Home
ಸುದ್ದಿಜಾಲ

ಐಕ್ಯೂಗೆ ಮೂರು ವರ್ಷಗಳ ಸಂಭ್ರಮ! ಗ್ರಾಹಕರಿಗೆ 10 ಲಕ್ಷ ರೂ. ಗೆಲ್ಲುವ ಅವಕಾಶ!

ಐಕ್ಯೂ ಕಂಪೆನಿ ಭಾರತದ ಟೆಕ್‌ ವಲಯದಲ್ಲಿ ತನ್ನದೇ ಆದ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಕಡಿಮೆ ಅವಧಿಯಲ್ಲಿಯೇ ಜನರ ವಿಶ್ವಾಸವನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ. ಸದ್ಯ ಇದೀಗ ಭಾರತದಲ್ಲಿ ತನ್ನ ಮೂರನೇ ವರ್ಷದ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. ಇದೇ ಸದಂರ್ಭದಲ್ಲಿ ತನ್ನ ಗ್ರಾಹಕರಿಗೆ ಹತ್ತು ಲಕ್ಷ ರೂ ಬಹುಮಾನ ಗೆಲ್ಲುವ ಅವಕಾಶವನ್ನು ನೀಡಿದೆ.

ಹೌದು, ಐಕ್ಯೂ ಕಂಪೆನಿ ತನ್ನ ಮೂರನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ವಿಶೇಷ ಆಫರ್‌ಗಳನ್ನು ಘೋಷಣೆ ಮಾಡಿದೆ. ತನ್ನ ಸ್ಮಾರ್ಟ್‌ಫೋನ್‌ಗಳ ಮೇಲೆ ವಿಶೇಷ ರಿಯಾಯಿತಿಯನ್ನು ನೀಡಲು ಮುಂದಾಗಿದೆ. ಜೊತೆಗೆ ಇಂಟರ್‌ ನ್ಯಾಷನಲ್‌ ಫ್ಯಾನ್‌ ಮೀಟ್‌ ಅನ್ನು ಕೂಡ ಅಯೋಜಿಸುತ್ತಿದೆ. ಜೊತೆಗೆ ಆಲ್‌ ಸ್ಟಾರ್ಸ್‌ ಕಪ್‌ ಅನ್ನು ಕೂಡ ಅಯೋಜಿಸುವುದಾಗಿ ಹೇಳಿದೆ. ಹಾಗಾದ್ರೆ ಪೊಕೊ ಕಂಪೆನಿಯ ಮೂರನೇ ವರ್ಷದ ವಾರ್ಷಿಕೋತ್ಸವದಲ್ಲಿ ಏನೆಲ್ಲಾ ಆಫರ್‌ ಪಡೆದುಕೊಳ್ಳಬಹುದು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಐಕ್ಯೂಗೆ ಮೂರು ವರ್ಷಗಳ ಸಂಭ್ರಮ! ಗ್ರಾಹಕರಿಗೆ 10 ಲಕ್ಷ ರೂ. ಗೆಲ್ಲುವ ಅವಕಾಶ!

ಭಾರತದ ಸ್ಮಾರ್ಟ್‌ಫೋನ್‌ ವಲಯದಲ್ಲಿ ಐಕ್ಯೂ ಕಂಪೆನಿ ತನ್ನ ಮೂರನೇ ವರ್ಷದ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. ವೇಗವಾಗಿ ಬೆಳೆಯುತ್ತಿರುವ ಸ್ಮಾರ್ಟ್‌ಫೋನ್‌ ಬ್ರ್ಯಾಂಡ್‌ಗಳಲ್ಲಿ ಒಂದಾಗಿರುವ ಐಕ್ಯೂ ವಿಭಿನ್ನ ಶೈಲಿ ಹಾಗೂ ಸ್ಟೈಲಿಶ್‌ ಲುಕ್‌ ಫೋನ್‌ಗಳಿಂದ ಗಮನಸೆಳೆದಿದೆ. ಅದರಂತೆ ಮೂರು ವರ್ಷಗಳಲ್ಲಿ ಹೆಚ್ಚಿನ ಗ್ರಾಹಕರ ಕೈ ಸೇರುವಲ್ಲಿ ಯಶಸ್ವಿಯಾಗಿದೆ. ಇದೇ ಕಾರಣಕ್ಕೆ ಮೂರು ವರ್ಷದ ಸಂಭ್ರಮದ ಪ್ರಯುಕ್ತ ಗ್ರಾಹಕರಿಗೆ ಅತ್ಯಾಕರ್ಷಕ ರಿಯಾಯಿತಿಗಳನ್ನು ನೀಡಲು ಮುಂದಾಗಿದೆ.

ಇತ್ತೀಚಿಗೆ ಬಿಡುಗಡೆಯಾದ ಐಕ್ಯೂ ಸ್ಮಾರ್ಟ್‌ಫೋನ್‌ಗಳ ಮೇಲೆ ನೀವು ಊಹಿಸಲಾಗದ ರಿಯಾಯಿತಿ ನೀಡುವುದಾಗಿ ಹೇಳಿದೆ. ಅಷ್ಟೇ ಅಲ್ಲ ಗ್ರಾಹಕರಿಗೆ 10 ಲಕ್ಷ ರೂ. ಬಹುಮಾನ ಗೆಲ್ಲುವ ಅವಕಾಶವನ್ನು ಸಹ ನೀಡಿದೆ. ಅಲ್ಲದೆ ಐಕ್ಯೂ ಇ ಸ್ಪೊರ್ಟ್ಸ್‌ ಯೂಟ್ಯೂಬ್‌ ಚಾನಲ್‌ನಲ್ಲಿ ಆಲ್‌ ಸ್ಟಾರ್‌ ಸ್ಪೋರ್ಟ್ಸ್‌ ಅನ್ನು ಆಯೋಜಿಸುತ್ತಿದೆ. ನಮ್ಮ ಯಶಸ್ಸಿಗೆ ಕಾರಣರಾದ ಗ್ರಾಹಕರನ್ನು ಒಂದೆಡೆ ಸೇರಿಸುವುದಕ್ಕಾಗಿ ಇಂಟರ್‌ ನ್ಯಾಷನಲ್‌ ಫ್ಯಾನ್‌ ಮೀಟ್‌ ಅನ್ನು ಕೂಡ ನಡೆಸುವುದಾಗಿ ಹೇಳಿದೆ.

ಐಕ್ಯೂಗೆ ಮೂರು ವರ್ಷಗಳ ಸಂಭ್ರಮ! ಗ್ರಾಹಕರಿಗೆ 10 ಲಕ್ಷ ರೂ. ಗೆಲ್ಲುವ ಅವಕಾಶ!

ಇದಲ್ಲದೆ ಐಕ್ಯೂ ಕಂಪೆನಿ ತಾನು ಬಿಡುಗಡೆ ಮಾಡಿದ 5G ಸ್ಮಾರ್ಟ್‌ಫೋನ್‌ಗಳು ಅಮೆಜಾನ್‌ನಲ್ಲಿ ಅತಿ ಹೆಚ್ಚು ಸೇಲ್‌ ಆದ ಫೋನ್‌ಗಳ ಸಾಲಿಗೆ ಸೇರಿದೆ. 91 ಮೊಬೈಲ್‌ನ ಗ್ರೇಟ್ ಇಂಡಿಯನ್ ಸ್ಮಾರ್ಟ್‌ಫೋನ್ ಸಮೀಕ್ಷೆ 2022 ರ ಪ್ರಕಾರ ಐಕ್ಯೂ 2021 - 2022ರ ತನಕ ಅಂದರೆ ಸತತ ಎರಡು ವರ್ಷಗಳವರೆಗೆ ಗ್ರಾಹಕರ ನೆಚ್ಚಿನ ಬ್ರ್ಯಾಂಡ್‌ಗಳ ಸಾಲಿನಲ್ಲಿ ಅಗ್ರ ಸ್ಥಾನ ಪಡೆದಿರುವುದಾಗಿ ಐಕ್ಯೂ ಕಂಪೆನಿ ಹೇಳಿಕೊಂಡಿದೆ.

ಏನಿದು ಐಕ್ಯೂ ಆಲ್ ಸ್ಟಾರ್ಸ್ ಕಪ್?

ಪೊಕೊ ಆಲ್ ಸ್ಟಾರ್ಸ್ ಕಪ್ ನಾಲ್ಕು ದಿನಗಳ ಕಾಲ ನಡೆಯುವ ಎ ಸ್ಪೋರ್ಟ್ಸ್‌ ಪಂದ್ಯಾವಳಿಯಾಗಿದೆ. ಈ ಪಂದ್ಯದಲ್ಲಿ ಗೆದ್ದ ವಿಜೇತರಿಗೆ 10,00,000ರೂ. ಬಹುಮಾನ ದೊರೆಯಲಿದೆ.

ಐಕ್ಯೂಗೆ ಮೂರು ವರ್ಷಗಳ ಸಂಭ್ರಮ! ಗ್ರಾಹಕರಿಗೆ 10 ಲಕ್ಷ ರೂ. ಗೆಲ್ಲುವ ಅವಕಾಶ!

ಅಂತರಾಷ್ಟ್ರೀಯ ಅಭಿಮಾನಿಗಳ ಸಭೆ

ಭಾರತದಲ್ಲಿ ತನ್ನ ಮೂರನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ನಡೆಯುವ ಫ್ಯಾನ್‌ ಮೀಟ್‌ ಇದಾಗಿದೆ. ಐಕ್ಯೂ ಫೋನ್‌ಪ್ರಿಯರನ್ನು ಒಂದೇ ವೇದಿಕೆಯಲ್ಲಿ ಸೇರುವುದಕ್ಕೆ ಇದು ಅವಕಾಶ ನೀಡಲಿದೆ.

ವಾರ್ಷಿಕೋತ್ಸವದ ಆಫರ್‌ ಏನು?

ಐಕ್ಯೂ ವಾರ್ಷಿಕೋತ್ಸವದ ಆಫರ್‌ಗಳು ಮುಂದಿನ ದಿನಗಳಲ್ಲಿ ಅಮೆಜಾನ್‌ನಲ್ಲಿ ಬಹಿರಂಗವಾಗಲಿದೆ. ಇದರಲ್ಲಿ ಐಕ್ಯೂ ಫೋನ್‌ಗಳನ್ನು ನೀವು ಊಹೆಗೂ ಮೀರಿದ ಡಿಸ್ಕೌಂಟ್‌ ಪ್ರೈಸ್‌ನಲ್ಲಿ ಗೆಲ್ಲುವುದಕ್ಕೆ ಸಾಧ್ಯವಾಗಲಿದೆ ಎಂದು ಹೇಳಲಾಗಿದೆ. ಅಮೆಜಾನ್‌ ಕೂಡ ಐಕ್ಯೂ ಫೋನ್‌ಗಳ ಮೇಲೆ ಡಿಸ್ಕೌಂಟ್‌ ನೀಡಲಿದ್ದು, ಸದ್ಯದಲ್ಲೇ ಆಫರ್‌ ವಿವರಗಳನ್ನು ಘೋಷಣೆ ಮಾಡುವ ಸಾಧ್ಯತೆಯಿದೆ. ಒಟ್ಟಿನಲ್ಲಿ ಐಕ್ಯೂ ಕಂಪೆನಿಯ ವಾರ್ಷಿಕೋತ್ಸವದ ಪ್ರಯುಕ್ತ ಐಕ್ಯೂ ಖರೀದಿಸುವವರಿಗೆ ಬಿಗ್‌ ಆಫರ್‌ ಲಭ್ಯವಾಗೋದು ಗ್ಯಾರಂಟಿ ಎಂದು ವರದಿಯಾಗಿದೆ.

Best Mobiles in India

English summary
iQOO celebrates 3rd-year anniversary in india: exciting offers and chance to win 10 lakhs prize money.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+