Home
ಸುದ್ದಿಜಾಲ

iQOO: 6,000mAh ಬ್ಯಾಟರಿ, 512GB ಸ್ಟೋರೇಜ್‌.. ಮಾರುಕಟ್ಟೆಗೆ ಬರ್ತಿವೆ 2 ಹೊಸ ಫೋನ್‌! ಯಾವಾಗ?

ಐಕ್ಯೂ (iQOO) ಸಂಸ್ಥೆಯು ಎರಡು ಹೊಸ ಮೊಬೈಲ್ ಬಿಡುಗಡೆ ಮಾಡಲು ಸಜ್ಜಾಗಿದೆ. ಇವು, ಐಕ್ಯೂ ನಿಯೋ 10 (iQOO Neo 10) ಮತ್ತು ಐಕ್ಯೂ ನಿಯೋ 10 ಪ್ರೊ (iQOO Neo 10 Pro) ಹೆಸರಿನೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡಲಿವೆ. ಹೌದು, ಕಂಪನಿಯು ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ತನ್ನ ನಿಯೋ 10 (Neo 10) ಸರಣಿಯನ್ನು ಅನಾವರಣಗೊಳಿಸಲಿದೆ. ಈ ಮಧ್ಯೆಯೇ, ಮುಂಬರುವ ಫೋನ್‌ಗಳ ವೈಶಿಷ್ಟ್ಯಗಳು ಸೋರಿಕೆಯಾಗಿವೆ. ಬನ್ನಿ, ಹೊಸ ಫೋನ್‌ಗಳು ಯಾವೆಲ್ಲಾ ವಿಶೇಷತೆಗಳನ್ನು ಹೊಂದಿರಲಿವೆ ಎಂಬುದನ್ನು ತಿಳಿಯೋಣ.

ಕಂಪನಿಯು ನಿಯೋ 10 ಸರಣಿಯನ್ನು ಕೈಗೆಟುಕುವ ಬೆಲೆಯಲ್ಲಿ ಪರಿಚಯಿಸಲಿದೆ. ಟಿಪ್‌ಸ್ಟರ್ ಡಿಜಿಟಲ್ ಚಾಟ್ ಸ್ಟೇಷನ್‌ ಮುಂಬರುವ ಐಕ್ಯೂ ನಿಯೋ 10 ಫೋನಿನ ವಿಶೇಷತೆಗಳನ್ನು ಬಹಿರಂಗಪಡಿಸಿದೆ. ಇದು ಸ್ನಾಪ್‌ಡ್ರಾಗನ್ 8 ಜೆನ್ 3 ಪ್ರೊಸೆಸರ್‌ ಹೊಂದಿರಲಿದೆ. ಫೋನಿನಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಮತ್ತು 50 ಮೆಗಾಪಿಕ್ಸೆಲ್ ಕ್ಯಾಮೆರಾ ಇರಲಿದೆ. ಇದರೊಂದಿಗೆ 6.78 ಇಂಚಿನ ಡಿಸ್ಪ್ಲೇ, 120W ವೇಗದ ಚಾರ್ಜಿಂಗ್‌ ಜೊತೆಗೆ 6,000mAh ಬ್ಯಾಟರಿ ಸೇರಿದಂತೆ ಹಲವು ವಿಶೇಷತೆಗಳನ್ನು ಒಳಗೊಂಡಿರಲಿದೆ.

iQOO: 6,000mAh ಬ್ಯಾಟರಿ, 512GB ಸ್ಟೋರೇಜ್‌.. ಬರ್ತಿವೆ 2 ಹೊಸ ಫೋನ್‌!

ಐಕ್ಯೂ ನಿಯೋ 10 ಫೋನಿನ ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ಟಿಪ್‌ಸ್ಟರ್ ಪ್ರಕಾರ, ಐಕ್ಯೂ ನಿಯೋ 10 ಮೊಬೈಲ್ 6.78 ಇಂಚಿನ ಫ್ಲಾಟ್ ಓಎಲ್‌ಇಡಿ 8T LTPO ಡಿಸ್ಪ್ಲೇಯನ್ನು ಹೊಂದಿರಲಿದೆ. ಇದು 1.5K ರೆಸಲ್ಯೂಶನ್, ಅತ್ಯುತ್ತಮ 144Hz ರಿಫ್ರೆಶ್ ದರದ ಬೆಂಬಲ ಪಡೆದಿರಲಿದೆ.

ಪ್ರೊಸೆಸರ್ ಸಾಮರ್ಥ್ಯ

ಕಂಪನಿಯು ಹೊಸ ಮೊಬೈಲ್‌ನಲ್ಲಿ ಸ್ನಾಪ್‌ಡ್ರಾಗನ್ 8 ಜೆನ್ 3 ಪ್ರೊಸೆಸರ್‌ ಅನ್ನು ಅಳವಡಿಸಲಿದೆ. ಈ ಸ್ಮಾರ್ಟ್‌ಫೋನ್‌ ಇತ್ತೀಚಿನ ಆಂಡ್ರಾಯ್ಡ್‌ 15 ಆಧಾರಿತ OriginOS 5 ನೊಂದಿಗೆ ಬರಲಿದೆ.

ಸ್ಟೋರೇಜ್‌ ಆಯ್ಕೆ

ಐಕ್ಯೂ ನಿಯೋ 10 ಈ ಹಿಂದೆ ಬಿಡುಗಡೆಯಾದ ಫೋನಿನಂತೆಯೇ 16GB RAM ಮತ್ತು 512GB ವರೆಗೆ ಸ್ಟೋರೇಜ್‌ ಹೊಂದಿರಲಿದೆ. ಫೋನಿನಲ್ಲಿ ವರ್ಚುವಲ್ RAM ನ ಸೌಲಭ್ಯ ಒದಗಿಸಲಾಗುವುದು.

ಕ್ಯಾಮೆರಾ ಸೆಟಪ್

ಮುಂಬರುವ ಈ ಐಕ್ಯೂ ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿರಲಿದೆ. ಇದರಲ್ಲಿ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇರಲಿದೆ. ಇದರೊಂದಿಗೆ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 8 ಮೆಗಾಪಿಕ್ಸೆಲ್ ಸೆಕೆಂಡರಿ ಕ್ಯಾಮೆರಾ ಲಭ್ಯವಿರಲಿದೆ. ಇದು ಅಲ್ಟ್ರಾ ವೈಡ್ ತಂತ್ರಜ್ಞಾನವನ್ನು ಹೊಂದಿರುವ ಸಾಧ್ಯತೆಯಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ಕಂಪನಿಯು ಐಕ್ಯೂ ನಿಯೋ 10 ಮೊಬೈಲ್ ಅನ್ನು 6,000mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯೊಂದಿಗೆ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 120W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗುತ್ತದೆ.

ಇತರೆ ವೈಶಿಷ್ಟ್ಯಗಳು

ನೂತನ ಐಕ್ಯೂ ಫೋನ್ ಡ್ಯುಯಲ್ ಸ್ಪೀಕರ್‌ಗಳು, ಆಪ್ಟಿಕಲ್ ಇನ್ ಸ್ಕ್ರೀನ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಮತ್ತು ಐಆರ್ ಬ್ಲಾಸ್ಟರ್‌ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿರಲಿದೆ.

ಐಕ್ಯೂ ನಿಯೋ 10 ಪ್ರೊ ಮೊಬೈಲ್‌ನ ವೈಶಿಷ್ಟ್ಯಗಳು

ವರದಿಯ ಪ್ರಕಾರ, ಐಕ್ಯೂ ನಿಯೋ 10 ಪ್ರೊ ಈ ಸರಣಿಯ ಎರಡನೇ ಫೋನ್ ಆಗಿರಲಿದೆ. ಇದು 2K ಓಎಲ್‌ಇಡಿ ಡಿಸ್ಪ್ಲೇಯನ್ನು ಹೊಂದಿರುವ ನಿರೀಕ್ಷೆಯಿದೆ. ಇದು ಅಲ್ಟ್ರಾಸಾನಿಕ್ ಇನ್ ಸ್ಕ್ರೀನ್ ಫಿಂಗರ್‌ಪ್ರಿಂಟ್ ಸಂವೇದಕವನ್ನು ಹೊಂದಿದೆ. ಇದರಲ್ಲಿ ಮೀಡಿಯಾ ಟೆಕ್ ಡೈಮೆನ್ಸಿಟಿ 9400 ಪ್ರೊಸೆಸರ್ ಇರಲಿದೆ. ಇದು ಹೊಸ ಪ್ರೊಸೆಸರ್ ಆಗಿದೆ.

ಐಕ್ಯೂ ನಿಯೋ 10 ಪ್ರೊ ಮೊಬೈಲ್ 6,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಲಿದೆ. ಇದರೊಂದಿಗೆ 120W ವೇಗದ ಚಾರ್ಜಿಂಗ್ ಬೆಂಬಲ ಪಡೆದಿರಲಿದೆ. ಮುಂಬರುವ ಐಕ್ಯೂ ನಿಯೋ 10 ಮತ್ತು ಐಕ್ಯೂ ನಿಯೋ 10 ಪ್ರೊ ಎರಡೂ ಫೋನ್‌ಗಳು 120W ವೇಗದ ಚಾರ್ಜಿಂಗ್ ಸೌಲಭ್ಯ ಪಡೆದಿರಲಿದೆ ಎಂದು ಸ್ಪಷ್ಟಪಡಿಸಲಾಗಿದೆ.

Best Mobiles in India

English summary
iQOO Neo 10 full specifications leaked ahead of launch: What to expect, know Details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+