ಗ್ರ್ಯಾಂಡ್ ಎಂಟ್ರಿ ಕೊಟ್ಟ ಐಕ್ಯೂ 12 ಸ್ಮಾರ್ಟ್‌ಫೋನ್!..3x ಪೆರಿಸ್ಕೋಪ್ ಜೂಮ್ ಕ್ಯಾಮೆರಾ ವಿಶೇಷ!
ಭಾರಿ ನಿರೀಕ್ಷೆ ಹುಟ್ಟುಹಾಕಿದ್ದ ಐಕ್ಯೂ 12 ಸ್ಮಾರ್ಟ್‌ಫೋನ್ ಇದೀಗ ಭಾರತದಲ್ಲಿ ಅನಾವರಣಗೊಂಡಿದೆ. ಈ ಸ್ಮಾರ್ಟ್‌ಫೋನ್ ಗ್ರ್ಯಾಂಡ್ ಎಂಟ್ರಿಗೆ ಟೆಕ್ ವಲಯವೇ ಶೇಕ್ ಆಗಿದ್ದು, ಇದು ಫೋಟೋಗ್ರಫಿಯರ ಫೋನ್ ಆಗಲಿದೆ ಎಂಬ ಮಾತು ಕೇಳಿ ಬರುತ್ತಿದೆ. ಈ ಸ್ಮಾರ್ಟ್‌ಫೋನ್‌ನಲ್ಲಿರುವ ಕ್ಯಾಮೆರಾ ಫೀಚರ್ಸ್ ಇದಕ್ಕೆ ಪುಷ್ಠಿ ನೀಡುವಂತಿದೆ.
ಹೌದು, ಐಕ್ಯೂ 12 (iQOO 12) ಸ್ಮಾರ್ಟ್‌ಫೋನ್ ಭಾರತದಲ್ಲಿ ಲಾಂಚ್ ಆಗಿದೆ. ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 Gen 3 SoC ಪ್ರೊಸೆಸರ್ ಹೊಂದಿರುವ ಭಾರತದ ಮೊದಲ ಫೋನ್ ಎನಿಸಿಕೊಂಡಿದೆ. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 14 ನಲ್ಲಿ ಕಾರ್ಯನಿರ್ವಹಿಸಲಿದ್ದು, FuntouchOS 14 ನಲ್ಲಿ ಚಾಲನೆಯಲ್ಲಿದೆ. ಹಾಗಾದ್ರೆ ಸ್ಮಾರ್ಟ್‌ಫೋನ್‌ನಲ್ಲಿ ಯಾವೆಲ್ಲಾ ಫೀಚರ್ಸ್‌ಗಳನ್ನು ನೀಡಲಾಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಐಕ್ಯೂ 12 ಸ್ಮಾರ್ಟ್‌ಫೋನ್‌ನ ಡಿಸ್‌ಪ್ಲೇ ರಚನೆ ಹೇಗಿದೆ?
ಐಕ್ಯೂ 12 ಸ್ಮಾರ್ಟ್‌ಫೋನ್ 6.78 ಇಂಚಿನ 1.5K LTPO OLED ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 2800 x 1260 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿದೆ. ಇನ್ನು ಡಿಸ್‌ಪ್ಲೇ 3000 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಅನ್ನು ನೀಡಲಿದೆ. ಜೊತೆಗೆ ಡಿಸ್‌ಪ್ಲೇ 144Hz ರಿಫ್ರೆಶ್ ರೇಟ್ ಅನ್ನು ಹೊಂದಿದ್ದು, 2160Hz PWM ಡಿಮ್ಮಿಂಗ್ ಅನ್ನು ಬೆಂಬಲಿಸಲಿದ್ದು, ಕಣ್ಣಿಗೆ ಸುರಕ್ಷತೆಯನ್ನು ನೀಡಲಿದೆ.
ಐಕ್ಯೂ 12 ಸ್ಮಾರ್ಟ್‌ಫೋನ್ ಪ್ರೊಸೆಸರ್ ಯಾವುದು?
ಐಕ್ಯೂ 12 ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 Gen 3 SoC ಪ್ರೊಸೆಸರ್ ವೇಗವನ್ನು ಹೊಂದಿದೆ. ಇದು ಆಂಡ್ರಾಯ್ಡ್ 14 ನಲ್ಲಿ ಕಾರ್ಯನಿರ್ವಹಿಸಲಿದ್ದು, FuntouchOS 14 ನಲ್ಲಿ ಚಾಲನೆಯಲ್ಲಿದೆ. ಜೊತೆಗೆ ಗೇಮಿಂಗ್ ಅನುಭವಗಳನ್ನು ಹೆಚ್ಚಿಸಲು ಮತ್ತು ಫ್ರೇಮ್ ದರಗಳನ್ನು ಆಪ್ಟಿಮೈಜ್ ಮಾಡಲು, ಮೀಸಲಾದ Q1 ಚಿಪ್‌ಸೆಟ್ ಅನ್ನು ಡಿವೈಸ್‌ನ ಆರ್ಕಿಟೆಕ್ಚರ್‌ಗೆ ಸಂಯೋಜಿಸಲಾಗಿದೆ. ಹಾಗೆಯೇ 16GB RAM ಮತ್ತು 512GB ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಪಡೆದಿದೆ.

ಐಕ್ಯೂ 12 ಸ್ಮಾರ್ಟ್‌ಫೋನ್ ಕ್ಯಾಮೆರಾ ಸೆಟ್‌ಅಪ್ ಏನಿದೆ?
ಐಕ್ಯೂ 12 ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿದೆ, ಎರಡನೇ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್ ಪೆರಿಸ್ಕೋಪ್ ಟೆಲಿಫೋಟೋ ಲೆನ್ಸ್ ಹೊಂದಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.
ಐಕ್ಯೂ 12 ಸ್ಮಾರ್ಟ್‌ಫೋನ್ ಬ್ಯಾಟರಿ ಮತ್ತು ಇತರೆ
ಐಕ್ಯೂ 12 ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 120W ವರೆಗಿನ ವೇಗದ ಚಾರ್ಜಿಂಗ್ ಸಾಮರ್ಥ್ಯಗಳನ್ನು ಬೆಂಬಲಿಸುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್, ಬ್ಲೂಟೂತ್, ವೈಫೈ, ಯುಎಸ್‌ಬಿ ಸಿ ಪೋರ್ಟ್, ಹೆಡ್‌ಫೋನ್ ಜ್ಯಾಕ್ ಅನ್ನು ಒಳಗೊಂಡಿದೆ. ಇದಲ್ಲದೆ ಇನ್-ಸ್ಕ್ರೀನ್ ಫಿಂಗರ್‌ಪ್ರಿಂಟ್ ಸೆನ್ಸಾರ್, ತಲ್ಲೀನಗೊಳಿಸುವ ಆಡಿಯೊ ಅನುಭವಕ್ಕಾಗಿ ಸ್ಟೀರಿಯೋ ಸ್ಪೀಕರ್‌ಗಳು ಮತ್ತು ಹೈ-ರೆಸ್ ಆಡಿಯೊಗೆ ಬೆಂಬಲವನ್ನು ನೀಡಲಿದೆ.

ಐಕ್ಯೂ 12 ಸ್ಮಾರ್ಟ್‌ಫೋನ್ ಬೆಲೆ ಮತ್ತು ಲಭ್ಯತೆ
ಐಕ್ಯೂ 12 ಸ್ಮಾರ್ಟ್‌ಫೋನ್ ಭಾರತದಲ್ಲಿ 12GB+256GB ವೇರಿಯಂಟ್ 57,999 ರೂ.ಬೆಲೆಯನ್ನು ಹೊಂದಿದೆ. ಇದರ 16GB+256GB ವೇರಿಯಂಟ್ ಬೆಲೆ 52,999ರೂ ಆಗಿದೆ. ಈ ಫೋನ್ ಬಿಳಿ ಮತ್ತು ಕಪ್ಪು ಬಣ್ಣದ ರೂಪಾಂತರದಲ್ಲಿ ಲಭ್ಯವಿದೆ. ಆದ್ಯತೆಯ ಪಾಸ್ ಹೊಂದಿರುವವರಿಗೆ ಇದು ಡಿಸೆಂಬರ್ 13 ರಿಂದ ತನ್ನ ಮೊದಲ ಮಾರಾಟವನ್ನು ಪ್ರಾರಂಭಿಸುತ್ತದೆ.
ಲಾಂಚ್ ಆಫರ್ ಏನಿದೆ?
ಐಕ್ಯೂ 12 ಸ್ಮಾರ್ಟ್‌ಫೋನ್ ಅನ್ನು HDFC ಅಥವಾ ICICI ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದರೆ 3,000 ಹೆಚ್ಚುವರಿ ರಿಯಾಯಿತಿಯನ್ನು ಪಡೆಯಬಹುದು.


Click it and Unblock the Notifications