Home
ಸುದ್ದಿಜಾಲ

Gaming:ನೀವು ಗೇಮ್‌ ಆಡೋದ್ರಲ್ಲಿ ಎಕ್ಸ್‌ಫರ್ಟ್‌ ಇದ್ದೀರಾ! ಇಲ್ಲಿದೆ ನೋಡಿ 10 ಲಕ್ಷ ಗೆಲ್ಲುವ ಅವಕಾಶ!

ನೀವು ಗೇಮಿಂಗ್‌ ಪ್ರಿಯರ, ನೀವು ಆನ್‌ಲೈನ್‌ ಗೇಮ್‌ ಆಡೋದ್ರಲ್ಲಿ ಎಕ್ಸ್‌ಫರ್ಟ್‌ ಇದ್ದೀರಾ, ಹಾಗಾದ್ರೆ ಯಾಕ್‌ ತಡ ಈ ಸುದ್ದಿನ ಕೊನೆ ತನಕ ಮಿಸ್‌ ಮಾಡ್ದೆ ಓದಿರಿ. ಯಾಕಂದ್ರೆ ನೀವು ಪಕ್ಕಾ ಗೇಮರ್‌ ಆಗಿದ್ದರೆ ಐಕ್ಯೂ ಕಡೆಯಿಂದ ಹತ್ತು ಲಕ್ಷ ಹಣವನ್ನು ಜೇಬಿಗೆ ಇಳಿಸಬೋದು. ಅಷ್ಟೇ ಅಲ್ಲ ನೀವು ಮೇನ್‌ ಗೇಮಿಂಗ್‌ (gaming) ಆಫೀಸರ್‌ ಆಗಿ ಪ್ರತಿ ತಿಂಗಳು ಸಂಬಳವನ್ನು ಕೂಡ ಪಡೆದುಕೊಳ್ಳಬಹುದು.

ಹೌದು, ಐಕ್ಯೂ ಕಂಪೆನಿ ಗೇಮರ್‌ಗಳಿಗೆ ಹೊಸ ಆಫರ್‌ ಒಂದನ್ನು ನೀಡಿದೆ. ಗೇಮಿಂಗ್‌ನಲ್ಲಿ ಎಲ್ಲವನ್ನು ತಿಳಿದುಕೊಂಡಿರುವ ಉತ್ಸಾಹಿ ಯುವಕರಿಗೆ ಇದು ಭರ್ಜರಿ ಆಫರ್‌ ಅಂತಾನೇ ಹೇಳಬಹುದು. ಬರೀ ಮೊಬೈಲ್‌ ಗೇಮ್‌ನಲ್ಲಿಯೇ ಕಾಲ ಕಳೆಯೋರು ಕೂಡ ಈ ಆಫರ್‌ ಗೆದ್ದು ಹತ್ತು ಲಕ್ಷ ಪಡೆದುಕೊಳ್ಳಬಹುದು. ಹಾಗಾದ್ರೆ ಐಕ್ಯೂ ಕಂಪೆನಿಯ ಈ ಆಫರ್‌ ವಿಶೇಷತೆ ಏನು? ಹತ್ತು ಲಕ್ಷ ಗೆಲ್ಲೊದಕ್ಕೆ ನೀವು ಏನು ಮಾಡಬೇಕು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ನೀವು ಗೇಮ್‌ ಆಡೋದ್ರಲ್ಲಿ ಎಕ್ಸ್‌ಫರ್ಟ್‌ ಇದ್ದೀರಾ! 10 ಲಕ್ಷ ಗೆಲ್ಲುವ ಅವಕಾಶ!

ಜನಪ್ರಿಯ ಸ್ಮಾರ್ಟ್‌ಫೋನ್‌ ಬ್ರ್ಯಾಂಡ್‌ಗಳಲ್ಲಿ ಒಂದಾದ ಐಕ್ಯೂ ಕಂಪೆನಿಯೇ ಇದೀಗ ಗೇಮರ್‌ಗಳಿಹಗೆ ಹತ್ತು ಲಕ್ಷದ ಆಫರ್‌ ನೀಡಿರೋದು. ಈ ಆಫರ್‌ನ ಉದ್ದೇಶ ಏನೆಂದರೆ ಐಕ್ಯೂ ಕಂಪೆನಿ ಮೇನ್‌ ಗೇಮಿಂಗ್‌ ಆಫಿಸರ್‌ ಅನ್ನು ನೇಮಿಸಲು ಮುಂದಾಗಿದೆ. ಇದಕ್ಕಾಗಿ ಮುಖ್ಯ ಗೇಮಿಂಗ್ ಅಧಿಕಾರಿಯನ್ನು ಹುಡುಕುತ್ತಿದೆ. ಮುಖ್ಯ ಗೇಮಿಂಗ್‌ ಅಧಿಕಾರಿ ಆಗಿರುವವರು ಅತ್ಯುತ್ತಮ ಗೇಮಿಂಗ್‌ ಮತ್ತು ಎಸ್‌ಪೋರ್ಟ್ಸ್‌ ಅನುಭವವನ್ನು ರಚಿಸಲು ಕಂಪೆನಿಗೆ ಸಹಾಯ ಮಾಡುವಂತಿರಬೇಕು.

ಹೀಗೆ ಐಕ್ಯೂ ಕಂಪೆನಿಗೆ ಮೊದಲ ಗೇಮಿಂಗ್‌ ಆಫೀಸರ್‌ ಆಗಿ ನೇಮಕ ಆಗೋರಿಗೆ ಈ ಹತ್ತು ಲಕ್ಷ ರೂ ಬಹುಮಾನ ದೊರೆಯಲಿದೆ. ಇನ್ನು ಗೇಮಿಂಗ್ ಆಫೀಸರ್‌ನ ಮುಖ್ಯ ಕೆಲಸವೆಂದರೆ ಆಟಗಳನ್ನು ಹೇಗೆ ಆಡಲಾಗುತ್ತದೆ, ಗೇಮಿಂಗ್ ಶೈಲಿ, ಅದನ್ನು ಹೇಗೆ ಪ್ರಸ್ತುತಪಡಿಸಲಾಗುತ್ತದೆ ಮತ್ತು ಆಟಗಳನ್ನು ಹೇಗೆ ಅರ್ಥಮಾಡಿಕೊಳ್ಳಲಾಗುತ್ತದೆ ಎಂಬ ವಿಚಾರಗಳ ಬಗ್ಗೆ ಪರಿಪೂರ್ಣ ಮಾಹಿತಿ ಹೊಂದಿರಬೇಕು. ಇದರಿಂದ ಗೇಮರ್‌ಗಳಿಗೆ ಸೂಕ್ತವಾದ ಫೋನ್‌ ತಯಾರಿಸಲು ಸಹಾಯವಾಗಲಿದೆ ಅನ್ನೊದು ಐಕ್ಯೂ ಸಂಸ್ಥೆಯ ಉದ್ದೇಶವಾಗಿದೆ.

ನೀವು ಗೇಮ್‌ ಆಡೋದ್ರಲ್ಲಿ ಎಕ್ಸ್‌ಫರ್ಟ್‌ ಇದ್ದೀರಾ! 10 ಲಕ್ಷ ಗೆಲ್ಲುವ ಅವಕಾಶ!

ಇನ್ನು ಈ ವಿಚಾರವಾಗಿ ಮಾತನಾಡಿರುವ iQOO ನ ಸಿಇಒ ನಿಪುನ್ ಮರಿಯಾ, ಯುವಕರು, ನಿರ್ದಿಷ್ಟವಾಗಿ Generation Z ಗೇಮಿಂಗ್ ಬಗ್ಗೆ ಹೆಚ್ಚಿನ ಉತ್ಸಾಹವನ್ನು ಹೊಂದಿದ್ದಾರೆ. ಅಂತಹವರಿಂದ ಗೇಮರ್‌ಗಳಿಗೆ ಏನು ಅವಶ್ಯವಿದೆ, ಗೇಮರ್‌ಗಳು ಮೊಬೈಲ್‌ನಲ್ಲಿ ಏನೆಲ್ಲಾ ಬಯಸುತ್ತಾರೆ ಅನ್ನೊದನ್ನ ತಿಳಿದಿರುತ್ತಾರೆ. ಈ ಅನುಭವ ನಮ್ಮ ಹೊಸ ಗೇಮಿಂಗ್‌ ಮೊಬೈಲ್‌ ತಯಾರಿಕೆಯಲ್ಲಿ ದೊಡ್ಡ ಪ್ರಭಾವ ಬೀರಬಹುದು ಎಂದು ಹೇಳಿದ್ದಾರೆ.

ಗೇಮಿಂಗ್‌ನಲ್ಲಿ GenZ ನ ಉತ್ಸಾಹ ಮತ್ತು ಭಾಗವಹಿಸುವಿಕೆಯನ್ನು ನಾವು ಗುರುತಿಸುತ್ತೇವೆ. ಅವರ ವಿಭಿನ್ನ ಆದ್ಯತೆಗಳ ಮೂಲಕ ಗೇಮಿಂಗ್‌ ಸ್ಮಾರ್ಟ್‌ಫೋನ್‌ ತಯಾರಿಸುತ್ತೇವೆ ಎಂದಿದ್ದಾರೆ. ಅಲ್ಲದೆ ಭಾರತೀಯ ಗೇಮರುಗಳಿಗಾಗಿ ನಾವೀನ್ಯತೆ ಮತ್ತು ರೋಮಾಂಚಕ ಗೇಮಿಂಗ್ ಅನುಭವಗಳನ್ನು ಸರಳವಾಗಿ ಮುನ್ನಡೆಸುವುದು ನಮ್ಮ ಗುರಿಯಾಗಿದೆ. ಇದೇ ಕಾರಣಕ್ಕೆ ಈ ರೀತಿಯ ಮುಖ್ಯ ಗೇಮಿಂಗ್‌ ಆಫೀಸರ್‌ ನೇಮಕಕ್ಕೆ ಮುಂದಾಗಿದ್ದೆವೆ ಎಂದು ತಿಳಿಸಿದ್ದಾರೆ.

ನೀವು ಕೂಡ ಅತ್ಯುತ್ತಮ ಗೇಮರ್‌ ಆಗಿದ್ದು ಹತ್ತು ಲಕ್ಷ ಗೆಲ್ಲಬೇಕೆಂದುಕೊಂಡಿದ್ದರೆ iQOO ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಇಲ್ಲವೇ "iQOO ಇಂಡಿಯಾ" ಎಂಬ ಅವರ Instagram ಪುಟದಲ್ಲಿ ನೋಂದಾಯಿಸಿಕೊಳ್ಳಬಹುದು. ನೋಂದಣಿ ಪ್ರಕ್ರಿಯೆಯು ಮೇ 30ರಿಂದಲೇ ಪ್ರಾರಂಭವಾಗಿದ್ದು, ಜೂನ್ 11, 2023 ರವರೆಗೆ ಅರ್ಜಿ ಸಲ್ಲಿಸಬಹುದು. ಈ ಅವಕಾಶವನ್ನು ಕಳೆದುಕೊಳ್ಳಬೇಡಿ. ಗೇಮ್‌ ಆಡಿ ಹತ್ತು ಲಕ್ಷ ಗೆಲ್ಲುವ ಅವಕಾಶ ನಿಮ್ಮದಾಗಿಸಿಕೊಳ್ಳಿರಿ.

Best Mobiles in India

English summary
iQOO Mobile Company Offering Rs.10lakhs For Chief Gaming Officer Role: Where To Apply?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+