Home
ಸುದ್ದಿಜಾಲ

ನಾಳೆ iQOO Neo 10 ಸರಣಿ ಲಾಂಚ್: 6500mAh ಬ್ಯಾಟರಿ.. 512GB ಸ್ಟೋರೇಜ್‌.. ಬೆಲೆ ಎಷ್ಟು?

ಎರಡು ಹೊಸ ಫೋನ್ ಮಾರುಕಟ್ಟೆಗೆ ಬರಲು ಸಜ್ಜಾಗಿವೆ. ನಾಳೆ (ನ.29) ಬಹುನಿರೀಕ್ಷಿತ ಐಕ್ಯೂ ನಿಯೋ 10 ಸರಣಿ (iQOO Neo 10 Series) ಬಿಡುಗಡೆಯಾಗಲಿದೆ. ಇದರಲ್ಲಿ ಐಕ್ಯೂ ನಿಯೋ 10 (iQOO Neo 10) ಮತ್ತು ಐಕ್ಯೂ ನಿಯೋ 10 ಪ್ರೊ (iQOO Neo 10 Pro) ಮೊಬೈಲ್‌ಗಳು ಮಾರುಕಟ್ಟೆಗೆ ಎಂಟ್ರಿ ಕೊಡಲಿವೆ. ಕಂಪನಿಯು ಬಜೆಟ್‌ ಬೆಲೆಗೆ ಪರಿಚಯಿಸಲಿದೆ. ಬನ್ನಿ, ಈ ಫೋನ್‌ಗಳು ಯಾವೆಲ್ಲಾ ವೈಶಿಷ್ಟ್ಯಗಳನ್ನು ಹೊಂದಿರಲಿವೆ? ಬೆಲೆ ಎಷ್ಟು? ಎನ್ನುವುದನ್ನು ತಿಳಿಯೋಣ.

ಐಕ್ಯೂ ಸಂಸ್ಥೆಯು ಕೈಗೆಟುಕುವ ಬೆಲೆಯಲ್ಲಿ ಫೋನ್‌ಗಳನ್ನು ಬಿಡುಗಡೆ ಮಾಡುವ ಮೂಲಕ ಮೊಬೈಲ್ ಪ್ರಿಯರನ್ನು ಗಮನ ಸೆಳೆಯುತ್ತಿದೆ. ಇದೀಗ, ಎರಡು ಸೊಗಸಾದ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಲು ಸಿದ್ಧವಾಗಿದೆ. ಈಗಾಗಲೇ ಮುಂಬರುವ ಐಕ್ಯೂ ನಿಯೋ 10 ಸರಣಿಯ ವೈಶಿಷ್ಟ್ಯಗಳನ್ನು ಬಹಿರಂಗಪಡಿಸಲಾಗಿದೆ. ಇವು ಸ್ನಾಪ್‌ಡ್ರಾಗನ್ 8 ಜೆನ್ 3 ಪ್ರೊಸೆಸರ್‌ ಹೊಂದಿರಲಿವೆ. ಫೋನಿನಲ್ಲಿ 50 ಮೆಗಾಪಿಕ್ಸೆಲ್ ಕ್ಯಾಮೆರಾ ಲಭ್ಯವಿರಲಿದೆ. ಜೊತೆಗೆ 6.78 ಇಂಚಿನ ಡಿಸ್ಪ್ಲೇ, 6000mAh ಬ್ಯಾಟರಿ ಮತ್ತು 120W ವೇಗದ ಚಾರ್ಜಿಂಗ್‌ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿರಲಿದೆ.

ನಾಳೆ 2 ಹೊಸ ಫೋನ್ ಲಾಂಚ್; 6500mAh ಬ್ಯಾಟರಿ.. 512GB ಸ್ಟೋರೇಜ್‌.. ಬೆಲೆ ಎಷ್ಟು?

ಐಕ್ಯೂ ನಿಯೋ 10 ಮತ್ತು ಐಕ್ಯೂ ನಿಯೋ 10 ಪ್ರೊ ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ಐಕ್ಯೂ ನಿಯೋ 10 ಮೊಬೈಲ್ 6.78 ಇಂಚಿನ ಫ್ಲಾಟ್ ಓಎಲ್‌ಇಡಿ 8T LTPO ಡಿಸ್ಪ್ಲೇಯನ್ನು ಹೊಂದಿರಲಿದೆ. ಇದು 1.5K ರೆಸಲ್ಯೂಶನ್, ಅತ್ಯುತ್ತಮ 144Hz ರಿಫ್ರೆಶ್ ದರದ ಬೆಂಬಲ ಪಡೆದಿರಲಿದೆ. ಐಕ್ಯೂ ನಿಯೋ 10 ಪ್ರೊ ಈ ಸರಣಿಯ ಎರಡನೇ ಫೋನ್ ಆಗಿರಲಿದೆ. ಇದು 2K ಓಎಲ್‌ಇಡಿ ಡಿಸ್ಪ್ಲೇಯನ್ನು ಹೊಂದಿರಲಿದೆ. ಇದು ಅಲ್ಟ್ರಾಸಾನಿಕ್ ಇನ್ ಸ್ಕ್ರೀನ್ ಫಿಂಗರ್‌ಪ್ರಿಂಟ್ ಸಂವೇದಕವನ್ನು ಹೊಂದಿದೆ.

ಪ್ರೊಸೆಸರ್ ಸಾಮರ್ಥ್ಯ

ಕಂಪನಿಯು ಐಕ್ಯೂ ನಿಯೋ 10 ಫೋನನ್ನು ಸ್ನಾಪ್‌ಡ್ರಾಗನ್ 8 ಜೆನ್ 3 ಪ್ರೊಸೆಸರ್‌ನೊಂದಿಗೆ ಬಿಡುಗಡೆ ಮಾಡಲಿದೆ. ಈ ಸ್ಮಾರ್ಟ್‌ಫೋನ್‌ ಆಂಡ್ರಾಯ್ಡ್‌ 15 ಆಧಾರಿತ OriginOS 5 ನೊಂದಿಗೆ ಕೆಲಸ ಮಾಡಲಿದೆ. ಐಕ್ಯೂ ನಿಯೋ 10 ಪ್ರೊ ಮೊಬೈಲ್‌ನಲ್ಲಿ ಮೀಡಿಯಾ ಟೆಕ್ ಡೈಮೆನ್ಸಿಟಿ 9400 ಪ್ರೊಸೆಸರ್ ಅಳವಡಿಸಲಾಗಿದೆ. ಇದು ಹೊಸ ಪ್ರೊಸೆಸರ್ ಆಗಿದೆ.

ಸ್ಟೋರೇಜ್‌ ಆಯ್ಕೆ

ಐಕ್ಯೂ ನಿಯೋ 10 ಸರಣಿಯು ಈ ಹಿಂದೆ ಬಿಡುಗಡೆಯಾದ ಫೋನಿನಂತೆಯೇ 16GB RAM ಮತ್ತು 512GB ವರೆಗೆ ಸ್ಟೋರೇಜ್‌ ಹೊಂದಿರಲಿದೆ. ಈ ಫೋನಿನಲ್ಲಿ ವರ್ಚುವಲ್ RAM ಸೌಲಭ್ಯ ಸಹ ಲಭ್ಯವಿರಲಿದೆ.

ನಾಳೆ 2 ಹೊಸ ಫೋನ್ ಲಾಂಚ್; 6500mAh ಬ್ಯಾಟರಿ.. 512GB ಸ್ಟೋರೇಜ್‌.. ಬೆಲೆ ಎಷ್ಟು?

ಕ್ಯಾಮೆರಾ ಸೆಟಪ್

ಮುಂಬರುವ ಹೊಸ ಐಕ್ಯೂ ನಿಯೋ 10 ಸರಣಿಯ ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿರಲಿದೆ. ಫೋನಿನಲ್ಲಿ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 8 ಮೆಗಾಪಿಕ್ಸೆಲ್ ಸೆಕೆಂಡರಿ ಕ್ಯಾಮೆರಾ ಲಭ್ಯವಿರಲಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, 16 ಮೆಗಾಪಿಕ್ಸೆಲ್ ಫ್ರಂಟ್‌ ಕ್ಯಾಮೆರಾ ಹೊಂದಿದೆ. ಇದು ಅಲ್ಟ್ರಾ ವೈಡ್ ತಂತ್ರಜ್ಞಾನವನ್ನು ಹೊಂದಿರುವ ಸಾಧ್ಯತೆಯಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ಐಕ್ಯೂ ನಿಯೋ 10 ಸ್ಮಾರ್ಟ್‌ಫೋನ್ 6000mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯೊಂದಿಗೆ ಬಿಡುಗಡೆಯಾಗಲಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 120W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗುತ್ತದೆ. ಐಕ್ಯೂ ನಿಯೋ 10 ಪ್ರೊ ಮೊಬೈಲ್ 6500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಲಿದೆ. ಇದರೊಂದಿಗೆ 120W ವೇಗದ ಚಾರ್ಜಿಂಗ್ ಬೆಂಬಲ ಪಡೆದಿರಲಿದೆ.

ಇತರೆ ವೈಶಿಷ್ಟ್ಯಗಳು

ಐಕ್ಯೂ ನಿಯೋ 10 ಸರಣಿಯ ಫೋನ್‌ಗಳು ಡ್ಯುಯಲ್ ಸ್ಪೀಕರ್‌ಗಳು, ಆಪ್ಟಿಕಲ್ ಇನ್ ಸ್ಕ್ರೀನ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಮತ್ತು ಐಆರ್ ಬ್ಲಾಸ್ಟರ್‌ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿರಲಿದೆ. ಈ ಫೋನ್ ಆರೆಂಜ್, ಶ್ಯಾಡೋ ಬ್ಲಾಕ್ ಮತ್ತು ಬಿಳಿ ಬಣ್ಣಗಳಲ್ಲಿ ಬಿಡುಗಡೆಯಾಗಲಿದೆ.

Best Mobiles in India

English summary
iQOO Neo 10 Series launch set for November 29: know price, specifications and Details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+