸರಣಿ ವಿಶೇಷತೆ ಮತ್ತು ಬೆಲೆ ವಿವರ
ಈ ಸ್ಮಾರ್ಟ್‌ಫೋನ್‌ ವರ್ಧಿತ ಗೇಮಿಂಗ್‌ಗಾಗಿ ಮೀಸಲಾದ Q1 ಡಿಸ್‌ಪ್ಲೇ ಚಿಪ್ ಹೊಂದಿವೆ. ಅಲ್ಲದೆ NFC, ಡ್ಯುಯಲ್-ಫ್ರೀಕ್ವೆನ್ಸಿ GPS, ಒಂದು IR ಬ್ಲಾಸ್ಟರ್, ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳು ಮತ್ತು ಹ್ಯಾಪ್ಟಿಕ್ ಪ್ರತಿಕ್ರಿಯೆಗಾಗಿ ಹೆಚ್ಚುವರಿ-ದೊಡ್ಡ X-ಆಕ್ಸಿಸ್ ಲೀನಿಯರ್ ಮೋಟಾರ್ ಅನ್ನು ಒಳಗೊಂಡಿವೆ. ಈ ಸ್ಮಾರ್ಟ್‌ಫೋನ್‌ಗಳ ಬೆಲೆ ವಿವರಗಳು ಇನ್ನು ಕೂಡ ಬಹಿರಂಗವಾಗಿಲ್ಲ. ಆದರೆ ಈ ಫೋನ್‌ಗಳು ಬಿಳಿ , ಕಪ್ಪು ಮತ್ತು ಕೆಂಪು ಬಣ್ಣದ ಆಯ್ಕೆಗಳಲ್ಲಿ ಬರಲಿವೆ.

Best Mobiles in India

English summary
iQOO 12 Series full specifications Leaked ahead of the launch: Details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+