iQOO: 32MP ಸೆಲ್ಫಿ ಕ್ಯಾಮೆರಾ.. 6150mAh ಬ್ಯಾಟರಿ.. ಭಾರತಕ್ಕೆ ಬರ್ತಿದೆ ಹೊಸ ಫೋನ್; ಬೆಲೆ ಷ್ಟು?
ಐಕ್ಯೂ ತನ್ನ ಅಭಿಮಾನಿಗಳಿಗೆ ಗುಡ್ ನ್ಯೂಸ್ ಇಲ್ಲಿದೆ. ಶೀಘ್ರದಲ್ಲಿಯೇ ಹೊಸ ಮೊಬೈಲ್ ಭಾರತೀಯ ಗ್ರಾಹಕರ ಕೈ ಸೇರಲಿದೆ. ಹೌದು, ಐಕ್ಯೂ (iQOO) ಇತ್ತೀಚೆಗೆ ಚೀನಾದಲ್ಲಿ ಐಕ್ಯೂ 13 (iQOO 13) ಫೋನನ್ನು ಬಿಡುಗಡೆ ಮಾಡಿದೆ. ಇದೀಗ, ಈ ಸ್ಮಾರ್ಟ್‌ಫೋನ್ ಭಾರತಕ್ಕೆ ಎಂಟ್ರಿ ಕೊಡುತ್ತಿದೆ. ಕಂಪನಿಯು ಮುಂಬರುವ ಐಕ್ಯೂ 13 5G ಮತ್ತು ಲೆಜೆಂಡ್ ಆವೃತ್ತಿಯ ಲಾಂಚ್ ಟೈಮ್‌ಲೈನ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಬನ್ನಿ, ಈ ಫೋನ್ ಭಾರತದಲ್ಲಿ ಯಾವಾಗ ಬಿಡುಗಡೆಯಾಗಲಿದೆ ಎಂಬುದನ್ನು ತಿಳಿಯೋಣ.
ಅಮೆಜಾನ್ ಮತ್ತು ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಹೊಸ ಐಕ್ಯೂ 13 ಫೋನಿನ ಮೈಕ್ರೋ ಸೈಟ್ ಸಹ ಲೈವ್ ಆಗಿದೆ. ಐಕ್ಯೂ 13 ಲೆಜೆಂಡ್ ಆವೃತ್ತಿಯು ಡಿಸೆಂಬರ್‌ನಲ್ಲಿ ಬಿಡುಗಡೆಯಾಗಲಿದೆ ಎಂದು ಖಚಿತಪಡಿಸಲಾಗಿದೆ. ಇದಕ್ಕೂ ಮೊದಲು ಐಕ್ಯೂ 13 ಮೊಬೈಲ್ ಲೋಕಾರ್ಪಣೆಗೊಳ್ಳಲಿದೆ. ಆದರೆ, ಕಂಪನಿಯು ಅಧಿಕೃತ ಬಿಡುಗಡೆಯ ದಿನಾಂಕವನ್ನು ಘೋಷಿಸಿಲ್ಲ. ವರದಿಗಳ ಪ್ರಕಾರ, ಈ ಮೊಬೈಲ್ ಡಿಸೆಂಬರ್ 3, ಡಿಸೆಂಬರ್ 5 ಅಥವಾ ಡಿಸೆಂಬರ್ 13 ರಂದು ರಿಲೀಸ್ ಆಗಲಿದೆ.

ಐಕ್ಯೂ 13 5G ವಿನ್ಯಾಸ
ಐಕ್ಯೂ 13 ಫೋನನ್ನು ಬಣ್ಣ ಬಿಳಿ. ಆದರೆ, ಸಾಮಾನ್ಯ ಆವೃತ್ತಿಯ ಬಣ್ಣ ಬೆಳ್ಳಿ ಆಗಿದೆ. ಕಂಪನಿಯು ಚೀನಾದಲ್ಲಿ ಇದನ್ನು ಕಪ್ಪು, ಹಸಿರು, ಬೆಳ್ಳಿ ಮತ್ತು ಬಿಳಿ ಬಣ್ಣಗಳಲ್ಲಿ ಬಿಡುಗಡೆ ಮಾಡಿದೆ. ಎರಡೂ ಫೋನ್‌ಗಳ ವಿನ್ಯಾಸ ಒಂದೇ ಆಗಿರುತ್ತದೆ. ಕಂಪನಿಯು ಫೋನಿನ ವಿನ್ಯಾಸವನ್ನು 'GOAT' ಎಂದು ಹೆಸರಿಸಿದೆ. ಫೋನಿನಲ್ಲಿ ಕ್ಯಾಮೆರಾದ ಸುತ್ತಲೂ ಎಲ್‌ಇಡಿ ಲೈಟ್ ರಿಂಗ್ ಕಾಣಬಹುದು. ಇದು ಗೇಮಿಂಗ್ ಪ್ರಿಯರಿಗೆ ಉತ್ತಮ ಆಯ್ಕೆಯಾಗಿದೆ.
ಐಕ್ಯೂ 13 5G ಫೋನಿನ ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ಐಕ್ಯೂ 13 5G ಫೋನ್ 6.82 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ ಡಿಸ್ಪ್ಲೇಯನ್ನು ಹೊಂದಿರಲಿದೆ. ಇದು 2K ಅಮೋಲೆಡ್ ಡಿಸ್ಪ್ಲೇ ಆಗಿದೆ. ಇದು 144Hz ರಿಫ್ರೆಶ್ ದರ, 1800 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್, 3168 X 1440 ಪಿಕ್ಸೆಲ್‌ಗಳ ರೆಸಲ್ಯೂಶನ್ ಮತ್ತು 1440 ಪಿಕ್ಸೆಲ್ ಕಟ್‌ಹೋಲ್ ರೆಸಲ್ಯೂಶನ್ ಹೊಂದಿರಲಿದೆ.
ಪ್ರೊಸೆಸರ್ ಸಾಮರ್ಥ್ಯ
ಐಕ್ಯೂ 13 5G ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್ ಹೊಂದಿರಲಿದೆ. ಮತ್ತು ಇನ್ ಹೌಸ್ ಕ್ಯೂ2 ಗೇಮಿಂಗ್ ಚಿಪ್‌ನೊಂದಿಗೆ ಬರುತ್ತದೆ. ಈ ಮೊಬೈಲ್ 24GB ವರೆಗೆ RAM ಮತ್ತು 1TB ಸ್ಟೋರೇಜ್ ಆಯ್ಕೆ ಹೊಂದಿದೆ. ಇದು ಆಂಡ್ರಾಯ್ಡ್ 15 OriginOS 5 ಓಎಸ್‌ನಲ್ಲಿ ಕೆಲಸ ನಿರ್ವಹಿಸುತ್ತದೆ.
ಕ್ಯಾಮೆರಾ ಸೆಟಪ್
ಐಕ್ಯೂ 13 5G ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದು OIS ಬೆಂಬಲದೊಂದಿಗೆ 50 ಮೆಗಾಪಿಕ್ಸೆಲ್ ಸೋನಿ IMX921 ಕ್ಯಾಮೆರಾ ಹೊಂದಿರಲಿದೆ. 50 ಮೆಗಾಪಿಕ್ಸೆಲ್ ಸ್ಯಾಮ್‌ಸಂಗ್ S5KJN1 ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ಮತ್ತು OIS ಜೊತೆಗೆ 50 ಮೆಗಾಪಿಕ್ಸೆಲ್ ಸೋನಿ ಟೆಲಿಫೋಟೋ ಕ್ಯಾಮೆರಾ ಲಭ್ಯವಿರಲಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ, ಈ ಫೋನ್ 32 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇರಲಿದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ಐಕ್ಯೂ 13 5G ಮೊಬೈಲ್ 6150mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಲಿದೆ. ಇದನ್ನು ಚಾರ್ಜ್ ಮಾಡಲು, 120W ವೈರ್ಡ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗುತ್ತದೆ.
ಇತರೆ ವೈಶಿಷ್ಟ್ಯಗಳು
ಐಕ್ಯೂ 13 5G ಫೋನ್ ಇನ್ ಡಿಸ್ಪ್ಲೇ ಅಲ್ಟ್ರಾಸಾನಿಕ್ ಫಿಂಗರ್‌ಪ್ರಿಂಟ್ ಸಂವೇದಕ ಹೊಂದಿರಲಿದೆ. ನೀರು ಮತ್ತು ಧೂಳಿನ ಪ್ರತಿರೋಧಕ್ಕಾಗಿ IP69 ಮತ್ತು IP68 ರೇಟಿಂಗ್ ಪಡೆದಿರಲಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, ವೈ ಫೈ 7, ಬ್ಲೂಟೂತ್ 5.4, ಎನ್‌ಎಫ್‌ಸಿ, ಜಿಪಿಎಸ್ ಮತ್ತು ಯುಎಸ್‌ಬಿ ಟೈಪ್ ಸಿ ಪೋರ್ಟ್ ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿರಲಿದೆ.
ಐಕ್ಯೂ 13 5G ಬೆಲೆ ಎಷ್ಟು?
ಐಕ್ಯೂ 13 5G ಫೋನನ್ನು ಚೀನಾದಲ್ಲಿ ಐದು ಸ್ಟೋರೇಜ್ ರೂಪಾಂತರಗಳಲ್ಲಿ ಬಿಡುಗಡೆ ಮಾಡಲಾಗಿದೆ. ಇದರ ಬೆಲೆ ಈ ಕೆಳಗಿನಂತಿದೆ. ಭಾರತದಲ್ಲಿ ಇದಕ್ಕಿಂತ ಕಡಿಮೆ ಬೆಲೆಗೆ ಪರಿಚಯಿಸುವ ಸಾಧ್ಯತೆಯಿದೆ.
12GB + 256GB ಸ್ಟೋರೇಜ್ ಬೆಲೆ = 47,200 ರೂ.
16GB + 256GB ಸ್ಟೋರೇಜ್ ಬೆಲೆ = 50,800 ರೂ.
12GB + 512GB ಸ್ಟೋರೇಜ್ ಬೆಲೆ = 53,100 ರೂ.
16GB + 512GB ಸ್ಟೋರೇಜ್ ಬೆಲೆ = 55,500 ರೂ.
16GB + 1TB ಸ್ಟೋರೇಜ್ ಬೆಲೆ = 61,400 ರೂ.


Click it and Unblock the Notifications








