iQOO: ಧೂಳೆಬ್ಬಿಸಲಿವೆ 2 ಶಕ್ತಿಶಾಲಿ ಫೋನ್; 512GB ಸ್ಟೋರೇಜ್.. 6000mAh ಬ್ಯಾಟರಿ.. ಬೆಲೆ ಎಷ್ಟು?
ಐಕ್ಯೂ (iQOO) ಶೀಘ್ರದಲ್ಲೇ ತನ್ನ ನಿಯೋ ಸರಣಿಯ ಅಡಿಯಲ್ಲಿ ಎರಡು ಹೊಸ ಫೋನ್‌ಗಳನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಇದು ಐಕ್ಯೂ ನಿಯೋ 9 ಸರಣಿಯ ಉತ್ತರಾಧಿಕಾರಿಯಾಗಿ ಬರುತ್ತಿದೆ. ಕಂಪನಿಯು, ಐಕ್ಯೂ ನಿಯೋ 10 ಸರಣಿಯ ಅಡಿಯಲ್ಲಿ ಐಕ್ಯೂ ನಿಯೋ 10 (iQOO Neo 10) ಮತ್ತು ಐಕ್ಯೂ ನಿಯೋ 10 ಪ್ರೊ (iQOO Neo 10 Pro) ಫೋನ್‌ಗಳನ್ನು ಬಿಡುಗಡೆ ಮಾಡಲಿದೆ. ಪ್ರಸ್ತುತ, ಕಂಪನಿಯು ಚೀನಾದಲ್ಲಿ ಐಕ್ಯೂ ನಿಯೋ 10 ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಅನಾವರಣಗೊಳಿಸಲಿದೆ. ಮುಂಬರುವ ಫೋನ್‌ಗಳ ವಿನ್ಯಾಸವನ್ನು ಹಂಚಿಕೊಂಡಿದೆ.
ಕಂಪನಿಯು ಈಗಾಗಲೇ ಭಾರತದಲ್ಲಿ ಐಕ್ಯೂ 13 (iQOO 13) ಬಿಡುಗಡೆ ದಿನಾಂಕವನ್ನು ಘೋಷಿಸಿದೆ. ಇದೇ ಡಿಸೆಂಬರ್ 3 ರಂದು ಹೊಸ ಮೊಬೈಲ್ ಲಾಂಚ್ ಆಗಲಿದೆ. ಇತ್ತ, ಚೀನಾದಲ್ಲಿ ಐಕ್ಯೂ ನಿಯೋ 10 ಸರಣಿ ಪ್ರಾರಂಭಿಸಲು ಸಜ್ಜಾಗಿದೆ. ಈ ಸರಣಿಯ ಮೊಬೈಲ್‌ಗಳು 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಹೊಂದಿರಲಿವೆ. ಫೋನ್‌ಗಳಲ್ಲಿ ಮೀಡಿಯಾ ಟೆಕ್ ಡೈಮೆನ್ಸಿಟಿ 9400 ಪ್ರೊಸೆಸರ್ ಇರಲಿದೆ. ಜೊತೆಗೆ 6.78 ಇಂಚಿನ ಡಿಸ್ಪ್ಲೇ, 6000mAh ಬ್ಯಾಟರಿ ಮತ್ತು 120W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿರಲಿದೆ.

ಐಕ್ಯೂ ನಿಯೋ 10 ಸರಣಿ ಬಿಡುಗಡೆ ವಿವರ
ಕಂಪನಿಯು ಐಕ್ಯೂ ನಿಯೋ 10 ಸರಣಿಯನ್ನು ಕಿತ್ತಳೆ ಮತ್ತು ಬೂದು ಡ್ಯುಯಲ್ ಟೋನ್ ಬಣ್ಣದಲ್ಲಿ ಪರಿಚಯಿಸುತ್ತದೆ. ಈ ಹೊಸ ಸರಣಿಯು ಕಳೆದ ವರ್ಷದ ಐಕ್ಯೂ ನಿಯೋ 9 ಸರಣಿಯನ್ನು ಹೋಲುತ್ತದೆ. ಪ್ರಸ್ತುತ, ವಿವೋ ಆನ್‌ಲೈನ್ ಸ್ಟೋರ್, ಜೆಡಿ (JD), ಟ್ಮಾಲ್ (Tmall), ಟ್ಮಾಲ್, ಪಿಂಡುವೊಡುವೊ (Pinduoduo) ಸೇರಿದಂತೆ ಹಲವು ಪ್ಲಾಟ್‌ಫಾರ್ಮ್‌ಗಳ ಮೂಲಕ ಮುಂಗಡ ಬುಕಿಂಗ್‌ಗಾಗಿ ಲಭ್ಯವಿದೆ. ಕಂಪನಿಯು ಬಿಡುಗಡೆ ದಿನಾಂಕದ ಬಗ್ಗೆ ಮಾಹಿತಿ ಬಹಿರಂಗಪಡಿಸಿಲ್ಲ. ಆದರೆ, ಈ ಸರಣಿಯು ಶೀಘ್ರದಲ್ಲೇ ಲಾಂಚ್ ಆಗಬಹುದು.
ಐಕ್ಯೂ ನಿಯೋ 10 ಸರಣಿಯ ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ಐಕ್ಯೂ ನಿಯೋ 10 ಮತ್ತು ಐಕ್ಯೂ ನಿಯೋ 10 ಪ್ರೊ ಫೋನ್ 6.78 ಇಂಚಿನ ಫ್ಲಾಟ್ ಡಿಸ್ಪ್ಲೇಯನ್ನು ಹೊಂದಿರಲಿದೆ. ಇದು 8T ಒಎಲ್‌ಇಡಿ ಪ್ಯಾನೆಲ್ ಆಗಿದೆ. ಡಿಸ್ಪ್ಲೇಯು 1.5K ರೆಸಲ್ಯೂಶನ್ ಮತ್ತು 144Hz ರಿಫ್ರೆಶ್ ದರದ ಬೆಂಬಲ ಪಡೆದಿರಲಿದೆ.
ಪ್ರೊಸೆಸರ್ ಸಾಮರ್ಥ್ಯ
ಕಂಪನಿಯು ಐಕ್ಯೂ ನಿಯೋ 10 ಮೊಬೈಲ್‌ನಲ್ಲಿ ಸ್ನಾಪ್‌ಡ್ರಾಗನ್ 8 ಜೆನ್ 3 ಪ್ರೊಸೆಸರ್ ಅಳವಡಿಸಲಿದೆ. ಐಕ್ಯೂ ನಿಯೋ 10 ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 9400 ಪ್ರೊಸೆಸರ್ ಹೊಂದಿರಲಿದೆ. ಈ ಮೊಬೈಲ್‌ಗಳಲ್ಲಿ 16GB RAM ಮತ್ತು 512GB ಆಂತರಿಕ ಸ್ಟೋರೇಜ್ ಲಭ್ಯವಿರಲಿದೆ.
ಕ್ಯಾಮೆರಾ ಸೆಟಪ್
ಐಕ್ಯೂ ನಿಯೋ 10 ಮತ್ತು ಐಕ್ಯೂ ನಿಯೋ 10 ಪ್ರೊ ಮೊಬೈಲ್‌ನಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಇರಲಿದೆ. ಇದರಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 50 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಲಭ್ಯವಿರಲಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನ್ 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನು ಹೊಂದಿರಲಿದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ಐಕ್ಯೂ ನಿಯೋ 10 ಸರಣಿಯ ಎರಡೂ ಮೊಬೈಲ್‌ಗಳು 6,000mAh ಅಥವಾ ಅದಕ್ಕಿಂತ ಹೆಚ್ಚಿನ ಬ್ಯಾಟರಿಯನ್ನು ಹೊಂದಿರುವ ಸಾಧ್ಯತೆಯಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 120W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗುತ್ತದೆ.
ಇತರೆ ವೈಶಿಷ್ಟ್ಯಗಳು
ಐಕ್ಯೂ ನಿಯೋ 10 ಸರಣಿಯ ಹೊಸ ಫೋನ್‌ಗಳು ಅಲ್ಟ್ರಾಸಾನಿಕ್ ಇನ್ ಸ್ಕ್ರೀನ್ ಫಿಂಗರ್‌ಪ್ರಿಂಟ್ ಸಂವೇದಕವನ್ನು ಹೊಂದಿರಲಿವೆ. ಈ ಫೋನ್‌ಗಳನ್ನು ಪ್ಲಾಸ್ಟಿಕ್ ಫ್ರೇಮ್ ವಿನ್ಯಾಸದೊಂದಿಗೆ ಬರಲಿವೆ.


Click it and Unblock the Notifications








