Home
ಸುದ್ದಿಜಾಲ

iQOO 3: ವೇಗದ ಪ್ರೊಸೆಸರ್‌ನ ಪವರ್‌ಫುಲ್ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್!

ಇoದು ಸ್ಮಾರ್ಟ್‌ಫೋನ್‌ ಜಮಾನ. ಟೆಕ್‌ ವಲಯದಲ್ಲಿ ನಿರೀಕ್ಷೆಗೂ ಮೀರಿದ ಸ್ಮಾರ್ಟ್‌ಫೋನ್‌ಗಳನ್ನ ನಾವಿಂದು ಕಾಣಬಹುದಾಗಿದೆ. ಅಷ್ಟರ ಮಟ್ಟಿಗೆ ಸ್ಮಾರ್ಟ್‌ಫೋನ್‌ ವಲಯ ಇಂದು ಸಾಕಷ್ಟು ಸ್ಪರ್ಧಾತ್ಮಕವಾಗಿದೆ. ಇದರ ನಡುವೆ ಈಗಾಗಲೇ ಹಲವು ಕಂಪೆನಿಗಳ ಸ್ಮಾರ್ಟ್‌ಫೋನ್‌ಗಳು ಸ್ಮಾರ್ಟ್‌ಫೋನ್‌ ಪ್ರಿಯರ ನೆಚ್ಚಿನ ಬ್ರಾಂಡ್‌ಗಳಾಗಿ ಗುರುತಿಸಿಕೊಂಡಿವೆ. ಆದರೂ ಇಂದಿನ ದಿನಗಳಲ್ಲಿ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಜನಪ್ರಿಯತೆಯನ್ನ ಪಡೆದುಕೊಳ್ಳಲು ಸ್ಮಾರ್ಟ್‌ಫೋನ್‌ ವಿನ್ಯಾಸ, ಡಿಸ್‌ಪ್ಲೇ, ಕ್ಯಾಮೆರಾ ಫೀಚರ್ಸ್‌ ಸೇರಿದಂತೆ ಸ್ಮಾರ್ಟ್‌ಫೋನ್‌ನ ಕಾರ್ಯದಕ್ಷತೆ ಕೂಡ ಮುಖ್ಯವಾಗಲಿದೆ.ಸದ್ಯ ಇದೀಗ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 865SoC ಒಳಗೊಂಡ ಸ್ಮಾರ್ಟ್‌ಫೋನ್‌ಗಳಿಗೆ ಭಾರಿ ಬೇಡಿಕೆ ಇದೆ. ಅದರಲ್ಲಿ iQOO 3 ಸ್ಮಾರ್ಟ್‌ಫೋನ್‌ ಉತ್ತಮ ಆಯ್ಕೆ ಎನ್ನಬಹುದಾಗಿದೆ.

ಸ್ಮಾರ್ಟ್‌ಫೋನ್‌

ಹೌದು, ಯಾವುದೇ ಒಂದು ಸ್ಮಾರ್ಟ್‌ಫೋನ್‌ ತನ್ನ ಜನಪ್ರಿಯತೆಯನ್ನ ಪಡೆದುಕೊಳ್ಳಬೇಕಾದರೆ ಅದರ ಕಾರ್ಯದಕ್ಷತೆ ಉತ್ತಮವಾಗಿರಬೇಕು. ಸ್ಮಾರ್ಟ್‌ಫೋನ್‌ ಕ್ಷೇತ್ರದಲ್ಲಿ ಕಾರ್ಯಕ್ಷಮತೆ ಅಂದರೆ ಅದು ಅದರ ಪ್ರೊಸೆಸರ್‌ ವೇಗವನ್ನ ಅಳೆಯುವುದಾಗಿದ್ದು. ಸದ್ಯ ಮಾರುಕಟ್ಟೆಯಲ್ಲಿ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 865 ಪ್ರೊಸೆಸರ್‌ ಉತ್ತಮವಾಗಿದ್ದು, ಇದನ್ನ ಒಳಗೊಂಡ ಸ್ಮಾರ್ಟ್‌ಫೋನ್‌ಗಳಿಗೆ ಉತ್ತಮ ಬೇಡಿಕೆ ಇದೆ.ಅಲ್ಲದೆ ಕ್ವಾಲ್ಕಾಮ್ ಎಸ್‌ಡಿ 865 ನೀಡುವ ಕಾರ್ಯಕ್ಷಮತೆ ಅಭೂತಪೂರ್ವವಾಗಿದೆ. ಇನ್ನು ಪ್ರೊಸೆಸರ್‌ ವೇಗವನ್ನು ಒಳಗೊಂಡಿರುವ ಸ್ಮಾರ್ಟ್‌ಫೋನ್‌ಗಳು ಹೆಚ್ಚಿನ ಬೆಲೆಯಲ್ಲಿ ಲಬ್ಯವಾಗಲಿವೆ ಎನ್ನುವ ಮಾತು ಕೂಡ ಇದೆ. ಈ ಪ್ರೊಸೆಸರ್‌ ಒಳಗೊಂಡ ಹಲವಾರು ಸ್ಮಾರ್ಟ್‌ಫೋನ್‌ಗಳು ಇಂದು ಮಾರುಕಟ್ಟೆಯಲ್ಲಿ ಲಬ್ಯವಿದೆಯಾದರೂ iQOO 3 ಸ್ಮಾರ್ಟ್‌ಫೊನ್‌ ಕಾರ್ಯಕ್ಷಮೆತ ಹಾಗೂ ದಕ್ಷತೆ ವಿಚಾರ ಮಾತ್ರವಲ್ಲ ಎಲ್ಲಾ ವಿನ್ಯಾಸದ ಮಾದರಿಯಲ್ಲೂ ಉತ್ತಮವಾಗಿದೆ ಎಂದು ಹೇಳಬಹುದಾಗಿದೆ.

ಸ್ಮಾರ್ಟ್‌ಫೋನ್‌

ಹಾಗೇ ನೊಡಿದರೆ ಐಕ್ಯೂಒ 3 ಸ್ಮಾರ್ಟ್‌ಫೋನ್‌ ಕೂಡ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 865 ಪ್ರೊಸೆಸರ್‌ ಅನ್ನು ಹೊಂದಿದ್ದು. ತನ್ನ ಹಿಂದಿನ ಪ್ರೊಸೆಸರ್‌ ವೇಗಕ್ಕಿಂತ 25% ಕಾರ್ಯಕ್ಷಮತೆಯನ್ನು ಹೆಚ್ಚು ಒಳಗೊಂಡಿದೆ. ಅಲ್ಲದೆ ಶಕ್ತಿಯ ಬಳಕೆಯನ್ನು 30% ರಷ್ಟು ಕಡಿಮೆ ಮಾಡುತ್ತದೆ. ಇದರಲ್ಲಿ ಎಐ-ಶಕ್ತಗೊಂಡ ಫೋಟೋಗ್ರಫಿ, ಜೊತೆಗೆ ಎಐ ಕಾರ್ಯಕ್ಷಮತೆಯನ್ನು ಸಹ ಈ ಪ್ರೊಸೆಸರ್ ಹೊಂದಿದೆ. ಅಲ್ಲದೆ ಸ್ನ್ಯಾಪ್‌ಡ್ರಾಗನ್ 865 SoC ಐಕ್ಯೂಒ 3 ಸ್ಮಾರ್ಟ್‌ಫೋನ್‌ನಲ್ಲಿ ಗೇಮಿಂಗ್ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. ಸ್ಮಾರ್ಟ್‌ಫೋನ್‌‌ನಲ್ಲಿನ ಕನ್ಸೋಲ್-ಮಟ್ಟದ ಗೇಮಿಂಗ್ ಅನುಭವವನ್ನು ಸಹ ಉತ್ತಮ ಪಡಿಸಿದೆ. ಇದಕ್ಕಾಗಿ ಈ ಸ್ಮಾರ್ಟ್‌ಫೋನ್‌ನಲ್ಲಿ ಟಚ್-ರೆಸ್ಪಾನ್ಸ್ ಡಿಸ್ಪ್ಲೇ ಮತ್ತು 'ಮಾನ್ಸ್ಟರ್ ಟಚ್ ಬಟನ್'ಗಳನ್ನು ಸಂಯೋಜಿಸಲಾಗಿದೆ.

ಪ್ರೊಸೆಸರ್‌

ಇನ್ನು ಈ ಪ್ರೊಸೆಸರ್‌ ವೇಗವನ್ನು ಹೊಂದಿರುವ ಸ್ಮಾರ್ಟ್‌ಫೋನ್‌ಗಳಲ್ಲಿ 'ಕಾರ್ಬನ್ ಫೈಬರ್ ಆವಿ ಕೂಲಿಂಗ್ ಸಿಸ್ಟಮ್' ಅನ್ನು ಅಳವಡಿಸಿರುವುದರಿಂದ ಈ ಡಿವೈಸ್‌ನ ತಾಪಮಾನವನ್ನು ಕಂಟ್ರೋಲ್‌ ಮಾಡಬಹುದಾಗಿದೆ. ಇದಲ್ಲದೆ ನೀವು ಥ್ರೊಟ್ಲಿಂಗ್ ಸಮಸ್ಯೆಗಳ ಬಗ್ಗೆ ಚಿಂತಿಸದೆ ಅಸ್ಫಾಲ್ಟ್ 9, ಪಿ.ಯು.ಬಿ.ಜಿ, ಫೋರ್ಜಾ ಸ್ಟ್ರೀಟ್, ಮುಂತಾದ ಗ್ರಾಫಿಕ್ಸ್ ಗೇಮ್‌ಗಳನ್ನ ಸಹ ಇದರಲ್ಲಿ ಆಡಬಹುದಾಗಿದೆ. ಇನ್ನು ಸ್ನ್ಯಾಪ್‌ಡ್ರಾಗನ್ 865 SoC ಪ್ರೊಸೆಸರ್‌ ಒಳಗೊಂಡ ಸ್ಮಾರ್ಟ್‌ಫೋನ್‌ಗಳಲ್ಲಿ ಡಿಸ್ಪ್ಲೇ, ಕ್ಯಾಮೆರಾ, ಬ್ಯಾಟರಿ ಮತ್ತು ಇನ್ನಷ್ಟು ಉತ್ತಮವಾದ ಫೀಚರ್ಸ್‌ಗಳನ್ನ ನಿಡಲಾಗಿರುತ್ತದೆ.

ಸ್ನ್ಯಾಪ್‌ಡ್ರಾಗನ್

ಅದರಲ್ಲೂ ಸ್ನ್ಯಾಪ್‌ಡ್ರಾಗನ್ 865 SoC ಪ್ರೊಸೆಸರ್‌ ಒಳಗೊಂಡ ಪ್ರಮುಖ ಮಾರುಕಟ್ಟೆ ವಿಭಾಗದಲ್ಲಿ ರಿಯಲ್‌ಮಿ x 50 ಪ್ರೊ 5g, ಒನ್‌ಪ್ಲಸ್ 8, ಒನ್‌ಪ್ಲಸ್ 8 ಪ್ರೊ, ಮತ್ತು ಶಿಯೋಮಿ ಮಿ 10 5 g ಯಂತಹ ಅನೇಕ ಜನಪ್ರಿಯ ಸ್ಮಾರ್ಟ್‌ಫೋನ್‌ಗಳನ್ನ ನಾವಿಂದು ಕಾಣಬಹುದಾಗಿದೆ. ಅದರಲ್ಲೂ ರಿಯಲ್‌ಮಿ X50 ಪ್ರೊ 5g ಸ್ಮಾರ್ಟ್‌ಫೋನ್‌ 6.44 ಇಂಚಿನ ಫುಲ್‌ ಹೆಚ್‌ಡಿ + ಸೂಪರ್ ಅಮೋಲೆಡ್ ಡಿಸ್ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್‌ ಅನ್ನು ಹೊಂದಿದ್ದು, ಎಚ್‌ಡಿಆರ್ 10 + ಅನ್ನು ಬೆಂಬಲಿಸುತ್ತದೆ.

ಶಿಯೋಮಿ ಮಿ 10

ಇನ್ನು ಶಿಯೋಮಿ ಮಿ 10 5G ಯಲ್ಲಿ 6.67-ಇಂಚಿನ ಫುಲ್‌ಹೆಚ್‌ಡಿ + ಅಮೋಲೆಡ್ ಡಿಸ್ಪ್ಲೇ ಯನ್ನ ನೀಡಲಾಗಿದೆ. ಒನ್‌ಪ್ಲಸ್ 8 ಸ್ಮಾರ್ಟ್‌ಫೋನ್‌ನಲ್ಲಿ 6.55-ಇಂಚಿನ ಫುಲ್‌ಹೆಚ್‌ಡಿ + ಫ್ಲೂಯಿಡ್ ಅಮೋಲೆಡ್ ಡಿಸ್ಪ್ಲೇಯನ್ನು ನೀಡಲಾಗಿದ್ದು, ಇದು 90Hz ರಿಫ್ರೆಶ್ ರೇಟ್‌ ಮತ್ತು ಎಚ್‌ಡಿಆರ್ + ಹೊಂದಿದೆ. ಅಲ್ಲದೆ ಒನ್‌ಪ್ಲಸ್ 8 ಪ್ರೊ ದೊಡ್ಡ ಗಾತ್ರದ 6.78-ಇಂಚಿನ ದ್ರವ ಅಮೋಲೆಡ್ ಡಿಸ್‌ಪ್ಲೇ ಹೊಂದಿದ್ದು, 120Hz ವೇಗದ ರಿಫ್ರೆಶ್ ರೇಟ್‌ಅನ್ನು ಹೊಂದಿದೆ. ಇದೆಲ್ಲದಕ್ಕೆ ಹೋಲಿಸಿದರೆ, ಐಕ್ಯೂಒ 3 ಪೋಲಾರ್ ವ್ಯೂ 6.4-ಇಂಚಿನ ಇ 3 ಸೂಪರ್ ಅಮೋಲೆಡ್ ಡಿಸ್ಪ್ಲೇಯನ್ನು ಹೊಂದಿದ್ದೆ. ಅಲ್ಲದೆ ಇದು 180Hz ಸೂಪರ್ ಟಚ್ ರೆಸ್ಪಾನ್ಸ್ ರೇಟ್‌ ಅನ್ನು ಹೊಂದಿದೆ. ಇದಲ್ಲದೆ ಡಿಸ್‌ಪ್ಲೇ ಬ್ರೈಟ್‌ನೆಶ್‌ ಗರಿಷ್ಠ ಮಟ್ಟವನ್ನು 1200 ನಿಟ್‌ಗಳವರೆಗೆ ನೀಡಲಾಗಿದೆ.

ಕ್ಯಾಮೆರಾ

ಇನ್ನು ಆಪ್ಟಿಕಲ್ ಮುಂಭಾಗದಲ್ಲಿ, ಒನ್‌ಐಪಿಎಸ್ 8 ಟ್ರಿಪಲ್ ಕ್ಯಾಮೆರಾವನ್ನು ಹೊಂದಿದ್ದು, 48ಮೆಗಾಪಿಕ್ಸೆಲ್‌ ಪ್ರೈಮರಿ ಕ್ಯಾಂಎರಾವನ್ನು ಒಳಗೊಂಡಿದೆ. ಎರಡನೇ ಕ್ಯಾಮೆರಾ 16 ಮೆಗಾಪಿಕ್ಸೆಲ್‌ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್, ಮೂರನೇ ಕ್ಯಾಮೆರಾ 2 ಎಂಪಿ ಮ್ಯಾಕ್ರೋ ಲೆನ್ಸ್ ಹೊಂದಿದೆ. ಅಲ್ಲದೆ ಒನ್‌ಪ್ಲಸ್ 8 ಪ್ರೊ ಸ್ಮಾರ್ಟ್‌ಫೋನ್‌ ಕ್ವಾಡ್-ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದ್ದು, ಪ್ರೈಮರಿ ಕ್ಯಾಮೆರಾ 48 ಮೆಗಾಪಿಕ್ಸೆಲ್‌ ಸೆನ್ಸಾರ್‌ ಅನ್ನು ಹೊಂದಿದೆ. ಇದಲ್ಲದೆ ಶಿಯೋಮಿ ಮಿ 10 5g ಸ್ಮಾರ್ಟ್‌ಫೋನ್‌ ಕೂಡ ಕ್ವಾಡ್ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಹೊಂದಿದ್ದು, ಮುಖ್ಯ ಕ್ಯಾಮೆರಾ 108 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯವನ್ನ ಹೊಂದಿದೆ.

ಸ್ಮಾರ್ಟ್‌ಫೋನ್‌

ಈ ಸ್ಮಾರ್ಟ್‌ಫೋನ್‌ಗಳಿಗೆ ಹೋಲಿಸಿದರೆ, ಐಕ್ಯೂಒ 3 ಸ್ಮಾರ್ಟ್‌ಫೋನ್‌ ಕ್ವಾಡ್ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದ್ದು, ಇದರಲ್ಲಿ ಮುಖ್ಯ ಕ್ಯಾಮೆರಾ 48ಮೆಗಾಪಿಕ್ಸೆಲ್‌ ಸೆನ್ಸಾರ್‌ ಅನ್ನು ಹೊಂದಿದೆ. ಎರಡನೇ ಕ್ಯಾಮೆರಾ 13 ಎಂಪಿ ಟೆಲಿಫೋಟೋ ಲೆನ್ಸ್, 20Xಜೂಮ್, 13 ಎಂಪಿ ಸೂಪರ್ ವೈಡ್-ಆಂಗಲ್ ಕ್ಯಾಮೆರಾ ಮತ್ತು ಬೊಕೆ ಕ್ಯಾಮೆರಾ ರಚಿಸಲು ಮೀಸಲಾದ 2 ಎಂಪಿ ಡೆಪ್ತ್ ಸೆನ್ಸಾರ್ ಅನ್ನು ಒಳಗೊಂಡಿದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್ 4K ರೆಸಲ್ಯೂಶನ್‌ನಲ್ಲಿ 60fps ನಲ್ಲಿ ವೀಡಿಯೊಗಳನ್ನು ಸೆರೆಹಿಡಿಯುವ ಸಾಮರ್ಥ್ಯ ಹೊಂದಿದೆ. ಇನ್ನು ಈ ಡಿವೈಸ್‌ ಇತ್ತೀಚಿನ ಆಂಡ್ರಾಯ್ಡ್ 10 ನಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ಆಂಡ್ರಾಯ್ಡ್ 11 ನವೀಕರಣವನ್ನು ಸ್ವೀಕರಿಸಲು ಸಹ ಹೊಂದಿಸಲಾಗಿದೆ.

ಸ್ಮಾರ್ಟ್‌ಫೋನ್‌

ಹಾಗೇಯೇ iQOO 3 ಸ್ಮಾರ್ಟ್‌ಫೋನ್‌ ಉತ್ತಮ ಬ್ಯಾಟರಿ ಬ್ಯಾಕ್‌ಅಪ್‌ ಹಾಗೂ ಉತ್ತಮ ಸ್ಟೋರೇಜ್‌ ಸಾಮರ್ಥ್ಯವನ್ನ ಸಹ ಒಳಗೊಮಡಿದೆ. ಕಾರ್ಯದಕ್ಷತೆಯಲ್ಲಿ ಇತರೆ ಸ್ಮಾರ್ಟ್‌ಫೋನ್‌ಗಳಿಗಿಂತ ಅತ್ಯುತ್ತಮವಾಗಿದೆ. ಇನ್ನು ಬೆಲೆಯ ರಾಜಿ ಮಾಡಿಕೊಳ್ಳಲು ಬಯಸದಿದ್ದರೆ, iQOO 3 ನಿಮಗೆ ಸೂಕ್ತ ಆಯ್ಕೆಯಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಅನ್ನು ಪಡೆದುಕೊಳ್ಳಲು, ನೀವು 8GB RAM + 128 GB ರೂಪಾಂತರಕ್ಕೆ 31,990 ರೂಗಳನ್ನು, 8GB RAM + 256GB ರೂಪಾಂತರವು ನಿಮಗೆ 34,990 ರೂ.ಗಳಲ್ಲಿ ಲಬ್ಯವಾಗಲಿದೆ.

Best Mobiles in India

English summary
iQOO 3: Best Qualcomm Snapdragon 865-Powered Flagship to Buy Right Now?to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+