Home
ಸುದ್ದಿಜಾಲ

ಭಾರತದಲ್ಲಿ iQOO Neo 10 ಫೋನ್ ಹೊಂದಿರಲಿದೆ 7,000mAh ಬ್ಯಾಟರಿ!

ವಿವೋ ಕಂಪೆನಿಯ ಜನಪ್ರಿಯ ಸಬ್‌-ಬ್ರ್ಯಾಂಡ್ ಆಗಿರುವ iQOO ತನ್ನ ಹೊಸ ಸ್ಮಾರ್ಟ್‌ಫೋನ್ iQOO Neo 10 ಅನ್ನು ಭಾರತದಲ್ಲಿ ಇದೇ ಮೇ 26 ರಂದು ಪರಿಚಯಿಸಲು ಸಜ್ಜಾಗಿದೆ. ಬಿಡುಗಡೆಗೆ ದಿನಾಂಕ ಹತ್ತಿರವಾಗುತ್ತಿದ್ದಂತೆ, ಈ iQOO Neo 10 ಸಾಧನದ ಬೆಲೆ ಶ್ರೇಣಿ ಮತ್ತು ಕಾರ್ಯಕ್ಷಮತೆಯ ಕುರಿತು ಮಹತ್ವದ ಮಾಹಿತಿಯನ್ನು ಕಂಪೆನಿಯು ಬಹಿರಂಗಪಡಿಸಿದ್ದು, ಈ ಫೋನ್ ಶಕ್ತಿಯುತವಾದ ಸ್ನಾಪ್‌ಡ್ರಾಗನ್ 8s Gen 4 SoC ಪ್ರೊಸೆಸರ್ ಮತ್ತು ಬೃಹತ್ 7,000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬರಲಿದೆ ಎಂದು ದೃಢಪಡಿಸಲಾಗಿದೆ.! ಅಲ್ಲದೆ, ಇದು ಆಕರ್ಷಕವಾದ ಎರಡು ಬಣ್ಣಗಳ ಆಯ್ಕೆಗಳಲ್ಲಿ ಮತ್ತು ಉತ್ತಮ ಗುಣಮಟ್ಟದ AMOLED ಡಿಸ್ಪ್ಲೇಯೊಂದಿಗೆ ಗ್ರಾಹಕರಿಗೆ ಲಭ್ಯವಾಗಲಿದೆ. ಗಮನಾರ್ಹ ಸಂಗತಿಯೆಂದರೆ, IQOO Neo 10 ಕಳೆದ ವರ್ಷ ನವೆಂಬರ್‌ನಲ್ಲಿ ಚೀನಾದಲ್ಲಿ ಬಿಡುಗಡೆಯಾದರೂ, ಭಾರತೀಯ ಮಾರುಕಟ್ಟೆಗೆ ವಿಭಿನ್ನ ಚಿಪ್‌ಸೆಟ್‌ನೊಂದಿಗೆ ಬರುತ್ತಿದೆ.

ಇದೀಗ ಲಭ್ಯವಾಗಿರುವ ಕಾರ್ಯಕ್ಷಮತೆಯ ಮತ್ತೊಂದು ಪ್ರಮುಖ ಅಂಶವೆಂದರೆ IQOO Neo 10 ಸಾಧಿಸಿರುವ AnTuTu ಸ್ಕೋರ್. IQOO ಪ್ರಕಾರ, ಈ ಫೋನ್ 2.42 ಮಿಲಿಯನ್‌ಗಿಂತಲೂ ಹೆಚ್ಚಿನ AnTuTu ಸ್ಕೋರ್ ಅನ್ನು ಪಡೆದುಕೊಂಡಿದೆ. ಇದು ಸ್ನಾಪ್‌ಡ್ರಾಗನ್ 8s Gen 4 ಚಿಪ್‌ಸೆಟ್ ಮತ್ತು IQOO ನದೇ ಆದ Q1 ಗೇಮಿಂಗ್ ಚಿಪ್‌ನೊಂದಿಗೆ ಕಾರ್ಯನಿರ್ವಹಿಸಲಿದೆ. ಈ ಫೋನ್ ಇನ್ಫರ್ನೊ ರೆಡ್ ಮತ್ತು ಟೈಟಾನಿಯಂ ಕ್ರೋಮ್ ಎಂಬ ಎರಡು ಆಕರ್ಷಕ ಬಣ್ಣಗಳಲ್ಲಿ ಲಭ್ಯವಿರುತ್ತದೆ ಎಂದು ಕಂಪೆನಿ ತಿಳಿಸಿದೆ. iQOO Neo 10 ಸ್ಮಾರ್ಟ್‌ಫೋನ್ ಪ್ರಮುಖ ಇ-ಕಾಮರ್ಸ್ ವೇದಿಕೆಯಾದ ಅಮೆಜಾನ್ ಮೂಲಕ ಮಾರಾಟಕ್ಕೆ ಲಭ್ಯವಿರುತ್ತದೆ. ಅಮೆಜಾನ್ ಇಂಡಿಯಾ ತನ್ನ ವೆಬ್‌ಸೈಟ್‌ನಲ್ಲಿ IQOO Neo 10 ರ ಬಿಡುಗಡೆಯ ಕುರಿತು ವಿಶೇಷವಾದ ಪುಟವನ್ನು ರಚಿಸಿದೆ. ಈ ಪುಟದ ಪ್ರಕಾರ, ಮುಂಬರುವ ಈ ಫೋನ್ ಭಾರತದಲ್ಲಿ ಅಂದಾಜು 35,000 ರೂಪಾಯಿಗಳಿಗಿಂತ ಕಡಿಮೆ ಬೆಲೆಯಲ್ಲಿ ಲಭ್ಯವಾಗಲಿದೆ.

ಭಾರತದಲ್ಲಿ iQOO Neo 10 ಫೋನ್ ಹೊಂದಿರಲಿದೆ 7,000mAh ಬ್ಯಾಟರಿ!

IQOO Neo 10 ಕ್ಯಾಮೆರಾ ವಿಭಾಗದಲ್ಲಿ ಗಮನಾರ್ಹ ವೈಶಿಷ್ಟ್ಯಗಳನ್ನು ಒಳಗೊಂಡಿರಲಿದೆ. ಹಿಂಭಾಗದಲ್ಲಿ 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು ಮುಂಭಾಗದಲ್ಲಿ 32-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಇದು ಹೊಂದಿರಲಿದೆ ಎಂದು ಕಂಪನಿ ತಿಳಿಸಿದೆ. ಇನ್ನು ಈ ಬೆಲೆ ಶ್ರೇಣಿಯಲ್ಲಿ ಇದು ಅತ್ಯಂತ ಶಕ್ತಿಶಾಲಿ ಸ್ಮಾರ್ಟ್‌ಫೋನ್ ಎಂದು IQOO ಹೇಳಿಕೊಂಡಿದೆ. ವಿಶೇಷವಾಗಿ ಗೇಮಿಂಗ್‌ಗಾಗಿ, ಈ ಫೋನ್ 144fps ನಷ್ಟು ಹೆಚ್ಚಿನ ರಿಫ್ರೆಶ್ ದರವನ್ನು ನೀಡುವ ಏಕೈಕ ಸಾಧನವಾಗಲಿದೆ ಎಂದು ಕಂಪನಿ ವಿಶ್ವಾಸ ವ್ಯಕ್ತಪಡಿಸಿದೆ. ಇಷ್ಟು ಅಧಿಕೃತ ಮಾಹಿತಿಗಳು ಇದೀಗ ದೊರೆತಿದ್ದರೆ, ಹಲವು ಫೀಚರ್ಸ್ ಕುರಿತಾದ ಮಾಹಿತಿಗಳು ಸಹ ಲೀಕ್ ಆಗಿವೆ. IQOO Neo 10 ಫೋನ್ 1.5K ರೆಸಲ್ಯೂಶನ್, 5,500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಮತ್ತು 144Hz ರಿಫ್ರೆಶ್ ದರದೊಂದಿಗೆ AMOLED ಡಿಸ್ಪ್ಲೇಯನ್ನು ಹೊಂದಿರಬಹುದು. ಹಾಗೂ LPDDR5x RAM ಮತ್ತು UFS 4.1 ಮೆಮೊರಿ ತಂತ್ರಜ್ಞಾನವನ್ನು ಒಳಗೊಂಡಿರಬಹದು ಎಂದು ಹೇಳಲಾಗಿದೆ.

ಈ iQOO Neo 10 ಸ್ಮಾರ್ಟ್‌ಫೋನ್ 7,000mAh ಸಾಮರ್ಥ್ಯದ ಬ್ಯಾಟರಿಯ ಜೊತೆಗೆ 120W ವೇಗದ ವೈರ್ಡ್ ಚಾರ್ಜಿಂಗ್ ಅನ್ನು ಬೆಂಬಲಿಸುವ ಸಾಮರ್ಥ್ಯವನ್ನು ಹೊಂದಿರಬಹುದು. ಈ ವೇಗದ ಚಾರ್ಜಿಂಗ್ ತಂತ್ರಜ್ಞಾನವು ಕೇವಲ 15 ನಿಮಿಷಗಳಲ್ಲಿ ಶೂನ್ಯದಿಂದ 50 ಪ್ರತಿಶತದವರೆಗೆ ಬ್ಯಾಟರಿಯನ್ನು ಚಾರ್ಜ್ ಮಾಡುತ್ತದೆ ಎಂದು ಹೇಳಲಾಗಿದೆ. ಇದರೊಂದಿಗೆ, ಉಷ್ಣ ನಿರ್ವಹಣೆಗಾಗಿ 7,000mm ಚದರ ಆವಿಯ ತಂಪಾಗಿಸುವ ಕೋಣೆಯನ್ನು ಸಹ ಈ ಫೋನ್ ಒಳಗೊಂಡಿರುತ್ತದೆ. ಇನ್ನು ಇದರ ದಪ್ಪವು ಕೇವಲ 8.09mm ಇರಲಿದೆ. ಎಂದು ಹೇಳಲಾಗಿದೆ. ಒಟ್ಟಾರೆಯಾಗಿ, ಭಾರತದಲ್ಲಿ ಬಿಡುಗಡೆಯಾಗಲಿರುವ IQOO Neo 10 ಅತ್ಯಾಕರ್ಷಕ ವೈಶಿಷ್ಟ್ಯಗಳು ಮತ್ತು ಸ್ಪರ್ಧಾತ್ಮಕ ಬೆಲೆಯೊಂದಿಗೆ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸುವ ನಿರೀಕ್ಷೆಯಿದೆ. ಗೇಮಿಂಗ್ ಉತ್ಸಾಹಿಗಳು ಮತ್ತು ಉತ್ತಮ ಕಾರ್ಯಕ್ಷಮತೆಯ ಸ್ಮಾರ್ಟ್‌ಫೋನ್ ಬಯಸುವವರಿಗೆ ಇದು ಉತ್ತಮ ಆಯ್ಕೆಯಾಗುವ ಸಾಧ್ಯತೆ ಇದೆ.

ಇಲ್ಲಿ ಗಮನಿಸಬೇಕಾದ ಮತ್ತೊಂದು ಗಮನಾರ್ಹ ಸಂಗತಿಯೆಂದರೆ, IQOO Neo 10 ಫೋನ್ ಕಳೆದ ವರ್ಷ ನವೆಂಬರ್‌ನಲ್ಲಿ ಚೀನಾದಲ್ಲಿ ಬಿಡುಗಡೆಯಾದರೂ, ಭಾರತೀಯ ಮಾರುಕಟ್ಟೆಗೆ ವಿಭಿನ್ನ ಚಿಪ್‌ಸೆಟ್‌ನೊಂದಿಗೆ ಬರುತ್ತಿದೆ. ಹೋಲಿಕೆಗಾಗಿ ನಾವು ನೋಡುವುದಾದರೆ, ಚೀನಾದಲ್ಲಿ ಬಿಡುಗಡೆಯಾದ IQOO Neo 10 ಸ್ಮಾರ್ಟ್‌ಫೋನಿನ ಮೂಲ ಮಾದರಿಯು (12GB RAM + 256GB ಸ್ಟೋರೇಜ್) CNY 2399 (ಸುಮಾರು ರೂ. 28,000) ಆರಂಭಿಕ ಬೆಲೆಯನ್ನು ಹೊಂದಿದೆ. ಚೀನಾದ ಮಾದರಿಯು ಸ್ನಾಪ್‌ಡ್ರಾಗನ್ 8 Gen 3 SoC ಪ್ರೊಸೆಸರ್ ಮತ್ತು 120W ಚಾರ್ಜಿಂಗ್ ಬೆಂಬಲದೊಂದಿಗೆ 6,100mAh ಬ್ಯಾಟರಿಯನ್ನು ಹೊಂದಿದೆ. ಅಲ್ಲದೆ, ಅದು 6.78-ಇಂಚಿನ AMOLED ಡಿಸ್ಪ್ಲೇಯನ್ನು ಒಳಗೊಂಡಿದೆ. ಆದರೆ, ಭಾರತದಲ್ಲಿ ಬಿಡುಗಡೆಯಾಗಲಿರುವ iQOO Neo 10 ಫೋನ್ ಶಕ್ತಿಯುತವಾದ ಸ್ನಾಪ್‌ಡ್ರಾಗನ್ 8s Gen 4 SoC ಪ್ರೊಸೆಸರ್ ಮತ್ತು ಬೃಹತ್ 7,000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬರಲಿದೆ

Best Mobiles in India

English summary
iQOO Neo 10 is teased to come with a 50-megapixel rear camera and a 32-megapixel front camera. It is also confirmed to ship with a Snapdragon 8s Gen 4 SoC and a 7,000mAh battery.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+